ಜಿಯೋ ಎಂದರೆ ಮೂಗು ಮುರಿಯುವವರೆ ಇಲ್ಲಿ ನೋಡಿ..!! ಜಿಯೋ ಯಾಕೆ ಬೆಸ್ಟ್ ಎಂದು..!
ಬಿಟ್ಟಿಕೊಟ್ಟರೆ ಗುಣಮಟ್ಟ ಇರುವುದಿಲ್ಲ ಎನ್ನುವ ಮಾತನ್ನು ಆಡಿದ್ದರು. ಆದರೆ ಇದು ಸುಳ್ಳು ಜಿಯೋ ಉತ್ತಮ ಸೇವೆಯನ್ನು ನೀಡುತ್ತಿದೆ ಅನ್ನುವುದಕ್ಕೆ ಸಾಕ್ಷಿ ದೊರೆತಿದೆ.
ಜಿಯೋ ದೇಶದಲ್ಲಿ ಸೇವೆಯನ್ನು ಆರಂಭಿಸಿದ ನಂತರದಲ್ಲಿ ಉಚಿತ ಸೇವೆಯನ್ನು ನೀಡಲು ಮುಂದಾಯಿತು. ಆಗ ಕೆಲವರು ಅದರ ಲಾಭವನ್ನು ಪಡೆದರೆ ಇನ್ನು ಕೆಲವರು ಬಿಟ್ಟಿಕೊಟ್ಟರೆ ಗುಣಮಟ್ಟ ಇರುವುದಿಲ್ಲ ಎನ್ನುವ ಮಾತನ್ನು ಆಡಿದ್ದರು. ಆದರೆ ಇದು ಸುಳ್ಳು ಜಿಯೋ ಉತ್ತಮ ಸೇವೆಯನ್ನು ನೀಡುತ್ತಿದೆ ಅನ್ನುವುದಕ್ಕೆ ಸಾಕ್ಷಿ ದೊರೆತಿದೆ.

ದೇಶದಲ್ಲಿ ಉತ್ತಮ ಡೇಟಾ, ಅದುವೇ ಹೆಚ್ಚು ವೇಗದಲ್ಲಿ ನೀಡುತ್ತಿರುವುದು ಜಿಯೋ ಮಾತ್ರವೇ ಎಂದು ಟ್ರಾಯ್ ನೀಡಿರುವ ಮಾಹಿತಿಯಿಂದ ತಿಳಿದು ಬಂದಿದೆ. ಸದ್ಯ ಇಡೀ ದೇಶದ ಸರಾಸರಿಯನ್ನು ಗಮನಿಸಿದರೆ ಜಿಯೋ 19 Mbps ವೇಗದ ಇಂಟರ್‌ನೆಟ್ ಅನ್ನು ಬಳಕೆದಾರರಿಗೆ ನೀಡಿದೆ. ಇದು ತಿಂಗಳಿಂದ ತಿಂಗಳಿಗೆ ಏರಿಕೆಯಾಗುತ್ತಿದ್ದು, ದಿನದಿಂದ ದಿನಕ್ಕೆ ಜಿಯೋ ತನ್ನ ಗುಣಮಟ್ಟವನ್ನು ಏರಿಸಿಕೊಳ್ಳುತ್ತಿದೆ ಎಂದರೆ ತಪ್ಪಾಗುವುದಿಲ್ಲ.
ಜಿಯೋಗಿಂತಲೂ ಹೆಚ್ಚು ದರವನ್ನು ವಿಧಿಸುತ್ತಿರುವ ಟೆಲಿಕಾಂ ಕಂಪನಿಗಳು 4G ವೇಗದ ಇಂಟರ್ ನೆಟ್ ಸೇವೆಯನ್ನು ನೀಡುವಲ್ಲಿ ಹಿಂದೆ ಬಿದ್ದಿವೆ. ಜಿಯೋ ನಂತರದ ಸ್ಥಾನದಲ್ಲಿ ಐಡಿಯಾ ಕಾಣಿಸಿಕೊಂಡು ಅಚ್ಚರಿಯನ್ನು ಮೂಡಿಸಿದೆ. ಐಡಿಯಾ 13.709 Mbps ವೇಗದಲ್ಲಿ ಸೇವೆಯನ್ನು ನೀಡುತ್ತಿದ್ದರೇ ಇದರ ನಂತರದ ಮೂರನೇ ಸ್ಥಾನದಲ್ಲಿರುವ ವೊಡೋಫೋನ್ 13,387 Mbps ವೇಗದಲ್ಲಿ ಸೇವೆಯನ್ನು ನೀಡುತ್ತಿದೆ.

ಜಿಯೋಗೆ ದರ ಸಮಯದಲ್ಲಿ ಹೆಚ್ಚಿನ ಸ್ಪರ್ಧೆಯನ್ನು ನೀಡಿದ್ದ ಏರ್‌ಟೆಲ್ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಏರ್‌ಟೆಲ್ ಕೇವಲ 10.153 Mbps ವೇಗದಲ್ಲಿ ಮಾತ್ರವೇ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿದು ಬಂದಿದೆ. ದಿನೇ ದಿನೇ ಜಿಯೋ ಸೇವೆ ಉತ್ತಮವಾಗುತ್ತಿರುವಂತೆ ಜಿಯೋ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುತ್ತಿದೆ.


Click it and Unblock the Notifications








