Subscribe to Gizbot

ಇಂಟರ್ನೆಟ್ ಬಳಕೆಯಲ್ಲಿ ಮುಗ್ಗರಿಸಿದ ಬೆಂಗಳೂರು

Written By:

ಐಟಿ ನಗರವೆಂದೇ ಪ್ರಖ್ಯಾತಿಯನ್ನು ಪಡೆದಿರುವ ಬೆಂಗಳೂರು ಇಂಟರ್ನೆಟ್ ಬಳಕೆಯಲ್ಲಿ ತೀರಾ ಕೆಳಮಟ್ಟದಲ್ಲಿದೆ. ದೇಶದ ಸಿಲಿಕಾನ್ ರಾಜಧಾನಿ ಐಟಿ ನಗರಿಯೆಂದೇ ಖ್ಯಾತಿವೆತ್ತಿರುವ ರಾಜ್ಯದಲ್ಲಿ ಇಂತಹ ಬೆಳವಣಿಗೆ ಪ್ರಗತಿಗೆ ಮಾರಕವಾಗಿ ಪರಿಣಾಮವನ್ನು ಬೀರಬಹುದು ಎಂಬುದು ಕಳವಳಕಾರಿ ವಿಷಯವಾಗಿದೆ.

ಓದಿರಿ: ಈ ದೇಶಗಳಲ್ಲಿ ಇಂಟರ್ನೆಟ್ ಬಳಸಿದವರಿಗೆ ಶಿಕ್ಷೆ

ಇಂಟರ್ನೆಟ್ ದರದಲ್ಲಿ ಹೆಚ್ಚಳ, ಮೊಬೈಲ್‌ಗಳಲ್ಲಿ ಮಾತ್ರ ಇಂಟರ್ನೆಟ್ ಬಳಸುವುದು, ಲ್ಯಾಪ್‌ಟಾಪ್ ಕಂಪ್ಯೂಟರ್‌ಗಳ ಬಳಕೆಯನ್ನು ನಗರದ ಜನರು ಮಾಡದೇ ಇರುವುದು ಮುಖ್ಯ ಅಂಶವಾಗಿ ಕಂಡುಬಂದಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಟಿ ರಾಜಧಾನಿ

ಐಟಿ ರಾಜಧಾನಿ

ದೇಶದ ಐಟಿ ರಾಜಧಾನಿಯೆಂದೇ ಹೆಸರು ಗಳಿಸಿರುವ ಬೆಂಗಳೂರು ಇಂಟರ್ನೆಟ್ ತಲುಪುವಿಕೆಯಲ್ಲಿ ಮುಗ್ಗರಿಸಿದೆ.

ಪ್ರಮಾಣ ಕುಗ್ಗಿದೆ

ಪ್ರಮಾಣ ಕುಗ್ಗಿದೆ

ಬರೇ 3.98 ಲಕ್ಷ ಇಂಟರ್ನೆಟ್ ಬಳಸುತ್ತಿದ್ದು 23 ಲಕ್ಷ ಮನೆಗಳಿರುವ ಸಿಲಿಕಾನ್ ಸಿಟಿಯಲ್ಲಿ ಇಂಟರ್ನೆಟ್ ಬಳಸುವವರ ಪ್ರಮಾಣ ಕುಗ್ಗಿದೆ. ಎಂಬುದು ಹೊಸ ಅಧ್ಯಯನದಿಂದ ತಿಳಿದು ಬಂದಿರುವ ಅಂಶವಾಗಿದೆ.

ಪ್ರವೇಶವನ್ನು ಪಡೆದುಕೊಂಡಿಲ್ಲ

ಪ್ರವೇಶವನ್ನು ಪಡೆದುಕೊಂಡಿಲ್ಲ

76.39% ನಿವಾಸಗಳು ಕಂಪ್ಯೂಟರ್‌ಗಳು ಅಥವಾ ಲ್ಯಾಪ್‌ಟಾಪ್‌ಗಳಿಗೆ ಪ್ರವೇಶವನ್ನು ಪಡೆದುಕೊಂಡಿಲ್ಲ, ಎಂಬುದಾಗಿ ವರದಿ ಬಹಿರಂಗಗೊಳಿಸಿದೆ.

