Subscribe to Gizbot

ಸ್ಯಾಮ್‌ಸಂಗ್‌ನ ಹೊಸ ಸ್ಮಾರ್ಟ್ ಟಿವಿ ಕಮಾಲು ಏನು?

Written By:

ಕಂಪೆನಿಯ ಹೆಚ್ಚು ಆಕರ್ಷಕವಾಗಿರುವ ಟೈಜನ್ ಓಎಸ್ ಚಾಲನೆಯಲ್ಲಿರುವ ಸ್ಮಾರ್ಟ್ ಟಿವಿಗಳನ್ನು 2015 ರ ಪ್ರಾರಂಭದಲ್ಲಿ ಹೊರತರುವುದಾಗಿ ಸ್ಯಾಮ್‌ಸಂಗ್ ಅಧಿಕೃತವಾಗಿ ಘೋಷಿಸಿದೆ.

ತನ್ನ ಅಧಿಕೃತ "ಸ್ಯಾಮ್‌ಸಂಗ್ ಟುಮಾರೊ" ಬ್ಲಾಗ್‌ನಲ್ಲಿ ಬಳಕೆದಾರರಿಗೆ ಓಪನ್ ಸೋರ್ಸ್ ಸಾಫ್ಟ್‌ವೇರ್ ಅನ್ನು ಒದಗಿಸುತ್ತಿದ್ದು, ಇದು ಹಿಂದಿಗಿಂತಲೂ ಹೆಚ್ಚಿನ ಮನರಂಜನೆ ಮತ್ತು ಆಯ್ಕೆಗಳನ್ನು ನೀಡಲಿದೆ.

ಸ್ಯಾಮ್‌ಸಂಗ್ ಹೊರತರಲಿದೆ ಟೈಸನ್ ಓಎಸ್ ಟಿವಿ

ಇದನ್ನೂ ಓದಿ: ಹೊಸ ವರ್ಷಕ್ಕಾಗಿ ಹೊಚ್ಚ ಹೊಸ ಫೋನ್‌ಗಳು

ಟೈಜನ್ ಅನ್ನು ಬಳಸಿಕೊಂಡು ಸ್ಮಾರ್ಟ್ ಪ್ಲಾಟ್‌ಫಾರ್ಮ್ ಅನ್ನು ನಿರ್ಮಿಸುವ ಕಂಪೆನಿಯ ಇರಾದೆ ಹೆಚ್ಚಿನ ಗುಣಮಟ್ಟದ ಉತ್ಪನ್ನಗಳನ್ನು ಗ್ರಾಹಕರಿಗೆ ನೀಡುವುದಕ್ಕಾಗಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಂಪೆನಿ ತಿಳಿಸಿದೆ.

ಮನೆಯಲ್ಲೇ ನೀಡುವ ಮನರಂಜನೆಯ ತಾಕತ್ತನ್ನು ವರ್ಧಿಸುವ ಟೈಜನ್ ನಿಜಕ್ಕೂ ಟಿವಿ ಪ್ರೇಮಿಗಳಿಗೆ ಅತ್ಯುದ್ಭುತ ಶ್ರೇಷ್ಟ ಅನುಭವವನ್ನು ಒದಗಿಸಲಿದೆ ಎಂದು ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ನ ಉಪಾಧ್ಯಕ್ಷ ವನ್ ಜಿನ್ ಲೀ ತಿಳಿಸಿದ್ದಾರೆ.

ಇದನ್ನೂ ಓದಿ: ಹೊಸ ವರ್ಷದ ಶುಭ ಸಂಭ್ರಮಕ್ಕಾಗಿ ಆಕರ್ಷಕ ಫೋನ್ಸ್

ಮೊಬೈಲ್‌ನಿಂದ ಟಿವಿಗೆ ಮತ್ತು ಟಿವಿಯಿಂದ ಮೊಬೈಲ್‌ಗೆ ವಿಷಯಗಳನ್ನು ಹಂಚಿಕೊಳ್ಳಲು ಸರಳವಾಗಿಸುವ ವೈಫೈ ಡೈರೆಕ್ಟ್ ಟೆಕ್ ಅನ್ನು ಟೈಜನ್ ಟೆಲಿವಿಶನ್ ಬಳಸುತ್ತಿದ್ದು ಒಂದೇ ಕ್ಲಿಕ್‌ನಲ್ಲಿ ಈ ಕೆಲಸವನ್ನು ಇದು ಸುಗಮಗೊಳಿಸಲಿದೆ.

English summary
Samsung has officially confirmed that its 2015 line-up of smart TVs will be powered by the company's much-delayed Tizen OS.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot