ತೂಕ ಪತ್ತೆಮಾಡುವ ಸಾಕ್ಸ್ ಮೋಡಿಗೆ ಬೆರಗಾಗಲೇಬೇಕು

Written By:

ಆಧುನಿಕವಾಗಿ ಪುರೋಗತಿಯನ್ನು ಹೊಂದುತ್ತಿರುವ ತಂತ್ರಜ್ಞಾನ ಹತ್ತು ಹಲವು ವಿಸ್ಮಯಗಳನ್ನು ನಮ್ಮ ಕಣ್ಣ ಮುಂದೆ ಬಿಚ್ಚಿಡುತ್ತಿದೆ. ಹೊಸ ಹೊಸ ಅನ್ವೇಷಣೆಗಳು ನಮ್ಮನ್ನಿಂದು ಸಮೀಪಿಸುತ್ತಿದ್ದು ಇದಕ್ಕೆ ನಾವು ಬೆರಗಾಗಲೇಬೇಕು. ಇನ್ನು ನಮ್ಮ ಕೆಲಸಗಳನ್ನು ಇನ್ನಷ್ಟು ಹಗುರಗೊಳಿಸುವುದಕ್ಕಾಗಿಯೇ ಆಧುನಿಕ ರಂಗದಲ್ಲಿ ತಂತ್ರಜ್ಞಾನ ಹಲವಾರು ವಿಸ್ಮಯಗಳನ್ನು ನಮ್ಮ ಮುಂದೆ ಇಡುತ್ತಿದೆ.
ಇಂದಿನ ಲೇಖನದಲ್ಲಿ ಆ ವಿಸ್ಮಯಗಳು ಏನು ಅವುಗಳ ವಿಶೇಷತೆ ಏನು ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೆಕ್ಸೀ ಡಾಲ್

ತೋಶಿಬಾ ಆಂಡ್ರಾಯ್ಡ್ ಸೆಕ್ಸೀ ಡಾಲ್

ಸಿಇಎಸ್ 2015 ರಲ್ಲಿ ತೋಶಿಬಾ ಈ ಸೆಕ್ಸಿ ಡಾಲ್ ಅನ್ನು ಬಿಡುಗಡೆ ಗೊಳಿಸಿತು. ಇದು ಹಾಡು ಹಾಡುವುದು, ಮಾತನಾಡುವುದನ್ನು ಸುಲಲಿತವಾಗಿ ನಿರ್ವಹಿಸಬಲ್ಲುದು.

3ಡಿ ಪ್ರಿಂಟರ್

ಮೇಕರ್ ಬೋಟ್ ಮಿನಿ 3ಡಿ ಪ್ರಿಂಟರ್

ಇದನ್ನು ನಿಮಗೆ ಯಾವುದೇ ಪಿಸಿ ಅಥವಾ ಮ್ಯಾಕ್‌ಗೆ ಅಳವಡಿಸಿ ಡಾಲ್ಸ್, ಕಾರುಗಳು ಮತ್ತು ಆಟಿಕೆಗಳನ್ನು ಮುದ್ರಿಸಬಹುದಾಗಿದೆ.

ಡ್ರಾನ್

ಡಿಜೆಐ ಇನ್‌ಸ್ಪೈರ್ 1ಡ್ರಾನ್

ಇನ್‌ಸ್ಪೈರ್ 1 ಒಂದು ಡ್ರಾನ್ ಆಗಿದ್ದು, 4 ಕೆ ವೀಡಿಯೊವನ್ನು ಸೆರೆಹಿಡಿಯುವ ಸಾಮರ್ಥ್ಯವುಳ್ಳದ್ದಾಗಿದೆ. ಡಿಜೆಐನ ಹೆಚ್ಚು ಸುಧಾರಿತ ತಂತ್ರಜ್ಞಾನವನ್ನು ಇನ್‌ಸ್ಪೈರ್ 1ಡ್ರಾನ್‌ನಲ್ಲಿ ನಮಗೆ ಕಾಣಬಹುದಾಗಿದ್ದು ಬಳಸಲು ಇದು ಹೆಚ್ಚು ಸರಳವಾಗಿದೆ.

ಉಪಕರಣ

ಪ್ಯಾರಟ್ ಪೋಟ್

ಸೆನ್ಸಾರ್ ಮತ್ತು ನೀರನ್ನು ಸಂಗ್ರಹಿಸಿಟ್ಟುಕೊಳ್ಳುವಂತಹ ಉಪಕರಣದೊಂದಿಗೆ ಬಂದಿದ್ದು ಗಿಡಕ್ಕೆ ನೀರು ಅಗತ್ಯವಾದಾಗಲೆಲ್ಲಾ ಇದು ನೀರುಣಿಸುತ್ತದೆ.

ನ್ಯಾವಿಗೇಟರ್ ಸಿಸ್ಟಮ್

ಚ್ವಿನ್ ಸೈಕಲ್ ನ್ಯಾವಿಗೇಟರ್

ಸೈಕಲ್ ಹ್ಯಾಂಡ್ಬಾರ್ ಉಳ್ಳ ನ್ಯಾವಿಗೇಟರ್ ಸಿಸ್ಟಮ್ ಅನ್ನು ಸ್ಮಾರ್ಟ್‌ಫೋನ್ ಇಲ್ಲವೇ ಬ್ಲ್ಯೂಟೂತ್ ಮೂಲಕ ಸಂಪರ್ಕಪಡಿಸಬಹುದಾಗಿದ್ದು ಆಡಿಯೊ ಆದೇಶಗಳು, ವಿಶುವಲ್ ಲೈಟ್ ಇಂಡಿಕೇಟರ್ಸ್ ಮೊದಲಾದ ಸೌಲಭ್ಯಗಳನ್ನು ಇದು ಒದಗಿಸುತ್ತದೆ.

ಸೆಲ್ಫಿ

ಲೆನೊವೊ ವೈಬ್ ಎಕ್ಸ್‌ಟೆನ್ಶನ್ ಸೆಲ್ಫಿ

ಸ್ಮಾರ್ಟ್‌ಫೋನ್ ಸಾಮಾಗ್ರಿಯನ್ನು ಆಡಿಯೊ ಔಟ್‌ಪುಟ್ ಜಾಕ್ ಬಳಸಿ ಸ್ಮಾರ್ಟ್‌ಫೋನ್‌ಗೆ ಸಂಪರ್ಕಪಡಿಸಬಹುದಾಗಿದ್ದು ನಿಮಗೆ ಕಡಿಮೆ ಬೆಳಕಿನ ಸ್ಥಳಗಳಲ್ಲಿ ಕೂಡ ಇದನ್ನು ಬಳಸಿ ಸೆಲ್ಫಿ ತೆಗೆಯಬಹುದಾಗಿದೆ.

ಸ್ಮಾರ್ಟ್ ಲಾಕ್

ಕೆವೊ ಸ್ಮಾರ್ಟ್ ಲಾಕ್

ಬ್ಲ್ಯೂಟೂತ್ ಸಕ್ರಿಯ ಡೆಡ್‌ಬೋಲ್ಟ್ ಲಾಕ್ ನಿಮ್ಮ ಐಫೋನ್, ಐಪ್ಯಾಡ್ ಅಥವಾ ಐಪೋಡ್ ಟಚ್ ಬಳಸಿ ವೈರ್‌ಲೆಸ್ ಮುಖಾಂತರ ಡೋರ್ ಅನ್ನು ಅನ್‌ಲಾಕ್ ಮಾಡುತ್ತದೆ. ನಿಮ್ಮ ಬಾಗಿಲನ್ನು ಸ್ಪರ್ಶಿಸಿದರೆ ಸಾಕು ಇದು ನಿಮ್ಮನ್ನು ಗುರುತಿಸುತ್ತದೆ.

7ಡಿ ಮಾರ್ಕ್

ಕ್ಯಾನನ್ 7ಡಿ ಮಾರ್ಕ್ II

20.2mp ಸೆನ್ಸಾರ್‌ನೊಂದಿಗೆ 16,000 ಐಎಸ್‌ಒ ಬೆಂಬಲವನ್ನೊದಗಿಸುವ ಡಿಎಸ್‌ಎಲ್‌ಆರ್ ಇದಾಗಿದೆ. ಉತ್ತಮ ರಚನಾ ಕೌಶಲ್ಯ, 65 ಪಾಯಿಂಟ್ ಎಫ್, 1080 ಪಿ ವೀಡಿಯೊ ರೆಕಾರ್ಡಿಂಗ್, 10FPS ಬರ್ಸ್ಟ್ ಶೂಟಿಂಗ್ ಸಾಮರ್ಥ್ಯ ಇದರಲ್ಲಿದೆ.

ಸಾಕ್ಸ್

ಹೆಪ್ಸಿಲನ್ ಸೆನ್ಸೋರಿಯಾ ಸಾಕ್ಸ್

ಬಳಕೆದಾರರ ಕಾಲಿನ ಚಲನವಲನಗಳನ್ನು ಅರಿತುಕೊಂಡು ನಿಮಿಷದ ಮಾಹಿತಿಯನ್ನು ಇದು ಒದಗಿಸುತ್ತದೆ. ಈ ಸಾಕ್ಸ್ ಕ್ಯಾಲೋರಿ ಕರಗಲು ಸಹಕಾರಿಯಾಗಿದ್ದು, ಹೆಚ್ಚುವರಿ ತೂಕವನ್ನು ಸುಲಭವಾಗಿ ಪತ್ತೆಮಾಡಬಲ್ಲುದು.

ಉತ್ತಮ ವೇಗ

ಸ್ಯಾಮ್‌ಸಂಗ್ ಎಸ್‌ಎಸ್‌ಡಿ ಟಿ1

ಸ್ಯಾಮ್‌ಸಂಗ್ ಎಸ್‌ಎಸ್‌ಡಿ ಟಿ1 ಅಲ್ಟ್ರಾ ಕಾಂಪ್ಯಾಕ್ಟ್, ಬಾಹ್ಯ ಪೋರ್ಟೇಬಲ್ ಮತ್ತು ಗಟ್ಟಿಯಾದ ಡ್ರೈವ್ ಆಗಿದ್ದು 250ಜಿಬಿಯಿಂದ 1ಟಿಬಿ ನಡುವಿನ ಸಾಮರ್ಥ್ಯವನ್ನು ಹೊಂದಿದೆ. ಇದು ಉತ್ತಮ ವೇಗವನ್ನು ಒದಗಿಸುತ್ತಿದ್ದು ಸಂಪೂರ್ಣ ವೈಶಿಷ್ಟ್ಯ ಇದರಲ್ಲಡಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In technology field new new inventions are going eagerly. With these inventions making our lives so easier and more comfortable. In this article we mentioned some gadgets which are helping us to enjoy more comfort life without risks.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot