ಹೊಸ ಸ್ಮಾರ್ಟ್‌ಫೋನ್‌ ಕೊಳ್ಳುವ ಪ್ಲಾನ್ ಇದ್ಯಾ..? ಹಾಗಿದ್ರೆ ಜುಲೈ ಒಳಗೆ ಖರೀದಿಸಿ..!!!

Written By:

ಇಷ್ಟು ದಿನ ಕಡಿಮೆ ಬೆಲೆಗೆ ಉತ್ತಮ ಆಫರ್ ಗಳನ್ನು ಪಡೆಯುತ್ತಿದ್ದ ಟೆಲಿಕಾಂ ಗ್ರಾಹಕರಿಗೆ ಮೊಬೈಲ್ ಬಿಲ್‌ಗಳು ಮತ್ತು ಸ್ಮಾರ್ಟ್‌ಫೋನ್ ಬೆಲೆಗಳು ಜೇಬಿಗೆ ಹೊರೆಯಾಗಲಿದೆ. ಇದಕ್ಕಾಗಿಯೇ ಹೊಸದಾಗಿ ಸ್ಮಾರ್ಟ್‌ಫೋನ್ ಕೊಂಡುಕೊಳ್ಳಬೇಕು ಎಂದು ಪ್ಲಾನ್ ಮಾಡುತ್ತಿರುವವರು ಶೀಘ್ರವೇ ಅಂದರೆ ಜುಲೈ ಒಳಗೆ ಖರೀದಿಸಿದರೆ ಒಳ್ಳೆಯದು ಇಲ್ಲವಾದರೆ ಹೆಚ್ಚಿನ ಬೆಲೆಯನ್ನು ತೆರಬೇಕಾಗಲಿದೆ.

ಹೊಸ ಸ್ಮಾರ್ಟ್‌ಫೋನ್‌ ಕೊಳ್ಳುವ ಪ್ಲಾನ್ ಇದ್ಯಾ..? ಹಾಗಿದ್ರೆ ಜುಲೈ ಒಳಗೆ ಖರೀದಿಸಿ.

ಓದಿರಿ: ಶಾಕಿಂಗ್ ನ್ಯೂಸ್: ಫ್ಲಿಪ್ಕಾರ್ಟಿನಲ್ಲಿ ರೂ.799ಕ್ಕೆ ನೋಕಿಯಾ 3310 ಕ್ಲೋನ್ ಪೋನ್..!!!!

ದೇಶದಲ್ಲಿ ಜುಲೈನಿಂದ GST ಜಾರಿಯಾಗಲಿದೆ ಇದು ಜಾರಿಗೆ ಬಂದಿದರೆ ಟೆಲಿಕಾಂ ಸೇವೆಗಳು ದುಬಾರಿಯಾಗಲಿದ್ದು, ಟೆಲಿಫೋನ್ ಬಿಲ್‌ಗಳು, ಮೊಬೈಲ್ ಬಿಲ್‌ಗಳು ಸ್ಮಾರ್ಟ್‌ಫೋನ್‌ ಬೆಲೆಗಳು ಹೆಚ್ಚಾಗಲಿದೆ. ಕಾರಣ ಹೆಚ್ಚಿನ ಪ್ರಮಾಣದ ತೆರಿಗೆಯೂ ಈ ಸೇವೆಗಳ ಮೇಲೆ ಬಿಳಲಿದೆ.

100 ರೂಗಳ ರೀಚಾರ್ಜ್ ಮೇಲೆ ಮೂರು ರೂ. ತೆರಿಗೆ ಬಿಳಲಿದ್ದು, ಇದರಿಂದಾಗಿ ರೀಚಾರ್ಜ್ ಮೊತ್ತಗಳು ಹೆಚ್ಚಾಗಲಿದೆ. ಇಲ್ಲವೇ ದೊರೆಯುವ ಟಾಕ್‌ಟೈಮ್ ಅವಧಿಯೂ ಕಡಿಮೆಯಾಗಲಿದೆ. ಇದಲ್ಲದೇ ಫೋನ್‌ ಬಿಲ್ ಪಡೆಯುವವರು ಶೇ.15 ರಷ್ಟು ಹೆಚ್ಚಿನ ಮೊತ್ತವನ್ನು ಪಾವತಿ ಮಾಡಬೇಕಾಗಿರುತ್ತದೆ.

ಹೊಸ ಸ್ಮಾರ್ಟ್‌ಫೋನ್‌ ಕೊಳ್ಳುವ ಪ್ಲಾನ್ ಇದ್ಯಾ..? ಹಾಗಿದ್ರೆ ಜುಲೈ ಒಳಗೆ ಖರೀದಿಸಿ.

ಓದಿರಿ: ಶಿಯೋಮಿ ರೆಡ್ಮಿ 4ಗೆ ಸ್ಪರ್ಧೆ ನೀಡಲು ಬಂದಿದೆ ನುಬಿಯಾ ಎನ್ 1 ಲೈಟ್: ಬೆಲೆ, ವಿಶೇಷತೆಗಳು..!!

ಇದಲ್ಲದೇ ಪ್ರಮುಖ ರಾಜ್ಯಗಳಲ್ಲಿ ಸ್ಮಾರ್ಟ್‌ಫೋನಿನ ಬೆಲೆಯಲ್ಲಿ ಶೇ. 5-6 % ಹೆಚ್ಚಿಗೆಯಾಗಲಿದೆ. ಒಟ್ಟಿನಲ್ಲಿ ಸದ್ಯ ದೊರೆಯುತ್ತಿರುವ ಬೆಲೆಗಿಂತ ಹೆಚ್ಚಿನ ಬೆಲೆಯನ್ನು ಗ್ರಾಹಕರೇ ಭರಿಸಬೇಕಾಗಿದೆ. ಒಟ್ಟಿನಲ್ಲಿ ಮೊಬೈಲ್ ಫೋನ್‌ಗಳ ಒಟ್ಟು ಬೆಲೆಯಲ್ಲಿ ಶೇ.12.5 ರಿಂದ 16 ರಷ್ಟು ತೆರಿಗೆಯನ್ನೇ ಪಾವತಿ ಮಾಡಬೇಕಾಗಿದೆ.

ಈ ಹಿನ್ನಲೆಯಲ್ಲಿ ನೀವು ಸ್ಮಾರ್ಟ್ ಫೋನ್ ಕೊಳ್ಳುವ ಯೋಜನೆಯನ್ನು ರೂಪಿಸಿದ್ದರೇ ಶೀಗ್ರವೇ ಕೊಂಡುಕೊಳ್ಳುವುದು ಉತ್ತಮ ಇಲ್ಲವಾದರೆ ಮುಂದೆ ಹೆಚ್ಚಿನ ಬೆಲೆಯನ್ನು ನೀಡಿ ಮೊಬೈಲ್ ಖರೀದಿಸಬೇಕಾಗುತ್ತದೆ ಎಚ್ಚರ..!

Read more about:
English summary
Telephone bills and mobile phones prices will go up from July 1 when the new Goods and Services Tax regime kicks in, raising incidence of taxation on the telecom sector. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot