ಈ ಟ್ರಿಕ್ಸ್‌ಗಳನ್ನು ಬಳಸಿ ಶರವೇಗದಲ್ಲಿ ಫೋನ್ ಚಾರ್ಜ್ ಮಾಡಿ

By Shwetha
|

ಇಂದಿನ ಸ್ಮಾರ್ಟ್‌ಫೋನ್ ಯುಗದಲ್ಲಿ ದುಬಾರಿ ಫೋನ್ ಖರೀದಿಸುವುದಕ್ಕಿಂತಲೂ ಉತ್ತಮ ಬ್ಯಾಟರಿ ಬಾಳ್ವಿಕೆಯತ್ತ ಗಮನ ಕೊಡುವುದು ಅತ್ಯವಶ್ಯಕವಾಗಿದೆ. ಹೆಚ್ಚಿನ ಫೋನ್‌ಗಳು ದುರ್ಬಲ ಬ್ಯಾಟರಿ ಬ್ಯಾಕಪ್‌ನೊಂದಿಗೆ ಬರುತ್ತಿದ್ದು ಹೆಚ್ಚಿನ ಬಳಕೆದಾರರಿಗೆ ಬ್ಯಾಟರಿ ಉಳಿಸುವುದು ಅಂತೆಯೇ ವೇಗವಾಗಿ ಚಾರ್ಜ್ ಮಾಡುವುದು ಹೇಗೆ ಎಂಬುದೇ ತಲೆನೋವಿನ ಸಮಸ್ಯೆಯಾಗಿದೆ.

ಓದಿರಿ: ಫೋನ್ ಚಾರ್ಜಿಂಗ್ ಕುರಿತ ಸತ್ಯಗಳು: ಗಟ್ಟಿ ಗುಂಡಿಗೆಯವರಿಗೆ ಮಾತ್ರ

ಇಂದಿನ ಲೇಖನದಲ್ಲಿ ನಿಮ್ಮ ಫೋನ್ ಅನ್ನು ವೇಗವಾಗಿ ಚಾರ್ಜ್ ಮಾಡುವುದು ಹೇಗೆ ಎಂಬುದನ್ನು ಕುರಿತ ಸಲಹೆಗಳನ್ನು ನೀಡುತ್ತಿದ್ದೇವೆ. ಈ ಟ್ರಿಕ್ಸ್‌ಗಳನ್ನು ಬಳಸಿ ನಿಮ್ಮ ಫೋನ್ ಅನ್ನು ವೇಗವಾಗಿ ಚಾರ್ಜ್ ಮಾಡಬಹುದಾಗಿದೆ.

ಸರಿಯಾದ ಚಾರ್ಜರ್ ಬಳಸಿ

ಸರಿಯಾದ ಚಾರ್ಜರ್ ಬಳಸಿ

ನೀವು ಫೋನ್ ಚಾರ್ಜ್‌ಗೆ ಬಳಸುತ್ತಿರುವ ಚಾರ್ಜರ್ ಯಾವುದೇ ದೋಷವನ್ನು ಹೊಂದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಗೋಡೆ ಚಾರ್ಜರ್

ಗೋಡೆ ಚಾರ್ಜರ್

ವೇಗದ ಚಾರ್ಜ್‌ಗಾಗಿ, ವಾಲ್ ಚಾರ್ಜರ್ ಬಳಸಿ ಫೋನ್ ಚಾರ್ಜ್ ಮಾಡಿ.

ಯುಎಸ್‌ಬಿ 3.0 ಆಯ್ಕೆಮಾಡಿ

ಯುಎಸ್‌ಬಿ 3.0 ಆಯ್ಕೆಮಾಡಿ

ನಿಮ್ಮ ಸ್ಮಾರ್ಟ್‌ಫೋನ್ ಅನ್ನು ವೇಗವಾಗಿ ಚಾರ್ಜ್ ಮಾಡಲು 3.0 ಪೋರ್ಟ್ ಉತ್ತಮವಾಗಿದೆ.

ಯುಎಸ್‌ಬಿ ಹಬ್ ಮೂಲಕ ಚಾರ್ಜ್ ಮಾಡದಿರಿ

ಯುಎಸ್‌ಬಿ ಹಬ್ ಮೂಲಕ ಚಾರ್ಜ್ ಮಾಡದಿರಿ

ಯುಎಸ್‌ಬಿ ಹಬ್ ಬಳಸಿ ಫೋನ್ ಚಾರ್ಜ್ ಮಾಡುವುದು 50 ಶೇಕಡದಷ್ಟು ಚಾರ್ಜಿಂಗ್ ಪ್ರಮಾಣವನ್ನು ಕುಗ್ಗಿಸುತ್ತದೆ.

ಡೆಸ್ಕ್‌ಟಾಪ್ ಬಳಸಿ ಚಾರ್ಜ್ ಮಾಡಿ

ಡೆಸ್ಕ್‌ಟಾಪ್ ಬಳಸಿ ಚಾರ್ಜ್ ಮಾಡಿ

ಲ್ಯಾಪ್‌ಟಾಪ್‌ಗಳಿಗಿಂತಲೂ ಡೆಸ್ಕ್‌ಟಾಪ್ ಹೆಚ್ಚಿನ ಶಕ್ತಿಯನ್ನು ಬಳಸಿಕೊಳ್ಳುತ್ತದೆ ಆದ್ದರಿಂದ ಡೆಸ್ಕ್‌ಟಾಪ್‌ನಲ್ಲಿ ಯುಎಸ್‌ಬಿ ಪೋರ್ಟ್ ಬಳಸಿಕೊಂಡು ಫೋನ್ ಚಾರ್ಜ್ ಮಾಡಿ.

ಡಾಕಿಂಗ್ ಸ್ಟೇಶನ್ ಬಳಸಿ

ಡಾಕಿಂಗ್ ಸ್ಟೇಶನ್ ಬಳಸಿ

ವಾಲ್ ಚಾರ್ಜರ್‌ಗಿಂತಲೂ ಡಾಕಿಂಗ್ ಸ್ಟೇಶನ್ ವೇಗವಾಗಿ ಫೋನ್ ಚಾರ್ಜ್ ಮಾಡುತ್ತದೆ.

ಕಾರು ಚಾರ್ಜರ್

ಕಾರು ಚಾರ್ಜರ್

ಕಾರು ಚಾಲನೆಯಲ್ಲಿರುವಾಗ ನಿಮ್ಮ ಫೋನ್ ಅನ್ನು ದುಪ್ಪಟ್ಟು ವೇಗದಲ್ಲಿ ಇದು ಚಾರ್ಜ್ ಮಾಡುತ್ತದೆ.

ಬೇಡದೇ ಇರುವ ಸೆಟ್ಟಿಂಗ್‌ಗಳನ್ನು ಆಫ್ ಮಾಡಿ

ಬೇಡದೇ ಇರುವ ಸೆಟ್ಟಿಂಗ್‌ಗಳನ್ನು ಆಫ್ ಮಾಡಿ

ವೇಗದ ಚಾರ್ಜಿಂಗ್‌ಗಾಗಿ, ವೈಫೈ, ಬ್ಲ್ಯೂಟೂತ್ ಜಿಪಿಎಸ್ ಮತ್ತು ಸಿಂಕ್ ಆಫ್ ಮಾಡಿ.

ಫೋನ್ ಬಳಸದಿರಿ

ಫೋನ್ ಬಳಸದಿರಿ

ಫೋನ್ ಚಾರ್ಜ್ ಆಗುತ್ತಿರುವಾಗ ಫೋನ್ ಅನ್ನು ಬಳಸದಿರಿ. ಇದರಿಂದ ಚಾರ್ಜರ್ ವೇಗ ತಗ್ಗುತ್ತದೆ.

ಚಾರ್ಜ್ ಮಾಡುತ್ತಿರುವಾಗ ಫೋನ್ ಸ್ವಿಚ್ ಆಫ್ ಮಾಡಿ

ಚಾರ್ಜ್ ಮಾಡುತ್ತಿರುವಾಗ ಫೋನ್ ಸ್ವಿಚ್ ಆಫ್ ಮಾಡಿ

ನಿಮ್ಮ ಡಿವೈಸ್ ಅನ್ನು ಸ್ವಿಚ್ ಆಫ್ ಮಾಡಿ ಫೋನ್ ಚಾರ್ಜಿಂಗ್ ಅನ್ನು ಮಾಡಿ.

Best Mobiles in India

English summary
Smartphones come with larger display and a powerful graphic processing unit, which are tent to use much battery. Smartphones usually take up hours to completely charge, and it's the worst part when you are in a rush and you see your mobile battery is low. Here are some tips to charge your phone faster.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X