Just In
- 3 hrs ago
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- 4 hrs ago
Valentines Day ಗಿಫ್ಟ್ ಸರ್ಚ್ ಮಾಡ್ತಾ ಇದ್ದೀರಾ?..ಇಲ್ಲಿವೆ ನೋಡಿ ಅತ್ಯುತ್ತಮ ಉಡುಗೊರೆ
- 5 hrs ago
ವಾಟ್ಸಾಪ್ಗೆ ಈ ಅಚ್ಚರಿಯ ಆಯ್ಕೆ ಸೇರೋದು ಪಕ್ಕಾ! ಇದರ ಬಗ್ಗೆ ಕೂಡಲೇ ತಿಳಿದುಕೊಳ್ಳಿ!
- 5 hrs ago
ಏರ್ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ; ಈ ಪ್ಲ್ಯಾನ್ 28 ದಿನಕ್ಕಲ್ಲ ಬದಲಾಗಿ ಒಂದು ತಿಂಗಳ ಮಾನ್ಯತೆ!
Don't Miss
- Lifestyle
ಪುರುಷರಿಗಿಂತ ಮಹಿಳೆಯರಿಗೆ ತೂಕ ಇಳಿಕೆ ತುಂಬಾ ಕಷ್ಟ, ಏಕೆ?
- Automobiles
2030 ರ ವೇಳೆಗೆ EV ವಾಹನ ಮಾರಾಟ 1 ಕೋಟಿ ಯೂನಿಟ್ಗಳನ್ನು ಮುಟ್ಟಲಿದೆ: ಆರ್ಥಿಕ ಸಮೀಕ್ಷೆ
- News
ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವ: ಜನರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯೆ ಕೊಡಲಿ, ವೈರಲ್
- Sports
ಆತನಿಗೆ ನೀಡಿದ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ: ತ್ರಿಪಾಠಿ ಪ್ರದರ್ಶನಕ್ಕೆ ಬಂಗಾರ್ ಹರ್ಷ
- Movies
ಕಿರುತೆರೆ ಮೂಲಕ ನಟನೆಗೆ ಕಾಲಿಟ್ಟ ದೀಕ್ಷಿತ್ ಈಗ ಚಿತ್ರರಂಗದಲ್ಲಿ ಬ್ಯುಸಿ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಿಲಾಯನ್ಸ್ ಜಿಯೋ 'ಹ್ಯಾಪಿ ನ್ಯೂ ಇಯರ್' ಆಫರ್ ಪಡೆಯುವುದು ಹೇಗೆ?
ರಿಲಾಯನ್ಸ್ ಜಿಯೋ ತನ್ನ ವೆಲ್ಕಮ್ ಆಫರ್ ಅನ್ನು ಮಾರ್ಚ್ 31 2017 ವರೆಗೆ 'ಹ್ಯಾಪಿ ನ್ಯೂ ಇಯರ್' ಆಫರ್ ಪ್ರಕಟಣೆಯೊಂದಿಗೆ ನೀಡಿರುವುದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಷಯ. ಆದ್ರೆ ಈಗ ಆನ್‌ಲೈನ್ ತಾಣಗಳು ಮತ್ತು ಪ್ರಶ್ನೆಗೆ ಉತ್ತರ ನೀಡುವ ವೆಬ್‌ಸೈಟ್'ಗಳಲೆಲ್ಲಾ ಒಂದೇ ಪ್ರಶ್ನೆ ಹರಿದಾಡುತ್ತಿದೆ. ಅದು ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ ಅನ್ನು ಪಡೆದುಕೊಳ್ಳುವುದು ಹೇಗೆ? ಎಂದು.

ರಿಲಾಯನ್ಸ್ ಜಿಯೋ ಮುಖ್ಯಸ್ಥ 'ಮುಕೇಶ್ ಅಂಬಾನಿ' ರವರು ತಮ್ಮ ಭಾಷಣದಲ್ಲಿ 'ಹ್ಯಾಪಿ ನ್ಯೂ ಇಯರ್ ಆಫರ್' ಹೊಸ ಗ್ರಾಹಕರು ಮತ್ತು ಹಳೆ ಗ್ರಾಹಕರಿಬ್ಬರಿಗೂ ಲಭ್ಯ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಡಿಸೆಂಬರ್ 4 ರಿಂದ ಜಿಯೋ ಸಿಮ್ ಪಡೆದವರು ಹ್ಯಾಪಿ ನ್ಯೂ ಇಯರ್ ಆಫರ್ ಅನ್ನು ಸಿಮ್ ಜೊತೆಯಲ್ಲೇ ಪಡೆಯುತ್ತಾರೆ ಎಂದು ಹೇಳಲಾಗಿದೆ.
ರಿಲಾಯನ್ಸ್ ಜಿಯೋ ಬಗ್ಗೆ ಈ 5 ಕುತೂಹಲಕಾರಿ ಮಾಹಿತಿಗಳನ್ನು ಯಾರು ತಿಳಿದೇಯಿಲ್ಲ..!
ಅಂದಹಾಗೆ ಹಳೆಯ ಗ್ರಾಹಕರಿಗೆ ರಿಲಾಯನ್ಸ್ ಜಿಯೋ ವೆಲ್ಕಮ್ ಆಫರ್ ಡಿಸೆಂಬರ್ 31 ರವರೆಗೆ ಮುಂದುವರೆಯಲಿದ್ದು, ಹ್ಯಾಪಿ ನ್ಯೂ ಇಯರ್ ಆಫರ್ ಜನವರಿ ಆರಂಭದಿಂದ ಅಪ್ಲೇ ಅಗಲಿದ್ದು, ಆತಂಕ ಪಡುವ ಅವಶ್ಯಕತೆ ಇಲ್ಲ. ಕೆಲವು ಸಂಶಯಗಳು ಈಗಾಗಲೇ ಬಗೆಹರಿದಿರಬೇಕು. ಆದರೆ ರಿಲಾಯನ್ಸ್ ಜಿಯೋ ಸಿಮ್ ಅನ್ನು ಹೊಸದಾಗಿ ಖರೀದಿಸುವವರು ಹ್ಯಾಪಿ ನ್ಯೂ ಇಯರ್ ಆಫರ್ (Happy New Year Offer) ಅನ್ನು ಪಡೆಯುವುದು ಹೇಗೆ ತಿಳಿಯಿರಿ.

4G ಸ್ಮಾರ್ಟ್‌ಫೋನ್‌ನಲ್ಲಿ ಮೈಜಿಯೋ ಆಪ್ ಡೌನ್‌ಲೋಡ್ ಮಾಡಿ
ರಿಲಾಯನ್ಸ್ ಜಿಯೋ ಅಧಿಕೃತ ವೆಬ್‌ಸೈಟ್ ಹೇಳಿರುವ ಪ್ರಕಾರ, ಮೊದಲಿಗೆ 4G ಸ್ಮಾರ್ಟ್‌ಫೋನ್ ಬಳಕೆದಾರರಾಗಿದ್ದಲ್ಲಿ ಮೈಜಿಯೋ ಆಪ್ ಅನ್ನು ಡೌನ್‌ಲೋಡ್ ಮಾಡಿ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಪ್ ಲಾಂಚ್ ಮಾಡಿ 'Get SIM' ಕ್ಲಿಕ್ ಮಾಡಿ
ಮೈಜಿಯೋ ಆಪ್ ಯಶಸ್ವಿಯಾಗಿ ಡೌನ್‌ಲೋಡ್ ಆದ ನಂತರ ಬಳಕೆದಾರರು ಆಪ್ ಲಾಂಚ್ ಮಾಡಿ 'Get SIM' ಆಪ್ಶನ್ ಕ್ಲಿಕ್ ಮಾಡಿ.

ವಿವರಗಳನ್ನು ನಿಖರವಾಗಿ ಎಂಟರ್ ಮಾಡಿ
ಪೇಜ್ ಒಂದು ಓಪನ್ ಆಗುತ್ತದೆ. ಅಲ್ಲಿ ಬಳಕೆದಾರರು ತಮ್ಮ ಬಗೆಗಿನ ವಿವರಣೆಯನ್ನು ನಿಖರವಾಗಿ ಹೆಸರು, ಸಂಪರ್ಕ ನಂಬರ್, ಎಲ್ಲವನ್ನು ಎಂಟರ್ ಮಾಡಿ. ನಂತರ ಆಪ್ ಒಮ್ಮೆ ಒನ್ ಟೈಮ್ ಪಾಸ್‌ವರ್ಡ್ ಸೆಂಡ್ ಮಾಡುತ್ತದೆ. ಪಾಸ್‌ವರ್ಡ್ ಅನ್ನು ಆಪ್‌ನಲ್ಲಿ ನೀಡಬೇಕು.

ಬಾರ್‌ಕೋಡ್ ಜೆನೆರೇಟ್ ಮಾಡಿ, ಹತ್ತಿರದ ಜಿಯೋ ಸ್ಟೋರ್ ಲೊಕೇಟ್ ಮಾಡಿ
ಒನ್ ಟೈಮ್ ಪಾಸ್‌ವರ್ಡ್ ನೀಡಿದ ನಂತರ ಬಾರ್‌ಕೋಡ್ ಜೆನೆರೇಟ್ ಆಗುತ್ತದೆ. ನಂತರ ಕೊನೆಯದಾಗಿ ಅಗತ್ಯವಾಗಿ ಬೇಕಿರುವ ಡಾಕ್ಯುಮೆಂಟ್ ತಿಳಿಸುವುದರೊಂದಿಗೆ ನಿಖರ ಮಾಹಿತಿ ನೀಡಲಾಗುತ್ತದೆ. ರಿಲಾಯನ್ಸ್ ಜಿಯೋ ಸ್ಟೋರ್‌ಗೆ ಹೋಗುವ ವೇಳೆ ಗುರುತಿನ ಚೀಟಿಗಾಗಿ ನಿಮ್ಮ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಿ. ಜಿಯೋ ಸಿಮ್ ಖರೀದಿಸಲು ಅಗತ್ಯವಾಗಿ ಬೇಕು.

ಜಿಯೋ ಸಿಮ್ ಪಡೆದು ಆಕ್ಟಿವೇಟ್ ಮಾಡಿ
ರಿಲಾಯನ್ಸ್ ಜಿಯೋ ಡಿಜಿಟಲ್ ಸ್ಟೋರ್‌ಗೆ ಹೋಗಿ ನಿಮ್ಮ ಫೊಟೋಕಾಪಿ ಡಾಕ್ಯುಮೆಂಟ್ ನೀಡಿ. ಒರಿಜಿನಲ್ ಡಾಕ್ಯುಮೆಂಟ್ ನಿಮ್ಮ ಬಳಿ ಇರಲಿ. ಅತಿವೇಗವಾಗಿ ಜಿಯೋ ಸಿಮ್ ಪಡೆಯಿರಿ.
ನಂತರ ಜಿಯೋ ಬಳಕೆದಾರರು 1977 ಗೆ ಡಯಲ್ ಮಾಡಿ ಸಿಮ್ ಅನ್ನು ಟೆಲಿವೆರಿಫೈ ಮಾಡಿ ಜಿಯೋ ನಂಬರ್ ಆಕ್ಟಿವೇಟ್ ಮಾಡಬಹುದು. ನಂತರ ನಿಮಗೆ ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ ಬೆನಿಫಿಟ್ ಸಿಗುತ್ತದೆ.

ಹ್ಯಾಪಿ ನ್ಯೂ ಇಯರ್ ಆಫರ್‌ನೊಂದಿಗೆ ಜಿಯೋ ಸಿಮ್ ಮನೆಗೆ ಡೆಲಿವರಿ ಪಡೆಯಿರಿ
ಜಿಯೋ ಅಧಿಕೃತ ವೆಬ್‌ಸೈಟ್‌ಗೆ ಹೋಗಿ, 'SIM home delivery' ಆಪ್ಶನ್ ಕ್ಲಿಕ್ ಮಾಡಿ. ನಂತರ ನಿಮ್ಮ ವಿವರಣೆ ಎಂಟರ್ ಮಾಡಿ ಜಿಯೋ ಕಾರ್ಯನಿರ್ವಾಹಕ ಜಿಯೋ ಸಿಮ್ ಮನೆಗೆ ಡೆಲಿವರಿ ಮಾಡಲು ಮನವಿ ಮಾಡಿ.
ನಂತರ ಜಿಯೋ ಸಿಮ್ ನಿಮ್ಮ ಮನೆಗೆ 30 ನಿಮಿಷಗಳಲ್ಲಿ ಬರುತ್ತದೆ. ಆದರೆ ಗುರುತಿನ ಚೀಟಿ ಡಾಕ್ಯುಮೆಂಟ್ ಮತ್ತು ಆಧಾರ್ ಕಾರ್ಡ್ ಅನ್ನು ಸಿದ್ಧವಾಗಿ ಇಟ್ಟುಕೊಳ್ಳಿ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470