ಮೊಬೈಲ್ ಫೋನ್‌

ಮೊಬೈಲ್ ಫೋನ್‌

ಇನ್ನು ಸಮೀಕ್ಷೆಯ ಪ್ರಕಾರ 1.31 ನಗರ ನಿವಾಸಗಳ 85% ಕಂಪ್ಯೂಟರ್/ಲ್ಯಾಪ್‌ಟಾಪ್‌ಗಳನ್ನು ಹೊಂದಿಲ್ಲ ಎಂಬುದಾಗಿ ಸಮೀಕ್ಷೆ ತಿಳಿಸಿದೆ. ಇನ್ನು ಇವರುಗಳು ತಮ್ಮ ಮೊಬೈಲ್ ಫೋನ್‌ಗಳ ಮೂಲಕವೇ ಪ್ರವೇಶವನ್ನು ಪಡೆದುಕೊಳ್ಳುತ್ತಿದ್ದಾರೆ.

ಅತ್ಯಾಧುನಿಕ ತಂತ್ರಜ್ಞಾನ

ಅತ್ಯಾಧುನಿಕ ತಂತ್ರಜ್ಞಾನ

ಅತ್ಯಾಧುನಿಕ ತಂತ್ರಜ್ಞಾನವನ್ನು ಆಧರಿಸಿ ಸಮೀಕ್ಷೆಯನ್ನು ನಡೆಸಲಾಗಿದೆ.

ಇಂಟರ್ನೆಟ್ ಬಳಕೆ ಕುಗ್ಗಿರುವುದು

ಇಂಟರ್ನೆಟ್ ಬಳಕೆ ಕುಗ್ಗಿರುವುದು

ಇಂದಿನ ತಂತ್ರಜ್ಞಾನ ಯುಗದಲ್ಲಿ ಇಂಟರ್ನೆಟ್ ಬಳಸುವಿಕೆಯಲ್ಲಿ ಹೆಚ್ಚಿನ ಪ್ರಗತಿಯನ್ನು ಮಾಡಲಾಗುತ್ತಿದ್ದರೂ ಬೆಂಗಳೂರಿನಲ್ಲಿ ಇಂಟರ್ನೆಟ್ ಬಳಕೆ ಕುಗ್ಗಿರುವುದು ಬೇಸರವನ್ನುಂಟು ಮಾಡಿದೆ ಎಂದು ಇನ್‌ಫೋಸಿಸ್‌ನ ಮಾಜಿ ಡೈರೆಕ್ಟರ್ ಮೋಹನ್‌ ದಾಸ್ ಪೈ ತಿಳಿಸಿದ್ದಾರೆ.

ಇಂಟರ್ನೆಟ್ ವ್ಯವಸ್ಥೆಯಲ್ಲಿ ದುರ್ಬಲತೆ

ಇಂಟರ್ನೆಟ್ ವ್ಯವಸ್ಥೆಯಲ್ಲಿ ದುರ್ಬಲತೆ

ಇಂಟರ್ನೆಟ್ ವ್ಯವಸ್ಥೆಯಲ್ಲಿ ದುರ್ಬಲತೆಯಿರುವುದು ಇದಕ್ಕೆ ಕಾರಣವಾಗಿರಬಹುದು. ಕಳಪೆ ಗುಣಮಟ್ಟದ ಬ್ರಾಡ್‌ಬ್ಯಾಂಡ್ ಕನೆಕ್ಟಿವಿಟಿ ಮತ್ತು ಹೆಚ್ಚು ದರದ ಇಂಟರ್ನೆಟ್ ದರ ಇದಕ್ಕೆ ಮೂಲ ಕಾರಣವಾಗಿದೆ.

ದರ

ದರ

ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ಇಂಟರ್ನೆಟ್ ಅನ್ನು ನಗರದ ಜನರು ಹೆಚ್ಚು ಅವಲಂಬಿಸಿದ್ದು, ಇದರ ದರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
It may be the country's IT capital, but when it comes to reach of internet, Bengaluru has a long way to go. Only 3.98 lakh (17%) of the 23 lakh households in Bengaluru have direct access to internet.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot