RComm ನಿಂದ 9 ರೂಗೆ 1GB ಡೇಟಾ ಆಫರ್: ಆಕ್ಟಿವೇಟ್ ಹೇಗೆ?
ಜಿಯೋಗೆ ಪ್ರತಿಸ್ಪರ್ಧೆ ನೀಡುವ ದಿಟ್ಟ ಹೆಜ್ಜೆಯಿಂದ ರಿಲಾಯನ್ಸ್ ಕಂಮ್ಯೂನಿಕೇಷನ್, ತನ್ನ ಆಕರ್ಷಕ ಟ್ಯಾರಿಫ್ ಪ್ಲಾನ್ ಅಡಿಯಲ್ಲಿ, 1GB ಡೇಟಾವನ್ನು ಕನಿಷ್ಟ ರೂ.9 ಕ್ಕೆ ನೀಡುತ್ತಿದೆ.
ರಿಲಾಯನ್ಸ್ ಜಿಯೋಗೆ ಕೌಂಟರ್ ನೀಡಲು ಭಾರತದ ಎಲ್ಲಾ ಟೆಲಿಕಾಂಗಳು ಸಹ ಸಾಲಿನಲ್ಲಿ ಇವೆ. ಜಿಯೋಗೆ ಪ್ರತಿಸ್ಪರ್ಧೆ ನೀಡುವಲ್ಲಿ ರಿಲಾಯನ್ಸ್ ಕಂಮ್ಯೂನಿಕೇಷನ್ ಸಹ ಹಿಂದೆ ಉಳಿದಿಲ್ಲ. ಏರ್‌ಟೆಲ್, ವೊಡಾಫೋನ್, ಐಡಿಯಾ, ಬಿಎಸ್‌ಎನ್‌ಎಲ್ ಟೆಲಿಕಾಂ ಆಪರೇಟರ್‌ಗಳು ಒಂದರ ಹಿಂದೆ ಒಂದರಂತೆ ಹಲವು ಆಕರ್ಷಕ ಟ್ಯಾರಿಫ್ ಪ್ಲಾನ್‌ಗಳನ್ನು. ಅತೀ ಕಡಿಮೆ ಡೇಟಾ ಪ್ಯಾಕ್, ಅನ್‌ಲಿಮಿಟೆಡ್ ವಾಯ್ಸ್ ಕರೆ ಮತ್ತು ಇತರೆ ಆಫರ್‌ಗಳೊಂದಿಗೆ ನೀಡುತ್ತಿವೆ.
ಈದೀಗ ತಾನೆ ಅಂತರರಾಷ್ಟ್ರೀಯ ಕರೆ ಮತ್ತು ಅನ್‌ಲಿಮಿಟೆಡ್ ವಾಯ್ಸ್ ಕರೆ, ಕುತೂಹಲಕಾರಿ ಡೇಟಾ ಪ್ಲಾನ್‌ಗಳನ್ನು ನೀಡುವಲ್ಲಿ ರಿಲಾಯನ್ಸ್ ಕಂಮ್ಯೂನಿಕೇಷನ್ ಸಹ ಹಿಂದೆ ಉಳಿದಿಲ್ಲ. ಜಿಯೋಗೆ ಪ್ರತಿಸ್ಪರ್ಧೆ ನೀಡುವ ದಿಟ್ಟ ಹೆಜ್ಜೆಯಿಂದ ರಿಲಾಯನ್ಸ್ ಕಂಮ್ಯೂನಿಕೇಷನ್, ತನ್ನ ಆಕರ್ಷಕ ಟ್ಯಾರಿಫ್ ಪ್ಲಾನ್ ಅಡಿಯಲ್ಲಿ, 1GB ಡೇಟಾವನ್ನು ಕನಿಷ್ಟ ರೂ.9 ಕ್ಕೆ ನೀಡುತ್ತಿದೆ. ಗ್ರಾಹಕರು ಈ ಆಫರ್ ಅನ್ನು ತಮ್ಮ ರಿಲಾಯನ್ಸ್ ನಂಬರ್‌ಗೆ ಆಕ್ಟಿವೇಟ್ ಪಡೆಯಬಹುದಾಗಿದ್ದು, ಹೇಗೆ ಎಂದು ಇಂದಿನ ಲೇಖನ ಓದಿ ತಿಳಿಯಿರಿ.
ರಿಲಾಯನ್ಸ್ ಜಿಯೋ 'ಹ್ಯಾಪಿ ನ್ಯೂ ಇಯರ್' ಆಫರ್ ಪಡೆಯುವುದು ಹೇಗೆ?

ರಿಲಾಯನ್ಸ್ ನಂಬರ್‌ನಿಂದ *129# ಗೆ ಡಯಲ್ ಮಾಡಿ
ರಿಲಾಯನ್ಸ್ ಕಂಮ್ಯೂನಿಕೇಷನ್ ನಂಬರ್ ಬಳಕೆದಾರರು ಈ ಆಫರ್ ಪಡೆಯಲು ತಮ್ಮ ಮೊಬೈಲ್‌ನಿಂದ ಮೊದಲಿಗೆ *129# ಗೆ ಡಯಲ್ ಮಾಡಿ.

ರೂ.9 ರ ಸ್ಟೋರ್ ಆಪ್ಶನ್ ಆಯ್ಕೆ ಮಾಡಿ
ಮೇಲೆ ತಿಳಿಸಿದ ನಂಬರ್ ಡಯಲ್ ಮಾಡಿದ ನಂತರ, ನಿಮ್ಮ ನಂಬರ್‌ಗೆ ಲಭ್ಯವಿರುವ ಹಲವು ಆಫರ್‌ಗಳನ್ನು ನೋಡಬಹುದು. ನಂತರ ಎರಡನೇ ಆಪ್ಶನ್ Rs.9 Store ಅನ್ನು ಸೆಲೆಕ್ಟ್ ಮಾಡಿ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rs.9 1GB ಡೇಟಾ ಆಯ್ಕೆ ಮಾಡಿ
ಮೇಲೆ ತಿಳಿಸಿದ ಎರಡನೇ ಆಪ್ಶನ್ ಆಯ್ಕೆ ಮಾಡಿದ ನಂತರ, ಹಲವು ಆಫರ್‌ಗಳ ಲೀಸ್ಟ್ ಒಂದು ಪ್ರದರ್ಶನವಾಗುತ್ತದೆ. ಅದರಲ್ಲಿ Rs. 9 = 1GB 2G ಡೇಟಾವನ್ನು, ನೀಡಿರುವ ಖಾಲಿ ಸ್ಪೇಸ್‌ನಲ್ಲಿ ನಂಬರ್ ಎಂಟರ್ ಮಾಡಿ ಆಯ್ಕೆ ಮಾಡಿ. ನಂತರ "Send" ಆಪ್ಶನ್ ಕ್ಲಿಕ್ ಮಾಡಿ.

ವೆರಿಫಿಕೇಶನ್ ಎಸ್‌ಎಂಎಸ್ ಸ್ವೀಕರಿಸುತ್ತೀರಿ
ನಿಮ್ಮ ರಿಲಾಯನ್ಸ್ ಕಂಮ್ಯೂನಿಕೇಷನ್ ನಂಬರ್ ಖಾತೆಯಲ್ಲಿ ಅಗತ್ಯ ಬ್ಯಾಲೆನ್ಸ್ ಇದೆಯೇ ಖಚಿತ ಮಾಡಿಕೊಳ್ಳಿ. ರೂ.9 ಆಫರ್ ಆಕ್ಟಿವೇಟ್ ಆಗಲು ನಿಮ್ಮ ನಂಬರ್ ಖಾತೆಯಿಂದ ಕಡಿತಗೊಳ್ಳುತ್ತದೆ. ಖಾತೆಯಲ್ಲಿ ಹಣವಿಲ್ಲದಿದ್ದಲ್ಲಿ, ರೀಚಾರ್ಜ್ ಸ್ವಯಂಕೃತವಾಗಿ ರದ್ದಾಗುತ್ತದೆ. ರೀಚಾರ್ಜ್ ಯಶಸ್ವಿ ಆದಲ್ಲಿ, ಆಪರೇಟರ್‌ನಿಂದ ಖಚಿತಗೊಂಡ ಬಗ್ಗೆ ಟೆಕ್ಸ್ಟ್ ಮೆಸೇಜ್ ಪಡೆಯುತ್ತೀರಿ.

ಆಫರ್ ಲಿಮಿಟೇಶನ್
* 2G ರಿಲಾಯನ್ಸ್ ಕಂಮ್ಯೂನಿಕೇಷನ್ ಬಳಕೆದಾರರಿಗೆ ವ್ಯಾಲಿಡ್ ಅಗಿದೆ.
* ಕೇವಲ ಪ್ರೀಪೇಡ್ ಬಳಕೆದಾರರಿಗೆ ಲಭ್ಯ.
* ಪ್ಯಾಕ್ 1 ದಿನ ಬ್ಯಾಲಿಡಿಟಿ ಹೊಂದಿದೆ.
* ಪ್ರಸ್ತುತದಲ್ಲಿ ಆಯ್ಕೆಯ ವೃತ್ತಗಳಲ್ಲಿ ಮಾತ್ರ ಲಭ್ಯ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








