ಜಿಎಸ್‌ಟಿ ನಂತರ ಸ್ಮಾರ್ಟ್‌ಫೋನ್ ಬೆಲೆ ಇಳಿಕೆಯಾಗಲಿದೆ: ಕೇಂದ್ರ ಸರ್ಕಾರ

Written By:

ಜಿಎಸ್ಟಿ ಟ್ಯಾಕ್ಸ್ ಜಾರಿಯಾದ ನಂತರ ಭಾರತದಲ್ಲಿ ಸ್ಮಾರ್ಟ್‌ಫೋನ್ ಬೆಲೆ ಬಹಳಷ್ಟು ಹೆಚ್ಚಾಗುತ್ತದೆ ಎನ್ನುವ ವಿಶ್ಲೇಷಣೆಗೆ ಬ್ರೇಕ್ ಬಿದ್ದಿದೆ.! ಹೌದು, ಜಿಎಸ್ಟಿ ಜಾರಿಯಾದ ನಂತರ ವಿವಿಧ ಉತ್ಪನ್ನಗಳ ಮೇಲೆ ಬೀಳುವ ತೆರಿಗೆಯ ಬಗ್ಗೆ ಮಾಹಿತಿಯನ್ನು ಬಿಡುಗಡೆ ಮಾಡಿದ್ದು, ಮುಂದೆ ಸ್ಮಾರ್ಟ್‌ಫೋನ್‌ಗಳ ಬೆಲೆ ಕಡಿಮೆ ಯಾಗುತ್ತದೆ.!! .

ಜಿಎಸ್ಟಿ ಜಾರಿಯಿಂದಾಗಿ ಸ್ಮಾರ್ಟ್‌ಫೋನ್ ಬೆಲೆ ಬಹಳಷ್ಟು ಹೆಚ್ಚಾಗುತ್ತದೆ ಎಂದು ಮೊಬೈಲ್ ತಯಾರಿಕಾ ಸಂಸ್ಥೆಗಳು ಹೇಳುತ್ತಿದ್ದವು. ಆದರೆ, ಕೇಂದ್ರ ಸರ್ಕಾರ ಮಾತ್ರ ಇದಕ್ಕೆ ವ್ಯತಿರಿಕ್ತವಾದ ಹೇಳಿಕೆ ನೀಡಿದ್ದು, ಈ ಕುರಿತ ವಿಸ್ತೃತ ವರದಿಯನ್ನು ನೀಡಿದೆ.!!

ಜಿಎಸ್‌ಟಿ ನಂತರ ಸ್ಮಾರ್ಟ್‌ಫೋನ್ ಬೆಲೆ ಇಳಿಕೆಯಾಗಲಿದೆ: ಕೇಂದ್ರ ಸರ್ಕಾರ

ಓದಿರಿ: ಫೆಸ್‌ಬುಕ್‌ನಲ್ಲಿ ಆಟೋರನ್ ಆಗುವ ವಿಡಿಯೋ ನಿಲ್ಲಿಸುವುದು ಹೇಗೆ?

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಜಿಎಸ್‌ಟಿ ಜಾರಿಯ ನಂತರ ಸ್ಮಾರ್ಟ್‌ಫೋನ್‌ಗಳಷ್ಟೇ ಅಲ್ಲದೇ ಎಲ್ಲಾ ವಸ್ತುಗಳ ಬೆಲೆಯೂ ಅಗ್ಗವಾಗಲಿದೆ ಎಂದು ಹೇಳಿದ್ದು, ಮೇ.18 ರಂದು ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ವಿವಿಧ ಉತ್ಪನ್ನಗಳಿಗೆ ತೆರಿಗೆ ದರಗಳನ್ನು ನಿಗದಿಪಡಿಸಲಾಗಿದೆ.!!

ಜಿಎಸ್‌ಟಿ ನಂತರ ಸ್ಮಾರ್ಟ್‌ಫೋನ್ ಬೆಲೆ ಇಳಿಕೆಯಾಗಲಿದೆ: ಕೇಂದ್ರ ಸರ್ಕಾರ

ಇನ್ನು ಸ್ಮಾರ್ಟ್‌ಫೋನ್ ಬೆಲೆ ಕಡಿಮೆಯಾಗಲು ಕಾರಣವನ್ನೂ ನೀಡಿರುವ ಕೇಂದ್ರ ಸರ್ಕಾರ, ಕೇಂದ್ರ ಅಬಕಾರಿ ಸುಂಕ, ವ್ಯಾಟ್ ಸೇರಿದಂತೆ ಸ್ಮಾರ್ಟ್‌ಫೋನ್ ಗಳಿಗೆ ಒಟ್ಟು ಶೇ.13.5 ಕ್ಕಿಂತ ಹೆಚ್ಚು ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಜಿಎಸ್ಟಿ ಜಾರಿಯಿಂದ ತೆರಿಗೆ ಶೇ.12ಕ್ಕೆ ಇಳಿಕೆಯಾಗಲಿದೆ ಎಂದು ತಿಳಿಸಿದೆ.!!

ಓದಿರಿ: ಶಾಕಿಂಗ್ ನ್ಯೂಸ್..ಆಧಾರ್, ಪಾನ್‌ಕಾರ್ಡ್ ಲಿಂಕ್ ಮಾಡಲು ಒಂದು ಮೆಸೇಜ್ ಸಾಕು!!

English summary
In a bid to ensure that the benefits of lower GST. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot