ಉತ್ತಮ ಆಂಡ್ರಾಯ್ಡ್ ಭದ್ರತೆಯತ್ತ ಬ್ಲ್ಯಾಕ್‌ಬೆರ್ರಿ ಮತ್ತು ಸ್ಯಾಮ್‌ಸಂಗ್

Written By:

ತಮ್ಮ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಮಾಡುವ ನಿಟ್ಟಿನಲ್ಲಿ ಸ್ಯಾಮ್‌ಸಂಗ್ ಹಾಗೂ ಬ್ಲ್ಯಾಕ್‌ಬೆರ್ರಿ ಭದ್ರತೆಯನ್ನು ಕೇಂದ್ರೀಕರಿಸಿರುವ ಪಾಲುದಾರಿಕೆಯತ್ತ ದೃಷ್ಟಿ ಹರಿಸಿವೆ. ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಸ್ಮಾರ್ಟ್‌ಫೋನ್ ಅನ್ನು ಬಳಸಿಕೊಂಡು ವ್ಯವಹಾರಕ್ಕೆ ಬ್ಲ್ಯಾಕ್‌ಬೆರ್ರಿಯ ಎನ್‌ಕ್ರಿಪ್ಶನ್ ವ್ಯವಸ್ಥೆಯನ್ನು ಇವುಗಳು ತರುತ್ತಿವೆ.

ಮುಂದಿನ ವರ್ಷದ ಆರಂಭದಲ್ಲಿ, ಸ್ಯಾಮ್‌ಸಂಗ್ ಬ್ಲ್ಯಾಕ್‌ಬೆರ್ರಿಯ BES12 ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಸೇವೆಯನ್ನು ತನ್ನದೇ ಆದ ನಾಕ್ಸ್ ಸಾಫ್ಟ್‌ವೇರ್‌ಗೆ ಇಂಟಿಗ್ರೇಟ್ ಮಾಡುತ್ತಿದೆ. ನಾಕ್ಸ್, ಆಂಡ್ರಾಯ್ಡ್ ಡಿವೈಸ್‌ಗಳಿಗೆ ಹೆಚ್ಚುವರಿ ಭದ್ರತೆಯನ್ನು ಒದಗಿಸಲಿದೆ.

ಉತ್ತಮ ಆಂಡ್ರಾಯ್ಡ್ ಭದ್ರತೆಯತ್ತ ಬ್ಲ್ಯಾಕ್‌ಬೆರ್ರಿ ಮತ್ತು ಸ್ಯಾಮ್‌ಸಂಗ್

ಇದನ್ನೂ ಓದಿ: ಎಸ್‌ಡಿ ಕಾರ್ಡ್‌ಗೆ ಅಪ್ಲಿಕೇಶನ್ ಅನ್ನು ಸರಿಸುವುದು ಹೇಗೆ?

ಬ್ಲ್ಯಾಕ್‌ಬೆರ್ರಿಯು ಹೆಚ್ಚು ಆಪ್ತವಾಗಿರುವ ಪಾಲುದಾರಿಕೆಯನ್ನು ಸ್ಯಾಮ್‌ಸಂಗ್ ಜೊತೆಗೆ ಮಾಡಿಕೊಂಡಿದ್ದು, ನಾವು ಇನ್ನಷ್ಟು ಹೆಚ್ಚು ಉತ್ಸುಕತೆಯಿಂದ ಕಾರ್ಯನಿರ್ವಹಿಸಬೇಕಾಗಿದೆ ಎಂದು ಬ್ಲ್ಯಾಕ್‌ಬೆರ್ರಿಯ ಗ್ಲೋಬಲ್ ಎಂಟರ್ಪ್ರೈಸ್ ಸೇವೆಗಳ ಜಾನ್ ಸಿಮ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಳಕೆದಾರರ ಮೊಬೈಲ್ ಅವಶ್ಯಕತೆಗಳನ್ನು ಪೂರೈಸಲು ಹೆಚ್ಚಿನ ಪರ್ಯಾಯ ವ್ಯವಸ್ಥೆಗಳನ್ನು ನಾವು ಒದಗಿಸುತ್ತಿದ್ದು ನಿಜಕ್ಕೂ ಇದು ಸ್ವಾಭಾವಿಕ ಪ್ರಕ್ರಿಯೆಯಾಗಿದೆ. ಸ್ಯಾಮ್‌ಸಂಗ್ ನಾಕ್ಸ್ ಹೆಚ್ಚಿನ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಭದ್ರತಾ ವಿಶೇಷತೆಗಳನ್ನು ಒದಗಿಸುತ್ತಿದ್ದು, ನಮ್ಮ ಪಾಲುದಾರಿಕೆಯು BES12 ನೊಂದಿಗೆ ಈ ಸಾಮರ್ಥ್ಯಗಳನ್ನು ಬಳಸಿಕೊಂಡು ಬಲವಾಗಿ ಸಂಯೋಜಿಸಲು ನೆರವನ್ನು ನೀಡುತ್ತದೆ.

ಇದನ್ನೂ ಓದಿ: ಮೊಬೈಲ್ ಸಂಖ್ಯೆ ಬಳಸದೇ ವಾಟ್ಸಾಪ್ ಖಾತೆ ತೆರೆಯಬೇಕೇ?

ಆದರೆ ಈ ಪಾಲುದಾರಿಕೆಯು ಎರಡೂ ಕಂಪೆನಿಗಳಿಗೆ ಲಾಭವನ್ನು ಒದಗಿಸಲಿದೆ. ಸ್ಯಾಮ್‌ಸಂಗ್ ತನ್ನ ಎಂಟರ್ಪ್ರೈಸ್ ಬಳಕೆದಾರರಿಗೆ ಉತ್ತಮ ಭದ್ರತೆಯನ್ನು ಒದಗಿಸಲು ಸಾಧ್ಯವಾಗಲಿದ್ದು ಬ್ಲ್ಯಾಕ್‌ಬೆರ್ರಿ ಡಿವೈಸ್ ಅನ್ನು ಬಳಸದೇ ಇರುವ ಹೊಸ ಗ್ರಾಹಕರಿಗೆ ತನ್ನ ಸಾಫ್ಟ್‌ವೇರ್ ತಲುಪುವಂತೆ ಬ್ಲ್ಯಾಕ್‌ಬೆರ್ರಿ ಕೂಡ ವಿಸ್ತರಿಸಲಿದೆ.

ಸ್ಯಾಮ್‌ಸಂಗ್ ಹೊಸ ಸಾಫ್ಟ್‌ವೇರ್ ಅನ್ನು 2015 ಕ್ಕಿಂತಲೂ ಪೂರ್ವವಾಗಿ ಒದಗಿಸಲು ಪ್ರಾರಂಭಿಸಲಿದ್ದು, ಇದರ ಬೆಲೆಯ ಬಗ್ಗೆ ಕಂಪೆನಿ ಇನ್ನೂ ತಿಳಿಸಿಲ್ಲ.

English summary
This article tells about Samsung and BlackBerry team up for better Android security.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot