ವಿಸ್ಮಯ ಪ್ರಪಂಪಚವನ್ನು ಸೃಷ್ಟಿಸಲಿದೆ ಜಿಯೋ: ನೀವು ಊಹಿಸಲಾದ ಸೇವೆ
ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಹಾಕಿದ್ದ ರಿಲಯನ್ಸ ಮಾಲೀಕತ್ವದ ಜಿಯೋ, ಟೆಲಿಕಾಂ ಮಾರುಕಟ್ಟೆಯನ್ನು ಬಿಟ್ಟು ಮೊಬೈಲ್ ವ್ಯಾಲೆಟ್, ಮೊಬೈಲ್ ಆಪ್ ಗಳು ಸೇರಿದಂತೆ ಹಲವು ಮಾದರಿಯ ಸೇವೆಗಳನ್ನು ಆರಂಭಿಸಿತ್ತು. ಇದರೊಂದಿಗೆ ತನ್ನದೇ ಮೊಬೈಲ್ ಫೋನ್ ಲಾಂಚ್, DTH ಸೇವೆ, ಬ್ಯಾಡ್ ಬ್ಯಾಂಡ್ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿಕೊಂಡಿದೆ.

ಓದಿರಿ: ಜಿಯೋ ಪ್ರೈಮ್ ಸದಸ್ಯರಿಗೆ ಅದ್ಧೂರಿ ಆಫರ್: ರೂ.399ಕ್ಕೆ ರಿಚಾರ್ಜ್ ಮಾಡಿಸಿದರೆ ರೂ.2599 ಕ್ಯಾಷ್ ಬ್ಯಾಕ್
ಈಗಾಗಲೇ ಜಿಯೋ ಆಪ್‌ಗಳು ಈಗಾಗಲೇ ಪ್ಲೇ ಸ್ಟೋರ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ. ಮೈಜಿಯೋ ಆಪ್ ಟಾಪ್ 5ನಲ್ಲಿ ಕಾಣಿಸಿಕೊಳ್ಳುತ್ತಿದೆ. ಇದಲ್ಲದೇ ಜಿಯೋ ಸಿನಿಮಾ, ಜಿಯೋ ಟಿವಿ ಆಪ್‌ಗಳು ಹೆಚ್ಚು ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೇ ಹಿನ್ನಲೆಯಲ್ಲಿ ಜಿಯೋ ತನ್ನ ಆಪ್‌ಗಳ ಸಾಲಿಗೆ ಮತ್ತೊಂದು ಸೇವೆಯನ್ನು ಸೇರಿಸಲು ಮುಂದಾಗಿದೆ.
ಓದಿರಿ: ಬದಲಾಗಿದೆ ಜಿಯೋ ಆಫರ್‌ಗಳು: ರೂ, 309, 399, 459 ಮತ್ತು 499 ಪ್ಲಾನ್‌ಗಳ ಮಾಹಿತಿ ಇಲ್ಲಿದೆ..!

ಜಿಯೋ VR ಆಪ್:
ಈಗಾಗಲೇ ಮೊಬೈಲ್ ಮಾರುಕಟ್ಟೆಯಲ್ಲಿ VR (ವರ್ಚುವಲ್ ರಿಯಾಲ್ಟಿ) ಸಾಕಷ್ಟು ಜಾಲ್ತಿಗೆ ಬರುತ್ತಿದೆ. ಈ ಹಿನ್ನಲೆಯಲ್ಲಿ ಜಿಯೋ ಸಹ ತನ್ನ ಬಳಕೆದಾರರಿಗೆ VR ಸೇವೆಯನ್ನು ನೀಡುವ ಸಲುವಾಗಿ ಜಿಯೋ VR ಆಪ್ ಅನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾನಿಲಯ:
ಜಿಯೋ VR ಆಪ್ ಅನ್ನು ಬಿಡುಗಡೆ ಮಾಡುವ ಸಲುವಾಗಿ ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾನಿಲಯದ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ, ಈಗಾಗಲೇ ಈ ವಿಷಯದಲ್ಲಿ ಜಿಯೋ ಯಶಸ್ಸು ಸಾಧಿಸಿದೆ ಎನ್ನಲಾಗಿದ್ದು. ವರ್ಷದ ಆರಂಭದಲ್ಲಿ ಈ ಆಪ್ ಕಾಣಿಸಿಕೊಳ್ಳಲಿದೆ.

VR ಮತ್ತು AR ಆಪ್‌ಗಳು:
ಈಗಾಗಲೇ ದೇಶದಲ್ಲಿ VR ಮತ್ತು AR ಬೆಳವಣಿಗೆಯನ್ನು ಹೊಂದುತ್ತಿದೆ. ಭವಿಷ್ಯದಲ್ಲಿ ಈ ತಂತ್ರಜ್ಞಾನವು ಹೆಚ್ಚಿನ ಖ್ಯಾತಿಯನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ ಈ ಹಿನ್ನಲೆಯಲ್ಲಿ ಜಿಯೋ ತನ್ನ ಬಳಕೆದಾರರಿಗೆ VR ಮತ್ತು AR ಆಪ್‌ಗಳನ್ನು ಬಳಕೆಗೆ ನೀಡಲು ಮುಂದಾಗಿದೆ.

ಭಾರತದ ಮೊದಲ ಟೆಲಿಕಾಂ ಕಂಪನಿ:
VR ಮತ್ತು AR ಆಪ್‌ಗಳನ್ನು ಲಾಂಚ್ ಮಾಡುತ್ತಿರುವ ದೇಶದ ಮೊದಲ ಟೆಲಿಕಾಂ ಕಂಪನಿ ಎಂಬ ಖ್ಯಾತಿಯೂ ಜಿಯೋ ಪಾಲಾಗಲಿದೆ. ಈಗಾಗಲೇ ಎಲ್ಲಾ ಮೊಬೈಲ್ ಆಪ್‌ಗಳನ್ನು ಬಿಡುಗಡೆ ಮಾಡುವುದರಲ್ಲಿಯೂ ಮೊದಲಿದ್ದ ಜಿಯೋ, ಈಗಲೂ ಮೊದಲನೇ ಪ್ರಯತ್ನವನ್ನು ಮಾಡುತ್ತಿದೆ ಎನ್ನಲಾಗಿದೆ.

ಹಾದಿಯಲ್ಲಿ ಎಲ್ಲಾ ಕಂಪನಿಗಳು:
ಈ ಹಿಂದೆ ಯಾವ ಟೆಲಿಕಾಂ ಕಂಪನಿಗಳು ತಮ್ಮ ಬಳಕೆದಾರರಿಗೆ ಆಪ್ ಸೇವೆಯನ್ನು ನೀಡುತ್ತಿರಲಿಲ್ಲ. ಜಿಯೋ ಒಂದರ ಹಿಂದೆ ಒಂದು ಆಪ್ ಗಳನ್ನು ಬಿಡುಗಡೆ ಮಾಡಿದ ರೀತಿಯಲ್ಲಿಯೇ ಏರ್‌ಟೆಲ್, ವೊಡಾಫೋನ್ ಮತ್ತು ಐಡಿಯಾ ಕಂಪನಿಗಳು ಸಹ ತಮ್ಮದೇ ಮನರಂಜನೆಯ ಆಪ್‌ಗಳನ್ನು ಬಿಡುಗಡೆ ಮಾಡಿವೆ.


Click it and Unblock the Notifications








