Subscribe to Gizbot

ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಆಹ್ವಾನ ಶುರುವಾಗಿದೆ!

Written By:

ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7ಗೆ ಭಾರತದಲ್ಲಿ ಆಹ್ವಾನ ಪ್ರಾರಂಭವಾಗಿದೆ. ಸ್ಯಾಮ್ಸಂಗ್ ಕಂಪನಿಯು ಆಗಷ್ಟ್ 11ರಂದು ಕಾರ್ಯಕ್ರಮವೊಂದನ್ನು ಆಯೋಜಿಸಿದೆ, ತನ್ನ ಫ್ಲಾಗ್ ಶಿಪ್ ಫೋನಾದ ಗ್ಯಾಲಕ್ಸಿ ನೋಟ್ 7 ಅನ್ನು ಅಂದು ಬಿಡುಗಡೆಗೊಳಿಸುತ್ತಿದೆ. ಬಿಡುಗಡೆಗೊಳ್ಳುವ ಹೊಸ ಸ್ಮಾರ್ಟ್ ಫೋನಿನ ಹೆಸರನ್ನು ಇನ್ನು ಬಹಿರಂಗಗೊಳಿಸಿಲ್ಲವಾದರೂ, 'ಮುಂದಿನ ಬಿಗ್ ಗ್ಯಾಲಕ್ಸಿ’ ಟೀಸರ್ ಗಳು ದೊಡ್ಡ ಪರದೆಯ ಗ್ಯಾಲಕ್ಸಿ ನೋಟ್ ಸಾಧನವಿರಬೇಕೆಂದು ಸೂಚಿಸುತ್ತದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಆಹ್ವಾನ ಶುರುವಾಗಿದೆ!

ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಭಾರತದಲ್ಲಿ ಆಗಷ್ಟ್ ಏಳರಂದು ಬಿಡುಗಡೆಯಾಗುತ್ತದೆಂದು ಹೇಳಲಾಗಿತ್ತು. ಆಗಷ್ಟ್ ಎರಡರಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಸಮಾರಂಭದಲ್ಲಿ ಗ್ಯಾಲಕ್ಸಿ ನೋಟ್ 7 ಅನ್ನು ಸ್ಯಾಮ್ಸಂಗ್ ಪರಿಚಯಿಸಿತ್ತು. ಜಾಗತಿಕ ಮಟ್ಟದಲ್ಲಿ ಬಿಡುಗಡೆಗೊಂಡ ಹತ್ತೇ ದಿನದೊಳಗೆ ಕಂಪನಿಯು ತನ್ನ ಉನ್ನತ ಮಟ್ಟದ ಸ್ಮಾರ್ಟ್ ಫೋನನ್ನು ಭಾರತದಲ್ಲಿ ಪರಿಚಯಿಸುತ್ತಿದೆ. ಭಾರತದಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಫ್ಯಾಬ್ಲೆಟ್ಟಿನ ಬೆಲೆ 55,000 ರುಪಾಯಿಗಳ ಆಜುಬಾಜಿನಲ್ಲಿರಬಹುದೆಂದು ಅಂದಾಜಿಸಲಾಗಿದೆ. ನೋಟ್ 7 ಭಾರತದ ಮಾರುಕಟ್ಟೆಯಲ್ಲಿರುವ ದುಬಾರಿ ಸ್ಮಾರ್ಟ್ ಫೋನುಗಳಲ್ಲಿ ಒಂದಾಗಲಿದೆ.

ಓದಿರಿ:
ಆಂಡ್ರಾಯ್ಡ್‌ನಲ್ಲಿ ನಿರ್ದಿಷ್ಟ ಆಪ್‌ಗಳಿಗೆ ಇಂಟರ್ನೆಟ್ ಆಕ್ಸೆಸ್ ಬ್ಲಾಕ್‌ ಹೇಗೆ?
ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟಿನ ವಿಶೇಷಣಗಳನ್ನು ಗಮನಿಸಿದರೆ, ಕಂಪನಿಯ ಫ್ಲಾಗ್ ಶಿಪ್ ಫ್ಯಾಬ್ಲೆಟ್ಟಿನಲ್ಲಿ ಪ್ರಬಲ, ಕ್ರಾಂತಿಕಾರಿ ಎಸ್ ಪೆನ್ ಇರಲಿದೆ. 5.7 ಇಂಚಿನ ಕ್ವಾಡ್ ಹೆಚ್.ಡಿ ಸೂಪರ್ ಅಮೊಲೆಡ್ ಪರದೆ ಹೊಂದಿರುವ ನೋಟ್ 7 ಫ್ಯಾಬ್ಲೆಟ್ಟಿನಲ್ಲಿ, ಗ್ಯಾಲಕ್ಸಿ ಎಸ್6 ಎಡ್ಜ್ ಫೋನಿನಲ್ಲಿರುವಂತೆ ಫ್ಯಾಬ್ಲೆಟ್ಟಿನ ಪರದೆಯ ಎರಡೂ ಬದಿಗಳು ಬಾಗಿರುತ್ತವೆ. ಅಮೆರಿಕಾದಲ್ಲಿ ಬಿಡುಗಡೆಯಾಗುವ ಫ್ಯಾಬ್ಲೆಟ್ಟಿನಲ್ಲಿ ಸ್ನಾಪ್ ಡ್ರಾಗನ್ 820 ಪ್ರೊಸೆಸರ್ ಇದ್ದರೆ, ಭಾರತದಲ್ಲಿ ಬಿಡುಗಡೆಯಾಗುವ ಫ್ಯಾಬ್ಲೆಟ್ಟಿನಲ್ಲಿ ಎಂಟು ಹೃದಯಗಳ 64 ಬಿಟ್ಟಿನ ಎಕ್ಸಿನೋಸ್ 8890 ಪ್ರೊಸೆಸರ್ ಇರಲಿದೆ. ಈ ಸಾಧನದಲ್ಲಿ 4 ಜಿಬಿ ರ್ಯಾಮ್, 64 ಜಿಬಿಯಷ್ಟು ಆಂತರಿಕ ಸಂಗ್ರಹ ಸಾಮರ್ಥ್ಯವಿರಲಿದೆ. ಸಂಗ್ರಹವನ್ನು ಮೈಕ್ರೋ ಎಸ್.ಡಿ ಕಾರ್ಡ್ ಮೂಲಕ 256 ಜಿಬಿವರೆಗೆ ವಿಸ್ತರಿಸಬಹುದು.

ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಆಹ್ವಾನ ಶುರುವಾಗಿದೆ!

ಆಸಕ್ತಿಕರ ವಿಷಯವೆಂದರೆ ಗ್ಯಾಲಕ್ಸಿ ನೋಟ್ 7 ಜಲ ನಿರೋಧಕ ದೇಹವನ್ನೊಂದಲಿದೆ, ಇದು ಐ.ಪಿ68 ಪ್ರಮಾಣೀಕೃತವಾಗಿದೆ, ಅಂದರೆ ಐದು ಅಡಿ ಆಳದ ನೀರಿನಲ್ಲಿ ಮೂವತ್ತು ನಿಮಿಷಗಳವರೆಗಿದ್ದರೂ ಫ್ಯಾಬ್ಲೆಟ್ಟಿಗೆ ಏನೂ ತೊಂದರೆಯಾಗದು.
ಓದಿರಿ: ಫೇಸ್‌ಬುಕ್‌ನಲ್ಲಿ ಯಾರು ನಿಮ್ಮನ್ನು ಡಿಲೀಟ್‌ ಮಾಡಿದ್ದಾರೆ ತಿಳಿಯುವುದು ಹೇಗೆ?
ಕ್ಯಾಮೆರಾ ವಿಭಾಗದಲ್ಲಿ, ಫೋನಿನಲ್ಲಿ ಪಿ.ಡಿ.ಎ.ಎಫ್ ಸೌಲಭ್ಯ ಹೊಂದಿರುವ, ಎಲ್.ಇ.ಡಿ ಫ್ಲಾಷ್ ಇರುವ 12 ಮೆಗಾಪಿಕ್ಸೆಲ್ಲಿನ ಹಿಂಬದಿ ಕ್ಯಾಮೆರಾ ಇದೆ. ಮುಂಬದಿಯ ಸ್ವಂತಿ ಕ್ಯಾಮೆರಾ 5 ಮೆಗಾಪಿಕ್ಸೆಲ್ಲಿನದು. ಜೊತೆಗೆ ಸ್ಯಾಮ್ಸಂಗ್ ಕ್ನಾಕ್ಷ್ ಸೌಲಭ್ಯವಿದೆ, ಕಣ್ಣಿನ ಪಟಲ ಐರಿಸನ್ನು ಸ್ಕ್ಯಾನ್ ಮಾಡುವ ಸೌಕರ್ಯವಿದೆ, ಹೆಚ್.ಡಿ.ಆರ್ ವೀಡೀಯೋ ಸ್ಟ್ರೀಮ್ ಮಾಡುವ ಸಾಮರ್ಥ್ಯವಿದೆ. ಫ್ಯಾಬ್ಲೆಟ್ಟಿನಲ್ಲಿ 3,500 ಎಂ.ಎ.ಹೆಚ್ ಬ್ಯಾಟರಿ ಇದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಆಹ್ವಾನ ಶುರುವಾಗಿದೆ!

ಹೊಸ ಯುಗದ ಈ ಫ್ಯಾಬ್ಲೆಟ್ಟನ್ನು ಆಕ್ಯುಲಸ್ ವಿ.ಆರ್ ಉಪಕರಣದೊಂದಿಗೂ ಉಪಯೋಗಿಸಬಹುದು. ಸ್ಯಾಮ್ಸಂಗ್ ಈಗಾಗಲೇ ಗ್ಯಾಲಕ್ಸಿ ನೋಟ್ ಏಳರ ಬಿಡಿ ಭಾಗಗಳನ್ನು ಬಿಡುಗಡೆಗೊಳಿಸಿದೆ, ಇದರಲ್ಲಿ ಹೊಸ ಎಸ್ ವ್ಯೂವ್ ಸ್ಟ್ಯಾಂಡಿಗ್ ಹೊದಿಕೆ, ಲೈಟ್ ಮತ್ತು 60 ಡಿಗ್ರಿ ಕೋನದಲ್ಲಿ ಸುಲಭವಾಗಿ ಪರದೆಯನ್ನು ವೀಕ್ಷಿಸಲು ಅನುವು ಮಾಡಿಕೊಡುವ ಕವರ್ ಸೇರಿದೆ. ಹೋದೆಡೆ ಫ್ಯಾಬ್ಲೆಟ್ಟನ್ನು ಚಾರ್ಜು ಮಾಡಿಕೊಳ್ಳಲು ಐ.ಪಿ68 ಜಲ ನಿರೋಧಕ ಬ್ಯಾಕ್ ಪ್ಯಾಕ್ ಕೂಡ ಲಭ್ಯವಿದೆ.

English summary
Samsung has rolled out invite for the launch of Galaxy Note7 smartphone in India. The company is hosting an event on August 11, where it will most be launching its flagship Galaxy Note7 smartphone. Though it has not disclosed the name of the upcoming smartphone, the invite teases the 'Next Big Galaxy', suggesting the unveiling of big screen Galaxy Note
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot