ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಒನ್ ಪ್ಲಸ್ ಒನ್ ಸೇವಾ ಕೇಂದ್ರ

By Shwetha
|

ಭಾರತದಲ್ಲಿ ಶ್ಯೋಮಿ ಯಶಸ್ಸನ್ನು ಪಡೆದುಕೊಂಡ ನಂತರ, ಒನ್ ಪ್ಲಸ್ ಸೇರಿದಂತೆ ಹಲವಾರು ಚೀನಾ ಸ್ಮಾರ್ಟ್‌ಫೋನ್‌ಗಳು ಭಾರತವನ್ನು ಪ್ರವೇಶಿಸುವ ನಿಟ್ಟಿನಲ್ಲಿ ಇಲ್ಲಿ ಕೇಂದ್ರ ಕಚೇರಿಗಳನ್ನು ಆರಂಭಿಸುತ್ತಿವೆ.

ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಒನ್ ಪ್ಲಸ್ ಒನ್ ಸೇವಾ ಕೇಂದ್ರ

ಒನ್ ಪ್ಲಸ್ ಒನ್ ಭಾರತದಲ್ಲಿ ತನ್ನ 9 ಹೊಸ ಸೇವಾ ಕೇಂದ್ರಗಳನ್ನು ತೆರೆಯಲಿದ್ದು ಒನ್ ಪ್ಲಸ್ 2 ಸ್ಮಾರ್ಟ್‌ಫೋನ್ ಅನ್ನು ಜುಲೈ 28 ರಂದು ಲಾಂಚ್ ಮಾಡುವುದರೊಂದಿಗೆ ಸೇವಾ ಕೇಂದ್ರಗಳ ತೆರೆಯುವಿಕೆಯನ್ನು ಸಂಸ್ಥೆ ಮಾಡಲಿದೆ. ದೇಶದಲ್ಲಿರುವ ತನ್ನ ಗ್ರಾಹಕರನ್ನು ಕುರಿತು ಕಂಪೆನಿ ಎಷ್ಟು ಗಂಭೀರವಾಗಿದೆ ಎಂಬುದು ಇದರಿಂದ ತಿಳಿಯುತ್ತದೆ.

ಓದಿರಿ: ಹೈ ಸ್ಪೀಡ್ ಇಂಟರ್ನೆಟ್ 4ಜಿ ಲಭ್ಯವಿರುವ ಬಜೆಟ್ ಫೋನ್‌ಗಳು

ಈ ಹೊಸ ಕೇಂದ್ರಗಳು ಬೆಂಗಳೂರು, ಚೆನ್ನೈ, ಕೊಚ್ಚಿ, ಹೈದ್ರಾಬಾದ್, ಪುಣೆ, ಮುಂಬೈ, ನವ ದೆಹಲಿ, ಕೋಲ್ಕತ್ತಾ ಮೊದಲಾದ ನಗರಗಳನ್ನು ಒಳಗೊಂಡಿದೆ. ದೇಶದಲ್ಲಿ ಈ ಕೇಂದ್ರಗಳು ಸುಧಾರಿತ ಒನ್ ಪ್ಲಸ್ ಡಿವೈಸ್ ರಿಪೇರಿ ಸೇವೆಯನ್ನು ಒದಗಿಸಲಿವೆ.

ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಒನ್ ಪ್ಲಸ್ ಒನ್ ಸೇವಾ ಕೇಂದ್ರ

ಸ್ಮಾರ್ಟ್‌ಫೋನ್ ಕುರಿತ ಯಾವುದೇ ಸಮಸ್ಯೆಗಳಿಗೆ 15 ದಿನಗಳ ಕಾರ್ಯನಿರ್ವಹಣಾ ಸೇವೆಯನ್ನು ಸಂಸ್ಥೆ ಒದಗಿಸುತ್ತಿದ್ದು ಭಾರತದಲ್ಲಿ 3 ತಿಂಗಳುಗಳ ವಿಸ್ತರಿತ ವಾರಂಟಿಯನ್ನು ಸ್ವಯಂಚಾಲಿತವಾಗಿ ಪಡೆದುಕೊಳ್ಳಬಹುದಾಗಿದೆ. ಇದು ಮುಂಬರಲಿರುವ ಒನ್ ಪ್ಲಸ್ 2 ಗೂ ಅನ್ವಯವಾಗಲಿದೆ.

ಓದಿರಿ: ನಮ್ಮ ಬೆಂಗಳೂರಿನಲ್ಲೂ ಉಚಿತ ವೈಫೈ ಎಲ್ಲೆಲ್ಲಿ?

ಇನ್ನು ಭಾರತದಲ್ಲಿ ಒನ್ ಪ್ಲಸ್ 45 ಸೇವಾಕೇಂದ್ರಗಳನ್ನು ಹೊಂದಿದೆ ಎಂಬುದು ಇದರ ವೆಬ್‌ಸೈಟ್‌ನಿಂದ ಬಂದಿರುವ ಮಾಹಿತಿಯಾಗಿದೆ.

Best Mobiles in India

English summary
With Xiaomi's success in India, many Chinese smartphone companies including Startups like OnePlus started entering the fiercely competitive smartphone market. However, while we have been witnessing the products so far so good, what fears us is the after sales service.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X