Subscribe to Gizbot

ಇನ್ನು ಎಸ್‌ಟಿಡಿ ಕರೆಮಾಡುವಾಗ 0 ಅಥವಾ +91 ಬೇಡ

Written By:

ಪೂರ್ಣ ಮೊಬೈಲ್ ಸಂಖ್ಯೆಯನ್ನು ಅನುಷ್ಟಾನಗೊಳಿಸುವ ಎಮ್‌ಎನ್‌ಪಿ ಅನ್ನು ದೇಶಾದ್ಯಂತ ತೆಗೆದುಹಾಕಲಾಗಿದೆ. ಎಸ್‌ಟಿಡಿ ಮೊಬೈಲ್ ಕರೆಗಳನ್ನು ಡಯಲ್ ಮಾಡುವ ಪ್ರಕ್ರಿಯೆಯನ್ನು ದೇಶಾದ್ಯಂತ ಹೆಚ್ಚಿನ ಟೆಲಿಕಾಮ್ ಆಪರೇಟರ್‌ಗಳು ಈಗ ಸರಳೀಕರಿಸಿದ್ದಾರೆ. ಇದುವರೆಗೆ ಎಸ್‌ಟಿಡಿ ಕರೆಗಳನ್ನು ಮಾಡುವಾಗ ಸಂಖ್ಯೆಯ ಆರಂಭದಲ್ಲಿ 0 ಅಥವಾ +91 ಅನ್ನು ಹಾಕುವುದು ಕ್ರಮವಾಗಿತ್ತು ಆದರೆ ಈ ನಿಯಮಕ್ಕೆ ಇದೀಗ ಬ್ರೇಕ್ ಬಿದ್ದಿದೆ.

ಓದಿರಿ: ಖರೀದಿಸಿ ಬರೇ 5,000 ಕ್ಕೆ ಬಜೆಟ್ ಫೋನ್‌ಗಳು

ಇನ್ನು ಎಸ್‌ಟಿಡಿ ಕರೆಮಾಡುವಾಗ 0 ಅಥವಾ +91 ಬೇಡ

ಹೆಚ್ಚಿನ ಟೆಲಿಕಾಮ್ ಆಟಪರೇಟ್‌ಗಳ ಗ್ರಾಹಕರು ಯಾವುದೇ ಮೊಬೈಲ್ ಸಂಖ್ಯೆಗೆ ಕರೆಮಾಡುವಾಗ ಪೂರ್ವಪ್ರತ್ಯಯಗಳನ್ನು ಸೇರಿಸಬೇಕಾಗಿಲ್ಲ. ಏರ್‌ಟೆಲ್, ವೊಡಾಫೋನ್, ಮತ್ತು ಇತರ ಸಂಖ್ಯೆಗಳಲ್ಲಿ ನಾವು ಇದನ್ನು ಪರಿಶೀಲಿಸಿದ್ದು, ಪೂರ್ಯಪ್ರತ್ಯಯಗಳು ಇನ್ನು ಅಗತ್ಯವಿಲ್ಲ ಎಂದು ಈ ನೆಟ್‌ವರ್ಕ್‌ಗಳು ತಿಳಿಸಿವೆ ಎಂದು ಸಂಸ್ಥೆ ದೃಢಪಡಿಸಿದೆ.

ಓದಿರಿ: ತೂಕ ಪತ್ತೆಮಾಡುವ ಸಾಕ್ಸ್ ಮೋಡಿಗೆ ಬೆರಗಾಗಲೇಬೇಕು

ಇನ್ನು ಎಸ್‌ಟಿಡಿ ಕರೆಮಾಡುವಾಗ 0 ಅಥವಾ +91 ಬೇಡ

ಟೆಲಿಕಾಮ್ ವಿಭಾಗವು ಪೂರ್ಣಪ್ರಮಾಣದಲ್ಲಿ ಎಮ್‌ಎನ್‌ಪಿಯನ್ನು ಅನುಷ್ಟಾನಕ್ಕೆ ತರಲು ಜುಲೈವರೆಗೆ ಗಡುವನ್ನು ವಿಸ್ತರಿಸಿದೆ. ಚಂದಾದಾರರ ಮೊಬೈಲ್ ಸಂಖ್ಯೆಯನ್ನು ಬದಲಾಯಿಸದೇ ತಮ್ಮ ಟೆಲಿಕಾಮ್ ಆಪರೇಟರ್‌ಗಳನ್ನು ಬದಲಾಯಿಸುವ ಅನುಮತಿಯನ್ನು ಎಮ್‌ಎನ್‌ಪಿ ನೀಡುತ್ತಿದೆ. ಒಂದೇ ವಲಯದಲ್ಲಿ ಸಂಖ್ಯೆ ನೋಂದಾವಣೆಯಾಗಿರುವಲ್ಲಿ ತಮ್ಮ ಆಪರೇಟ್‌ಗಳನ್ನು ಬದಲಾಯಿಸುವ ವ್ಯವಸ್ಥೆಯನ್ನು ಎಮ್‌ಎನ್‌ಪಿ ಒದಗಿಸುತ್ತಿದೆ. ದೆಹಲಿಯಿಂದ ಬೆಂಗಳೂರಿಗೆ ಇದನ್ನು ಸರಿಸಬಹುದು ಮತ್ತು ದೆಹಲಿ ಆಧಾರಿತ ಆಪರೇಟರ್‌ ಅನ್ನು ಬೆಂಗಳೂರಿಗೆ ಬದಲಾಯಿಸಬಹುದಾಗಿದೆ.

English summary
A major roadblock to implementing full mobile number portability (MNP) across the country has been removed. Several telecom operators have begun simplifying the process of dialling STD mobile numbers in the country.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot