ಸೋಲಾರ್‌ ಶಕ್ತಿ ಬಳಸಿ ವಿದ್ಯುತ್‌ ಉಳಿತಾಯ ಮಾಡಿ

By Ashwath
|

ವಿದ್ಯುತ್‌ ಅಭಾವ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಬಹಳಷ್ಟು ಜನ ಸೋಲಾರ್‌ ಶಕ್ತಿಯನ್ನು ಅಳವಡಿಸಲು ಮುಂದಾಗುತ್ತಿದ್ದಾರೆ. ಹೊಸ ಮನೆಗಳನ್ನು ನಿರ್ಮಿಸುವವರು ವಿದ್ಯುತ್ ಸಂಪರ್ಕ ಪಡೆಯುವ ಸಂದರ್ಭದಲ್ಲಿ ಕಡ್ಡಾಯವಾಗಿ ಸೋಲಾರ್ ಅಳವಡಿಸಬೇಕು. ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಿಲ್ಲ ಎಂಬ ನಿಯಮವನ್ನು ರಾಜ್ಯ ಸರ್ಕಾರ ಎರಡು ವರ್ಷ‌ಗಳ ಹಿಂದೆ ಜಾರಿಗೆ ತಂದಿದೆ. ಜೊತೆಗೆ ಸೋಲಾರ್‌ ಅಳವಡಿಸುವ ಗ್ರಾಹಕರಿಗೆ ಶೇ.50 ಸಬ್ಸಿಡಿ ಸಹ ದೊರೆಯುತ್ತಿದೆ. ಸರ್ಕಾರ ಬಿಗಿ ನಿಯಮದಿಂದಾಗಿ ಇಂದು ಹೆಚ್ಚಾಗಿ ಜನರ ಸೋಲಾರ್‌ ಶಕ್ತಿಯತ್ತ ಆಕರ್ಷಿ‌ತ ರಾಗುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಇಲ್ಲಿ ಜನರು ಅಳವಡಿಸಬಹುದಾದ ಸೋಲಾರ್‌ ಸಾಧನಗಳಿವೆ. ಮಾಹಿತಿ ಜೊತೆಗೆ ಅವುಗಳ ಬೆಲೆ ಮತ್ತು ಅವುಗಳನ್ನು ತಯಾರಿಸುವ ವಿವಿಧ ಕಂಪೆನಿಗಳ ವಿವರಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.ನಂತರ ಈ ಸೋಲಾರ್‌ ಸಾಧನಗಳನ್ನು ಅಳವಡಿಸಿ ವಿದ್ಯುತ್‌ ಬಳಕೆ ಕಡಿಮೆ ಮಾಡಿ.

ಇದನ್ನೂ ಓದಿ : ಜಗತ್ತಿನ ಪ್ರಥಮ ಸೋಲಾರ್‌ ವಿಮಾನ ಹೇಗಿದೆ ಗೊತ್ತಾ?
ಇದನ್ನೂ ಓದಿ : ಸೋಲಾರ್‌ ಶರ್ಟ್‌ ಹಾಕಿ. ಕೂಲ್‌ ಕೂಲ್‌ ಆಗಿ

ಸೋಲಾರ್‌ ಇನ್‌ವರ್ಟರ್‍

ಸೋಲಾರ್‌ ಇನ್‌ವರ್ಟರ್‍

3 ಸಾವಿರ ರೂಪಾಯಿಂದ ಆರಂಭವಾಗಿ 1 ಲಕ್ಷ ರೂಪಾಯಿ ಬೆಲೆಯುಳ್ಳ ಇನ್‌ವರ್ಟರ್‍ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಕಂಪೆನಿಗಳು: ಸು- ಕಮ್‌ ಇನ್‌ವರ್ಟರ್‍, ಅನು ಸೋಲಾರ್‌, ಇಕೋ,ಮಹರ್ಷಿ‌ ಸೋಲಾರ್‌

ಸೋಲಾರ್‍ ಹೋಮ್‌ ಲೈಟ್‌ ಸಿಸ್ಟಂ

ಸೋಲಾರ್‍ ಹೋಮ್‌ ಲೈಟ್‌ ಸಿಸ್ಟಂ

ಸೋಲಾರ್‌ ಪ್ಯಾನಲ್‌,ಬ್ಯಾಟರಿ,ಇನ್‌ವಾರ್ಟ‌ರ್‌ ಸಿಎಫ್‌ಎಲ್‌,ಫ್ಯಾನ್‌ ಮತ್ತು ಮೊಬೈಲ್‌ ಚಾರ್ಜಿಂಗ್‌ ಪಾಯಿಂಟ್‌( ಪ್ಯಾನಲ್‌ನ ಕ್ಯಾಪಸಿಟಿ ಆಧಾರದ ಮೇಲೆ ಈ ಸಾಧನಗಳನ್ನುಬಳಸಬಹುದಾಗಿದೆ)

ಬೆಲೆ: ಮೂರು ಸಾವಿರದ ದಿಂದ 15 ಸಾವಿರ ದೊಳಗೆ ಈ ಹೊಮ್‌ ಲೈಟ್‌ ಸಿಸ್ಟಂ ಆಳವಡಿಸಬಹುದಾಗಿದೆ.


ಕಂಪೆನಿಗಳು:ಲ್ಯುಮಿನಸ್‌,ಎಕ್ಸೈಡ್‌, ಮಹರ್ಷಿ‌ ಸೋಲಾರ್‌,ಟಾಟಾ ಪವರ್‌,ಇಕೋ,ಸೆಲ್ಕೋ ಸೋಲಾರ್‌

ಸೋಲಾರ್‍ ಮೊಬೈಲ್‌ ಚಾರ್ಜ‌ರ್‌

ಸೋಲಾರ್‍ ಮೊಬೈಲ್‌ ಚಾರ್ಜ‌ರ್‌

ಸೌರ ಫಲಕ, ಆಂತರಿಕ ಬ್ಯಾಟರಿ ಮತ್ತು ಯುಎಸ್‌ಬಿ ಮೊಬೈಲ್ ಚಾರ್ಜರ್

ಬೆಲೆ: 599 ರೂಪಾಯಿಂದ 750 ರೂ.ವರೆಗಿನ ಮೊಬೈಲ್‌ ಚಾರ್ಜರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಕಂಪೆನಿಗಳು: ಮಹರ್ಷಿ‌ ಸೋಲಾರ್‌,ಅನು ಸೋಲಾರ್‌

ಸೋಲಾರ್‌  ಫ್ರಿಜ್‌

ಸೋಲಾರ್‌ ಫ್ರಿಜ್‌

ಬೆಲೆ: 1 ಲಕ್ಷ 25 ಸಾವಿರ


ತಯಾರಕ ಕಂಪೆನಿಗಳು:
ಮಹರ್ಷಿ‌ ಸೋಲಾರ್‌

ಸೋಲಾರ್‌ ಟೇಬಲ್‌ ಲ್ಯಾಂಪ್‌

ಸೋಲಾರ್‌ ಟೇಬಲ್‌ ಲ್ಯಾಂಪ್‌

ವೈರ್‌ಲೆಸ್‌ ಲ್ಯಾಂಪ್‌ ಇದಾಗಿದ್ದು ಫುಲ್‌ ಚಾರ್ಜ್‌ ಆದಲ್ಲಿ 6 ರಿಂದ 8 ಗಂಟೆಗಳ ಕಾಲ ಪ್ರತಿ ದಿನ ಬಳಕೆ ಮಾಡಬಹುದಾಗಿದೆ.

ಬೆಲೆ: 1 ಸಾವಿರ

ತಯಾರಕ ಕಂಪೆನಿಗಳು :ಮಹರ್ಷಿ ಸೋಲಾರ್‍,ಅನು ಸೋಲಾರ್‌,ಇಕೋ

ಸೋಲಾರ್‌ ಕೂಲರ್‌

ಸೋಲಾರ್‌ ಕೂಲರ್‌

1ರಿಂದ 8 HP ವೋಲ್ಟೆಜ್‌ ಮೋಟರ್‌, ವಾಟರ್‌ ಪಂಪ್‌, ಸೋಲಾರ್‍ ಫ್ಯಾನ್‌, ಸೋಲಾರ್‍ ಸ್ಟಡಿ ಲ್ಯಾಂಪ್‌, ಗಾರ್ಡ‌ನ್‌ ಲೈಟ್‌

ಬೆಲೆ: 5 ಸಾವಿರ ದಿಂದ 25 ಸಾವಿರದೊಳಗ ಸೋಲಾರ್‌ ಕೂಲರ್‌ ಸಾಧನಗಳು ಲಭ್ಯವಿದೆ.

ತಯಾರಕ ಕಂಪೆನಿ : ಮಹರ್ಷಿ‌ ಸೋಲಾರ್‌

ಸೋಲಾರ್‌ ವಾಟರ್‌ ಹೀಟರ್‌

ಸೋಲಾರ್‌ ವಾಟರ್‌ ಹೀಟರ್‌

ವಾಟರ್‌ ಹೀಟರ್‌ನೊಂದಿಗೆ ಸೋಲಾರ್‌ ಪ್ಯಾನೆಲ್‌ ಮತ್ತು ಒಂದು ವಾಟರ್‌ ಟ್ಯಾಂಕ್‌ ಇರುತ್ತದೆ. ನೀರಿನ ಟ್ಯಾಂಕ್‌ನಲ್ಲಿ ನೀರು ಸಂಗ್ರಹವಾಗುವ ಸಾಮರ್ಥ್ಯ ಆಧಾರ ಮೇಲೆ ಸೋಲಾರ್‌ ವಾಟರ್‌ ಹೀಟರ್‌ ಬೆಲೆ ನಿಗದಿಯಾಗುತ್ತದೆ.

ಬೆಲೆ: 20 ಸಾವಿರದಿಂದ ಆರಂಭವಾಗಿ 5 ಲಕ್ಷದವರೆಗಿನ ಸೋಲಾರ್‌ ವಾಟರ್‌ ಹೀಟರ್‌ಗಳು ಲಭ್ಯವಿದೆ.

ತಯಾರಕ ಕಂಪೆನಿಗಳು: ಮಹರ್ಷಿ‌ ಸೋಲಾರ್‌, ಸೆಲ್ಕೋ ಸೋಲಾರ್‌,ಅನು ಸೋಲಾರ್‍

ಸೋಲಾರ್‌ ಬೀದಿ ದೀಪ

ಸೋಲಾರ್‌ ಬೀದಿ ದೀಪ

ಬೆಲೆ: 4.5 Watts ಹೊಂದಿರುವ ಸ್ಟ್ರೀಟ್‌ ಲೈಟ್‌ 6 ಸಾವಿರ, ಯೋಜನೆ ಆಧಾರ ಮೇಲೆ ಸೋಲಾರ್‌ ಬೀದಿ ದೀಪದ ದರ ನಿಗದಿಯಾಗುತ್ತದೆ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X