Subscribe to Gizbot

ಆಂಡ್ರಾಯ್ಡ್‌ನಲ್ಲಿ ನಿರ್ದಿಷ್ಟ ಆಪ್‌ಗಳಿಗೆ ಇಂಟರ್ನೆಟ್ ಆಕ್ಸೆಸ್ ಬ್ಲಾಕ್‌ ಹೇಗೆ?

Written By:

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಒಮ್ಮೆ ಇಂಟರ್ನೆಟ್‌ ಆಕ್ಸೆಸ್‌ ಆನ್‌ ಮಾಡಿದರೆ ಎಲ್ಲಾ ಆಪ್‌ಗಳು ಸಹ ಇಂಟರ್ನೆಟ್‌ ಅನ್ನು ಬಳಸಿಕೊಳ್ಳುತ್ತವೆ. ಆಫ್‌ಲೈನ್‌ ಆಪ್‌ಗಳು ಅಪ್‌ಡೇಟ್‌ಗಾಗಿ ಇಂಟರ್ನೆಟ್‌ ಡಾಟಾ ಬಳಸಿದರೆ, ಆನ್‌ಲೈನ್‌ ಆಕ್ಸೆಸಿಂಗ್ ಆಪ್‌ಗಳು ನೀವು ಓಪನ್ ಮಾಡದಿದ್ದರೂ ಸಹ ರನ್‌ ಅಗಲು ಆರಂಭಿಸುತ್ತವೆ.

ಇಂಟರ್ನೆಟ್‌ ಅನ್ನು ಕೇವಲ ನೀವು ವಾಟ್ಸಾಪ್‌, ಫೇಸ್‌ಬುಕ್ ಮೆಸೇಂಜರ್‌ ಹೀಗೆ ಹಲವು ಆಪ್‌ಗಳಲ್ಲಿ ಯಾವುದನ್ನೋ ಒಂದನ್ನು ಬಳಸಲು ಆನ್‌ ಮಾಡಿದರೆ ಎಲ್ಲಾ ಆಪ್‌ಗಳು ಇಂಟರ್ನೆಟ್‌ ಡಾಟಾ ಬಳಸಿಕೊಳ್ಳುತ್ತವೆ. ಆದ್ದರಿಂದ ನಿಮ್ಮ ಇಂಟರ್ನೆಟ್‌ ಡಾಟಾ ಬಹುಬೇಗ ಖಾಲಿಯಾಗುವಲ್ಲಿ ಸಂಶಯವಿಲ್ಲ.

ಇಂದಿನ ಲೇಖನದಲ್ಲಿ ಆಂಡ್ರಾಯ್ಡ್‌ ಬಳಕೆದಾರರಿಗಾಗಿ ಕೇವಲ ವಾಟ್ಸಾಪ್‌ಗಾಗಿ ಇಂಟರ್ನೆಟ್‌ ಆನ್‌ ಮಾಡಿದರೆ ಇಂಟರ್ನೆಟ್‌ ಅನ್ನು ವಾಟ್ಸಾಪ್‌ ಆಪ್ ಮಾತ್ರ ಬಳಸಿಕೊಳ್ಳಬೇಕು, ಮೆಸೇಂಜರ್ ಬಳಸಲು ಇಂಟರ್ನೆಟ್‌ ಆನ್‌ ಮಾಡಿದರೆ ಡಾಟಾ ಕೇವಲ ಮೆಸೇಂಜರ್‌ಗಾಗಿ ಮಾತ್ರ ಬಳಕೆಯಾಗುವಂತೆ ವ್ಯವಸ್ಥೆ ಮಾಡುವುದು ಹೇಗೆ ಎಂದು ತಿಳಿಸುತ್ತಿದ್ದೇವೆ. ನಿರ್ಧಿಷ್ಟ ಆಪ್‌ಗಳನ್ನು ಇಂಟರ್ನೆಟ್‌ ಆಕ್ಸೆಸ್‌ನಿಂದ ಬ್ಲಾಕ್‌ ಮಾಡುವುದು ಹೇಗೆ ಎಂಬುದನ್ನು ಸಹ ತಿಳಿಸುತ್ತಿದ್ದೇವೆ. ಈ ಮಾಹಿತಿಗಾಗಿ ಲೇಖನದ ಸ್ಲೈಡರ್‌ಗಳನ್ನು ಓದಿರಿ.

