ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಅಲೆ ; 'ಒನ್‌ಪ್ಲಸ್ 7 ಪ್ರೊ' ಬಿಡುಗಡೆ!
ವಿಶ್ವ ಮೊಬೈಲ್ ಪ್ರಿಯರು ಭಾರಿ ಕುತೂಹಲದಿಂದ ಎದುರು ನೋಡುತ್ತಿದ್ದ ಒನ್‌ಪ್ಲಸ್ 7 ಪ್ರೊ ಮತ್ತು ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ಮೂಲಕ ಗ್ರಾಹಕರ ನಿರೀಕ್ಷೆಗಳಿಗೆ ಪೂರ್ಣವಿರಾಮ ಬಿದ್ದಿದೆ. ನೆನ್ನೆ ಬೆಂಗಳೂರಿನಲ್ಲಿ ಲಾಂಚ್ ಆದ ಈ ಎರಡು ಸ್ಮಾರ್ಟ್‌ಫೋನ್‌ಗಳು ನಿರೀಕ್ಷೆಯಂತೆ ಹೈ ಎಂಡ್ ಫೀಚರ್ಸ್‌ಗಳನ್ನು ಹೊಂದಿದ್ದು, ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿವೆ. ಈ ಮೂಲಕ ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತಾನೇ ಕಿಂಗ್ ಎಂಬುದನ್ನು ಒನ್‌ಪ್ಲಸ್ ಮತ್ತೆ ತೊರಿಸಿದೆ.

ಹೌದು, ಒನ್‌ಪ್ಲಸ್ ಕಂಪನಿಯು ನೆನ್ನೆ ಬೆಂಗಳೂರಿನಲ್ಲಿ ತನ್ನ ಬಹುನಿರೀಕ್ಷಿತ ಒನ್‌ಪ್ಲಸ್ 7 ಪ್ರೊ ಮತ್ತು ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್‌ಗಳನ್ನು ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಿದ್ದು, ಫ್ಲ್ಯಾಗ್‌ಶಿಪ್ ಮಾದರಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅಬ್ಬರಿಸಲು ರೆಡಿಯಾಗಿವೆ. ಒನ್‌ಪ್ಲಸ್ 7 ಪ್ರೀಮಿಯಮ್ ಸ್ಮಾರ್ಟ್‌ಫೋನ್ ಆಗಿದ್ದು, ಒನ್‌ಪ್ಲಸ್ 7 ಪ್ರೊ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಆಗಿ ಗಮನಸೆಳೆದಿದೆ.
ಈಗಾಗಲೇ ನಾವು ಒನ್‌ಪ್ಲಸ್ 7 ಸ್ಮಾರ್ಟ್‌ಫೋನಿನ ಬಗ್ಗೆ ಹಿಂದಿನ ಲೇಖನದಲ್ಲಿ ತಿಳಿಸಿಕೊಟ್ಟಿದ್ದು, ಈ ಲೇಖನದಲ್ಲಿ ಒನ್‌ಪ್ಲಸ್ 7 ಪ್ರೊ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನಿನ ಬಗ್ಗೆ ತಿಳಿಯೊಣ. ತ್ರಿವಳಿ ಕ್ಯಾಮೆರಾಗಳನ್ನು ಹೊಂದಿರುವ ಹಾಗೆಯೇ, ಮೊದಲ ಬಾರಿಗೆ ಪಾಪ್‌ಅಪ್ ಸೆಲ್ಫಿ ಕ್ಯಾಮೆರಾದ ಮೂಲಕ ಮೂರು ವೇರಿಯಂಟ್ ಪರಿಚಯವಾಗಿರುವ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಒನ್‌ಪ್ಲಸ್ 7 ಪ್ರೊ ಹೇಗಿದೆ?, ಸ್ಮಾರ್ಟ್‌ಫೋನ್ ಇತರೆ ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಒನ್‌ಪ್ಲಸ್ 7 ಪ್ರೊ ಡಿಸ್‌ಪ್ಲೇ
6.67 ಇಂಚಿನ ಕ್ವಾಡ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ನೀಡಲಾಗಿದ್ದು, ಡಿಸ್‌ಪ್ಲೇ ರೆಸಲ್ಯೂಶನ್ ಸಾಮರ್ಥ್ಯವು 3120x1440 ಆಗಿದೆ. ಹಾಗೇ ಫೋನಿನ್ ಸ್ಕ್ರೀನ್‌ನಿಂದ ಬಾಡಿಯ ನಡುವಿನ ಅನುಪಾತವು ಶೇ. 93ರಷ್ಟು ಆಗಿದ್ದು, ಡಿಸ್‌ಪ್ಲೇ ಪಿಕ್ಸಲ್ ಡೆನ್ಸಿಟಿಯು 516 ಆಗಿದೆ. ಡಿಸ್‌ಪ್ಲೇಯು ಸಂಪೂರ್ಣ ನಾಚ್ ರಹಿತವಾಗಿದ್ದು, ಸ್ಕ್ರೀನ್ ವಿಶಾಲವಾಗಿ ಕಾಣಿಸಲಿದೆ.

ಪ್ರೊಸೆಸರ್
ಒನ್‌ಪ್ಲಸ್ 7 ಪ್ರೊ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಸಾಮರ್ಥ್ಯದ ಬಲವಾದ ಪ್ರೊಸೆಸರ್ ಅನ್ನು ಒದಗಿಸಲಾಗಿದೆ. ಇದರೊಂದಿಗೆ 12GB RAM ಪ್ರೊಸೆಸರ್‌ಗೆ ಬೆಂಬಲ ನೀಡಲಿದೆ. ಆಂತರಿಕ ಸಂಗ್ರಹಕ್ಕಾಗಿ 256GB ಸ್ಥಳಾವಕಾಶವನ್ನು ಇದಗಿಸಲಾಗಿದ್ದು, ಹೆಚ್ಚಿನ ಡೇಟಾ ಬೇಡುವ ಗೇಮ್‌ಗಳನ್ನು ಆಡಲು ಮತ್ತು ಹೈ ಎಂಡ್ ಆಪ್‌ಗಳನ್ನು ಬಳಸಬಹುದಾಗಿದೆ.

