Subscribe to Gizbot

ಏರ್‌ಟೆಲ್‌ಗೆ ಭಾರಿ ದಂಡ ವಿಧಿಸಲು ಜಿಯೋ ಆಗ್ರಹ!..ಬೀದಿಗೆ ಬಂದ ಜಗಳ!!

Written By:

ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ ಅನ್ನು ಏರ್‌ಟೆಲ್‌ ಪ್ರಶ್ನೆಮಾಡಿ ದೂರು ದಾಖಲಿಸಿದ ನಂತರ ಇದೀಗ ಜಿಯೋ ಏರ್‌ಟೆಲ್‌ ಮೇಲೆ ದೂರು ದಾಖಲಿಸಲು ರೆಡಿಯಾಗಿದೆ. ಈ ಮೂಲಕ ಜಿಯೋ ಮತ್ತು ಏರ್‌ಟೆಲ್‌ನ ಫೈಟ್‌ ಮೊದಲ ಭಾರಿಗೆ ಬೀದಿಗೆ ಬಂದಂತಾಗಿದೆ.!!

ಜಿಯೋ ಆಗಮನದ ನಂತರ ಏರ್‌ಟೆಲ್‌ ತೀರಾ ಉತ್ಪ್ರೇಕ್ಷಿಸುವಂತಹ ಜಾಹಿರಾತುಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುವಂತಹ ಕೆಲಸವನ್ನು ಮಾಡಿದೆ. ಹಾಗಾಗಿ, ಏರ್‌ಟೆಲ್‌ಗೆ ಭಾರಿ ದಂಡವನ್ನು ವಿಧಿಸಬೇಕು ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಮಂಡಳಿ ಟ್ರಾಯ್‌ಗೆ ಹೇಳಿದೆ.!!

ಏರ್‌ಟೆಲ್‌ಗೆ ಭಾರಿ ದಂಡ ವಿಧಿಸಲು ಜಿಯೋ ಆಗ್ರಹ!..ಬೀದಿಗೆ ಬಂದ ಜಗಳ!!

ಓದಿರಿ:ನೀವು ಫೆಸ್‌ಬುಕ್‌ ಬಳಸಲು ಕಾರಣ ಏನು? ಇದೇನಾ ನೋಡಿ!!

"ಉಪಲಬ್ಧ ದೂರಸಂಪರ್ಕ ಕಾನೂನುಗಳು ಸಮಗ್ರ ಉಲ್ಲಂಘನೆ" ಮತ್ತು ದರ ಬಳಕೆಯ ನೀತಿಯನ್ನು ಏರ್‌ಟೆಲ್‌ ಬಹುವಾಗಿ ಉಲ್ಲಂಗಿಸಿದ್ದು ಇದೀಗ ಜಿಯೋ ಮೇಲೆ ಬೆಟ್ಟು ಮಾಡಿ ತೋರುತ್ತಿದೆ. ಕೇವಲ 345 ರೂಪಾಯಿಗಳಿಗೆ ಟನ್‌ಲಿಮಿಟೆಲ್ ಕಾಲ್‌ ಸೌಲಭ್ಯ ನೀಡಿರುವ ಏರ್‌ಟೆಲ್‌ ದರ ಬಳಕೆಯ ನೀತಿಯನ್ನು ಪಾಲಿಸುತ್ತಿದೆಯೇ ಎಂದು ಜಿಯೋ ಪ್ರಶ್ನಿಸಿದೆ.

ಇನ್ನು ಏರ್‌ಟೆಲ್‌ ನೀಡುತ್ತಿರುವ ಬಹುತೇಕ ಅನ್‌ಲಿಮಿಟೆಡ್‌ ಆಫರ್ಗಳು ಬಳಕೆಯಲ್ಲಿಯೇ ಇಲ್ಲ. ಆದರೂ ಜನರಿಗೆ ದಾರಿ ತಪ್ಪಿಸುವ ಕೆಲಸ ಏರ್‌ಟೆಲ್‌ನಿಂದ ನಿರಂತರ ಸಾಗಿದೆ. ಮತ್ತು ಏರ್‌ಟೆಲ್‌ ನೀಡುತ್ತಿರುವ ಡೇಟಾ ಆಫರ್‌ಗಳು ಕೇವಲ ಹೊಸದಾಗಿ ಸೇರ್ಪಡೆಯಾದ 4G ಬಳಕೆದಾರರಿಗೆ ಮಾತ್ರ ಲಭ್ಯವಿದ್ದು, ಹಳೇ ಗ್ರಾಹಕರಿಗೆ ಈ ಆಫರ್‌ ನೀಡಿಲ್ಲ. ಇದು ಜನರನ್ನು ವಂಚಿಸುವುದಕ್ಕೆ ಆಗಿರುತ್ತದೆ ಎಂಧು ಜಿಯೋ ಆರೋಪಿಸಿದೆ.

ಏರ್‌ಟೆಲ್‌ಗೆ ಭಾರಿ ದಂಡ ವಿಧಿಸಲು ಜಿಯೋ ಆಗ್ರಹ!..ಬೀದಿಗೆ ಬಂದ ಜಗಳ!!

ಓದಿರಿ:ಭಾರತೀಯ ಸೈನಿಕರಿಗಾಗಿ ಸೇನಾ ಮುಖ್ಯಸ್ಥರ "ವಾಟ್ಸ್‌ಆಪ್" ಹೆಲ್ಪ್‌ಲೈನ್‌!!

ಒಟ್ಟಾರೆಯಾಗಿ ಏರ್‌ಟೆಲ್‌ ಟೆಲಿಕಾಂ ಮಂಡಳಿಯ ಯಾವುದೇ ಮಾರ್ಗದರ್ಶನ ಮತ್ತು ಕಾನೂನನ್ನು ಪಾಲಿಸುತ್ತಿಲ್ಲ. ಹಾಗೂ ಜನರನ್ನು ವಂಚಿಸುವ ಕೆಲಸ ಏರ್‌ಟೆಲ್‌ನಿಂದ ಆಗಿದೆ. ಹಾಗಾಗಿ, ಏರ್‌ಟೆಲ್‌ಗೆ ಭಾರಿ ದಂಡವನ್ನು ವಿಧಿಸಬೇಕು ಎಂದು ಟ್ರಾಯ್‌ ಅನ್ನು ಕೇಳಿಕೊಂಡಿದೆ.

English summary
Reliance Jio accused Airtel for misleading consumers. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot