ಜಿಯೋ ಸಿಮ್ ಕುರಿತಾದ ಮತ್ತಷ್ಟು ರಹಸ್ಯಗಳು
ಇಂದಿನ ಲೇಖನದಲ್ಲಿ ಜಿಯೋ ಕುರಿತ ಮತ್ತಷ್ಟು ಸಮಗ್ರ ಸುದ್ದಿಗಳನ್ನು ನಾವು ಬಿತ್ತರಿಸಲಿದ್ದು ಜಿಯೋದ ಪಾಲಿಸಿ ಮತ್ತು ನಿಜವಾಗಿಯೂ ಬಳಕೆದಾರ ಪಾವತಿ ಮಾಡಬೇಕಾದ ಮೊತ್ತದ ಮೇಲೆ ಬೆಳಕು ಚೆಲ್ಲಲ್ಲಿದೆ.
ಇಂದು ಟೆಲಿಕಾಮ್ ಕ್ಷೇತ್ರದಲ್ಲಿ ಹೆಚ್ಚು ಸದ್ದು ಉಂಟುಮಾಡುತ್ತಿರುವ ಜಿಯೋ ಅತಿ ಕಡಿಮೆ ದರದಲ್ಲಿ ತನ್ನ ಬಳಕೆದಾರರಿಗೆ ಅತ್ಯುತ್ತಮ ಆಫರ್‌ಗಳನ್ನು ನೀಡಿ ಅಪಾರ ಬಳಕೆದಾರ ಬಳಗವನ್ನು ಪಡೆದುಕೊಂಡಿದೆ. ಟಾರಿಫ್ ಪ್ಲಾನ್‌ಗಳ ಮೇಲೆ ಜಿಯೋ ಪಡೆದುಕೊಳ್ಳಲಿರುವ ದರ ಜನವರಿ 1, 2017 ರಿಂದ ಜಾರಿಗೆ ಬರಲಿದೆ. ವೆಲ್‌ಕಮ್ ಆಫರ್ ಎಂಬುದಾಗಿ ಕರೆಯಿಸಿಕೊಂಡಿರುವ ಈ ಆಫರ್ ನಿಜಕ್ಕೂ ಉದ್ಯಮ ರಂಗದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಲಿದೆ.
Read: ದೀಪಾವಳಿ ಆಫರ್: ಏರ್‌ಟೆಲ್‌ನಿಂದ ಉಚಿತ 2ಜಿಬಿ 4ಜಿ ಡೇಟಾ
ಅದಾಗ್ಯೂ ಇಂದಿನ ಲೇಖನದಲ್ಲಿ ಜಿಯೋ ಕುರಿತ ಮತ್ತಷ್ಟು ಸಮಗ್ರ ಸುದ್ದಿಗಳನ್ನು ನಾವು ಬಿತ್ತರಿಸಲಿದ್ದು ಜಿಯೋದ ಪಾಲಿಸಿ ಮತ್ತು ನಿಜವಾಗಿಯೂ ಬಳಕೆದಾರ ಪಾವತಿ ಮಾಡಬೇಕಾದ ಮೊತ್ತದ ಮೇಲೆ ಬೆಳಕು ಚೆಲ್ಲಲ್ಲಿದೆ.
Read: ಜಿಯೋ ಸಿಮ್‌ನ ರಕ್ಷಾ ಕವಚ 'ಪಿಯುಕೆ ಕೋಡ್' ಪಡಕೊಳ್ಳುವುದು ಹೇಗೆ?

ಸೇವೆಯು ಎಷ್ಟು ಕನಿಷ್ಟ ದರವನ್ನು ಪಡೆದುಕೊಳ್ಳಲಿದೆ
ಈಗ ಮಾರುಕಟ್ಟೆಯಲ್ಲಿ 300 ಎಮ್‌ಬಿ ಡೇಟಾ ಬೆಲೆ ರೂ 150 ಆಗಿದೆ. ಆದರೆ ಸರ್ವೀಸ್ ಪ್ರೊವಡರ್‌ಗಳು 4ಜಿ ಗೆ ರೂ 50 ಕನಿಷ್ಟ ದರದಲ್ಲಿ ಸೌಲಭ್ಯವನ್ನು ನೀಡುತ್ತಿದ್ದಾರೆ. ಅನ್‌ಲಿಮಿಟೆಡ್ ಮತ್ತು ಉಚಿತ ನೈಟ್ ಡೇಟಾವನ್ನು ನೀವು ಪಡೆದುಕೊಳ್ಳಿದ್ದೀರಿ ಮತ್ತು ಉಚಿತ ಕರೆಗಳ ಸೌಲಭ್ಯ ಕೂಡ ನಿಮಗೆ ದೊರೆಯಲಿದೆ.

ಉಚಿತವಾಗಿ ನೀವು ಏನನ್ನು ಪಡೆದುಕೊಳ್ಳಲಿದ್ದೀರಿ?
ಯಾವುದೇ ಸಂಖ್ಯೆಗೆ ಜಿಯೋ ಅನ್‌ಲಿಮಿಟೆಡ್ ವಾಯ್ಸ್ ಕರೆಗಳನ್ನು ಒದಗಿಸಲಿದೆ. ಲೋಕಲ್ ಅಥವಾ ಎಸ್‌ಟಿಡಿ ಉಚಿತವಾಗಲಿದೆ. ಈ ಯೋಜನೆಗಳಲ್ಲಿ ಯಾವುದೇ ರೋಮಿಂಗ್ ಅನ್ವಯವಾಗುವುದಿಲ್ಲ. ಜಿಯೋ ಅಪ್ಲಿಕೇಶನ್‌ಗೆ ಆಕ್ಸೆಸ್ ಡಿಸೆಂಬರ್ 2017 ರವರೆಗೆ ದೊರೆಯಲಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೆಚ್ಚು ಆಕರ್ಷಕ ಏನಿದೆ?
ವಿದ್ಯಾರ್ಥಿಗಳಿಗಾಗಿ ಅತ್ಯತ್ತಮ ಯೋಜನೆಗಳನ್ನು ಜಿಯೋ ಹೊಂದಿದೆ. 25 ಶೇಕಡಾ ಹೆಚ್ಚುವರಿ ಬಳಕೆಯನ್ನು ವಿದ್ಯಾರ್ಥಿಗಳಿಗೆ ಒದಗಿಸಿದೆ. ಈ ಆಫರ್ ಅನ್ನು ಪಡೆದುಕೊಳ್ಳಲು, ನಿಮ್ಮ ವಾಲಿಡ್ ಐಡಿಯನ್ನು ನೀವು ತೆಗೆದುಕೊಂಡು ಹೋಗಬೇಕು ತದನಂತರ ಡಿಜಿಟಲ್ ಸ್ಟೋರ್‌ನಲ್ಲಿ ನಿಮಗೆ ಸಿಮ್ ದೊರೆಯಲಿದೆ.

ದೋಷ ಏನಿದೆ?
ಅದಾಗ್ಯೂ ಜಿಯೋ ಸಿಮ್ ಅನ್ನು ಪಡೆದುಕೊಳ್ಳಲು ನೀವು ಕೆಲವೊಂದು ಷರತ್ತುಗಳನ್ನು ಪೂರೈಸಿಕೊಳ್ಳಬೇಕು. ನೀವು ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇದು ನಿಮಗೆ ಅನ್‌ಲಿಮಿಟೆಡ್ 4ಜಿ ಡೇಟಾವನ್ನು ನೀಡುವುದು ಮಾತ್ರವಲ್ಲದೆ ದಿನಕ್ಕೆ 4ಜಿಬಿ 4ಜಿ ಡೇಟಾವನ್ನು ಬಳಸಿಕೊಳ್ಳಬಹುದಾಗಿದೆ ಆದರೆ ಲಿಮಿಟ್ ಅನ್ನು ತಲುಪಿದ ನಂತರ ಸ್ಪೀಡ್ ಕಡಿಮೆಯಾಗಲಿದೆ.

ಇದು 12 ಅಲ್ಲ 13 ತಿಂಗಳು
ಜಿಯೋ ವ್ಯಾಲಿಡಿಟಿ 28 ದಿನಗಳಾಗಿದ್ದು ಇದು 31 ದಿನಗಳದ್ದಲ್ಲ. ನೀವು ವರ್ಷಕ್ಕೆ 13 ಪ್ಯಾಕ್‌ಗಳನ್ನು ಖರೀದಿ ಮಾಡಬೇಕು 12 ಅನ್ನಲ್ಲ. ಇದೇ ತರಹ ಇತರ ಸರ್ವೀಸ್ ಪ್ರೊವೈಡರ್‌ಗಳು ಮಾಡುತ್ತಾರೆ.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








