ಇನ್ನು 2ಜಿ ನಲ್ಲೂ ಓಲಾ ಓಡಾಟ

By Shwetha
|

ಮಿಂತ್ರಾದ ನಂತರ, ಓಲಾ ತನ್ನ ಮೊಬೈಲ್ ಅಪ್ಲಿಕೇಶನ್‌ಗಳನ್ನು 100 ನಗರಗಳಾದ್ಯಂತ ಕಾರ್ಯಾಚರಿಸುವ ನಿಟ್ಟಿನಲ್ಲಿದೆ. ಈ ಅಪ್ಲಿಕೇಶನ್ ಬಳಸಿ ಓಲಾ ಬುಕ್ಕಿಂಗ್ ಅನ್ನು ಬಳಕೆದಾರರು ಮಾಡಬಹುದಾಗಿದೆ. ಅಪ್ಲಿಕೇಶನ್ ಲಾಂಚ್ ಸಮಯದಲ್ಲೇ ಇದು 20% ಬುಕ್ಕಿಂಗ್ ವಿನಂತಿಗಳನ್ನು ಸ್ವೀಕರಿಸಿದ್ದು 99% ದಷ್ಟು ಓಲಾ ಕೋರಿಕೆ ಅಪ್ಲಿಕೇಶನ್ ಮುಖಾಂತರ ನಡೆಯುವುದು ಸಂಭವವಿದೆ.

ಓದಿರಿ: ದರಕಡಿತ ಹಬ್ಬ: ಭರ್ಜರಿ ಮೊಬೈಲ್ ಬೇಟೆ

ಇನ್ನು 2ಜಿ ನಲ್ಲೂ ಓಲಾ ಓಡಾಟ

ಇನ್ನು ಕಂಪೆನಿ ತನ್ನ ಸೇವೆಗಳನ್ನು ಲಾಂಚ್ ಮಾಡಿರುವ ಸಣ್ಣ ನಗರಗಳಲ್ಲಿ ಅಪ್ಲಿಕೇಶನ್ ಮುಖಾಂತರವೇ 95% ದಷ್ಟು ಬುಕ್ಕಿಂಗ್‌ಗಳು ಬರುತ್ತಿವೆ ಎಂದು ಕಂಪೆನಿ ತಿಳಿಸಿದೆ. ಮುಂಬರುವ ತಿಂಗಳಲ್ಲಿ ಓಲಾ ಬುಕ್ಕಿಂಗ್ ಕೋರಿಕೆಗಳನ್ನು ಈ ಮಾಧ್ಯಮದ ಮೂಲಕವೇ ನಿರ್ವಹಿಸಲಿದೆ ಎಂದು ಓಲಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಓದಿರಿ: ಈ ಟ್ರಿಕ್ಸ್‌ಗಳನ್ನು ಬಳಸಿ ಶರವೇಗದಲ್ಲಿ ಫೋನ್ ಚಾರ್ಜ್ ಮಾಡಿ

ಇನ್ನು ಕಂಪೆನಿಯ ಕಾಲ್ ಸೆಂಟರ್ ವ್ಯವಸ್ಥೆಯನ್ನು ಬಳಸಿಕೊಂಡು ಗ್ರಾಹಕರು ಕ್ಯಾಬ್‌ಗಳನ್ನು ಬುಕ್ ಮಾಡಿಕೊಳ್ಳಬಹುದಾಗಿದೆ. ಗ್ರಾಹಕ ಬೆಂಬಲ ಮತ್ತು ಸಹಾಯಕ್ಕಾಗಿ 'ಓಲಾ ಕೇರ್' ನಂತೆ ಸಂಖ್ಯೆ ಇದೀಗ ಲಭ್ಯವಿದೆ. ಇನ್ನು 2ಜಿ ನೆಟ್‌ವರ್ಕ್‌ನಲ್ಲಿ ಕೂಡ ಅಪ್ಲಿಕೇಶನ್ ಕಾರ್ಯನಿರ್ವಹಿಸುವುದಕ್ಕಾಗಿ ತನ್ನ ನವೀಕರಣದಲ್ಲಿ ಓಲಾ ಕೆಲವೊಂದು ಪ್ರಗತಿಯನ್ನು ಮಾಡಲಿದೆ.

ಇನ್ನು 2ಜಿ ನಲ್ಲೂ ಓಲಾ ಓಡಾಟ

ಅಪ್ಲಿಕೇಶನ್ ಬಳಸುತ್ತಿರುವಾಗ ಡೇಟಾ ಬಳಕೆಯನ್ನು ಇದು ಬಳಕೆದಾರರಿಗೆ ಉಳಿಸಲಿದ್ದು ದುರ್ಬಲ ಡೇಟಾ ಸಂಪರ್ಕವಿರುವಲ್ಲಿ ಈ ಅಪ್ಲಿಕೇಶನ್ ಸೇವೆ ಗ್ರಾಹಕರಿಗೆ ದೊರೆಯಲಿದೆ. ಅಪ್ಲಿಕೇಶನ್ ವಿಂಡೋಸ್, ಆಂಡ್ರಾಯ್ಡ್ ಮತ್ತು ಐಓಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ದೊರೆಯಲಿದೆ.

Best Mobiles in India

English summary
After Myntra, taxi aggregator Ola will go mobile-app only across its 100 cities of operations from the next month.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X