ಜಿಯೋಗೆ ಸ್ಪರ್ಧೆ: ಟಾಪ್ 8 ಉಚಿತ ಡೇಟಾ ಮತ್ತು ಇಂಟರ್ನೆಟ್ ಪ್ಲಾನ್ಸ್
ಭಾರತದಲ್ಲಿ ರಿಯೋದ ಲಾಂಚ್ ಆದಂದಿನಿಂದ ಟಾರಿಫ್ ಯುದ್ಧ ಆರಂಭವಾಗಿದೆ. ಏರ್‌ಟೆಲ್ ವೊಡಾಫೋನ್, ಬಿಎಸ್‌ಎನ್‌ಎಲ್ ಹೆಚ್ಚಿನ ಆಕರ್ಷಕ ಆಫರ್‌ಗಳನ್ನು ಲಾಂಚ್ ಮಾಡುತ್ತಿದ್ದು ಜಿಯೋದ ಉಚಿತ ಮತ್ತು ಕಡಿಮೆ ದರದ ಡೇಟಾ ಪ್ಲಾನ್‌ಗಳನ್ನು ಸರಿಗಟ್ಟುವ ನಿಟ್ಟಿನಲ್ಲಿ ಯುದ್ಧವನ್ನು ಘೋಷಿಸಿವೆ.
ಓದಿರಿ: ಜಿಯೋಗೆ ಕಠಿಣ ಸ್ಪರ್ಧೆ: ಏರ್‌ಟೆಲ್, ಬಿಎಸ್‌ಎನ್‌ಎಲ್, ವೊಡಾಫೋನ್
ಜಿಯೋ ತನ್ನ 4ಜಿ ಸೇವೆಗಳನ್ನು ಸಪ್ಟೆಂಬರ್ 5 ರಂದು ಲಾಂಚ್ ಮಾಡಿದ್ದು ನಂತರ ಅದನ್ನು ವೆಲ್‌ಕಮ್ ಆಫರ್ ಎಂಬುದಾಗಿ ಕರೆದು ಡಿಸೆಂಬರ್ 31 ರವರೆಗೆ ವಿಸ್ತರಿಸಿದೆ. ಈ ಪ್ಲಾನ್ ಅನುಗುಣವಾಗಿ ಗ್ರಾಹಕರು ಉಚಿತ ಮತ್ತು ಅನಿಯಮಿತ ಡೇಟಾ ಹಾಗೂ ವಾಯ್ಸ್ ಕರೆಗಳನ್ನು ಪಡೆದುಕೊಳ್ಳಬಹುದಾಗಿದೆ.
ಓದಿರಿ: ಐಡಿಯಾದಿಂದ ರೂ 1 ಕ್ಕೆ ಅನಿಯಮಿತ 4ಜಿ ಡೇಟಾ ಆಫರ್ ಪಡೆದುಕೊಳ್ಳುವುದು ಹೇಗೆ?
ಇಂದಿನ ಲೇಖನದಲ್ಲಿ ಟಾಪ್ 10 ಇಂಟರ್ನೆಟ್ ಮತ್ತು ಡೇಟಾ ಪ್ಲಾನ್‌ಗಳ ಪಟ್ಟಿಯನ್ನು ನೀಡುತ್ತಿದ್ದು ಟೆಲಿಕಾಮ್ ಸಂಸ್ಥೆಗಳು ಸಪ್ಟೆಂಬರ್‌ನಲ್ಲಿ ಲಾಂಚ್ ಮಾಡಿರುವ ಆಫರ್‌ಗಳ ವಿವರ ಇದಾಗಿದೆ.

ಉಚಿತ ಕರೆಗಳು ಮತ್ತು ಸಂದೇಶಗಳು
ಭಾರತದಲ್ಲಿ ಕಡಿಮೆ ದರದ ಟಾರಿಫ್ ಸೇವೆಗಳನ್ನು ಆರಂಭಿಸಿರುವುದು ಜಿಯೋ ಆಗಿದೆ. ರೂ 149 ಮತ್ತು ರೂ 4,999 ಕ್ಕೆ ಟಾರಿಫ್ ಯೋಜನೆಗಳನ್ನು ಕಂಪೆನಿ ಪ್ರಸ್ತುತಪಡಿಸಿದೆ.

ಏರ್‌ಟೆಲ್‌ನ 90 ನ ದಿನಗಳ ಉಚಿತ 4ಜಿ ಡೇಟಾ
ಜಿಯೋದೊಂದಿಗೆ ಕಠಿಣ ಸ್ಪರ್ಧೆಯನ್ನು ಸರಿಗಟ್ಟಲು ಏರ್‌ಟೆಲ್ 90 ದಿನಗಳ 4ಜಿ ಡೇಟಾವನ್ನು ರೂ 1,495 ರ ದರದಲ್ಲಿ ಪ್ರಸ್ತುತಪಡಿಸಿದೆ. 3ಜಿ ಬಳಕೆದಾರರನ್ನು 4ಜಿಗೆ ತರುವುದಕ್ಕೆ ಬೇಕಾಗಿ ಏರ್‌ಟೆಲ್ ಅನುಸರಿಸಿರುವ ವಿಧಾನ ಇದಾಗಿದೆ.

ವೊಡಾಫೋನ್ ನೀಡಲಿದೆ 10 ಜಿಬಿ ಯ 4ಜಿ ಡೇಟಾ 1ಜಿಬಿ ದರದಲ್ಲಿ
ವೊಡಾಫೋನ ಕೂಡ 4ಜಿ ಬಳಸುವ ಬಳಕೆದಾರರಿಗೆ ಅತ್ಯುತ್ತಮ ಆಫರ್ ಅನ್ನು ಪ್ರಸ್ತುತಪಡಿಸಿದೆ. ವೊಡಾಫೋನ್ ಸಿಮ್ ಅನ್ನು ಕಳೆದ ಆರು ತಿಂಗಳಿನಿಂದ ಬಳಸುತ್ತಿರುವವರಿಗೆ 1ಜಿಬಿ ಡೇಟಾ ದರದಲ್ಲಿ 9ಜಿಬಿ ಲಭ್ಯವಾಗುತ್ತಿದೆ. ಈ ಹೆಚ್ಚುವರಿ 9ಜಿಬಿ ಡೇಟಾವನ್ನು ಮೂರು ತಿಂಗಳುಗಳ ಕಾಲ ಬಳಸಬಹುದಾಗಿದೆ ಮತ್ತು ಬೆಳಗ್ಗೆ 12 ರಿಂದ ಮರುದಿನ ಬೆಳಗ್ಗೆ 6ರವರೆಗೆ ಇದನ್ನು ಬಳಸಬಹುದಾಗಿದೆ.

ಬಿಎಸ್‌ಎನ್‌ಎಲ್ ಬಿಬಿ 249 ಬ್ರಾಡ್‌ಬ್ಯಾಂಡ್ ಪ್ಲಾನ್
ಬಿಎಸ್ಎನ್ಎಲ್ ಬಿಬಿ 249 ಎಂಬ ಹೊಸ ಪ್ಲಾನ್ ಅನ್ನು ಪ್ರಾಯೋಜಿಸಿದ್ದು ಇದು ಹೊಸ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದೆ. ಇದು ಅನಿಯಮಿತ ಡೇಟಾವನ್ನು ಆರು ತಿಂಗಳುಗಳಿಗೆ ತರುತ್ತಿದ್ದು ಅದೂ ರೂ 249 ಕ್ಕೆ ಲಭ್ಯವಾಗುತ್ತಿದೆ. ಡೇಟಾ ಸ್ಪೀಡ್ 2ಜಿಬಿಗೆ 2 ಎಮ್‌ಬಿಪಿಎಸ್ ಆಗಿದ್ದು ನಂತರ ಇದು 1 ಎಮ್‌ಬಿಪಿಎಸ್‌ಗೆ ಇಳಿಯಲಿದೆ. ಈ ಪ್ಲಾನ್ ನಂತರ ಬಳಕೆದಾರರು ಸ್ವಯಂಚಾಲಿತವಾಗಿ ಬಿಬಿ 249 ಪ್ಲಾನ್‌ಗೆ ಮೈಗ್ರೇಟ್‌ಗೊಳ್ಳಬಹುದಾಗಿದೆ.

ವೊಡಾಫೋನ್ ಸೂಪರ್ ನೆಟ್ 4ಜಿ ನೀಡಲಿದೆ ರೂ 999 ಕ್ಕೆ 20 ಜಿಬಿ
ವೊಡಾಫೋನ್ ತನ್ನ ಸೂಪರ್ ನೆಟ್ 4ಜಿ ಸೇವೆಯನ್ನು ಈ ತಿಂಗಳೇ ಘೋಷಿಸಿದ್ದು ಗ್ರಾಹಕರು 20 ಜಿಬಿಯ 4ಜಿ ಡೇಟಾವನ್ನು ರೂ 999 ಕ್ಕೆ ಆನಂದಿಸಬಹುದಾಗಿದೆ. 4ಜಿ ಸೇವೆಗೆ ಉಚಿತ ಅಪ್‌ಗ್ರೇಡ್ ಮಾಡುವ ಸೌಲಭ್ಯವನ್ನು ಇದು ಪಡೆದುಕೊಂಡಿದೆ.

ಏರ್‌ಟೆಲ್ ಮೇಗಾ ಸೇವರ್ ಪ್ಯಾಕ್
ಏರ್‌ಟೆಲ್ ತನ್ನ ಮೆಗಾ ಸೇವರ್ ಪ್ಯಾಕ್ ಅನ್ನು ಘೋಷಿಸಿದ್ದು ಪ್ರಿಪೈಡ್ ಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ರೂ 1,498 ಅನ್ನು ಪಾವತಿಸುವುದರ ಮೂಲಕ 1ಜಿಬಿಯ 3ಜಿ ಅಥವಾ 4ಜಿ ಡೇಟಾವನ್ನು 28 ದಿನಗಳ ವ್ಯಾಲಿಡಿಟಿಯಲ್ಲಿ ಬಳಕೆದಾರರು ಪಡೆದುಕೊಳ್ಳಬಹುದು. ಡೇಟಾವನ್ನು ಬಳಸಿದ ನಂತರ, ರೂ 51 ರ ಮೇಗರ್ ಬೆಲೆಗೆ 1ಜಿಬಿ ಡೇಟಾವನ್ನು ಬಳಕೆದಾರರು ತಮ್ಮದಾಗಿಸಿಕೊಳ್ಳಬಹುದು. ಒಂದು ವರ್ಷಗಳ ಕಾಲ ಈ ಆಫರ್ ಅನ್ವಯವಾಗಲಿದೆ.

ಬಿಎಸ್‌ಎನ್‌ಎಲ್‌ನಿಂದ ರೂ 1099 ಕ್ಕೆ ಅನಿಯಮಿತ ಡೇಟಾ
ರೂ 1,099 ಕ್ಕೆ ಬಿಎಸ್‌ಎನ್‌ಎಲ್ ಹೊಸ 3ಜಿ ಡೇಟಾ ಪ್ಲಾನ್ ಅನ್ನು ಘೋಷಿಸಿದೆ. ಪ್ರಸ್ತುತ ಯೋಜನೆಗಳ ಡೇಟಾ ಬಳಕೆ ಮಿತಿಯನ್ನು ಇದು ದುಪ್ಪಟ್ಟುಗೊಳಿಸುತ್ತದೆ. ಸರ್ವೀಸ್ ಪ್ರೊವೈಡರ್ ಡೇಟಾ ದರಗಳನ್ನು 67 ಶೇಕಡಾಕ್ಕೆ ಕಡಿಮೆ ಮಾಡಿದ್ದಾರೆ. 1 ತಿಂಗಳ ವ್ಯಾಲಿಡಿಯಲ್ಲಿ ಈ ಪ್ಲಾನ್ ಲಭ್ಯವಿದೆ.

ಏರ್‌ಟೆಲ್‌ನಿಂದ 5ಜಿಬಿ 4ಜಿಬಿ ಡೇಟಾ ಉಚಿತ
ಜಾಕ್‌ಪಾಟ್ ಆಫರ್ ಎಂದೇ ಏರ್‌ಟೆಲ್ ಪ್ರಸ್ತುತಪಡಿಸಿರುವ 5ಜಿಬಿ ಯ 4ಜಿ ಡೇಟಾವನ್ನು ಬಳಕೆದಾರರು ಮೈಏರ್‌ಟೆಲ್ ಅಪ್ಲಿಕೇಶನ್ ಅನ್ನು ತಮ್ಮ ಫೋನ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ತಮ್ಮದಾಗಿಸಿಕೊಳ್ಳಬಹುದಾಗಿದೆ. ಈ ಪ್ಲಾನ್ ಕೆಲವೊಂದು ನಿಯಮಗಳನ್ನು ಒಳಗೊಂಡಿದ್ದು ಇದು ರಾತ್ರಿ ಡೇಟಾ ಪ್ಲಾನ್ ಆಗಿದೆ.


Click it and Unblock the Notifications








