ಜಿಯೋ ಸಿಮ್‌ನ ರಕ್ಷಾ ಕವಚ 'ಪಿಯುಕೆ ಕೋಡ್' ಪಡಕೊಳ್ಳುವುದು ಹೇಗೆ?

ನಿಮ್ಮ ಜಿಯೋ ಸಿಮ್‌ಗಾಗಿ ಪಿಯುಕೆ ಕೋಡ್ ಅನ್ನು ಪಡೆದುಕೊಳ್ಳುವುದು ಹೇಗೆ ಎಂಬುದಕ್ಕೆ ಸಲಹೆಗಳನ್ನು ನಾವು ನೀಡುತ್ತಿದ್ದು, ಇದನ್ನು ಆನ್‌ಲೈನ್‌ನಿಂದ ನಿಮಗೆ ಪಡೆದುಕೊಳ್ಳಬಹುದಾಗಿದೆ. ಕೆಳಗೆ ಈ ಹಂತಗಳನ್ನು ಕಂಡುಕೊಳ್ಳಿ.

By Shwetha
|

ರಿಲಾಯನ್ಸ್ ಜಿಯೋ ಬಳಕೆದಾರರು ಈಗ ಪ್ರಿವ್ಯೂ ಆಫರ್‌ನಿಂದ ವೆಲ್‌ಕಮ್ ಆಫರ್‌ಗೆ ತಮ್ಮ ಯೋಜನೆಗಳನ್ನು ಮಾರ್ಪಡಿಸಿಕೊಂಡಿದ್ದಾರೆ. ಈ ಆಫರ್ ಬಳಕೆಯ ಮೇಲೆ ಕೆಲವೊಂದು ನಿರ್ಬಂಧನೆಗಳನ್ನು ಹೇರಿದೆ. ಈಗ ಮಾರ್ಚ್ 2017 ರವರೆಗೆ ಈ ಆಫರ್ ಅನ್ನು ವಿಸ್ತರಿಸಲಾಗಿದೆ ಎಂಬ ಸುದ್ದಿ ಇದ್ದು, ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಓದಿರಿ: ಜಿಯೋ ಚಾಟ್ ಹಿಸ್ಟ್ರಿಯನ್ನು ಡಿಲೀಟ್ ಮಾಡುವುದು ಹೇಗೆ?

ನಿಮ್ಮ ಜಿಯೋ ಸಿಮ್‌ಗಾಗಿ ಪಿಯುಕೆ ಕೋಡ್ ಅನ್ನು ಪಡೆದುಕೊಳ್ಳುವುದು ಹೇಗೆ ಎಂಬುದಕ್ಕೆ ಸಲಹೆಗಳನ್ನು ನಾವು ನೀಡುತ್ತಿದ್ದು, ಇದನ್ನು ಆನ್‌ಲೈನ್‌ನಿಂದ ನಿಮಗೆ ಪಡೆದುಕೊಳ್ಳಬಹುದಾಗಿದೆ. ಕೆಳಗೆ ಈ ಹಂತಗಳನ್ನು ಕಂಡುಕೊಳ್ಳಿ.

ಓದಿರಿ: ಇಂಟರ್ನೆಟ್ ಇಲ್ಲದೆಯೇ ಯೂಟ್ಯೂಬ್ ವೀಡಿಯೊ ವೀಕ್ಷಣೆ ಹೇಗೆ?

ಪಿಯುಕೆ ಕೋಡ್ ಅರಿತುಕೊಳ್ಳಿ

ಪಿಯುಕೆ ಕೋಡ್ ಅರಿತುಕೊಳ್ಳಿ

ಪಿಯುಕೆ ಕೋಡ್ ಎಂಬುದು ಒಂದು ಬಗೆಯ ಭದ್ರತೆ ಎಂದೆನಿಸಿದ್ದು ನಿಮ್ಮ ಸಿಮ್‌ನ ಅನಧಿಕೃತ ಬಳಕೆಯನ್ನು ತಡೆಗಟ್ಟಲು ಸಹಕಾರಿಯಾಗಿದೆ. ಇದು ಎಂಟು ಸಂಖ್ಯೆಗಳನ್ನು ಒಳಗೊಂಡಿದ್ದು ರಿಲಾಯನ್ಸ್ ಜಿಯೋ ಇದನ್ನು ಒದಗಿಸುತ್ತದೆ.

ಪಿನ್ ಕೋಡ್ ಅನ್ನು ನಿಮಗೆ ಬದಲಾಯಿಸಬಹುದು

ಪಿನ್ ಕೋಡ್ ಅನ್ನು ನಿಮಗೆ ಬದಲಾಯಿಸಬಹುದು

ಕೋಡ್ ನಾಲ್ಕು ಅಂಕೆಗಳ ಪಿನ್ ಕೋಡ್‌ನೊಂದಿಗೆ ಬಂದಿದ್ದು ಇದು ಮೊಬೈಲ್ ಭದ್ರತೆಗೆ ಸಂಬಂಧಿಸಿದೆ. ನಿಮ್ಮ ಸಿಮ್ ಕಾರ್ಡ್‌ಗೆ ಇದು ಭದ್ರತಾ ಕವಚದಂತೆ ಕೆಲಸ ಮಾಡುತ್ತದೆ. ಇದನ್ನು ಬದಲಾವಣೆ ಕೂಡ ಮಾಡಿಕೊಳ್ಳಬಹುದಾಗಿದೆ. ಡೀಫಾಲ್ಟ್ ಮೂಲಕ ಸರ್ವೀಸ್ ಪ್ರೊವೈಡರ್ ನಿಮಗೆ ಪಿನ್ ಕೋಡ್ ಅನ್ನು ನಿಯೋಜಿಸುತ್ತಾರೆ ಮತ್ತು ನಿಮಗಿದನ್ನು ಬದಲಾಯಿಸಿಕೊಳ್ಳಬಹುದು. ಕೋಡ್‌ನಲ್ಲಿರುವ ಕೀಯನ್ನು ಮೊಬೈಲ್ ಬದಲಾಯಿಸುವಾಗ ನಿಮ್ಮಲ್ಲಿ ಕೇಳಲಾಗುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭದ್ರತಾ ಉದ್ದೇಶಗಳಿಗಾಗಿ

ಭದ್ರತಾ ಉದ್ದೇಶಗಳಿಗಾಗಿ

ಪಿನ್ ಕೋಡ್‌ನ ಬಳಕೆಯೊಂದಿಗೆ ಸಿಮ್‌ ಕಾರ್ಡ್‌ನ ಅನಧಿಕೃತ ಬಳಕೆಯನ್ನು ತಡೆಗಟ್ಟಬಹುದಾಗಿದೆ. ಯಾರಾದರೂ ಮೂರು ಬಾರಿ ತಪ್ಪಾಗಿ ಪಿನ್ ಕೋಡ್ ಅನ್ನು ನಮೂದಿಸಿದಲ್ಲಿ, ಇದು ಪಿಯುಕೆ ಕೋಡ್ ಅನ್ನು ಕೇಳುತ್ತದೆ ನಂತರ ಇದನ್ನು ತಪ್ಪಾಗಿ 10 ಬಾರಿ ನಮೂದಿಸಿದಲ್ಲಿ ಸಿಮ್ ಕಾರ್ಡ್ ಬ್ಲಾಕ್ ಆಗಿಬಿಡುತ್ತದೆ. ನಿಮ್ಮ ಜಿಯೋ ಸಿಮ್ ಎಲ್ಲಿಯಾದರೂ ಬ್ಲಾಕ್ ಆದಲ್ಲಿ, ಸಿಮ್ ಕಾರ್ಡ್ ಅನ್ನು ಸ್ಥಳಾಂತರಿಸುವುದೇ ಇರುವ ಒಂದು ಆಯ್ಕೆಯಾಗಿದೆ.

ಜಿಯೋ ಸಿಮ್ ಪಿಯುಕೆ ಕೋಡ್ ಪಡೆದುಕೊಳ್ಳಲು ಹೀಗೆ ಮಾಡಿ

ಜಿಯೋ ಸಿಮ್ ಪಿಯುಕೆ ಕೋಡ್ ಪಡೆದುಕೊಳ್ಳಲು ಹೀಗೆ ಮಾಡಿ

ನೀವು ಟೋಲ್ ಫ್ರಿ ನಂಬರ್ 18008899999 ಕ್ಕೆ ಕರೆಮಾಡಬೇಕು ಮತ್ತು ಭಾಷೆಯನ್ನು ಆಯ್ಕೆಮಾಡಿ ಮತ್ತು ಜಿಯೋ ಕಸ್ಟಮರ್ ಕೇರ್‌ಗೆ ಮಾತನಾಡಿ ಅವರು ತಿಳಿಸುವ ಸೂಚನೆಗಳನ್ನು ಪಾಲಿಸಿ. ನಂತರ ನೀವು ಪಿಯುಕೆ ಕೋಡ್‌ಗಾಗಿ ಕೇಳಿ. ಪರಿಶೋಧಕರು ನಿಮ್ಮ ದಾಖಲೆಗಳನ್ನು ಪರಿಶೀಲಿಸುತ್ತಾರೆ ಮತ್ತು ಪಿಯುಕೆ ಕೋಡ್ ಅನ್ನು ನಿಮಗೆ ನೀಡುತ್ತಾರೆ. ಬೇಕಾದಾಗ ಅದನ್ನು ನಮೂದಿಸಿ ಮತ್ತು ಹೊಸ ಪಿನ್ ಹೊಂದಿಸಿ. ಸೆಕ್ಯುರಿಟಿ ಸೆಟ್ಟಿಂಗ್ಸ್‌ನಲ್ಲಿ ಪಿಯುಕೆ ಕೋಡ್ ಆಫ್ ಮಾಡಿ.

ಆನ್‌ಲೈನ್‌ನಿಂದ ಪಿಯುಕೆ ಕೋಡ್ ಪಡೆದುಕೊಳ್ಳಿ

ಆನ್‌ಲೈನ್‌ನಿಂದ ಪಿಯುಕೆ ಕೋಡ್ ಪಡೆದುಕೊಳ್ಳಿ

ಆನ್‌ಲೈನ್‌ನಿಂದ ಕೂಡ ಜಿಯೋ ಪಿಯುಕೆ ಕೋಡ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ, ನೀವು [email protected] ಗೆ ಮೇಲ್ ಮಾಡಬೇಕು. ವೆರಿಫಿಕೇಶನ್ ಡೀಟೈಲ್ಸ್ ಇರುವ ಇಮೇಲ್ ಅನ್ನು ನಿಮಗೆ ಕಳುಹಿಸುತ್ತಾರೆ ಮತ್ತು ಅಲ್ಲಿಂದ ಕೋಡ್ ಅನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Here, we at GizBot, bring you the steps that are involved in getting the PUK code of your Reliance Jio SIM card. You can also get the same from online. Take a look at the steps from below.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X