ಬೆಂಗಳೂರಿಗರೇ ಆನ್‌ಲೈನಿನಲ್ಲಿ ಮನೆ ಹುಡುಕಿ..!!
ಆನ್‌ಲೈನ್ ವಹಿವಾಟಿಗೆ ಬೆಂಗಳೂರಿನಲ್ಲಿ ದೊಡ್ಡ ಮಾರುಕಟ್ಟೆ ಇದೆ. ಇಲ್ಲಿ ಬಾಡಿಗೆದಾರರಿಗೆ, ನಗರಕ್ಕೆ ಹೊಸದಾಗಿ ಬಂದವರಿಗೆ ಸುಲಭವಾಗಿ ಇಲ್ಲಿ ಮನೆಗಳು ದೊರೆಯಲಿದೆ.
ಬೆಂಗಳೂರಿಗೆ ಬರುವವರಿಗೆ ಸುಲಭವಾಗಿ ಬಾಡಿಗೆ ಮನೆ ಸಿಗುವುದಿಲ್ಲ. ಮಧ್ಯವರ್ತಿಗಳು ನಿಗದಿಪಡಿಸಿದ ಮೊತ್ತಕ್ಕೆ, ಕಮಿಷನ್ ಕೊಟ್ಟರೆ ಮಾತ್ರ ಬಾಡಿಗೆ ಮನೆಗಳು ಸಿಗುತ್ತವೆ. ಇದಕ್ಕಾಗಿಯೇ ಯಾವುದೇ ತೊಂದರೆ ಇಲ್ಲದೇ ಇಲ್ಲೊಂದು ಸಂಸ್ಥೆ ಆನ್‌ಲೈನ್ ನಲ್ಲಿ ಮನೆ ಹುಡುಕಿಕೊಡಲಿದೆ.

ಓದಿರಿ: ಉಚಿತ ವೈ-ಫೈ ಬಳಕೆ ಮುನ್ನ ಎಚ್ಚರ: ಶೇ.41 ಫೋನ್‌ಗಳು ಹ್ಯಾಕ್, ನಿಮ್ಮದು ಆಗಬಹುದು ಎಚ್ಚರ..!
ಆನ್‌ಲೈನ್ ವಹಿವಾಟಿಗೆ ಬೆಂಗಳೂರಿನಲ್ಲಿ ದೊಡ್ಡ ಮಾರುಕಟ್ಟೆ ಇದೆ. ಬಾಡಿಗೆದಾರರಿಗೆ 'ರೆಂಟ್‌ಪ್ರಾಪ್4ಯುಡಾಟ್‌ಕಾಮ್' www.rentprop4u.com ನಗರಕ್ಕೆ ಹೊಸದಾಗಿ ಬಂದವರಿಗೆ ಸುಲಭವಾಗಿ ಇಲ್ಲಿ ಮನೆಗಳನ್ನು ಸುಲಣವಾಗಿ ಮತ್ತು ತ್ವರಿತವಾಗಿ ನೀಡಲಿದೆ.
ವಿದ್ಯಾರ್ಥಿಗಳು, ನೌಕರರು ಎಲ್ಲರಿಗೂ ಅವರ ಅಗತ್ಯಕ್ಕೆ ತಕ್ಕಂತೆ ಮನೆ, ಅಪಾರ್ಟ್‌ಮೆಂಟ್‌ಗಳು ಬಾಡಿಗೆಗೆ ದೊರೆಯುತ್ತವೆ. ಬಾಡಿಗೆ ಮನೆಗಳಲ್ಲಿ ಮಂಚ, ಟಿವಿ, ಬೆಡ್‌ಗಳನ್ನು ಈ ಸಂಸ್ಥೆಯೇ ಒದಗಿಸಲಿದೆ. ಇದಕ್ಕೆ ಬಾಡಿಗೆದಾರರು ಹೆಚ್ಚುವರಿ ಸೇವಾ ಶುಲ್ಕ ಪಾವತಿಸಬೇಕಾಗುತ್ತದೆ.

ಓದಿರಿ: ಬರಲಿದೆ ಹೊಸ ಟೆಕ್ನಾಲಜಿ: ಎಲೆಕ್ಟ್ರಿಕ್ ವಿಮಾನವು ಶೀಘ್ರವೇ ಹಾರಲಿದೆ...!
ಮಾಲೀಕರು ಅಂತರ್ಜಾಲ ತಾಣ 'ರೆಂಟ್‌ಪ್ರಾಪ್4ಯುಡಾಟ್‌ಕಾಮ್'ನಲ್ಲಿ (www.rentprop4u.com) ತಮ್ಮ ಬಾಡಿಗೆ ಮನೆಗಳ ಮಾಹಿತಿ ಮತ್ತು ಫೋಟೊಗಳನ್ನು ಸೇರಿಸಬಹುದಾಗಿದೆ. ಬಾಡಿಗೆದಾರರೂ ಈ ತಾಣದಿಂದಲೇ ತಮಗಿಷ್ಟದ ಮನೆಗಳನ್ನು ಬಾಡಿಗೆಗೆ ಆಯ್ಕೆ ಮಾಡಿಕೊಳ್ಳಬಹುದು. ಇದಕ್ಕಾಗಿ ಯಾವುದೇ ಹೆಚ್ಚಿನ ಶುಲ್ಕವನ್ನು ಪಾವತಿಸುವ ಅಗತ್ಯತೆ ಇಲ್ಲ ಎನ್ನಲಾಗಿದೆ.


Click it and Unblock the Notifications








