ಶಿಯೋಮಿಯ ಪವರ್‌ಫುಲ್ ಸ್ಮಾರ್ಟ್‌ಫೋನ್ 'ರೆಡ್ಮಿ ಕೆ 20' ರಿಲೀಸ್!

|

ಒನ್‌ಪ್ಲಸ್ 7 ಕಿಲ್ಲರ್ ಎಂದೇ ಕರೆಸಿಕೊಂಡಿರುವ ಶಿಯೋಮಿ ರೆಡ್‌ಮಿ ಕೆ ಸರಣಿಯ ''ರೆಡ್‌ಮಿ ಕೆ20'' ಮತ್ತು ''ರೆಡ್‌ಮಿ ಕೆ20 ಪ್ರೊ'' ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳು ಮೊಬೈಲ್ ಮಾರುಕಟ್ಟೆ ನಿರೀಕ್ಷಿಸಿದಕ್ಕಿಂತ ಕಡಿಮೆ ಬೆಲೆಗೆ ಬಿಡುಗಡೆಯಾಗಿವೆ. ಶಿಯೋಮಿಯ ರೆಡ್‌ಮಿ ಕೆ20 ಸ್ಮಾರ್ಟ್‌ಫೋನಿನ ಬೆಲೆ 21,999 ರೂ.ಗಳಿಂದ ಆರಂಭವಾಗಿದ್ದರೆ, ರೆಡ್‌ಮಿ ಕೆ20 ಪ್ರೊ ಸ್ಮಾರ್ಟ್‌ಪೋನ್ ಬೆಲೆ ಕೇವಲ 27,999 ರೂ.ಗಳಿಂದ ಆರಂಭವಾಗಿದೆ. ಈ ಮೂಲಕ ಸ್ನಾಪ್ಡ್ರಾಗನ್ 855 SoC ಪ್ರೊಸೆಸರ್ ಅತ್ಯಂತ ಕಡಿಮೆ ಬೆಲೆಯ ಫೋನ್‌ಗೂ ಬಂದಂತಾಗಿದೆ.

ಶಿಯೋಮಿಯ ಪವರ್‌ಫುಲ್ ಸ್ಮಾರ್ಟ್‌ಫೋನ್ 'ರೆಡ್ಮಿ ಕೆ 20' ರಿಲೀಸ್!

ರೆಡ್ಮಿ ಕೆ 20 ಮತ್ತು ರೆಡ್ಮಿ ಕೆ 20 ಪ್ರೊ ಸ್ಮಾರ್ಟ್‌ಪೋನ್‌ಗಳ ಮೊದಲ ಮಾರಾಟ ಜುಲೈ 22 ರಂದು ಫ್ಲಿಪ್ಕಾರ್ಟ್, ಮಿ.ಕಾಮ್ ಮತ್ತು ಮಿ ಹೋಮ್ ಸ್ಟೋರ್‌ಗಳ ಮೂಲಕ ಮಧ್ಯಾಹ್ನ 12 ಗಂಟೆಗೆ ಬಿಡುಗಡೆ ಗೊಂಡಿದ್ದು, ಹ್ಯಾಂಡ್ಸೆಟ್ಗಳು ಶೀಘ್ರದಲ್ಲೇ ಮಿ ಪಾಲುದಾರ ಮಳಿಗೆಗಳ ಮೂಲಕ ಖರೀದಿಗೆ ಲಭ್ಯವಿರುತ್ತವೆ. ಈ ಮೊದಲಿನ ಲೇಖನದಲ್ಲಿ 'ರೆಡ್ಮಿ ಕೆ 20 ಪ್ರೊ' ಫೋನಿನ ಫೀಚರ್ಸ್‌ಗಳನ್ನು ನೋಡಿದ್ದಿರಿ, ಈ ಲೇಖನದಲ್ಲಿ 'ರೆಡ್ಮಿ ಕೆ 20' ಫೀಚರ್ಸ್‌ಗಳನ್ನು ನೋಡೋಣ ಬನ್ನಿರಿ.

