Subscribe to Gizbot

ಶೀಘ್ರದಲ್ಲೇ ಜನಪ್ರಿಯ ಪಾನೀಯ ಪೆಪ್ಸಿಯಿಂದ ಆಂಡ್ರಾಯ್ಡ್ ಫೋನ್

Written By:

ಸ್ವಲ್ಪ ದಿನಗಳ ಹಿಂದೆ, ಪೆಪ್ಸಿ ಕಂಪೆನಿಯ ಚೀನಾ ಬ್ರ್ಯಾಂಚ್ ಫೋನ್ ಅನ್ನು ಲಾಂಚ್ ಮಾಡುವ ಕುರಿತು ಸುದ್ದಿ ಹಬ್ಬಿತ್ತು. ಇದನ್ನು ದೃಢೀಕರಿಸುವಂತೆ ವೈಬೊ ಚಾನಲ್ ಇದನ್ನು ಪೆಪ್ಸಿ ಫೋನ್ ಎಂದು ಕರೆದಿದೆ. ಇನ್ನು ಪೆಪ್ಸಿ ಕಂಪೆನಿ ಫೋನ್ ಅನ್ನು ಹೊರತರುತ್ತಿದೆ ಎಂಬ ಗಾಳಿ ಸುದ್ದಿ ಈ ಮೊದಲೇ ಹಬ್ಬಿದ್ದು ಇದರ ಬಗ್ಗೆ ಯಾರೂ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಈಗ ಅಧಿಕೃತವಾಗಿ ಕಂಪೆನಿಯೇ ಫೋನ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡುವ ಕುರಿತು ದೃಢೀಕರಿಸಿದೆ.

ಓದಿರಿ: ಭಾರತದಲ್ಲೇಕೆ ನಡೆದಿತ್ತು ವೆಬ್‌ಸೈಟ್‌ ಬ್ಲಾಕ್‌

ಶೀಘ್ರದಲ್ಲೇ ಜನಪ್ರಿಯ ಪಾನೀಯ ಪೆಪ್ಸಿಯಿಂದ ಆಂಡ್ರಾಯ್ಡ್ ಫೋನ್

ದುರಾದೃಷ್ಟವಶಾತ್ ಕಂಪೆನಿ ಫೋನ್ ಕುರಿತು ಮಾಹಿತಿಯನ್ನು ಇನ್ನೂ ಹೊರಹಾಕಿಲ್ಲ. ಇನ್ನು ಈ ಫೋನ್ ಆರಂಭದಲ್ಲಿ ಚೀನಾದಲ್ಲಿ ಮಾತ್ರ ದೊರೆಯಬಹುದು ಎಂಬ ಮಾತೂ ಕೇಳಿಬರುತ್ತಿದೆ.

ಓದಿರಿ: ಇಂಟರ್ನೆಟ್ ಬಳಕೆಯಲ್ಲಿ ಮುಗ್ಗರಿಸಿದ ಬೆಂಗಳೂರು

ಶೀಘ್ರದಲ್ಲೇ ಜನಪ್ರಿಯ ಪಾನೀಯ ಪೆಪ್ಸಿಯಿಂದ ಆಂಡ್ರಾಯ್ಡ್ ಫೋನ್

ವದಂತಿಗಳ ಪ್ರಕಾರ ಫೋನ್‌ನ ಫೀಚರ್ ಇಂತಿದೆ: 5.5 ಇಂಚಿನ ಡಿಸ್‌ಪ್ಲೇ 1080 x 1920 ಪಿಕ್ಸೆಲ್‌ಗಳು, 1.7GHz MediaTek MT6592, 2ಜಿಬಿ RAM, 16 ಜಿಬಿ ಆಂತರಿಕ ಮೆಮೊರಿ, ಫೋನ್ ರಿಯರ್ ಕ್ಯಾಮೆರಾ 13 ಎಮ್‌ಪಿ ಮುಂಭಾಗ ಕ್ಯಾಮೆರಾ 5 ಎಮ್‌ಪಿಯಾಗಿದೆ. ಇನ್ನು ಡಿವೈಸ್ ಬ್ಯಾಟರಿ 3,000mAh ಆಗಿದೆ.

ಇನ್ನು ಈ ವದಂತಿಗಳು ನಿಜವಾಗಿದ್ದಲ್ಲಿ, ಫೋನ್ ಅನ್ನು ಅಕ್ಟೋಬರ್ 20 ಕ್ಕೆ ಪೆಪ್ಸಿ ಲಾಂಚ್ ಮಾಡಬಹುದು ಎಂಬ ಸೂಚನೆ ದೊರೆತಿದೆ.

English summary
"Pepsi Phone". At the time, this sounded like a rumor out of far left field, seeing that the Pepsi brand has nothing to do with mobile phones. As it turns out, however, Pepsi confirmed earlier today for Reuters that the rumors are true.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot