Subscribe to Gizbot

ರೂ 3,999 ಕ್ಕೆ 3G ಸ್ಮಾರ್ಟ್‌ಫೋನ್‌ ' 'ಇಂಟೆಕ್ಸ್‌ ಆಕ್ವಾ ಸೆನ್ಸ್‌ 5.1'

Written By:

ಕಳೆದ ವಾರವಷ್ಟೆ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಅತ್ಯುತ್ತಮ ಫೀಚರ್‌ಗಳುಳ್ಳ ಅತಿ ಕಡಿಮೆ ಬೆಲೆಯ ಎರಡು ಸ್ಮಾರ್ಟ್‌ಗಳು ಪಾದಾರ್ಪಣೆ ಮಾಡಿದ್ದವು. 5000mAh ಬ್ಯಾಟರಿಯ 'ಪ್ಯಾನಾಸಾನಿಕ್ ಪಿ75' ಫೋನ್ ಅಗ್ಗದ ಬೆಲೆ ರೂ.5,990 ಕ್ಕೆ ಮತ್ತು ಬಜೆಟ್‌ ಬೆಲೆ ರೂ.6,999 ಕ್ಕೆ 'ಲೆನೊವೊ ವೈಬ್‌ ಕೆ5' ಸ್ಮಾರ್ಟ್‌ಫೋನ್‌ಗಳು ಭಾರತದ ಮಾರುಕಟ್ಟೆಗೆ ಕಾಲಿರಿಸಿದ್ದವು. ಇವುಗಳ ಹಿಂದೆಯೇ ಈಗ 3G ಸ್ಮಾರ್ಟ್‌ಫೋನ್‌ 'ಇಂಟೆಕ್ಸ್‌ ಆಕ್ವಾ ಸೆನ್ಸ್‌ 5.1' ಕೇವಲ ಬೆಲೆ ರೂ. 3,999 ಕ್ಕೆ ಭಾರತದಲ್ಲಿ ಲಾಂಚ್‌ ಆಗಿದೆ.

ಉತ್ತಮ ಫೀಚರ್‌ಗಳೊಂದಿಗೆ, 3G ಇಂಟರ್ನೆಟ್‌ ಸಂಪರ್ಕ ನೀಡುವ 'ಇಂಟೆಕ್ಸ್‌ ಆಕ್ವಾ ಸೆನ್ಸ್‌5.1(Intex Aqua Sense 5.1)' ಇತರೆ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗಿಂತ ಅತ್ಯುತ್ತಮ ಫೀಚರ್‌ಗಳನ್ನು ಹೊಂದಿದೆ. ಅತಿ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸಬೇಕು, 3G ಇಂಟರ್ನೆಟ್‌ ವೇಗ ಇರಬೇಕು ಎಂದು ಬಯಸುವವರು ಹಾಗೆ ಒಮ್ಮೆ 'ಇಂಟೆಕ್ಸ್‌ ಆಕ್ವಾ ಸೆನ್ಸ್‌5.1' ಸ್ಮಾರ್ಟ್‌ಫೋನ್‌ನ ಇತರೆ ಉತ್ತಮ ಫೀಚರ್‌ಗಳೇನು ಎಂದು ಲೇಖನದ ಸ್ಲೈಡರ್‌ನಲ್ಲಿ ತಿಳಿಯಿರಿ.

5000mAh ಬ್ಯಾಟರಿಯ 'ಪ್ಯಾನಾಸಾನಿಕ್ ಪಿ75' ಫೋನ್‌ ಬೆಲೆ ರೂ 5,990

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
'ಇಂಟೆಕ್ಸ್‌ ಆಕ್ವಾ ಸೆನ್ಸ್‌5.1'

1

ಇಂಟೆಕ್ಸ್‌ ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿರುವ 'ಇಂಟೆಕ್ಸ್‌ ಆಕ್ವಾ ಸೆನ್ಸ್‌5.1' ಕೇವಲ ಬೆಲೆ ರೂ.3,999 ಆಗಿದ್ದು, ಆಕ್ವಾ ಸೆನ್ಸ್‌ ಸೀರೀಸ್‌ ಫೋನ್‌ ಆಗಿದೆ.

ಆಕ್ವಾ ಸೆನ್ಸ್‌ 5.0 ಗಿಂತ ಕಡಿಮೆ ಬೆಲೆ

2

'ಇಂಟೆಕ್ಸ್‌ ಆಕ್ವಾ ಸೆನ್ಸ್‌5.1' ಸ್ಮಾರ್ಟ್‌ಫೋನ್‌ ಇಂಟೆಕ್ಸ್‌ನ 'ಆಕ್ವಾ ಸೆನ್ಸ್‌ 5.0' ಬೆಲೆ 4,690 ಕ್ಕಿಂತ ಕಡಿಮೆ ಬೆಲೆಯದ್ದಾಗಿದೆ.

ಲಾರ್ಜ್‌ ಸ್ಕ್ರೀನ್‌

3

ಅತಿ ಕಡಿಮೆ ಬೆಲೆ ಆಗಿದ್ದರು ಸಹ 'ಇಂಟೆಕ್ಸ್‌ ಆಕ್ವಾ ಸೆನ್ಸ್‌5.1' ಸ್ಮಾರ್ಟ್‌ಫೋನ್‌ ವಿಶಾಲ ಸ್ಕ್ರೀನ್‌ (ಡಿಸ್‌ಪ್ಲೇ) ಹೊಂದಿದ್ದು, ಆಂಡ್ರಾಯ್ಡ್‌ ಲಾಲಿಪಪ್‌ ಓಎಸ್‌ ಮತ್ತು ಉತ್ತಮ ಪ್ರೊಸೆಸರ್ಸ್‌ ಹೊಂದಿದೆ.

ಡಿಸ್‌ಪ್ಲೇ , ಕ್ಯಾಮೆರಾ

4

'ಇಂಟೆಕ್ಸ್‌ ಆಕ್ವಾ ಸೆನ್ಸ್‌5.1' ಸ್ಮಾರ್ಟ್‌ಫೋನ್‌ 5.1 ಇಂಚಿನ ಡಿಸ್‌ಪ್ಲೇ, ಆಂಡ್ರಾಯ್ಡ್‌ ಲಾಲಿಪಪ್ 5.1 ಓಎಸ್‌, 2MP ಹಿಂಭಾಗ ಕ್ಯಾಮೆರಾ ಮತ್ತು ವಿಜಿಎ ಮುಂಭಾಗ ಕ್ಯಾಮೆರಾ ಹೊಂದಿದೆ.

ಶೇಖರಣಾ ಸಾಮರ್ಥ್ಯ

5

'ಇಂಟೆಕ್ಸ್‌ ಆಕ್ವಾ ಸೆನ್ಸ್‌5.1' ಸ್ಮಾರ್ಟ್‌ಫೋನ್‌ '1.2 GHz ಕ್ವಾಡ್‌ಕೋರ್‌ ಪ್ರೊಸೆಸರ್ಸ್‌, 8GB ROM, 512MB RAM ಶೇಖರಣಾ ಸಾಮರ್ಥ್ಯ ಹೊಂದಿದೆ.

ಸಂಪರ್ಕಗಳು

6

'ಇಂಟೆಕ್ಸ್‌ ಆಕ್ವಾ ಸೆನ್ಸ್‌5.1' ಸ್ಮಾರ್ಟ್‌ಫೋನ್‌ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಆಗಿದ್ದು, ಬ್ಲೂಟೂತ್, ಜಿಪಿಆರ್‌ಎಸ್‌/ಎಡಿಜಿಇ, ಜಿಪಿಎಸ್‌/ಎ-ಜಿಪಿಎಸ್, 3G, ವೈಫೈ, ವಿಸ್ತರಿಸಬಹುದಾದ ಮೆಮೊರಿ ಸ್ಲಾಟ್ ಹೊಂದಿದೆ.

ಬ್ಯಾಟರಿ

7

'ಇಂಟೆಕ್ಸ್‌ ಆಕ್ವಾ ಸೆನ್ಸ್‌5.1' ಸ್ಮಾರ್ಟ್‌ಫೋನ್‌ ಬಿಳಿ, ಷಾಂಪೇನ್‌(ಮಿರುಗುವ ಬಿಳಿ), ಬೂದು ಬಣ್ಣಗಳಲ್ಲಿ ದೊರೆಯಲಿದ್ದು, 2500 mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

5000mAh ಬ್ಯಾಟರಿಯ 'ಪ್ಯಾನಾಸಾನಿಕ್ ಪಿ75' ಫೋನ್‌ ಬೆಲೆ ರೂ 5,990

ಭಾರತದಲ್ಲಿ ಬಜೆಟ್ ಬೆಲೆ ರೂ.6,999 ಕ್ಕೆ 'ಲೆನೊವೊ ವೈಬ್ ಕೆ5' ಸ್ಮಾರ್ಟ್‌ಫೋನ್‌

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Intex Aqua Sense 5.1 smartphone launched in India priced at Rs 3,999. read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot