ಜಿಯೋ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ..ಜಿಯೋ ಡಿಟಿಹೆಚ್ ಬಿಡುಗಡೆ ದಿನಾಂಕ ಫಿಕ್ಸ್!!
ಜಿಯೋ ಡಿಟಿಹೆಚ್ ಸೇರಿದಂತೆ ಇನ್ನು ಹೆಚ್ಚಿನ ಸೇವೆಗಳಿಗಾಗಿ 18ಸಾವಿರ ಕೋಟಿ ರೂಪಾಯಿಗಳ ಬಂಡವಾಳ ಹೂಡುತ್ತಿದ್ದು, ಜಿಯೋ ಡಿಟಿಹೆಚ್ ಮೇಲೆ ಮೊದಲ ದೃಷ್ಟಿ ನೆಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಜಿಯೋ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ಹೊರಬಿದ್ದಿದ್ದು, ಕೇವಲ ಊಹಾಪೋಹಗಳಿಗೆ ಸೀಮಿತವಾಗಿದ್ದ ಜಿಯೋ ಡಿಟಿಹೆಚ್ ಇದೇ ಮೇ ತಿಂಗಳ ಮೊದಲವಾರದಲ್ಲಿ ಬಿಡುಗಡೆಯಾಗುದೆ ಎನ್ನುವ ಮಾಹಿತಿ ಹೊರಬಿದ್ದಿದೆ.!! ಹೌದು, ಈ ಬಗ್ಗೆ ಹಲವು ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿದ್ದು, ಜಿಯೋ ಡಿಟಿಹೆಚ್ ಬಿಡುಗಡೆ ಬಹುತೇಕ ಖಚಿತವಾಗಿದೆ.!!
ಓದಿರಿ: ಮತ್ತೇ ಬದಲಾದ ಜಿಯೋ ಪ್ಲಾನ್..! ಏಕೆ, ಹೊಸ ಆಫರ್ ಏನೇನು.?
ಜಿಯೋ ಡಿಟಿಹೆಚ್ ಸೇರಿದಂತೆ ಇನ್ನು ಹೆಚ್ಚಿನ ಸೇವೆಗಳಿಗಾಗಿ 18ಸಾವಿರ ಕೋಟಿ ರೂಪಾಯಿಗಳ ಬಂಡವಾಳ ಹೂಡುತ್ತಿದ್ದು, ಜಿಯೋ ಡಿಟಿಹೆಚ್ ಮೇಲೆ ಮೊದಲ ದೃಷ್ಟಿ ನೆಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಷ್ಟೇ ಅಲ್ಲದೇ ಜಿಯೋ ಡಿಟಿಹೆಚ್ ಜೊತೆಯಲ್ಲಿಯೇ ಜಿಯೋ ಬ್ರಾಡ್‌ಬ್ಯಾಂಡ್ ಸಹ ಬಿಡುಗಡೆಯಾಗಲಿದೆ ಎಂದು ಮಾಧ್ಯಮಗಳು ತಿಳಿಸಿವೆ.
ಓದಿರಿ: ಬಾಹುಬಲಿ ಸಿನಿಮಾಗೆ 50% ಪೇಟಿಎಂ ಕ್ಯಾಶ್‌ಬ್ಯಾಕ್ ಆಫರ್!!..ಫ್ರೀ ಕೋಡ್ ಏನು ಗೊತ್ತಾ?
ಈಗಾಗಲೇ ದೇಶದಾಧ್ಯಂತ ಟ್ರೆಂಡ್ ಸೃಷ್ಟಿಸಿರುವ ಜಿಯೋ ಡಿಟಿಹೆಚ್ ಮತ್ತು ಜಿಯೋ ಬ್ರಾಡ್‌ಬ್ಯಾಂಡ್ ಇನ್ನೇನು ಕೆಲವೇ ದಿವಸಗಳಲ್ಲಿ ಬಿಡುಗಡೆಯಾಗಲಿದ್ದು, ಜಿಯೋ ಡಿಟಿಹೆಚ್ ಬಗ್ಗೆ ಈ ವರೆಗೂ ಹೊರಬಿದ್ದಿರುವ ಮಾಹಿತಿಗಳು ಯಾವುವು? ಡಿಟಿಹೆಚ್ ಹೇಗಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಮೂರು ತಿಂಗಳ ಉಚಿತ ಸೇವೆ!!
ಈಗಾಗಲೇ ಜಿಯೋ ಲಾಂಚ್ ಸಂದರ್ಭದಲ್ಲಿ ಪ್ರಮೋಷನ್‌ಗಾಗಿ ಮೂರು ತಿಂಗಳ ಉಚಿತ ಸೇವೆಯನ್ನು ನೀಡಿದ್ದ ಮಾದರಿಯಲ್ಲೇ ಜಿಯೋ ಡಿಟಿಹೆಚ್ ಲಾಂಚ್ ವೇಳೆಯಲ್ಲಿಯೂ ಮೂರು ತಿಂಗಳ ಉಚಿತ ಸೇವೆಯನ್ನು ನೀಡಲು ಜಿಯೋ ಚಿಂತನೆ ನಡೆಸಿದ್ದು, ಸದ್ಯ ದೇಶದಲ್ಲಿ ಲಭ್ಯವಿರುವ ಎಲ್ಲಾ ಚಾಲನ್‌ಗಳನ್ನು ತನ್ನ ಡಿಟಿಹೆಚ್‌ನಲ್ಲಿ ಪ್ರಸಾರ ಮಾಡುತ್ತದೆ.

ನಾಲ್ಕು ಇಂಡಿಯಾ ಪ್ಲಾನ್‌ಗಳು!?
ಜಿಯೋ ತನ್ನ ಬಳಕೆದಾರಿಗಾಗಿ ನಾಲ್ಕು ಪ್ಲಾನ್‌ಗಳನ್ನು ರೆಡಿ ಮಾಡಿದ್ದು, ಇಸ್ಟ್ ಇಂಡಿಯಾ ಪ್ಲಾನ್, ವೆಸ್ಟ್ ಇಂಡಿಯಾ ಪ್ಲಾನ್, ನಾರ್ತ್ ಇಂಡಿಯಾ ಪ್ಲಾನ್ ಮತ್ತು ಸೌಥ್ ಇಂಡಿಯಾ ಪ್ಲಾನ್ ಗಳನ್ನು ಪರಿಚಯಿಸಿದ್ದು, ನಾಲ್ಕು ಮೂಲೆಗಳಿಗೂ ಅಲ್ಲಿನ ಸ್ಥಳೀಯ ಚಾನಲ್‌ಗಳನ್ನು ಪ್ರಸಾರ ಮಾಡಲಿದೆ.

ಬೆಸಿಕ್ ಪ್ಲಾನ್ ಕೇವಲ ರೂ.99!!
ಜಿಯೋ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಡಿಟಿಹೆಚ್ ಸೇವೆಯನ್ನು ಆರಂಭಿಸಲಿದ್ದು, ಇದಕ್ಕಾಗಿ ಬೆಸಿಕ್ ಪ್ಲಾನ್ ಅನ್ನು ಕೇವಲ ರೂ.89-99ಕ್ಕೆ ನೀಡಲಿದೆ. ಸ್ಪೋರ್ಸ್ ಪ್ಯಾಕಿಗೆ ರೂ. 120-135 ನಿಗಧಿ ಮಾಡಿದ್ದು, ಮೈ ಪ್ಲಾನ್ ವೊಂದನ್ನು ಪರಿಚಯಿಸಿದ್ದು ರೂ. 189-200 ಅನ್ನು ನಿಗಧಿ ಮಾಡಿದೆ. ಫ್ಯಾಮಿಲಿ ಪ್ಯಾಕ್ ಸಹ ಇದ್ದು, ಇದಕ್ಕೆ ರೂ. 255-295 ಹಾಗೂ ಮಕ್ಕಳಿಗಾಗಿ ಪ್ಯಾಕ್ ಇದ್ದು, ಅದಕ್ಕೆ ರೂ. 185-219 ಇರಲಿದೆ ಎನ್ನಲಾಗಿದೆ.

ಜಿಯೋ.ಕಾಮ್( JIO.Com) ನಲ್ಲಿ ಡಿಟಿಹೆಚ್
ಜಿಯೋ.ಕಾಮ್( JIO.Com) ನಲ್ಲಿ ಡಿಟಿಹೆಚ್ ಸೇವೆಯನ್ನು ಬುಕ್ ಮಾಡಬಹುದಾಗಿದ್ದು, ಬುಕ್ಕಿಂಗ್ ಸೇವೆಗೆ 1000 ದಿಂದ 1500 ರೂ.ಗಳಾಗಿರುತ್ತದೆ ಎನ್ನಲಾಗಿದೆ.ಈ ಬಗ್ಗೆ ಜಿಯೋ ಈಗಷ್ಟೇ ಪ್ರಕಟಣೆ ನೀಡಬೇಕಿದೆ.


Click it and Unblock the Notifications








