ಫೇಸ್‌ಬುಕ್ ಬಳಸುವಾಗ ತಲೆಯಲ್ಲಿರಲಿ ಕಟ್ಟಕಡೆಯ ಎಚ್ಚರ!!!

By Shwetha

ಸಾಮಾಜಿಕ ಜಾಲತಾಣದಲ್ಲಿ ಫೇಸ್‌ಬುಕ್ ಖಾತೆಯನ್ನು ತೆರೆಯುವಾಗ ನಾವು ನಮ್ಮ ಎಲ್ಲಾ ಮಾಹಿತಿಗಳನ್ನು ನಮೂದಿಸುತ್ತೇವೆ. ನಾವು ನಮ್ಮೆಲ್ಲಾ ಸ್ನೇಹಿತರೊಂದಿಗೆ ಹೆಚ್ಚು ಸಂಪರ್ಕದಲ್ಲಿರಲಿ ಎಂಬುದು ನಮ್ಮ ಮೂಲ ಉದ್ದೇಶವಾಗಿರುತ್ತದೆ ಆದರೆ ಇಂತಹ ಸಂದರ್ಭದಲ್ಲಿ ನೀವು ಹೆಚ್ಚಿನ ಮುತುವರ್ಜಿಯನ್ನು ಪಾಲಿಸಬೇಕು ಎಂಬುದು ನಿಮಗೆ ಗೊತ್ತೇ?

ಓದಿರಿ: ಮಂಗಳ ಗ್ರಹದಲ್ಲಿ ಮಹಿಳೆ!!! ಏನಿದರ ರಹಸ್ಯ

ಹೌದು ನಿಮ್ಮ ಭದ್ರತೆಯ ಸಲುವಾಗಿ ನಿಮ್ಮ ಸಂಪರ್ಕ ಸಂಖ್ಯೆಯನ್ನು ಎಂದಿಗೂ ಫೇಸ್‌ಬುಕ್‌ನಲ್ಲಿ ಅಪ್‌ಡೇಟ್ ಮಾಡದಿರಿ. ಇಂತಹುದೇ ಸುವರ್ಣವಕಾಶಕ್ಕಾಗಿ ಕಾಯುತ್ತಿರುವ ಸೈಬರ್ ಅಪರಾಧಿಗಳು ಈ ಮಾಹಿತಿಯಿಂದ ನಿಮ್ಮನ್ನು ಮೋಸದ ಬಲೆಗೆ ಬೀಳಿಸಬಹುದು ಆದ್ದರಿಂದ ಮೈಯೆಲ್ಲಾ ಕಣ್ಣಾಗಿರಲಿ

ಓದಿರಿ: ವಿಶ್ವಕ್ಕೆ ಸಾವೇ? ಇದು ನಿಜವೇ?

ಅಪಾಯ ಎಂತಹುದು ಎಂಬುದನ್ನು ತಿಳಿದುಕೊಳ್ಳುವ ಆಸೆ ನಿಮ್ಮದು ಎಂದಾದಲ್ಲಿ ಇಂದಿನ ಲೇಖನದಲ್ಲಿ ಇದಕ್ಕೆ ಪೂರಕವಾಗಿರುವ ಮಾಹಿತಿಯನ್ನು ನಾವು ನಿಮ್ಮ ಮುಂದೆ ಉಣಬಡಿಸುತ್ತಿದ್ದೇವೆ.

ಸೈಬರ್ ಅಪರಾಧಿಗಳು

ಸೈಬರ್ ಅಪರಾಧಿಗಳು

ಸಾಲ್ಟ್ ಏಜೆನ್ಸಿಯ ಡೈರೆಕ್ಟರ್ ರೆಜಾ ಮೊಯಾಂದಿನ್ ನಿಮ್ಮ ಮೊಬೈಲ್ ಸಂಖ್ಯೆಯನ್ನು ಸೈಬರ್ ಅಪರಾಧಿಗಳು ಹೇಗೆ ಪತ್ತೆಹಚ್ಚಬಹುದು ಎಂಬುದನ್ನು ವಿವರವಾಗಿ ತಿಳಿಸಿದ್ದಾರೆ.

ಕೋಡಿಂಗ್ ಸ್ಕ್ರಿಪ್ಟ್

ಕೋಡಿಂಗ್ ಸ್ಕ್ರಿಪ್ಟ್

ಇದಕ್ಕಾಗಿಯೇ ಒಂದು ಕೋಡಿಂಗ್ ಸ್ಕ್ರಿಪ್ಟ್ ಅನ್ನು ಇವರು ರಚನೆ ಮಾಡಿದ್ದು ಸಂಖ್ಯೆ ಕಳ್ಳತನ ಮಾಡುವ ಟ್ರಿಕ್ ಅನ್ನು ಇದು ಹೊಂದಿದೆ ಎಂದು ಇವರು ಹೇಳಿದ್ದಾರೆ.

ಬಿಲ್ಡಿಂಗ್ ಪ್ರೊಗ್ರಾಮ್

ಬಿಲ್ಡಿಂಗ್ ಪ್ರೊಗ್ರಾಮ್

ಫೇಸ್‌ಬುಕ್ ಅಪ್ಲಿಕೇಶನ್ ಬಿಲ್ಡಿಂಗ್ ಪ್ರೊಗ್ರಾಮ್ (ಎಪಿಐ) ನಲ್ಲಿ ಉಂಟಾಗಿರುವ ಸಣ್ಣ ತೊಡಕು ಮೊಬೈಲ್ ಸಂಖ್ಯೆಯನ್ನು ಪತ್ತೆಹಚ್ಚುವಲ್ಲಿ ಅಪರಾಧಿಗಳಿಗೆ ನೆರವನ್ನು ನೀಡುತ್ತಿದೆ.

ವೈಯಕ್ತಿಕ ಮಾಹಿತಿ
 

ವೈಯಕ್ತಿಕ ಮಾಹಿತಿ

ಈ ಭದ್ರತಾ ಅವ್ಯವಸ್ಥೆ, ಬುದ್ಧಿವಂತ ಹ್ಯಾಕರ್‌ಗಳಿಗೆ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಪಡೆಯುವಲ್ಲಿ ನೆರವಾಗಲಿದೆ.

ಹ್ಯಾಕರ್‌

ಹ್ಯಾಕರ್‌

ಹ್ಯಾಕರ್‌ಗಳು ಬಳಕೆದಾರರ ಈ ಮಾಹಿತಿಯನ್ನು ಪಡೆದುಕೊಂಡು ಅವರಿಗೆ ಗೊತ್ತಿಲ್ಲದ ಕೆಲವೊಂದು ಸಂಗತಿಗಳನ್ನು ನಡೆಸಬಹುದು

ಹ್ಯಾಕರ್‌ಗಳಿಗೆ ಆಹಾರ

ಹ್ಯಾಕರ್‌ಗಳಿಗೆ ಆಹಾರ

ಇನ್ನು ಸೈಟ್‌ ಅನ್ನು ಬಳಸುತ್ತಿರುವ 1.44 ಬಿಲಿಯನ್ ಬಳಕೆದಾರರು ಹ್ಯಾಕರ್‌ಗಳಿಗೆ ಆಹಾರವಾಗಲಿದ್ದಾರೆ.

ಎಪಿಐ ಸೋರಿಕೆ

ಎಪಿಐ ಸೋರಿಕೆ

ಇವರು ಈಗಾಗಲೇ ಫೇಸ್‌ಬುಕ್‌ಗೆ ಈ ವಿಷಯವನ್ನು ತಿಳಿಸಿದ್ದು ಎಪಿಐ ಸೋರಿಕೆಯನ್ನು ನಿಗ್ರಹಿಸಿದಲ್ಲಿ ಇಂತಹ ಅಪರಾಧಕ್ಕೆ ತಡೆಯನ್ನು ಒಡ್ಡಬಹುದು.

ವೆಬ್‌ಸೈಟ್‌

ವೆಬ್‌ಸೈಟ್‌

ಇನ್ನು ಕೆಲವೊಂದು ವೆಬ್‌ಸೈಟ್‌ಗಳು ಬಳಕೆದಾರರ ಮಾಹಿತಿಯನ್ನು ಮಾರಾಟ ಮಾಡಿ ಲಾಭದಾಯಕ ಉದ್ಯಮವನ್ನು ನಡೆಸುತ್ತಿವೆ.

ಲಾಭ

ಲಾಭ

ಫೇಸ್‌ಬುಕ್ ಟ್ವಿಟ್ಟರ್‌ಗಿಂತಲೂ ಇಂತಹ ವೆಬ್‌ಸೈಟ್‌ಗಳು ಹೆಚ್ಚಿನ ಲಾಭವನ್ನು ಮಾಡುತ್ತಿವೆ.

ದುಷ್ಪರಿಣಾಮ

ದುಷ್ಪರಿಣಾಮ

ರಾಂಡ್ ವರದಿ ಬಳಕೆದಾರರ ಮೇಲೆ ಉಂಟಾಗುವ ಈ ದುಷ್ಪರಿಣಾಮವನ್ನು ಎತ್ತಿ ತೋರಿಸಿದ್ದು ಫೇಸ್‌ಬುಕ್ ಖಾತೆದಾರರು ಹೆಚ್ಚಿನ ಮುತುವರ್ಜಿಯನ್ನು ವಹಿಸಬೇಕು.

Most Read Articles
 
English summary
Beware! If you put your phone number on your Facebook profile, anybody can then find your details and location by just typing the number in Facebook search bar despite your privacy settings -- and your details could be misused by cyber criminals.
Please Wait while comments are loading...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more