ಫೇಸ್‌ಬುಕ್‌ನಲ್ಲಿ ಯಾರು ನಿಮ್ಮನ್ನು ಡಿಲೀಟ್‌ ಮಾಡಿದ್ದಾರೆ ತಿಳಿಯುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಂಡ್ರಾಯ್ಡ್ ಇನ್‌ಬಿಲ್ಟ್‌ ಫೀಚರ್ ಬಳಕೆ

ಆಂಡ್ರಾಯ್ಡ್ ಇನ್‌ಬಿಲ್ಟ್‌ ಫೀಚರ್ ಬಳಕೆ

ಆಂಡ್ರಾಯ್ಡ್ ಫೋನ್‌ನಲ್ಲಿ ಸೆಟ್ಟಿಂಗ್ಸ್>> ಡಾಟಾ ಯೂಸೇಜ್‌>>3 ಡಾಟ್‌ಗಳ ಬಟನ್‌ ಟ್ಯಾಪ್‌ ಮಾಡಿ>> ರಿಸ್ಟ್ರಿಕ್ಟ್ ಬ್ಯಾಕ್‌ಗ್ರೌಂಡ್ ಡಾಟಾ ಆಯ್ಕೆ ಮಾಡಿ.

ಆಂಡ್ರಾಯ್ಡ್ ಇನ್‌ಬಿಲ್ಟ್‌ ಫೀಚರ್ ಬಳಕೆ

ಆಂಡ್ರಾಯ್ಡ್ ಇನ್‌ಬಿಲ್ಟ್‌ ಫೀಚರ್ ಬಳಕೆ

ಪ್ರದರ್ಶನಗೊಂಡ ಮೆಸೇಜ್‌ ಬೋರ್ಡ್‌ನಲ್ಲಿ ಓಕೆ ಎಂಬುದನ್ನು ಟ್ಯಾಪ್‌ ಮಾಡಿ. ಇದರಿಂದ ಎಲ್ಲಾ ಆಪ್‌ಗಳು ಬ್ಯಾಕ್‌ಗ್ರೌಂಡ್‌ ಡಾಟಾ ಬಳಸುವುದನ್ನು ನಿರ್ಬಂಧಿಸಬಹುದು.

ಆಂಡ್ರಾಯ್ಡ್ ಇನ್‌ಬಿಲ್ಟ್‌ ಫೀಚರ್ ಬಳಕೆ

ಆಂಡ್ರಾಯ್ಡ್ ಇನ್‌ಬಿಲ್ಟ್‌ ಫೀಚರ್ ಬಳಕೆ

ಇತ್ತೀಚಿನ ಲೇಟೆಸ್ಟ್‌ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ "Data Saver' ಎಂಬ ಫೀಚರ್‌ ಇದ್ದು, ನಿರ್ಧಿಷ್ಟ ಆಪ್‌ಗಳನ್ನು ಇಂಟರ್ನೆಟ್‌ ಆಕ್ಸೆಸ್‌ ವೇಳೆ ಡಾಟಾ ಬಳಸದಂತೆ ನಿರ್ಬಂಧಿಸಬಹುದು. ಚಿತ್ರ ಗಮನಿಸಿ.

ಮೂರನೇ ಆಪ್‌ಗಳ ಬಳಕೆ

ಮೂರನೇ ಆಪ್‌ಗಳ ಬಳಕೆ

ಪ್ರಸ್ತುತದಲ್ಲಿ ಕೆಲವೊಮ್ಮೆ ಥರ್ಡ್‌ ಪಾರ್ಟಿ ಆಪ್‌ಗಳನ್ನು ಬಳಸಿ ಇಂಟರ್ನೆಟ್ ಆಕ್ಸೆಸ್ ಅನ್ನು ನಿರ್ಬಂಧಿಸಬಹುದಾಗಿದೆ.

ಮೊಬಿವೊಲ್: ನೊರೂಟ್‌ ಫೈಯರ್‌ವಾಲ್‌

ಮೊಬಿವೊಲ್: ನೊರೂಟ್‌ ಫೈಯರ್‌ವಾಲ್‌

'ಮೊಬಿವೊಲ್: ನೊರೂಟ್‌ ಫೈಯರ್‌ವಾಲ್‌ ' ಡೌನ್‌ಲೋಡ್‌ ಮಾಡಿ ಆಂಡ್ರಾಯ್ಡ್‌ ಫೋನ್‌ನಲ್ಲಿ ಇನ್‌ಸ್ಟಾಲ್‌ ಮಾಡಿ. ನಂತರ ಆಪ್ ಅನ್ನು ಲಾಂಚ್‌ ಮಾಡಿ. ಫೈಯರ್‌ವಾಲ್‌ ರೂಲ್ಸ್‌ಗಳು ಪ್ರದರ್ಶನವಾಗುತ್ತವೆ. ಅದರ ಮೇಲೆ ಟ್ಯಾಪ್‌ ಮಾಡಿ.
ಆಪ್‌ಗಾಗಿ ಕ್ಲಿಕ್‌ ಮಾಡಿ

ಮೊಬಿವೊಲ್: ನೊರೂಟ್‌ ಫೈಯರ್‌ವಾಲ್‌

ಮೊಬಿವೊಲ್: ನೊರೂಟ್‌ ಫೈಯರ್‌ವಾಲ್‌

ಆಪ್‌ ಹೋಮ್‌ ಪೇಜ್‌ನಲ್ಲಿ ನಿಮ್ಮ ಡಿವೈಸ್‌ನಲ್ಲಿ ಇನ್‌ಸ್ಟಾಲ್ ಆದ ಎಲ್ಲಾ ಆಪ್‌ಗಳು ಸಹ ಪ್ರದರ್ಶನವಾಗುತ್ತವೆ. ಆಪ್‌ಗಳ ಮುಂದೆ ವೈಫೈ ಮತ್ತು ಸೆಲ್ಯೂಲಾರ್‌ ನೆಟ್‌ವರ್ಕ್‌ ಆಯ್ಕೆಗಳು ಕಾಣುತ್ತವೆ. ಅವುಗಳಲ್ಲಿ ಯಾವ ಆಪ್‌ಗೆ ಯಾವ ಇಂಟರ್ನೆಟ್‌ ಆಕ್ಸೆಸ್‌ ಬೇಕು ಎಂಬುದನ್ನು ಆಯ್ಕೆ ಮಾಡಿ. ಮೊಬೈಲ್ ಇಂಟರ್ನೆಟ್ ನಿರ್ಬಂಧನೆಗೆ ಸೆಲ್ಯೂಲಾರ್‌ ಆಕ್ಸೆಸ್‌ ಮೇಲೆ ಕ್ಲಿಕ್‌ ಮಾಡಿ ಡಿಸೇಬಲ್‌ ಮಾಡಿ. ಚಿತ್ರ ಗಮನಿಸಿ.

 ಮೊಬಿವೊಲ್: ನೊರೂಟ್‌ ಫೈಯರ್‌ವಾಲ್‌

ಮೊಬಿವೊಲ್: ನೊರೂಟ್‌ ಫೈಯರ್‌ವಾಲ್‌

ಡಾಟಾ ಡಿಸೇಬಲ್ ಆಯ್ಕೆ ಮುಗಿದ ನಂತರ ಆಪ್‌ನಲ್ಲಿ ಹಿಂದೆ ಮರಳಿ ಪಾಪಪ್‌ ಆದ ಪೇಜ್‌ನಲ್ಲಿ ಓಕೆ ಬಟನ್‌ ಟ್ಯಾಪ್‌ ಮಾಡಿ.

 ಮೊಬಿವೊಲ್: ನೊರೂಟ್‌ ಫೈಯರ್‌ವಾಲ್‌

ಮೊಬಿವೊಲ್: ನೊರೂಟ್‌ ಫೈಯರ್‌ವಾಲ್‌

ಆಪ್‌ಗಳು ಡಾಟಾ ಬಳಕೆಯಿಂದ ಡಿಸೇಬಲ್‌ ಆಗಿರುತ್ತವೆ. ಆಪ್‌ಗಳನ್ನು ಓಪನ್‌ ಮಾಡಿ ಇಂಟರ್ನೆಟ್ ಕನೆಕ್ಷನ್‌ ಪಡೆದು ಆಪ್‌ಗಳನ್ನು ಪರಿಶೀಲಿಸಬಹುದು.

 ನೆಟ್‌ಗಾರ್ಡ್‌

ನೆಟ್‌ಗಾರ್ಡ್‌

'ನೆಟ್‌ಗಾರ್ಡ್‌' ಪ್ರಖ್ಯಾತ ಆಂಡ್ರಾಯ್ಡ್ ಆಪ್‌ ಆಗಿದ್ದು, ಯಾವುದೇ ಆಪ್‌ಗೆ ಇಂಟರ್ನೆಟ್‌ ಆಕ್ಸೆಸ್‌ ಅನ್ನು ಬ್ಲಾಕ್‌ ಮಾಡಬಹುದಾಗಿದೆ. ಫೋನ್‌ ರೂಟ್‌ ಅವಶ್ಯಕತೆ ಇಲ್ಲದೇ ಸರಳವಾಗಿಯೂ ಅತ್ಯಾಧುನಿಕವಾಗಿಯೂ ಡಾಟಾ ಬಳಕೆ ಆಕ್ಸೆಸ್‌ ಬ್ಲಾಕ್‌ ಮಾಡಬಹುದು. ವೈಫೈ ಮತ್ತು ಸೆಲ್ಯೂಲಾರ್ ಎರಡು ಅಪ್ಲಿಕೇಶನ್‌ಗಳು ಬ್ಲಾಕ್‌ ಆಕ್ಸೆಸ್‌ಗಾಗಿ ಇವೆ.
ಆಪ್‌ಗಾಗಿ ಕ್ಲಿಕ್‌ ಮಾಡಿ

ನೊರೂಟ್‌ ಫೈಯರ್‌ವಾಲ್‌

ನೊರೂಟ್‌ ಫೈಯರ್‌ವಾಲ್‌

ಇಂಟರ್ನೆಟ್‌ ಮೂಲಕ ಕಳುಹಿಸುವ ವೈಯಕ್ತಿಕ ಮಾಹಿತಿಗಳನ್ನು ಸುರಕ್ಷಿಸುತ್ತದೆ. ಫೋನ್‌ ರೂಟಿಂಗ್‌ ಅವಶ್ಯಕತೆ ಇಲ್ಲದೇ ಕಾರ್ಯನಿರ್ವಹಿಸುವ 'ನೊರೂಟ್‌ ಫೈಯರ್‌ವಾಲ್‌' ಯಾವ ಆಪ್‌ ಇಂಟರ್ನೆಟ್‌ ಅನ್ನು ಬಳಸಿಕೊಳ್ಳುತ್ತಿದೆ ಎಂಬುದನ್ನು ತಿಳಿಸುತ್ತದೆ.
ಆಪ್‌ಗಾಗಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Easy way to restrict the internet access in any specific app in android mobile with the help of the method discussing here to save bandwidth and also the better internet speed in your android.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot