ಈಗ ಗೂಗಲ್ ಸರ್ಚ್ ಮೂಲಕ ಊಟ ಆರ್ಡರ್ ಮಾಡಿ, ಟೇಬಲ್ ಬುಕ್ ಮಾಡಿ

|

ತಂತ್ರಜ್ಞಾನದ ದೈತ್ಯ ಗೂಗಲ್ ಇಂಡಿಯಾ ಈಗ ತನ್ನ ಸರ್ಚ್ ತಂತ್ರಾಂಶದಲ್ಲಿ ಹೊಸತೊಂದು ವೈಶಿಷ್ಟತೆಯನ್ನು ಘೋಷಿಸಿದೆ. ಬಳಕೆದಾರರು ಸರ್ಚ್ ಇಂಜಿನ್ ಮೂಲಕವೇ ಊಟ ತಿಂಡಿಯನ್ನು ಆರ್ಡರ್ ಮಾಡಬಹುದು, ತಮ್ಮ ನೆಚ್ಚಿನ ರೆಸ್ಟೊರೆಂಟಿನಲ್ಲಿ ಟೇಬಲ್ ಬುಕ್ ಮಾಡಬಹುದು.

ಈಗ ಗೂಗಲ್ ಸರ್ಚ್ ಮೂಲಕ ಊಟ ಆರ್ಡರ್ ಮಾಡಿ, ಟೇಬಲ್ ಬುಕ್ ಮಾಡಿ

“ಇಂದಿನಿಂದ, ಜನರು ತಮ್ಮ ಮೊಬೈಲಿನಲ್ಲಿ ಹತ್ತಿರದ ರೆಸ್ಟೊರೆಂಟುಗಳನ್ನು ಹುಡುಕಿದಾಗ, ಆರ್ಡರ್ ಕೊಡುವ ಆಯ್ಕೆಯು ಸರ್ಚ್ ಫಲಿತಾಂಶದಲ್ಲಿರುತ್ತದೆ” ಮಂಗಳವಾರ ತನ್ನ ಬ್ಲಾಗ್ ಪೋಸ್ಟ್ ಒಂದರಲ್ಲಿ ಗೂಗಲ್ ಬಹಿರಂಗಪಡಿಸಿದೆ.
ಓದಿರಿ: ಆಂಡ್ರಾಯ್ಡ್‌ನಲ್ಲಿ ನಿರ್ದಿಷ್ಟ ಆಪ್‌ಗಳಿಗೆ ಇಂಟರ್ನೆಟ್ ಆಕ್ಸೆಸ್ ಬ್ಲಾಕ್‌ ಹೇಗೆ?“ಆ ಆಯ್ಕೆಯನ್ನು ಕ್ಲಿಕ್ಕಿಸಬೇಕು ಮತ್ತು ಝೊಮಾಟೋ ಅಥವಾ ಸ್ವಿಗ್ಗಿಯಂತಹ ಡೆಲಿವರಿ ಸೇವೆದಾರರನ್ನು ಆಯ್ದುಕೊಳ್ಳಬೇಕು” ಎಂದು ಬ್ಲಾಗ್ ಪೋಸ್ಟ್ ತಿಳಿಸುತ್ತದೆ. ಗೂಗಲ್ ಸ್ವಯಂಚಾಲಿತವಾಗಿ ಆ ಕಂಪನಿಯ ಅಂತರ್ಜಾಲ ಪುಟಕ್ಕೆ ಕರೆದೊಯ್ದು ಆರ್ಡರನ್ನು ಪೂರ್ಣಗೊಳಿಸುತ್ತದೆ.

ಇದರ ಜೊತೆಗೆ, ಈ ಹೊಸ ವಿಶಿಷ್ಟತೆಯಲ್ಲಿ ಬಳಕೆದಾರರು ತಮ್ಮ ಮೆಚ್ಚಿನ ರೆಸ್ಟೊರೆಂಟಿನಲ್ಲಿ ಬಹಳಷ್ಟು ಮುಂಚೆಯೇ ಟೇಬಲನ್ನು ಬುಕ್ ಮಾಡಿಕೊಳ್ಳಬಹುದು. ಗೂಗಲ್ ಸರ್ಚ್ ಇಂಜಿನ್ ತನ್ನ ಸಹವರ್ತಿ ಅಂತರ್ಜಾಲ ಪುಟಗಳಿಗೆ ನಿಮ್ಮನ್ನು ಕರೆದೊಯ್ದು ಬುಕಿಂಗ್ ಮಾಡಲು ಸಹಾಯ ಮಾಡುತ್ತದೆ.

ಈಗ ಗೂಗಲ್ ಸರ್ಚ್ ಮೂಲಕ ಊಟ ಆರ್ಡರ್ ಮಾಡಿ, ಟೇಬಲ್ ಬುಕ್ ಮಾಡಿ

ಆ್ಯಂಡ್ರಾರ್ಡ್ ಮತ್ತು ಐ.ಒ.ಎಸ್ ಫೋನ್ ಅಥವಾ ಟ್ಯಾಬ್ಲೆಟ್ಟುಗಳಲ್ಲಿ ಲಭ್ಯವಿರುವ ಗೂಗಲ್ ಸರ್ಚ್ ಅಥವಾ ಗೂಗಲ್ ಆ್ಯಪ್ ಅನ್ನು ಉಪಯೋಗಿಸಿಕೊಂಡು ಬಳಕೆದಾರರು ಝೊಮಾಟೋ ಅಥವಾ ಸ್ವಿಗ್ಗಿಯ ಮೂಲಕ ಊಟ ತಿಂಡಿಯನ್ನು ಆರ್ಡರ್ ಮಾಡಬಹುದು.

ಓದಿರಿ: ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಆಹ್ವಾನ ಶುರುವಾಗಿದೆ!
ಬಳಕೆದಾರರು ಡೈನ್ ಔಟ್ ಮತ್ತು ಬಿಟ್ ಪ್ಲಸ್ ನಂತಹ ಅಂತರ್ಜಾಲ ಪುಟಗಳನ್ನು ಉಪಯೋಗಿಸಿಕೊಂಡು ರೆಸ್ಟೊರೆಂಟುಗಳಲ್ಲಿ ಬುಕಿಂಗ್ ಮಾಡಬಹುದು ಎಂದು ಬ್ಲಾಗ್ ಪೋಸ್ಟ್ ತಿಳಿಸಿದೆ. ಮುಂದಿನ ದಿನಗಳಲ್ಲಿ ಈ ಸೌಲಭ್ಯ ಇನ್ನೂ ಚೆಂದ ಮಾಡುವುದಾಗಿ ಹಾಗೂ ಇನ್ನಷ್ಟು ಹೆಚ್ಚಿನ ಪಾಲುದಾರರನ್ನು ಸೇರಿಸುವುದಾಗಿ ಬ್ಲಾಗ್ ಪೋಸ್ಟ್ ತಿಳಿಸಿದೆ.

ಮೂಲ: ಐ.ಎ.ಎನ್.ಎಸ್

Best Mobiles in India

English summary
Technology giant Google India has announced a new feature in its Search app that will let users order lunch, dinner as well as book a table at their favourite restaurant, directly from the results page.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X