ತ್ರಿವಳಿ ಕ್ಯಾಮೆರಾ
ಸ್ಮಾರ್ಟ್‌ಫೋನಿನ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಆಯ್ಕೆಯನ್ನು ನೀಡಲಾಗಿದ್ದು, ಪ್ರಾಥಮಿಕ ಕ್ಯಾಮೆರಾವು 48 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದೆ. ಸೆಕೆಂಡರಿ ಕ್ಯಾಮೆರಾವು 16 ಮೆಗಾಪಿಕ್ಸ್‌ನಲ್ಲಿದ್ದು, ಅಲ್ಟ್ರಾವೈಲ್ಡ್ ಆಂಗಲ್ ಲೆಸ್ ಹೊಂದಿದೆ. ಹಾಗೇ ಮೂರನೇ ಕ್ಯಾಮೆರಾವು 8 ಮೆಗಾಪಿಕ್ಸಲ್ನಲ್ಲಿದ್ದು, ಟೆಲಿಪೋಟೊ ಸೆನ್ಸಾರ್ ಲೆನ್ಸ್ ಸಾಮರ್ಥ್ಯದಲ್ಲಿದೆ.

ಪಾಪ್‌ಅಪ್ ಸೆಲ್ಫಿ ಕ್ಯಾಮೆರಾ
ಒನ್‌ಪ್ಲಸ್ 7 ಪ್ರೊ ಸ್ಮಾರ್ಟ್‌ಫೋನ ಮೂಲಕ ಕಂಪನಿಯು ಮೊದಲ ಬಾರಿಗೆ ಪಾಪ್‌ಅಪ್ ಸೆಲ್ಫಿ ಕ್ಯಾಮೆರಾವನ್ನು ಪರಿಚಯಿಸಿದ್ದು, ಸೆಲ್ಫಿ ಕ್ಯಾಮೆರಾವು 16 ಮೆಗಾಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಲ್ಫಿ ಕ್ಯಾಮೆರಾ ಅತ್ಯುತ್ತಮ ಆಯ್ಕೆಗಳನ್ನು ಸಹ ನೀಡಲಾಗಿದ್ದು, ಉತ್ತಮವಾಗಿ ಫೋಟೋ ಮುಡಿಬರಲು ಸಹಕರಿಸಲಿವೆ.

ಸೌಂಡ್ ಮತ್ತು ಇತರೆ ಫೀಚರ್ಸ್
ಒನ್‌ಪ್ಲಸ್ 7 ಪ್ರೊ ಸ್ಮಾರ್ಟ್‌ಫೋನ್‌ನಲ್ಲಿ ಮ್ಯೂಸಿಕ್‌ಗೆ ಕಂಪನಿಯು ಹೆಚ್ಚಿನ ಗಮನ ನೀಡಿದ್ದು, ಡಾಲ್ಬಿ ಅಟೊಮ್ ಸ್ಪೀಕರ್ಸ್ ಒದಗಿಸಲಾಗಿದ್ದು, ಇದರೊಂದಿಗೆ ವೈಬ್ರೆಶನ್ ಮೋಟರ್ ಸಹ ನೀಡಲಾಗಿದೆ. ಫೋಟೊಗ್ರಾಫಿಗಾಗಿ ಕ್ಯಾಮೆರಾದಲ್ಲಿ DXO ಮಾರ್ಕ್ ಆಯ್ಕೆ ನೀಡಲಾಗಿದೆ.

ಬ್ಯಾಟರಿ
ಒನ್‌ಪ್ಲಸ್ 7 ಪ್ರೊ ಸ್ಮಾರ್ಟ್‌ಫೋನನಲ್ಲಿ 4000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಸ್ಮಾರ್ಟ್‌ಫೋನ್ ದೀರ್ಘಕಾಲದ ಬಾಳಿಕೆ ಬರಲು ಇದು ಸಹಕರಿಸಲಿದೆ.ಅತ್ಯುತ್ತಮ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ. ಕೇವಲ 10 ನಿಮಿಷದ ಚಾರ್ಜ್ ಸುಮಾರು 10 ಗಂಟೆಗಳವರೆಗೆ ಸ್ಮಾರ್ಟ್‌ಫೋನ್‌ಗೆ ಬಲ ನೀಡಲಿದೆ.

ಬೆಲೆ ಮತ್ತು ಲಭ್ಯತೆ
ಇನ್‌ಪ್ಲಸ್ 7 ಪ್ರೊ ಸ್ಮಾರ್ಟ್‌ಫೋನ್ ಮೂರು ವೇರಿಯಂಟ್‌ಗಳಲ್ಲಿ ಬಿಡುಗಡೆ ಆಗಿದ್ದು, 6GB RAM+128GB ಬೆಲೆಯು 48,999ರೂ.ಗಳು, 8GB RAM+256 52,999ರೂ.ಗಳು ಮತ್ತು 12GB RAM+256GB ಬೆಲೆಯು 57,999ರೂ.ಗಳು ಆಗಿವೆ. ಸದ್ಯದಲ್ಲಿಯೇ ಇ ಕಾಮರ್ಸ್ ಅಮೆಜಾನ್ ಜಾಲತಾಣದಲ್ಲಿ ಸೇಲ್‌ಗೆ ದೊರೆಯಲಿವೆ.


Click it and Unblock the Notifications