ಪಬ್‌ಜಿ ಗೇಮ್‌ ಇನ್ನು ವಯಸ್ಕರಿಗೆ ಮಾತ್ರ!!

|

ಜನಪ್ರಿಯ ಪಬ್‌ಜಿ ಆಟಕ್ಕೆ ಹೆಚ್ಚಾಗಿ ಅಪ್ರಾಪ್ತ ವಯಸ್ಸಿನವರೇ ಅಡಿಕ್ಟ್ ಆಗುತ್ತಿರುವುದನ್ನು ಗಮನಿಸಿದ್ದೆವೆ. ಇತ್ತೀಚಿಗೆ ದೇಶದಲ್ಲಿ ಈ ಆಟವನ್ನು ಬ್ಯಾನ ಮಾಡಲು ಶಿಕ್ಷಕರು, ಪಾಲಕರು, ವಕೀಲರು ಮತ್ತು ರಾಜಕಾರಣಿಗಳು ಒತ್ತಾಯಿಸಿದ್ದನ್ನು ಕೇಳಿದ್ದೆವೆ. ಪಬ್‌ಜಿ ಗೇಮ್‌ ಅಡಿಕ್ಟ್ ಅನ್ನು ನಿಯಂತ್ರಿಸುವ ಸಲುವಾಗಿ ಗೇಮ್ ತಯಾರಿಕಾ ಸಂಸ್ಥೆ ಟೆನ್ಸೆಂಟ್ ದಿನಕ್ಕೆ ಆರು ಗಂಟೆ ಮಾತ್ರ ಆಡುವ ಅವಕಾಶ ನೀಡಿತ್ತು. ಆದರೆ ಈಗಲೂ ಜನಪ್ರಿಯತೆಯಲ್ಲಿರುವ ಪಬ್‌ಜಿ ಗೇಮ್‌ ಇನ್ನು ಕೇಲವ ವಯಸ್ಕರಿಗೆ ಮಾತ್ರ ಎನ್ನಲಾಗುತ್ತಿದೆ.

ಪಬ್‌ಜಿ ಗೇಮ್‌ ಇನ್ನು ವಯಸ್ಕರಿಗೆ ಮಾತ್ರ!!

ಹೌದು, ಪಬ್‌ಜಿ ಗೇಮ್‌ನಲ್ಲಿ ಅಪ್‌ಡೇಟ್‌ ವರ್ಷನ್‌ನಲ್ಲಿ ಹೊಸದಾಗಿ 'ಗೇಮ್‌ ಮ್ಯಾನೇಜ್‌ಮೆಂಟ್ ಸಿಸ್ಟಮ್' ಫೀಚರ್ಸ್‌ ಸೇರಿಸಲಾಗಿದ್ದು, ಈ ಆಯ್ಕೆಯಲ್ಲಿ ಆಟಗಾರರು ಗೇಮ್‌ ಟೈಮ್‌ ಮ್ಯಾನೇಜ್‌ ಮಾಡಬಹುದಾಗಿದೆ. ಹಾಗೆಯೇ ಹದಿನೆಂಟು ವಯಸ್ಸಿನ ಒಳಗಿನ ಆಟಗಾರರು ನಿರಂತರವಾಗಿ ಪಬ್‌ಜಿ ಆಡುತ್ತಿದ್ದರೇ 'ಗೇಮ್‌ ಆಡುವುದನ್ನು ನಿಲ್ಲಿಸು' ಅಥವಾ 'ಗೇಮ್‌ನಿಂದ ವಿರಾಮ ಪಡೆಯಿರಿ' ಎಂಬ ಪಾಪ್‌ಅಪ್‌ ನೋಟಿಫಿಕೇಶನ ಅಲರ್ಟ್‌ ಕಾಣಿಸಿಕೊಳ್ಳುತ್ತದೆ.

ಪಬ್‌ಜಿ ಗೇಮ್‌ ಇನ್ನು ವಯಸ್ಕರಿಗೆ ಮಾತ್ರ!!

ಗೇಮ್‌ ಪ್ರಿಯರ ಫೇವರೇಟ್ ಗೇಮ್‌ ಅಂದರೇ ಸದ್ಯ ಅದು ಪಬ್‌ಜಿ ಗೇಮ್‌ ಮಾತ್ರ ಆಗಿದ್ದು, ಇತ್ತೀಚಿಗೆ ಸ್ವಂತ ತವರು ರಾಷ್ಟ ಚೀನಾದಲ್ಲಿಯೇ ಈ ಗೇಮ್‌ ಅನ್ನು ಬ್ಯಾನ್ ಮಾಡಲಾಗಿದೆ. ಆದರೆ ಟೆನ್ಸೆಂಟ್‌ ಸಂಸ್ಥೆಯು ಪಬ್‌ಜಿ ಬದಲಿಗೆ 'ಗೇಮ್‌ ಆಫ್ ಪೀಸ್' ಎಂಬ ಗೇಮ್‌ ಅನ್ನು ಪರಿಚಯಿಸಿದೆ. ಈ ಗೇಮ್‌ ಬಹುತೇಕ ಪಬ್‌ಜಿ ಆಟವನ್ನು ಹೊಲುವಂತಿದೆ. ಹಾಗಾದರೇ ಹೊಸ 'ಗೇಮ್‌ ಆಫ್ ಪೀಸ್' ಗೇಮ್‌ ಹೇಗಿರಲಿದೆ ಎಂಬುದನ್ನು ನೋಡೋಣ ಬನ್ನಿರಿ.

ಓದಿರಿ : ಆಡುವ ವಯಸ್ಸಿನಲ್ಲೇ ದೇಶವೇ ಮೆಚ್ಚುವಂತಹ ಸಾಧನೆ ಮಾಡಿದ 'ಅಯುಷ್'!ಓದಿರಿ : ಆಡುವ ವಯಸ್ಸಿನಲ್ಲೇ ದೇಶವೇ ಮೆಚ್ಚುವಂತಹ ಸಾಧನೆ ಮಾಡಿದ 'ಅಯುಷ್'!

ಪಬ್‌ಜಿ ಪ್ರತಿರೂಪ

ಪಬ್‌ಜಿ ಪ್ರತಿರೂಪ

ಪಬ್‌ಜಿ ಗೇಮ್‌ ಸಾಕಷ್ಟು ಆವಾಂತರಗಳಿಗೆ ಕಾರಣವಾಗಿದ್ದು, ಸ್ವಂತ ಚೀನಾ ದೇಶದಲ್ಲಿಯೇ ಬ್ಯಾನಗೆ ಕಾರಣವಾಗಿದೆ. ಇತ್ತೀಚಿಗೆ ಪಬ್‌ಜಿ ಆಟಕ್ಕೆ 6 ಗಂಟೆ ಮಾತ್ರ ಎಂದು ಸಮಯ ನಿಗದಿ ಸಹ ಮಾಡಲಾಗಿತ್ತು. ಹೀಗಿರುವಾಗ ಟೆನ್ಸೆಂಟ್ ಸಂಸ್ಥೆಯು ಪಬ್‌ಜಿಗೆ ಪರ್ಯಾಯವಾಗಿ 'ಗೇಮ್‌ ಫಾರ್‌ ಪೀಸ್‌ ಫಾರ್‌ ಕಂಟ್ರಿ' ಎಂಬ ಹೊಸ ಗೇಮ್‌ ಅನ್ನು ಪರಿಚಯಿಸಿದೆ.

ಗೇಮ್‌ ಫಾರ್‌ ಪೀಸ್‌

ಗೇಮ್‌ ಫಾರ್‌ ಪೀಸ್‌

ಪಬ್‌ಜಿಗೆ ಬದಲಾಗಿ ಬರಲಿರುವ ಈ ಗೇಮ್‌ ಫಾರ್‌ ಪೀಸ್‌ ಫಾರ್‌ ಕಂಟ್ರಿ ಗೇಮ್‌ ಆಟಗಾರರಿಗೆ ಪಬ್‌ಜಿ ಆಟದ ಅನುಭವವನ್ನೆ ನೀಡಲಿದೆ. ಏಕೆಂದರೆ ಈ ಹೊಸ ಗೇಮ್‌ನಲ್ಲಿರುವ ಬಹುತೇಕ ಪಾತ್ರಗಳು ಪಬ್‌ಜಿಯಲ್ಲಿರುವಂತೆಯೆ ಇವೆ ಹಾಗೂ ಆಟದ ಗ್ರಾಫಿಕ್ಸ್‌ ಡಿಸೈನ್‌, ಕೀವರ್ಡ್‌ಗಳು ಮತ್ತು ಬ್ಯಾಕ್‌ಗ್ರೌಂಡ್‌ ಪಬ್‌ಜಿ ಗೇಮ್‌ಗೆ ಹೋಲಿಕೆ ಎನಿಸುತ್ತಿವೆ.

ಗೇಮ್‌ ಪ್ರೊಫೈಲ್‌

ಗೇಮ್‌ ಪ್ರೊಫೈಲ್‌

ಈಗಾಗಲೇ ಅನೇಕರು ಪಬ್‌ಜಿ ಆಟವನ್ನು ಸಿಕ್ಕಾಪಟ್ಟೆ ಆಡಿ ಪಬ್‌ಜಿಯಲ್ಲಿ ಹಲವು ಹಂತಗಳನ್ನು ಜಯಸಿರುತ್ತಾರೆ. ಅವರು ಈಗ ಹೊಸ ಗೇಮ್‌ಗೆ ಲಾಗ್‌ ಇನ್‌ ಆದಾಗ ಅವರ ಹಳೆಯ ಪಬ್‌ಜಿ ಗೇಮ್‌ ಪ್ರೊಫೈಲ್‌ನಲ್ಲಿರುವ ಅವರ ಅಚಿವಮೆಂಟ್ಸ್ ಮತ್ತು ಕಂಟೆಂಟ್ಸ್‌ಗಳು ಮುಂದುವರಿಯಲಿದೆ. ಇದು ಪಬ್‌ಜಿ ಗೇಮ್‌ ಆಟಗಾರರಿಗೆ ಖುಷಿ ಎನಿಸುವ ಸಂಗತಿಯಾಗಿದೆ.

ಚೀನಾದಲ್ಲಿ ಮಾತ್ರ

ಚೀನಾದಲ್ಲಿ ಮಾತ್ರ

ಪಬ್‌ಜಿಗೆ ಪ್ರತಿಯಾಗಿ ತಯಾರಾಗಿರುವ ಈ ಗೇಮ್‌ ಫಾರ್‌ ಪೀಸ್‌ ಫಾರ್‌ ಕಂಟ್ರಿ ಭಾರಿ ರೋಚಕವಾಗಿದ್ದು, ಆಟಗಾರರಲ್ಲಿ ಕುತೂಹಲ ಹೆಚ್ಚಿಸಲಿದೆ ಹಾಗೂ ಪಬ್‌ಜಿ ಆಡಿದ ಅನುಭವ ನೀಡಲಿದ್ದು, ಸದ್ಯಕ್ಕೆ ಚೀನಾದಲ್ಲಿ ಮಾತ್ರ ಈ ಗೇಮ್‌ ದೊರೆಯಲಿದೆ. ಮುಂದಿನ ದಿನಗಳಲ್ಲಿ ಭಾರತೀಯ ಗೇಮ್ಸ್‌ ಪ್ರೀಯರಿಗೆ ಲಭ್ಯವಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಓದಿರಿ : ಫ್ಲ್ಯಾಗ್‌ಶಿಫ್‌ ಸ್ಮಾರ್ಟ್‌ಫೋನ್‌!..ಗ್ರಾಹಕರ ಫೇವರೇಟ್ ಯಾವುದು ಗೊತ್ತಾ?ಓದಿರಿ : ಫ್ಲ್ಯಾಗ್‌ಶಿಫ್‌ ಸ್ಮಾರ್ಟ್‌ಫೋನ್‌!..ಗ್ರಾಹಕರ ಫೇವರೇಟ್ ಯಾವುದು ಗೊತ್ತಾ?

Best Mobiles in India

English summary
PUBG Mobile Will Not Allow Its Players Under The Age of 18 to Play The Game.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X