ಓದಿರಿ : ವಾಟ್ಸಪ್‌ ಮತ್ತು ಟೆಲಿಗ್ರಾಮ್ ಬಳಕೆದಾರರೇ ಸ್ವಲ್ಪ ಎಚ್ಚರವಹಿಸಿ! ಓದಿರಿ : ವಾಟ್ಸಪ್‌ ಮತ್ತು ಟೆಲಿಗ್ರಾಮ್ ಬಳಕೆದಾರರೇ ಸ್ವಲ್ಪ ಎಚ್ಚರವಹಿಸಿ!

K20 ಡಿಸ್‌ಪ್ಲೇ ಹೇಗಿದೆ

K20 ಡಿಸ್‌ಪ್ಲೇ ಹೇಗಿದೆ

ಶಿಯೋಮಿಯ K20 ಸ್ಮಾರ್ಟ್‌ಫೋನ್ 1080x2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿರುವ ಜೊತೆಗೆ 6.39 ಇಂಚಿನ ಹಾರಿಜೋನ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯು 19.5:9ರಷ್ಟು ಅನುಪಾತವನ್ನು ಹೊಂದಿದ್ದು, ಸ್ಕ್ರೀನ್‌ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್‌ 5 ಪಡೆದಿದೆ. ಅತ್ಯುತ್ತಮ ರೆಸಲ್ಯೂಶನ ಜೊತೆಗೆ ವಿಶಾಲವಾದ ಡಿಸ್‌ಪ್ಲೇಯು ವಿಡಿಯೊ ವೀಕ್ಷಣೆಗೆ ಉತ್ತಮ ಎನಿಸಲಿದೆ.

ಪ್ರೊಸೆಸರ್‌ ಯಾವುದು

ಪ್ರೊಸೆಸರ್‌ ಯಾವುದು

ಆಕ್ಟಾಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 730 ಪ್ರೊಸೆಸರ್ ಶಕ್ತಿಯನ್ನು ಒಳಗೊಂಡಿದ್ದು, ಪ್ರೊಸೆಸರ್ 6 ಕೋರ್‌ ಕ್ಲಾಕ್ಡ್‌1.8 ಗಿಗಾಹರ್ಡ್ಜ ವೇಗವನ್ನು ಪಡೆದಿದೆ. ಪ್ರೊಸೆಸರ್‌ನಲ್ಲಿ‌ 8nm ತಂತ್ರಾಜ್ಞಾನವಿದ್ದು, ಇದು ಬ್ಯಾಟರಿ ಉಳಿಕೆಗೆ ಮತ್ತು ಮಲ್ಟಿಟಾಸ್ಕ್ ಕೆಲಸಗಳಿಗೆ ನೆರವಾಗಲಿದೆ. ಹಾಗೆಯೇ 6GB RAM ಸಾಮರ್ಥ್ಯವಿದ್ದು, 64GB ಮತ್ತು 128GB ಸ್ಟೋರೇಜ್ ಆಯ್ಕೆಗಳನ್ನು ಹೊಂದಿದೆ.

ಓದಿರಿ : ನೀವು ಸತ್ತ ಮೇಲೆ ನಿಮ್ಮ 'ಜಿ-ಮೇಲ್' ಖಾತೆ 'ಡಿ ಆಕ್ಟಿವ್' ಆಗಲು ಹೀಗೆ ಮಾಡಿ!ಓದಿರಿ : ನೀವು ಸತ್ತ ಮೇಲೆ ನಿಮ್ಮ 'ಜಿ-ಮೇಲ್' ಖಾತೆ 'ಡಿ ಆಕ್ಟಿವ್' ಆಗಲು ಹೀಗೆ ಮಾಡಿ!

ತ್ರಿವಳಿ ರಿಯರ್ ಕ್ಯಾಮೆರಾ

ತ್ರಿವಳಿ ರಿಯರ್ ಕ್ಯಾಮೆರಾ

ಹಿಂಬದಿಯಲ್ಲಿ ಮೂರು ಕ್ಯಾಮೆರಾ ನೀಡಿದ್ದು, ಪ್ರಾಥಮಿಕ ಕ್ಯಾಮೆರಾವು 1.6 ಮೈಕ್ರಾನ್ ಮತ್ತು f/1.75 ಅಪಾರ್ಚರ್ ನೊಂದಿಗೆ 48ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 1.12 ಮೈಕ್ರಾನ್ ಮತ್ತು f/2.4 ಅಪರ್ಚರ್ ನೊಂದಿಗೆ 8ಎಂಪಿ ಸೆನ್ಸಾರ್‌ ಹೊಂದಿದ್ದು, ಇನ್ನು ತೃತೀಯ ಕ್ಯಾಮೆರಾವು 13ಎಂಪಿ ಸೆನ್ಸಾರ್‌ನಲ್ಲಿದ್ದು, 1.12 ಮೈಕ್ರಾನ್ ಮತ್ತು f/2.4 ಅಪರ್ಚರ್ ಸಾಮರ್ಥ್ಯ ಪಡೆದಿದೆ.

ಕ್ಯಾಮೆರಾ ಫೀಚರ್ಸ್

ಕ್ಯಾಮೆರಾ ಫೀಚರ್ಸ್

AI ಸ್ಕೈಸ್ಕಾಪಿಂಗ್ ತಂತ್ರಜ್ಞಾನವನ್ನು ನೀಡಿದ್ದು, ಪೋಟೊದಲ್ಲಿ ಬ್ಯಾಕ್‌ಗ್ರೌಂಡ್‌ ಬದಲಾವಣೆಗೆ 6 ಆಯ್ಕೆಗಳು ಕಾಣಿಸಿಕೊಳ್ಳಲಿವೆ. ರಾತ್ರಿ ಮತ್ತು ಮಂದಬೆಳಕಿನಲ್ಲಿ ಅತ್ಯುತ್ತಮ ಫೋಟೊ ಮೂಡಿಬರಲು ನೈಟ್‌ ಮೋಡ್‌ ಆಯ್ಕೆ ನೀಡಲಾಗಿದೆ. 960fps ವೇಗದಲ್ಲಿ ಸ್ಲೋ ಮೋಷನ್ ವಿಡಿಯೊ ಚಿತ್ರೀಕರಣ ಮಾಡಬಹುದಾಗಿದ್ದು, ವಿಡಿಯೊ ಕ್ವಾಲಿಟಿ ಹೆಚ್‌ಡಿ ಗುಣಮಟ್ಟದಲ್ಲಿರುತ್ತವೆ.

ಓದಿರಿ : ಶಿಯೋಮಿಯಿಂದ 'ರೀಚಾರ್ಜೆಬಲ್ LED ಲ್ಯಾಂಪ್' ಘೋಷಣೆ!.ಹೇಗಿದೆ ಗೊತ್ತಾ?ಓದಿರಿ : ಶಿಯೋಮಿಯಿಂದ 'ರೀಚಾರ್ಜೆಬಲ್ LED ಲ್ಯಾಂಪ್' ಘೋಷಣೆ!.ಹೇಗಿದೆ ಗೊತ್ತಾ?

ಸೆಲ್ಫಿ ಕ್ಯಾಮೆರಾ ವಿಶೇಷತೆ

ಸೆಲ್ಫಿ ಕ್ಯಾಮೆರಾ ವಿಶೇಷತೆ

ಶಿಯೋಮಿಯ K20 ಸ್ಮಾರ್ಟ್‌ಫೋನ್‌ನಲ್ಲಿ ಸೆಲ್ಫಿಗಾಗಿ 20ಎಂಪಿ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾ ನೀಡಲಾಗಿದ್ದು, ಈ ಕ್ಯಾಮೆರಾವು ಪಾಪ್‌ಅಪ್‌ ಮಾದರಿಯಲ್ಲಿದೆ. ಎಲಿಗಂಟ್ ಪನೋರಮಾ ಸೆಲ್ಫಿ ಫೋಟೊ ಸೆರೆಹಿಡಿಯಬಹುದಾಗಿದ್ದು, ಪಾಪ್‌ಅಪ್‌ ಕ್ಯಾಮೆರಾಗೆ ಬಾಹ್ಯ ದಕ್ಕೆಗಳಿಂದ ರಕ್ಷಣೆಯ ಆಯ್ಕೆಗಳನ್ನು ನೀಡಲಾಗಿದೆ. ಹಾಗೆಯೇ ಪೋಟೊ ಎಡಿಟಿಂಗ್, ಫಿಲ್ಟರ್, ಆಯ್ಕೆಗಳು ಸೇರಿಕೊಂಡಿವೆ.

ಬ್ಯಾಟರಿ ಪವರ್

ಬ್ಯಾಟರಿ ಪವರ್

4000mAh ಬ್ಯಾಟರಿ ಶಕ್ತಿಯನ್ನು ಒಳಗೊಂಡಿರುವ ಶಿಯೋಮಿಯ K20 ಸ್ಮಾರ್ಟ್‌ಫೋನ್‌ ಒಂದು ದಿನ ಮಟ್ಟಿಗೆ ಬ್ಯಾಟರಿ ಬ್ಯಾಕ್‌ಅಪ್ ಒದಗಿಸುತ್ತದೆ. ಇದರೊಂದಿಗೆ 18W ಸಾಮರ್ಥ್ಯ ಫಾಸ್ಟ್‌ ಚಾರ್ಜಿಂಗ್ ಚಾರ್ಜರ್ ಸೌಲಭ್ಯವನ್ನು ನೀಡಲಾಗಿದ್ದು, ಹೀಗಾಗಿ ಸ್ಮಾರ್ಟ್‌ಫೋನ್ ಬಹುಬೇಗನೆ ಚಾರ್ಜ್ ಪಡೆದುಕೊಳ್ಳುತ್ತದೆ. ಗೇಮ್‌ ಆಡಲು 'ಗೇಮ್‌ ಟರ್ಬೋ 2.0' ಸಹ ಈ ಸ್ಮಾರ್ಟ್‌ಫೋನ್ ಒಳಗೊಂಡಿದೆ.

ಓದಿರಿ:  ಕಡಿಮೆ ಬೆಲೆಗೆ 'ರಿಯಲ್ ಮಿ' ಸ್ಮಾರ್ಟ್‌ಫೋನ್‌ ಆಕ್ಸಸರಿಸ್‌ ಬಿಡುಗಡೆ! ಓದಿರಿ: ಕಡಿಮೆ ಬೆಲೆಗೆ 'ರಿಯಲ್ ಮಿ' ಸ್ಮಾರ್ಟ್‌ಫೋನ್‌ ಆಕ್ಸಸರಿಸ್‌ ಬಿಡುಗಡೆ!

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಓದಿರಿ : 'ಬಿಗ್ ಶಾಪಿಂಗ್ ಡೇಸ್‌'ನಲ್ಲಿ ಈ 5 ಗ್ಯಾಜೆಟ್‌ಗಳಿಗೆ ಬಿಗ್‌ ಡಿಸ್ಕೌಂಟ್!
ಶಿಯೋಮಿಯ K20 ಸ್ಮಾರ್ಟ್‌ಫೋನ್‌ ಎರಡು ವೇರಿಯಂಟ್ ಮಾದರಿಯನ್ನು ಹೊಂದಿದ್ದು, 6GB RAM ಮತ್ತು 64GB ಸ್ಟೋರೇಜ್ ವೇರಿಯಂಟ್ ಆರಂಭಿಕ ಬೆಲೆಯು 21,999ರೂ.ಗಳು ಆಗಿದೆ. ಹಾಗೆಯೇ 6GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಬೆಲೆಯು 23,999ರೂ.ಗಳು ಆಗಿದೆ. ಇದೇ ಜುಲೈ 22ರಿಂದ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಖರೀದಿಗೆ ಲಭ್ಯವಾಗಲಿದೆ.

ಓದಿರಿ : 'ಬಿಗ್ ಶಾಪಿಂಗ್ ಡೇಸ್‌'ನಲ್ಲಿ ಈ 5 ಗ್ಯಾಜೆಟ್‌ಗಳಿಗೆ ಬಿಗ್‌ ಡಿಸ್ಕೌಂಟ್!ಓದಿರಿ : 'ಬಿಗ್ ಶಾಪಿಂಗ್ ಡೇಸ್‌'ನಲ್ಲಿ ಈ 5 ಗ್ಯಾಜೆಟ್‌ಗಳಿಗೆ ಬಿಗ್‌ ಡಿಸ್ಕೌಂಟ್!

Best Mobiles in India

English summary
Xiaomi has unveiled Redmi K20 Pro and Redmi K20 in India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X