ಏರ್‌ಟೆಲ್‌ ಪ್ರೀಪೇಡ್ ಬಳಕೆದಾರರು 1GB ಡಾಟಾ ಬೆಲೆಗೆ 15GB 4G ಡಾಟಾ ಪಡೆಯುವುದು ಹೇಗೆ?

By Suneel
|

ಮೈಜಿಯೋ ಆಪ್‌ನಲ್ಲಿ ರಿಲಾಯನ್ಸ್ ಜಿಯೋ ಬಳಕೆದಾರರು ಉಚಿತವಾಗಿ ಡಾಟಾ ಪಡೆದಂತೆ ಈಗ ಏರ್‌ಟೆಲ್‌ ಬಳಕೆದಾರರು ಸಹ ಡಾಟಾ ಆಫರ್‌ ಪಡೆಯುವ ಕಾಲ. ಏರ್‌ಟೆಲ್‌ 'ಮೈಏರ್‌ಟೆಲ್‌ ಆಪ್' ಗ್ರಾಹಕರಿಗೆ ಹಲವು ಆಕರ್ಷಕ ಆಫರ್‌ಗಳನ್ನು ನೀಡುತ್ತಿದ್ದು, ಟೆಲಿಕಂಮ್ಯೂನಿಕೇಷನ್ ದೈತ್ಯ ತನ್ನ ಆಪ್‌ಗಳನ್ನು ಡಾಟಾ ನೀಡುವ ಪ್ಲಾನ್‌ನೊಂದಿಗೆ ಪ್ರಮೋಟ್‌ ಮಾಡುತ್ತಿದೆ.

ಅಂದಹಾಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ ಸೀರೀಸ್ ಮತ್ತು ಶ್ಯೋಮಿ ನೋಟ್ 3 ಬಳಕೆದಾರರಿಗೆ ಈ ಹಿಂದೆ 15GB 4G ಡಾಟಾ ಆಫರ್ ನೀಡಿದಂತೆ, ಏರ್‌ಟೆಲ್‌(Airtel) ಈಗ ಮೈಏರ್‌ಟೆಲ್‌ ಬಳಕೆದಾರರಿಗೆ, 15GB 4G ಡಾಟಾ ಆಫರ್ ನೀಡುತ್ತಿದೆ. ನೀವು ಏರ್‌ಟೆಲ್ ಪ್ರೀಪೇಡ್‌ ಗ್ರಾಹಕರಾಗಿದ್ದಲ್ಲಿ 1GB ಡಾಟಾ ಬೆಲೆಗೆ 15GB 4G ಡಾಟಾ ಪಡೆಯುವುದು ಹೇಗೆ ಎಂದು ಲೇಖನ ಓದಿ ತಿಳಿಯಿರಿ.

ಏರ್‌ಟೆಲ್‌ ಗ್ರಾಹಕರು ಮಿಸ್‌ ಕಾಲ್‌ ನೀಡಿ 1GB 4G ಡಾಟಾ ಪಡೆಯಿರಿ!

ಆಫರ್‌ ಬಗ್ಗೆ ತಿಳಿಯಲೇಬೇಕಾದ ಮಾಹಿತಿ

ಆಫರ್‌ ಬಗ್ಗೆ ತಿಳಿಯಲೇಬೇಕಾದ ಮಾಹಿತಿ

ನೀವು ಏರ್‌ಟೆಲ್‌ ಪ್ರೀಪೇಡ್ ಬಳಕೆದಾರರಾಗಿದ್ದಲ್ಲಿ, " 'Data Dhamaka' offer only for MyAirtel app users' " ಎಂಬ ನೋಟಿಫಿಕೇಶನ್ ಮೆಸೇಜ್‌ ಅನ್ನು ಪಡೆದಿರಬೇಕು. ಈ ಪ್ಲಾನ್‌ ಅಡಿಯಲ್ಲಿ ಏರ್‌ಟೆಲ್‌ ಮನಿ ಬಳಸಿ 1GB ಡಾಟಾವನ್ನು ರೂ.250 ಕ್ಕೆ ರೀಚಾರ್ಜ್‌ ಪಡೆದರೆ, ಅವರ ಖಾತೆಗೆ ಉಚಿತವಾಗಿ ಇತರೆ 14GB ಡಾಟಾ ಕ್ರೆಡಿಟ್‌ ಆಗುತ್ತದೆ. ಒಟ್ಟಾರೆ 1GB ಡಾಟಾ ಬೆಲೆಗೆ 15GB 4G ಡಾಟಾ ಪಡೆಯುತ್ತೀರಿ.

 ಈ ಆಫರ್‌ ಪಡೆಯುವುದು ಹೇಗೆ?

ಈ ಆಫರ್‌ ಪಡೆಯುವುದು ಹೇಗೆ?

ಈ ಕೆಳಗಿನ ಹಂತಗಳನ್ನು ಫಾಲೋ ಮಾಡಿ
- ನೀವು 4G ಸಪೋರ್ಟ್ ಸ್ಮಾರ್ಟ್‌ಫೋನ್ ಹೊಂದಿರಬೇಕು ಮತ್ತು 4G ಸಿಮ್ ಅಪ್‌ಗ್ರೇಡ್‌ ಪಡೆದಿರಬೇಕು.

- ನಿಮ್ಮ ಸ್ಮಾರ್ಟ್‌ಫೋನ್‌ಗೆ ಮೈಏರ್‌ಟೆಲ್‌ ಆಪ್‌ ಡೌನ್‌ಲೋಡ್‌ ಮಾಡಿರಿ

- ಟೆಲಿಕಾಂ ಆಫರ್ ಟ್ಯಾಬ್‌ನಿಂದ ಆಫರ್‌ ನೋಟಿಫಿಕೇಶನ್‌ ಪಡೆಯುತ್ತೀರಿ.

- ಒಮ್ಮೆ ನೀವು 'Recharge Now' ಆಪ್ಶನ್‌ ಮೇಲೆ ಕ್ಲಿಕ್ ಮಾಡಿದಲ್ಲಿ, ರೀಚಾರ್ಜ್‌ ಪ್ರಕ್ರಿಯೆಗೆ ರೀಡೈರೆಕ್ಟ್‌ ಆಗುತ್ತೀರಿ. ನಂತರ ಹಂತಗಳನ್ನು ಫಾಲೋ ಮಾಡಿ, ಏರ್‌ಟೆಲ್‌ ಮನಿ ಮೂಲಕ ಹಣ ಪಾವತಿಸಿ

- ನಂತರ ನೀವು ನಿಮ್ಮ ಡಾಟಾ ಬ್ಯಾಲೆನ್ಸ್ ಅನ್ನು ಚೆಕ್‌ ಮಾಡಿ

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ಅನ್‌ಲಿಮಿಟೆಡ್ ವ್ಯಾಲಿಡಿಟಿ

ಅನ್‌ಲಿಮಿಟೆಡ್ ವ್ಯಾಲಿಡಿಟಿ

ಡಾಟಾ ದಮಾಕಾ ಆಫರ್‌ನಲ್ಲಿ 1GB ಡಾಟಾ ಬೆಲೆಗೆ ಪಡೆದ 15GB 4G ಡಾಟಾವು 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಆಫರ್‌ ಪಡೆಯಲು ಯಾವುದೇ ನಂಬರ್‌ನಿಂದ ಆಫರ್ ಮುಗಿಯುವವರೆಗೆ ಪ್ರಯತ್ನಿಸಬಹುದು.

ಏರ್‌ಟೆಲ್‌ನಿಂದ 10GB  ಡಾಟಾ ಉಚಿತ

ಏರ್‌ಟೆಲ್‌ನಿಂದ 10GB ಡಾಟಾ ಉಚಿತ

ಈ ಆಫರ್‌ ಜೊತೆಗೆ ಯಾರು ಹೆಚ್ಚಿನ ಡಾಟಾವನ್ನು ಪ್ರತಿತಿಂಗಳು ಬಳಸುತ್ತಾರೋ ಅವರು ಉಚಿತವಾಗಿ 10GB ಉಚಿತ ಡಾಟಾವನ್ನು ಪಡೆಯುತ್ತಾರೆ. ಈ ಉಚಿತ ಡಾಟಾವು ನೇರವಾಗಿ ಬಳಕೆದಾರರ ಖಾತೆಗೆ ಕ್ರೆಡಿಟ್ ಆಗುತ್ತದೆ. ಆದರೆ ಎಲ್ಲಾ ಬಳಕೆದಾರರಿಗೆ ಲಭ್ಯವಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ಏರ್‌ಟೆಲ್‌ ಆಫರ್‌ಗಳು ಮತ್ತು ಪ್ಲಾನ್‌ಗಳ ಕುರತಿ ಇತರೆ ಲೇಖನಗಳು

ಏರ್‌ಟೆಲ್‌ ಆಫರ್‌ಗಳು ಮತ್ತು ಪ್ಲಾನ್‌ಗಳ ಕುರತಿ ಇತರೆ ಲೇಖನಗಳು

ಏರ್‌ಟೆಲ್‌ ಗ್ರಾಹಕರು ಮಿಸ್‌ ಕಾಲ್‌ ನೀಡಿ 1GB 4G ಡಾಟಾ ಪಡೆಯಿರಿ!<br /></a><a href=ಬಂಪರ್ ಆಫರ್! ಏರ್‌ಟೆಲ್‌ನ 5ಜಿಬಿ ಉಚಿತ 4ಜಿ ಇಂಟರ್ನೆಟ್ ಪಡೆಯುವುದು ಹೇಗೆ?
" title="ಏರ್‌ಟೆಲ್‌ ಗ್ರಾಹಕರು ಮಿಸ್‌ ಕಾಲ್‌ ನೀಡಿ 1GB 4G ಡಾಟಾ ಪಡೆಯಿರಿ!
ಬಂಪರ್ ಆಫರ್! ಏರ್‌ಟೆಲ್‌ನ 5ಜಿಬಿ ಉಚಿತ 4ಜಿ ಇಂಟರ್ನೆಟ್ ಪಡೆಯುವುದು ಹೇಗೆ?
" loading="lazy" width="100" height="56" />ಏರ್‌ಟೆಲ್‌ ಗ್ರಾಹಕರು ಮಿಸ್‌ ಕಾಲ್‌ ನೀಡಿ 1GB 4G ಡಾಟಾ ಪಡೆಯಿರಿ!
ಬಂಪರ್ ಆಫರ್! ಏರ್‌ಟೆಲ್‌ನ 5ಜಿಬಿ ಉಚಿತ 4ಜಿ ಇಂಟರ್ನೆಟ್ ಪಡೆಯುವುದು ಹೇಗೆ?

Best Mobiles in India

Read more about:
English summary
Reliance Jio Effect Continues: Airtel offers 15GB 4G Data At Price of 1GB for MyAirtel App. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X