Subscribe to Gizbot

ಡೊಕೊಮೊ ಬ್ರಾಡ್‌ಬ್ಯಾಂಡ್‌ ಪಡೆದವರಿಗೆ ಟ್ಯಾಬ್ಲೆಟ್‌ ಉಚಿತ

Written By:

ತನ್ನ ಬ್ರಾಡ್‌ಬ್ಯಾಂಡ್‌ ಇಂಟರ್‌ನೆಟ್‌ ಸೇವೆಯನ್ನು ಉತ್ತೇಜಿಸಲು ಟಾಟಾ ಡೊಕೊಮೋ ಗ್ರಾಹಕರಿಗೆ ಹೊಸ ಆಫರ್‌ನ್ನು ಪ್ರಕಟಸಿದೆ.ಡೊಕೊಮೊ ಬ್ರಾಡ್‌ಬ್ಯಾಂಡ್‌ ಇಂಟರ್‌ನೆಟ್‌ ಸೇವೆಯನ್ನು ವಾರ್ಷಿಕವಾಗಿ ಆರಿಸಿಕೊಳ್ಳುವ ಗ್ರಾಹಕರಿಗೆ ಐದು ಸಾವಿರದಿಂದ 40ಸಾವಿರ ಮೌಲ್ಯದ ಟ್ಯಾಬ್ಲೆಟ್‌ನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ.

ಯಾವ ಪ್ಲ್ಯಾನ್‌ನವರಿಗೆ ಏನು ಕೊಡುಗೆ?

100 ಎಂಬಿಪಿಎಸ್‌ ವೇಗದ ವಾರ್ಷಿಕ ಯೋಜನೆ(ತಿಂಗಳಿಗೆ 6,666 ರೂ) ಆರಿಸಿದವರಿಗೆ 40 ಸಾವಿರ ರೂ. ಮೌಲ್ಯದ ಟ್ಯಾಬ್ಲೆಟ್‌ ಸಿಗಲಿದೆ. ತಿಂಗಳಿಗೆ 1199 ರೂ. ಅಥವಾ ಅದಕ್ಕಿಂತ ಮೇಲ್ಪಟ್ಟು ಶುಲ್ಕ ಪಾವತಿಸಿ ವಾರ್ಷಿಕ ಯೋಜನೆಯನ್ನು ತೆಗೆದುಕೊಂಡವರಿಗೆ 5 ಸಾವಿರ ರೂ. ಮೌಲ್ಯದ ಟ್ಯಾಬ್ಲೆಟ್‌ ಉಚಿತವಾಗಿ ನೀಡಲಿದ್ದೇವೆ ಎಂದು ಡೊಕೊಮೊ ತಿಳಿಸಿದೆ.

ಇದನ್ನೂ ಓದಿ: ಯಾವ ಕಂಪೆನಿಯ 3ಜಿ ಆಫರ್‌ ಹೇಗಿದೆ?

ಡೊಕೊಮೊ ಬ್ರಾಡ್‌ಬ್ಯಾಂಡ್‌ ಪಡೆದವರಿಗೆ ಟ್ಯಾಬ್ಲೆಟ್‌ ಉಚಿತ

ಆಫರ್‌ ಆರಿಸಿ ಬ್ರಾಡ್‌ಬ್ಯಾಂಡ್‌ ಸಂಪರ್ಕ‌ ಪಡೆದ ಗ್ರಾಹಕರಿಗೆ ಆರು ವಾರದೊಳಗೆ ಟ್ಯಾಬ್ಲೆಟ್‌ ವಿತರಣೆಯಾಗಲಿದೆ. ಸೆ.30ರವರೆಗೆ ಈ ಆಫರ್‌ ಜಾರಿಯಲ್ಲಿರುತ್ತದೆ ಎಂದು ಟಾಟಾ ಡೊಕೊಮೊ ತಿಳಿಸಿದೆ.

ಈ ಆಫರ್‌ನ ಸಂಪೂರ್ಣ ವಿವರ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ: ಟಾಟಾ ಡೊಕೊಮೊ ಬ್ರಾಡ್‌ಬ್ಯಾಂಡ್‌ ಆಫರ್‌

ಇದನ್ನೂ ಓದಿ: ಒಂದು ನಿಮಿಷದಲ್ಲಿ ಫೇಸ್‌ಬುಕ್‌ನಲ್ಲಿ ಎಷ್ಟು ಲೈಕ್‌ ದಾಖಲಾಗುತ್ತದೆ ಗೊತ್ತಾ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot