Subscribe to Gizbot

ಜಿಯೋ ಕಾಲ್‌ಡ್ರಾಪ್‌ ಕಡಿಮೆಯಾಗಿದೆ: ಟ್ರಾಯ್‌

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ದೇಶದ ಮಾರುಕಟ್ಟೆಯಲ್ಲಿ ಬೆಳೆಯುತ್ತಿರುವ ವೇಗವನ್ನು ಸಹಿಸದ ಇತರೆ ಟೆಲಿಕಾಂ ಕಂಪನಿಗಳು ಜಿಯೋಗೆ ಕರೆ ಸಂಪರ್ಕಿಸದೆ, ಕಾಲ್ ಡ್ರಾಪ್‌ ಮಾಡುತ್ತಿದ್ದವು. ಆದರೆ ಇಂದಿನ ದಿನದಲ್ಲಿ ಈ ಪರಿಸ್ಥಿತಿ ಸುಧಾರಿಸಿದ್ದು, ಜಿಯೋ ಜೊತೆಗೆ ಏರ್‌ಟೆಲ್, ವೊಡೋಪೋನ್ ಮತ್ತು ಐಡಿಯಾ ಕಂಪನಿಗಳು ಕರೆ ಸಂಪರ್ಕ ಸುಧಾರಿಸಿದೆ ಎಂದಿದೆ.

ಜಿಯೋ ಕಾಲ್‌ಡ್ರಾಪ್‌ ಕಡಿಮೆಯಾಗಿದೆ: ಟ್ರಾಯ್‌

ಓದಿರಿ: 7,800mAh ಬ್ಯಾಟರಿ ಸಾಮಾರ್ಥ್ಯದ ಆಸಸ್ ಜೆನ್‌ಪಾಡ್ 3ಎಸ್ 10 ಟ್ಯಾಬ್ಲೆಟ್

ಕಾಲ್‌ ಡ್ರಾಪ್‌ ಸಮಸ್ಯೆಯಿಂದಾಗಿ ಜಿಯೋ ಇಂದ ಯಾವುದೇ ನೆಟ್‌ವರ್ಕ್ ಕರೆ ಮಾಡಿದರು ಕನೆಕ್ಟ್ ಆಗದೆ ತುಂಬ ಸಮಸ್ಯೆ ಎದುರಿಸಬೇಕಾಗಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಈ ಸಮಸ್ಯೆ ನಿವಾರಣೆಯಾಗಿದೆ ಎಂದು ಟ್ರಾಯ್‌ ಅಧ್ಯಕ್ಷ ಆರ್‌.ಎಸ್‌. ಶರ್ಮ ತಿಳಿಸಿದ್ದಾರೆ.

ಈ ಮೊದಲು ಜಿಯೋಯಿಂದ 1000 ಕರೆಗಳನ್ನು ಮಾಡಿದರೆ ಅದರಲ್ಲಿ 175 ಕರೆಗಳು ಡ್ರಾಪ್‌ ಆಗುತ್ತಿದ್ದವು. ಆದರೆ ಇದು ಈ ದಿನಗಳಲ್ಲಿ ಕಡಿಮೆಯಾಗಿದ್ದು, 1000 ಕರೆಗಳಲ್ಲಿ ಕೇವಲ 5 ಕರೆಗಳು ಮಾತ್ರ ಡ್ರಾಪ್‌ ಆಗುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಜಿಯೋ ಕಾಲ್‌ಡ್ರಾಪ್‌ ಕಡಿಮೆಯಾಗಿದೆ: ಟ್ರಾಯ್‌

ಓದಿರಿ: ಮತ್ತೆ ಮಾರುಕಟ್ಟೆಗೆ ಬರಲಿದೆ ನೋಕಿಯಾ 1100...!!!!

ಜಿಯೋ ಈ ಕುರಿತು ದೂರು ನೀಡಿದ ಹಿನ್ನಲೆಯಲ್ಲಿ ಟ್ರಾಯ್‌ ಏರ್‌ಟೆಲ್, ಐಡಿಯಾ ಮತ್ತು ವೊಡೋಪೋನ್ ಕಂಪನಿಗಳಿಗೆ ತಮ್ಮ ಸೇವೆಯನ್ನು ಹೆಚ್ಚಿಸುವಂತೆ ಎಚ್ಚರಿಕೆಯನ್ನು ನೀಡಿತ್ತು. ಈ ಹಿನ್ನಲೆಯಲ್ಲಿ ಈ ಟೆಲಿಕಾಮ್ ಕಂಪನಿಗಳು ತಮ್ಮ ಸೇವೆಯನ್ನು ವೃದ್ಧಿಸಿದ್ದು, ಇನ್ನುಮುಂದೆ ಯಾವುದೇ ತೊಂದರೆ ಇಲ್ಲದೇ ಕೆರೆ ಮಾಡಬಹುದಾಗಿದೆ.

Read more about:
English summary
TRAI chairman R S Sharma said that the points of interconnection between Reliance Jio and Idea Cellular, Vodafone is in a very good shape now. The congestion level, however for Airtel is beyond the permissible limit of 0.5 percent.to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot