ಎಗ್ಗಿಲ್ಲದೇ ಡೇಟಾ ಬಳಸುವ ಜಿಯೋ ಪ್ರೈಮ್ ಮೆಂಬರ್‌ಗಳ ಗಮನಕ್ಕೆ...!
ಇಷ್ಟು ದಿನ ಬೇಕಾಬಿಟ್ಟಿ ಡೇಟಾ ಬಳಕೆ ಮಾಡುತ್ತಿದ್ದರು, ಆದರೆ ಇನ್ನು ಮುಂದೆ ಅದು ನಡೆಯುವುದಿಲ್ಲ. ನಿಗಧಿತ ಡೇಟಾಗಿಂತ ಹೆಚ್ಚಿನ ಬಳಕೆ ಮಾಡಿದರೆ ಹಣ ಪಾವತಿ ಮಾಡಬೇಕಾಗಿದೆ.
ರಿಲಯನ್ಸ್ ಮಾಲೀಕತ್ವದ ಜಿಯೋ ತನ್ನ ಉಚಿತ ಸೇವೆಯನ್ನು ನಿಲ್ಲಿಸಿ, ದರ ವಿಧಿಸಲು ಶುರು ಮಾಡಿದೆ. ಅದಕ್ಕಾಗಿ ಫ್ರೈಮ್ ಮೆಂಬರ್ ಶಿಪ್ ಘೋಷಣೆ ಮಾಡಿದೆ. ಹಾಗಾಗಿ ಜಿಯೋ ಬಳಕೆದಾರರು ಇಷ್ಟು ದಿನ ಬೇಕಾಬಿಟ್ಟಿ ಡೇಟಾ ಬಳಕೆ ಮಾಡುತ್ತಿದ್ದರು, ಆದರೆ ಇನ್ನು ಮುಂದೆ ಅದು ನಡೆಯುವುದಿಲ್ಲ. ನಿಗಧಿತ ಡೇಟಾಗಿಂತ ಹೆಚ್ಚಿನ ಬಳಕೆ ಮಾಡಿದರೆ ಹಣ ಪಾವತಿ ಮಾಡಬೇಕಾಗಿದೆ.

ಓದಿರಿ: ಲೀಕ್ ಆಗಿದೆ ಜಿಯೋ ಡಿಟಿಹೆಚ್ ಸೆಟಪ್ ಬಾಕ್ಸ್: ಬೆಲೆ ಎಷ್ಟು..? ಇಲ್ಲಿದೇ ಸಂಪೂರ್ಣ ವಿವರ.!!!
ಈ ಹಿನ್ನಲೆಯಲ್ಲಿ ಜಿಯೋ ಗ್ರಾಹಕರು ತಮ್ಮ ನಿಗಧಿತ ಡೇಟಾ ವನ್ನು ಬಳಕೆ ಮಾಡಲು ಸಹಾಯವಾಗುಂತೆ ಮತ್ತೆ ತಾವು ಬಳಸಿರುವ ಡೇಟಾದ ಮಾಹಿತಿಯನ್ನು ಪಡೆಯುವುದು ಹೇಗೆ ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ. ವಿವಿಧ ರೀತಿಯಲ್ಲಿ ಈ ಮಾಹಿತಿಯನ್ನು ಪಡೆಯಬಹುದಾಗಿದೆ.

ಮೈ ಜಿಯೋ ಆಪ್ ಬಳಸಿ:
ಮೈ ಜಿಯೋ ಆಪ್ ಬಳಿಸಿಕೊಂಡು ನೀವು ಬಳಸಿರುವ ಡೇಟಾದ ನಿಖರ ಮಾಹಿತಿಯನ್ನು ಪಡೆಯಬಹುದಾಗಿದೆ. ನೀವು ಬಳಿಸಿರುವ ಡೇಟಾ, ಬಳಸಬಹುದಾದ ಡೇಟಾ ಮತ್ತು ಅದಕ್ಕೆ ವಿಧಿಸಿರುವ ದರಗಳ ಕುರಿತು ಸಂಪೂರ್ಣ ಮಾಹಿತಿ ಇದರಲ್ಲಿ ಪಡೆಬಹುದಾಗಿದೆ. ಅಲ್ಲದೇ ಎಷ್ಟು ಡೇಟಾ ಉಳಿದಿದೆ ಎಂಬುದನ್ನು ತಿಳಿಯಬಹುದಾಗಿದೆ.

ಎಸ್‌ಎಂಎಸ್ ಮೂಲಕ:
ನಿಮ್ಮ ಜಿಯೋದಲ್ಲಿ ಬಳಕೆ ಮಾಡಿರುವ ಡೇಟಾದ ಮಾಹಿತಿಯನ್ನು ಎಸ್‌ಎಂಎಸ್ ಮೂಲಕವು ಪಡೆಯಬಹುದಾಗಿದೆ. ಇದಕ್ಕಾಗಿ ನೀವು ನಿಮ್ಮ ಜಿಯೋ ನಂಬರ್ ನಲ್ಲಿ *333# ಡಯಲ್ ಮಾಡಬಹುದಾಗಿದೆ. ಇಲ್ಲಿ ನೀವು ಬಳಕೆ ಮಾಡಿರುವ ಡೇಟಾ ಕುರಿತ ಮಾಹಿತಿ ದೊರೆಯಲಿದೆ. ಅಲದ್ಲದೇ 'MBAL' ಎಂದು ಟೈಪ್ ಮಾಡಿ 55333ಗೆ ಮೇಸೆಜ್ ಕಳುಹಿಸಿದರೂ ಮಾಹಿತಿ ಪಡೆಯಬಹುದು.

ಪೋನಿನಲ್ಲಿ ನೋಡಬಹುದು:
ಈ ಎರಡು ವಿವಿಧವಲ್ಲದೇ ನಿಮ್ಮ ಫೋನಿನ ಸೆಟ್ಟಿಂಗ್ಸ್ ನಲ್ಲಿಯೂ ಇವು ಬಳಸಿರುವ ಮಾಹಿತಿಯನ್ನು ಕಲೆಹಾಕಬಹುದಾಗಿದೆ. ನಿಮ್ಮ ಸ್ಮಾರ್ಟ್‌ಫೋನಿನ ಸೆಟ್ಟಿಂಗ್ಸ್ ನಲ್ಲಿ ಡೇಟಾ ಯೂಸೆಜ್ ಆಯ್ಕೆಯನ್ನು ಓಪನ್ ಮಾಡಿದರೆ ಸಾಕು ಅಲ್ಲಿ ನೀವು ಬಳಕೆ ಮಾಡಿರುವ ಡೇಟಾ ಕುರಿತು ಮಾಹಿತಿ ದೊರೆಯಲಿದೆ ಅಲ್ಲದೇ, ಅದಕ್ಕೆ ಲಿಮಿಟ್ ಸಹ ಸೆಟ್ ಮಾಡಿಕೊಳ್ಳಬಹುದು.


Click it and Unblock the Notifications








