ಬೇರೆಯವರ ಮೆದುಳನ್ನೂಇಂಟರ್‌ನೆಟ್‌ ಮೂಲಕ ನೀವೇ ನಿಯಂತ್ರಿಸಿ!

By Ashwath
|

ಇತ್ತೀಚೆಗಷ್ಟೇ ಎರಡು ಇಲಿಗಳ ಮೆದುಳಿನ ನಡುವೆ ಸಂಪರ್ಕ‌ಕಲ್ಪಿಸುವಲ್ಲಿ ಸಫಲರಾಗಿದ್ದ ಸಂಶೋಧಕರು ಈಗ ಇಂಟರ್‌ನೆಟ್‌ ಮೂಲಕ ಮಾನವರ ಮೆದುಳುಗಳ ನಡುವೆ ಅಂತರ್‌ ಸಂಪರ್ಕ‌ ಕಲ್ಪಿಸಬಹುದು ಎಂದು ಸಾಧಿಸಿ ತೋರಿಸಿದ್ದಾರೆ.

ಬೇರೊಬ್ಬರ ಮೆದುಳನ್ನು ಇಂಟರ್‌ನೆಟ್‌ ಮೂಲಕ ನಮ್ಮ ನಿಯಂತ್ರಣಕ್ಕೆ ತಂದು, ನಮ್ಮ ಮೆದುಳು ಏನು ಗ್ರಹಿಸುತ್ತದೋ ಅದನ್ನು ಅವರ ಮೂಲಕ ಮಾಡಿಸುವ ಸಂಶೋಧನೆಯನ್ನು ಸಂಶೋಧಕರು ಪ್ರಪಂಚಕ್ಕೆ ತೋರಿಸಿಕೊಟ್ಟಿದ್ದಾರೆ. ಹೆಮ್ಮೆಯ ವಿಷಯವೆಂದರೆ ಈ ಸಂಶೋಧನೆ ಅಭಿವೃದ್ಧಿ ಪಡಿಸಿರುವುದು ಭಾರತೀಯ ಮೂಲದ ಅಮೆರಿಕದಲ್ಲಿ ನೆಲೆಸಿರುವ ಪ್ರಧ್ಯಾಪಕ ರಾಜೇಶ್‌ ರಾವ್‌.

ವಾಷಿಂಗ್ಟನ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಾಜೇಶ್‌ ರಾವ್‌ ವೀಡಿಯೋ ಗೇಮ್‌ ಆಡುವ ಮೂಲಕ ಹೊಸ ಸಂಶೋಧನೆಯನ್ನು ಅಭಿವೃದ್ಧಿ ಪಡಿಸಿದ್ದು ಸದ್ಯ ವಿಶ್ವದ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಾರೆ. ಹೀಗಾಗಿ ಈ ಸಂಶೋಧನೆ ಏನು? ಸಂಶೋಧನೆ ಹೇಗೆ ನಡೆಸಲಾಯಿತು ಎನ್ನುವ ವಿವರ ಮತ್ತು ವೀಡಿಯೋ ಇಲ್ಲಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ತಲೆ ಇದ್ದವರಿಗೆ ಮಾತ್ರ ಈ ಸಾಧನಗಳು

ಇದನ್ನೂ ಓದಿ: ಕೇರಳದ 15ರ ಬಾಲಕಿಯಿಂದ ವೆಬ್‌ ಡಿಸೈನಿಂಗ್‌ನಲ್ಲಿ ವಿಶ್ವದಾಖಲೆ

ಬೇರೆಯವರ ಮೆದುಳನ್ನೂಇಂಟರ್‌ನೆಟ್‌ ಮೂಲಕ ನೀವೇ ನಿಯಂತ್ರಿಸಿ!

ಬೇರೆಯವರ ಮೆದುಳನ್ನೂಇಂಟರ್‌ನೆಟ್‌ ಮೂಲಕ ನೀವೇ ನಿಯಂತ್ರಿಸಿ!

ಬೇರೊಬ್ಬರ ಮೆದುಳನ್ನು ಇಂಟರ್‌ನೆಟ್‌ ಮೂಲಕ ನಮ್ಮ ನಿಯಂತ್ರಣಕ್ಕೆ ತಂದು, ನಮ್ಮ ಮೆದುಳು ಏನು ಗ್ರಹಿಸುತ್ತದೋ ಅದನ್ನು ಅಯಸ್ಕಾಂತೀಯ ಪ್ರಚೋದನೆಗಳ ಮೂಲಕ ಅವರ ಮೆದುಳಿಗೆ ಕಳುಹಿಸಿ ಕೆಲಸ ಮಾಡಿಸುವ ಸಂಶೋಧನೆ.

ಬೇರೆಯವರ ಮೆದುಳನ್ನೂಇಂಟರ್‌ನೆಟ್‌ ಮೂಲಕ ನೀವೇ ನಿಯಂತ್ರಿಸಿ!

ಬೇರೆಯವರ ಮೆದುಳನ್ನೂಇಂಟರ್‌ನೆಟ್‌ ಮೂಲಕ ನೀವೇ ನಿಯಂತ್ರಿಸಿ!

ಈ ವೀಡಿಯೋ ಗೇಮ್‌ ಪರೀಕ್ಷೆಗಾಗಿ ರಾವ್‌ ಮತ್ತು ಆ್ಯಂಡ್ರಾ ಸ್ಟಾಕೂ ಅವರನ್ನು ಪ್ರತ್ಯೇಕವಾಗಿ ಬೇರೆ ಬೇರೆ ಲ್ಯಾಬ್‌ನಲ್ಲಿ ಕೂರಿಸಲಾಗಿತ್ತು‌. ಮೆದುಳಿನ ಕಂಪನಗಳನ್ನು ಗ್ರಹಿಸಿ ರವಾನಿಸುವ ಸಾಮರ್ಥ್ಯವಿರುವ electroencephalography ಯಂತ್ರದಲ್ಲಿರುವ ಹೆಲ್ಮೆಟ್‌ ಮಾದರಿಯ ಯಂತ್ರವನ್ನು ರಾಜೇಶ್‌ ಅವರು ತಲೆಯಲ್ಲಿ ಧರಿಸಿ ಕುಳಿತಿದ್ದರು. ಇನ್ನೊಂದು ಲ್ಯಾಬ್‌ನಲ್ಲಿ ಸ್ಟಾಕೂ ಅವರು ಇಂಟರ್‌ನೆಟ್‌ ಮೂಲಕ ಅಯಸ್ಕಾಂತೀಯ ಸಂದೇಶಗಳನ್ನು ಸ್ವೀಕರಿಸಬಹುದಾದ electroencephalography ಹೆಲ್ಮೆಟ್‌‌ ಮಾದರಿಯ ಯಂತ್ರವನ್ನು ಧರಿಸಿ ಕುಳಿತಿದ್ದರು. ಪರಸ್ಪರ ಇಂಟರ್‌ನೆಟ್‌ ಸಂಪರ್ಕ‌ಕ್ಕೆ ಸ್ಕೈಪ್‌ನ್ನು ಬಳಸಲಾಗಿತ್ತು.

ಬೇರೆಯವರ ಮೆದುಳನ್ನೂಇಂಟರ್‌ನೆಟ್‌ ಮೂಲಕ ನೀವೇ ನಿಯಂತ್ರಿಸಿ!

ಬೇರೆಯವರ ಮೆದುಳನ್ನೂಇಂಟರ್‌ನೆಟ್‌ ಮೂಲಕ ನೀವೇ ನಿಯಂತ್ರಿಸಿ!

ವೀಡಿಯೋ ಗೇಮ್‌‌ನನಲ್ಲಿ ಶೂಟ್‌ ಮಾಡಬೇಕಾದ ಸಂದರ್ಭದಲ್ಲಿ ಕೀಬೋರ್ಡ್‌ ಮೂಲಕ ಕರ್ಸರ್‌ ಬಟನ್‌ ಅನ್ನು ರಾಜೇಶ್‌ ಅವರು ಒತ್ತಬೇಕಿತ್ತು. ರಾಜೇಶ್‌ ರಾವ್‌ ಅವರ ಮೆದುಳು ಇದನ್ನು ಗ್ರಹಿಸುತ್ತಿದ್ದಂತೆ, ಇನ್ನೊಂದು ಲ್ಯಾಬ್‌ನಲ್ಲಿದ್ದ ಸ್ಟಾಕೂ ಅವರಿಗೆ ಗೊತ್ತಿಲ್ಲದಂತೆ ತಮ್ಮ ಕೈಬೆರಳುಗಳನ್ನು ಕರ್ಸರ್‌ ಬಳಿ ತೆಗೆದುಕೊಂಡು ಹೋಗಿದ್ದರು. ವಾಷಿಂಗ್ಟನ್‌ನಲ್ಲಿ ಈ ಪರೀಕ್ಷೆ ನಡೆಸಿದ್ದು, ಈ ಪ್ರಯೋಗವನ್ನು ಪ್ರತ್ಯಕ್ಷವಾಗಿ ನೋಡಿದ ಉಳಿದ ಸಂಶೋಧಕರು ರಾವ್‌ ಅವರ ಸಂಶೋಧನೆ ನೋಡಿ ಬೆರಗಾಗಿದ್ದಾರೆ.

ಬೇರೆಯವರ ಮೆದುಳನ್ನೂಇಂಟರ್‌ನೆಟ್‌ ಮೂಲಕ ನೀವೇ ನಿಯಂತ್ರಿಸಿ!

ಬೇರೆಯವರ ಮೆದುಳನ್ನೂಇಂಟರ್‌ನೆಟ್‌ ಮೂಲಕ ನೀವೇ ನಿಯಂತ್ರಿಸಿ!

ಈ ಪ್ರಯೋಗ ಈ ರೀತಿ ನಡೆಯುತ್ತದೆ.

ಬೇರೆಯವರ ಮೆದುಳನ್ನೂಇಂಟರ್‌ನೆಟ್‌ ಮೂಲಕ ನೀವೇ ನಿಯಂತ್ರಿಸಿ!

ರಾಜೇಶ್‌ ರಾವ್‌ ನಡೆಸಿದ ಪ್ರಯೋಗದ ವೀಡಿಯೋ ವೀಕ್ಷಿಸಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X