Subscribe to Gizbot

ನಿಮ್ಮ ಫೇಸ್‌ಬುಕ್ ಭದ್ರತೆಗೆ ಬಂದಿದೆ ಯುಎಸ್‌ಬಿ ಸೆಕ್ಯೂರಿಟಿ ಕೀ...!

Written By:

ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್ ಆಕೌಂಟ್ ಹ್ಯಾಕಿಂಗ್ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಫೇಸ್‌ಬುಕ್ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ ಹೊಸ ಮಾದರಿಯೊಂದನ್ನು ಪ್ರಯತ್ನಿಸಲಾಗುತ್ತಿದ್ದು, ಫೇಸ್‌ಬುಕ್ ಲಾಗಿಂಗ್ ಅಗುವುದಕ್ಕಾಗಿ ಯುಎಸ್‌ಬಿ ಸೆಲ್ಯೂರಿಟಿ ಕೀ ಯೊಂದನ್ನು ಪರಿಚಯಿಸಲಾಗುತ್ತಿದೆ.

ನಿಮ್ಮ ಫೇಸ್‌ಬುಕ್ ಭದ್ರತೆಗೆ ಬಂದಿದೆ ಯುಎಸ್‌ಬಿ ಸೆಕ್ಯೂರಿಟಿ ಕೀ...!

ಓದಿರಿ: ಮತ್ತೆ ಮಾರುಕಟ್ಟೆಗೆ ಬರಲಿದೆ ನೋಕಿಯಾ 1100...!!!!

ಈ ಯುಎಸ್‌ಬಿ ಸೆಲ್ಯೂರಿಟಿ ಕೀ ಪೈನ್‌ಡೈವ್ ಮಾದರಿಯಲ್ಲಿ ಇರಲಿದ್ದು, ಇದು ಫೇಸ್‌ಬುಕ್ ಬಳಕೆದಾರಿಗೆ ಅತ್ಯಂತ ಉಪಯೋಗಕಾರಿಯಾಗಲಿದೆ, ಯಾರು ಸಹ ಯುಎಸ್‌ಬಿ ಸೆಲ್ಯೂರಿಟಿ ಕೀ ಇಲ್ಲಿದೆ ನಿಮ್ಮ ಫೇಸ್‌ಬುಕ್‌ ಖಾತೆಯನ್ನು ನಿರ್ವಹಿಸಲು ಸಾಧ್ಯವಿರುವುದಿಲ್ಲ.

ಎಲ್ಲಾ ಪೈನ್‌ಡೈವ್‌ಗಳನ್ನು ಯುಎಸ್‌ಬಿ ಸೆಲ್ಯೂರಿಟಿ ಕೀಯಾಗಿ ಬಳಸಲು ಸಾಧ್ಯವಿಲ್ಲ. ಇದಕ್ಕಾಗಿ U2F standard ಎಂಬ ಯುಎಸ್‌ಬಿ ಸೆಲ್ಯೂರಿಟಿ ಕೀ ಯೊಂದನ್ನು ಅಭಿವೃದ್ಧಿಪಡಿಸಲಾಗಿದ್ದು, ಇದರ ಮೂಲಕ ಫೇಸ್‌ಬುಕ್‌ ಖಾತೆಯ ಭದ್ರತೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

ನಿಮ್ಮ ಫೇಸ್‌ಬುಕ್ ಭದ್ರತೆಗೆ ಬಂದಿದೆ ಯುಎಸ್‌ಬಿ ಸೆಕ್ಯೂರಿಟಿ ಕೀ...!

ಓದಿರಿ: ಜಿಯೋ ಕಾಲ್‌ಡ್ರಾಪ್‌ ಕಡಿಮೆಯಾಗಿದೆ: ಟ್ರಾಯ್‌

ಸದ್ಯ ಮಾರುಕಟ್ಟೆಯಲ್ಲಿ U2F standard ಯುಎಸ್‌ಬಿ ಗಳು ಲಭ್ಯವಿದ್ದು, FIDO U2F Security Key ಹೈಬ್ರಿಡ್ ಆಗಿದ್ದು, ರೂ.1,482ಗಳಿಗೆ ಲಭ್ಯವಿದೆ. ತಮ್ಮ ಫೇಸ್‌ಬುಕ್ ಖಾತೆ ಸೇಫ್ ಆಗಿರ ಬೇಕು ಎಂದು ಬಯಸುವವರು ಈ ಸೇವೆಯನ್ನು ತಮ್ಮದಾಗಿಸಿಕೊಳ್ಳಬಹುದು.

ನೀವು ನಿಮ್ಮ ಫೇಸ್‌ಬುಕ್ ಖಾತೆಯನ್ನು ಓಪನ್ ಮಾಡಬೇಕಾದರೆ ಪಾಸ್‌ವರ್ಡ್‌ನೊಂದಿಗೆ ನಿಮ್ಮ ಕಂಪ್ಯೂಟರ್‌ನೊಂದಿಗೆ ಈ U2F Security Key ಸಂಪರ್ಕವನ್ನು ಸಾಧಿಸಿರಲೇ ಬೇಕು. ಇಲ್ಲವಾದರೆ ಫೇಸ್‌ಬುಕ್‌ ಖಾತೆಯನ್ನು ತೆರೆಯುವುದು ಅಸಾಧ್ಯವಾಗಲಿದೆ.

Read more about:
English summary
Facebook has introduced a new login authentication mechanism that allows user accounts to be secured with a physical USB key.to know more visit kannada.gozbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot