ಕಾರ್‌ನಲ್ಲಿ ಹೆಂಡತಿ ಇಟ್ಟಿದ್ದು 'ಜಿಪಿಎಸ್', ಗಂಡ ತಿಳಿದಿದ್ದು ಬಾಂಬ್; ಮುಂದೆ?

Written By:

ಟೆಕ್‌ ಕ್ಷೇತ್ರದಲ್ಲಿ ಹೊಸ ಹೊಸ ಗ್ಯಾಜೆಟ್‌ಗಳು, ಮಷಿನ್‌ಗಳು, ಮೊಬೈಲ್‌ಗಳು ದಿನದಿಂದ ದಿನಕ್ಕೆ ಹೊಸ ರೂಪವನ್ನೇ, ಹೊಸ ಫೀಚರ್‌ಗಳನ್ನೇ ಪಡೆಯುತ್ತಾ ನಿರ್ಮಿಸಲ್ಡಡುತ್ತಿವೆ. ಕೆಲವುಗಳನ್ನು ಅಕ್ಷರಸ್ಥರ ಕೈ ಮೇಲಿಟ್ಟರು ಸಹ ಅದು ಏನು ಎಂದು ತಿಳಿಯಲು ಸ್ವಲ್ಪ ಸಮಯವೇ ಬೇಕಾಗುತ್ತದೆ.

ಅಂದಹಾಗೆ ನಾವು ಇಂದಿನ ಲೇಖನದಲ್ಲಿ ತಿಳಿಸುತ್ತಿರುವ ಮಾಹಿತಿಯನ್ನು ಕೂತೂಹಲಕಾರಿ ಮಾಹಿತಿ ಎನ್ನಬೇಕೋ, ಭಯಾನಕ ಮಾಹಿತಿ ಎನ್ನಬೇಕೋ ಅಥವಾ ಹಾಸ್ಯಕರ ಮಾಹಿತಿ ಎನ್ನಬೇಕೋ ನಮಗೆ ತಿಳಿಯುತ್ತಿಲ್ಲ.

ಯಾಕಂದ್ರೆ ಗಂಡನ ಮೇಲೆ ಹೆಚ್ಚು ಸಂಶಯ ಪಡುತ್ತಿದ್ದ ಮಹಿಳೆಯೊಬ್ಬಳು ಆತನ ಮೇಲೆ ಕಣ್ಣಿಡಲು ಕಾರಿಗೆ "ಜಿಪಿಎಸ್" ಇಟ್ಟಿದ್ದಳು. ಆದರೆ ಅದನ್ನು ನೋಡಿದ ಆತ ಬಾಂಬ್‌ ಎಂದುಕೊಂಡ. ಮುಂದೆ ಎನಾಯ್ತು ಎಂದು ತಿಳಿಯಲು ಲೇಖನದ ಸ್ಲೈಡರ್‌ಗಳನ್ನು ಓದಿರಿ.

ವಾಟ್ಸಾಪ್‌ನ 15 ಸೀಕ್ರೇಟ್‌ ಫೀಚರ್‌ಗಳು; ಬಳಕೆದಾರರು ತಿಳಿಯಲೇಬೇಕು!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 'ಜಿಪಿಎಸ್' ಬಾಂಬ್‌ ಆದ ಕತೆ ಇದು!

'ಜಿಪಿಎಸ್' ಬಾಂಬ್‌ ಆದ ಕತೆ ಇದು!

1

ಗಂಡನ ಮೇಲೆ ಹೆಚ್ಚು ಸಂಶಯ ಪಡುತ್ತಿದ್ದ ಪಶ್ಚಿಮ ಕಾರ್ಕ್‌ಶೈರ್ ಪ್ರದೇಶದ ಮಹಿಳೆಯೊಬ್ಬಳು ಆತನ ಮೇಲೆ ಕಣ್ಣಿಡಲು ಆತನ ಕಾರಿಗೆ ಜಿಪಿಎಸ್‌ ಇಟ್ಟಿದ್ದಳು. ಆದರೆ ಆಕೆಯ ಪ್ಲಾನ್ ನಂತೆ ಏನು ನಡೆಯಲಿಲ್ಲ. ನಂತರ ಎನಾಯ್ತು ಎಂದು ಮುಂದಿನ ಸ್ಲೈಡ್‌ನಲ್ಲಿ ತಿಳಿಯಿರಿ.

ಜಿಪಿಎಸ್‌ ಆಯ್ತು ಬಾಂಬ್‌

ಜಿಪಿಎಸ್‌ ಆಯ್ತು ಬಾಂಬ್‌

2

ಆಕೆ ಪ್ಲಾನ್‌ ಟುಸ್ ಆಯ್ತು. ಆದರೆ ಮಹಿಳೆಯ ಗಂಡ ಜಿಪಿಎಸ್ ನೋಡಿ ಅದು ಬಾಂಬ್ ಎಂದು ತಿಳಿದು ಒಂದೇ ಸಮನೆ ಕೂಗತೊಡಗಿದ. ನಂತರದಲ್ಲಿ ಇಂಗ್ಲೀಷ್‌ನ ಆ ಇಡಿ ಪ್ರದೇಶದಲ್ಲಿ ಬಾಂಬ್‌ ಎಚ್ಚರಿಕೆ ಬಗ್ಗೆ ಎಲ್ಲರಿಗು ತಿಳಿಸಲಾಯಿತು. ಆತ ಏನಾದ ಗೋತ್ತಾ? ಮುಂದೆ ಓದಿ.

ಚಿತ್ರ ಕೃಪೆ:ಬಿಬಿಸಿ

ಮಿಲಿಟರಿಯವರ ವಶಕ್ಕೆ ಮಹಿಳೆ ಗಂಡ

ಮಿಲಿಟರಿಯವರ ವಶಕ್ಕೆ ಮಹಿಳೆ ಗಂಡ

3

ಗಂಡ ಆತನ ಕಾರಿನಲ್ಲಿ ಬಾಂಬ್‌ ಇರುವ ಬಗ್ಗೆ ಯಾವಾಗ ಹೇಳಿದನೋ ನಂತರದ ಸಮಯದಲ್ಲಿ ಮಿಲಿಟರಿ ಸೇವೆಯವರು ಭಯೋತ್ಪಾದಕರ ದಾಳಿಗೆ ಇವನೇ ಕಾರಣವಿರಬಹುದು ಎಂದು ಈತನನ್ನು ಗಂಭೀರವಾಗಿ ವಶಕ್ಕೆ ತೆಗೆದುಕೊಂಡರು.

ಕಾನೂನಿನ ಉತ್ತಮ ಜಾರಿ

ಕಾನೂನಿನ ಉತ್ತಮ ಜಾರಿ

4

ಮಹಿಳೆಯ ಗಂಡನನ್ನು ವಶಕ್ಕೆ ತೆಗೆದುಕೊಂಡ ನಂತರ ಕಾರು ಇದ್ದ ಪ್ರದೇಶದ ಸುತ್ತ ಕಾನೂನಿನ ಪ್ರಕಾರ ಅಲ್ಲಿನ ವಿಶಾಲ ಪ್ರದೇಶದಲ್ಲಿ ತುರ್ತು ಪರಿಸ್ಥಿತಿ ಪ್ರೋಟೋಕಾಲ್‌ ಮತ್ತು ರಕ್ಷಣಾ ಸಿಬಂಧಿಗಳನ್ನು ನೇಮಿಸಲಾಯಿತು. ಹಾಗೂ ಅಲ್ಲಿದ್ದ ಮರಗಳಿಂದ ನಿರ್ಮಿಸಿದ ಮನೆಗಳನ್ನು ಸಹ ತೆರವುಗೊಳಿಸಲಾಯಿತು.

ರಿಷಪ್‌ಶನ್‌

ರಿಷಪ್‌ಶನ್‌

5

ನಗರ ಆಡಳಿತ ಇಲಾಖೆಯು ಸಂಪೂರ್ಣ ಭಯೋತ್ಪಾದನೆ ಯೋಜನೆಯಡಿ ಸಾರಿಗೆ ವ್ಯವಸ್ಥೆಯನ್ನು ಪರಿಶೀಲಿಸಲು ಸ್ಥಳೀಯ ಸಮುದಾಯ ಕೇಂದ್ರವನ್ನು ತೆರೆಯಲಾಯಿತು.

ಶಾಲೆಗಳು ಬಂದ್‌

ಶಾಲೆಗಳು ಬಂದ್‌

6

ಕಾರ್‌ ಇದ್ದ ಪ್ರದೇಶದ ಸ್ಥಳೀಯ ಶಾಲೆಗಳನ್ನು ಬಂದ್ ಮಾಡಿ ಸ್ಥಾಳಾಂತರಿಸಲಾಯಿತು.

ಇಷ್ಟೆಲ್ಲಾ ಆದ ನಂತರ ಏನಾಯ್ತು?

ಇಷ್ಟೆಲ್ಲಾ ಆದ ನಂತರ ಏನಾಯ್ತು?

7

ಮಿಲಿಟರಿಯ EOD ತಂಡದವರು ರಕ್ಷಣೆಗೆ ಬಂದು ಪರಿಶೀಲನೆ ನಡೆಸಿದ ನಂತರ ಕಾರಿನಲ್ಲಿದ್ದದ್ದು ಬಾಂಬ್‌ ಅಲ್ಲಾ, ಅದು ಜಿಪಿಎಸ್ ಡಿವೈಸ್‌ ಎಂದು ತಿಳಿಯಿತು. ಇದನ್ನು ಯಾರೋ ಇಲ್ಲಿ ಇನ್‌ಸ್ಟಾಲ್‌ ಮಾಡಿದ್ದಾರೆ ಎಂದು ಹೇಳಿದರು.

ಹೆಂಡತಿ ಒಪ್ಪಿಕೊಂಡಳು!

ಹೆಂಡತಿ ಒಪ್ಪಿಕೊಂಡಳು!

8

ಹೆಂಡತಿ ತಾನು ಮಾಜಿ ಮಿಲಿಟರಿ ಗಂಡ ಮೇಲಿನ ಸಂಶಯದಿಂದ ಎಲ್ಲಿಗೆ ಹೋಗುತ್ತಾರೆ, ಇತರರ ಜೊತೆ ಸಂಬಂಧ ಹೊಂದಿದ್ದಾರೆಯೇ? ಎಂದು ತಿಳಿಯಲು ಜಿಪಿಎಸ್‌ ಇನ್‌ಸ್ಟಾಲ್‌ ಮಾಡಿದ್ದೆ ಎಂದು ಒಪ್ಪಿಕೊಂಡಳು. ಎಲ್ಲರೂ ಒಬ್ಬರ ಮುಖ ಒಬ್ಬರು ನೋಡುತ್ತಾ ಪೇಚಾಡತೊಡಗಿದರಂತೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Suspicious Wife Installs GPS Device On Husband’s Car Resulting In A Bomb Scare. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot