Subscribe to Gizbot

ಉಗ್ರರಿಂದ ದುರ್ಬಳಕೆ; ವಾಟ್ಸಾಪ್ ಬ್ಯಾನ್‌ಗೆ ಪುನಃ ಸಾರ್ವಜನಿಕ ಹಿತಾಸಕ್ತಿ ಅರ್ಜಿ

Written By:

'ಎಂಡ್‌ ಟು ಎಂಡ್‌ ಗೂಢಲಿಪೀಕರಣ' ಫೀಚರ್‌ ಜಾರಿಯಿಂದ ದೇಶಕ್ಕೆ ಸಮಸ್ಯೆ ಉಂಟಾಗಲಿದೆ. ಉಗ್ರರು ಸಹ ವಾಟ್ಸಾಪ್ ಬಳಸುವುದರಿಂದ ದೇಶದ ಭದ್ರತಾ ವ್ಯವಸ್ಥೆಗೆ ಮಾರಕವಾಗುವ ಸಾಧ್ಯತೆ ಇದೆ. ಆದ್ದರಿಂದ ಕೇಂದ್ರ ಸರ್ಕಾರಕ್ಕೆ ವಾಟ್ಸಾಪ್ ನಿಷೇಧ ಮಾಡಲು ನಿರ್ದೇಶನ ನೀಡಿ ಎಂದು ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಈ ಬಗ್ಗೆ ಅರ್ಜಿಯಲ್ಲಿ ಹೇಳಿದ ವಿಶೇಷ ಮಾಹಿತಿ ಏನು? ಎಂಬಿತ್ಯಾದಿ ವಿಷಯಗಳನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಎಲ್ಲರ ಸ್ಟೇಟಸ್ ಚೇಂಜ್‌ ಮಾಡೋ 12 ವಾಟ್ಸಾಪ್‌ ಸ್ಟೇಟಸ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸಾಪ್‌ ಬ್ಯಾನ್‌ಗಾಗಿ ಅರ್ಜಿ ಸಲ್ಲಿಕೆ

ವಾಟ್ಸಾಪ್‌ ಬ್ಯಾನ್‌ಗಾಗಿ ಅರ್ಜಿ ಸಲ್ಲಿಕೆ

'ಎಂಡ್‌ ಟು ಎಂಡ್‌ ಗೂಢಲಿಪೀಕರಣ' ಫೀಚರ್‌ ಜಾರಿಯಿಂದ ದೇಶಕ್ಕೆ ಸಮಸ್ಯೆ ಉಂಟಾಗಲಿದೆ. ಉಗ್ರರು ಸಹ ವಾಟ್ಸಾಪ್ ಬಳಸುವುದರಿಂದ ದೇಶದ ಭದ್ರತಾ ವ್ಯವಸ್ಥೆಗೆ ಮಾರಕವಾಗುವ ಸಾಧ್ಯತೆ ಇದೆ. ಆದ್ದರಿಂದ ಕೇಂದ್ರ ಸರ್ಕಾರಕ್ಕೆ ವಾಟ್ಸಾಪ್ ನಿಷೇಧ ಮಾಡಲು ನಿರ್ದೇಶನ ನೀಡಿ ಎಂದು ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಅರ್ಜಿ ಸಲ್ಲಿಸಿದವರು ಯಾರು?

ವಾಟ್ಸಾಪ್‌ ಬ್ಯಾನ್‌ಗಾಗಿ ಅರ್ಜಿ ಸಲ್ಲಿಕೆ

ಹರಿಯಾಣ ಮೂಲದ ಗುರುಗ್ರಾಮದ ಆರ್‌ಟಿಐ ಕಾರ್ಯಕರ್ತರಾದ 'ಸುಧೀರ್‌ ಯಾದವ್‌' ಎಂಬುವವರು ಸುಪ್ರೀಂಕೋರ್ಟ್‌ಗೆ ಮೇಲೆ ಹೇಳಿದಂತೆ ಅರ್ಜಿ ಸಲ್ಲಿಸಿದ್ದಾರೆ.

ವಾಟ್ಸಾಪ್‌

ವಾಟ್ಸಾಪ್‌ ಬ್ಯಾನ್‌ಗಾಗಿ ಅರ್ಜಿ ಸಲ್ಲಿಕೆ

ವಾಟ್ಸಾಪ್‌ ಏಪ್ರಿಲ್‌ನಿಂದ 256 ಬಿಟ್‌ನ ಪ್ರತಿ ಮೆಸೇಜ್‌ ಅನ್ನು ಗೂಢಲಿಪೀಕರಣಗೊಳಿಸಿದೆ.

ಯಾಧವ್‌ರವರು ಹೇಳಿದ್ದೇನು?

ವಾಟ್ಸಾಪ್‌ ಬ್ಯಾನ್‌ಗಾಗಿ ಅರ್ಜಿ ಸಲ್ಲಿಕೆ

ವಾಟ್ಸಾಪ್‌ ಪ್ರತಿಯೊಬ್ಬರ ವಯಕ್ತಿಕ ಮೆಸೇಜ್‌ಗಳನ್ನು ಸರ್ಕಾರಕ್ಕೂ ಸಹ ಬಹಿರಂಗ ಪಡಿಸದಂತೆ ಗೂಢಲಿಪೀಕರಣ ಮಾಡಿದೆ. ಭಾರತೀಯ ಟೆಲಿಗ್ರಾಫ್‌ ಕಾಯ್ದೆ ಮತ್ತು ಮಾಹಿತಿ ಕಾಯ್ದೆಗಳನನು ಉಲ್ಲಂಘಿಸಿರುವ ಇಂತಹ ಆಪ್‌ಗಳನ್ನು ನಿಷೇಧ ಮಾಡಬೇಕು ಎಂದು ವಿವರಿಸಿದ್ದಾರೆ.

ಉಗ್ರರು ಮತ್ತು ಅಪರಾಧಿಗಳು

ವಾಟ್ಸಾಪ್‌ ಬ್ಯಾನ್‌ಗಾಗಿ ಅರ್ಜಿ ಸಲ್ಲಿಕೆ

ವಾಟ್ಸಾಪ್‌ ನಿಷೇಧ ಮಾಡಬೇಕು ಎನ್ನುವ ಹಿನ್ನೆಲೆಯಲ್ಲಿ, '"ಉಗ್ರರು ಮತ್ತು ಅಪರಾಧಿಗಳು ಸುರಕ್ಷಿತವಾಗಿ ವಾಟ್ಸಾಪ್‌ನಲ್ಲಿ ಚಾಟ್‌ ಮಾಡಬಹುದು, ದೇಶ ಹಾನಿ ಯೋಜನೆಯನ್ನು ಅವರು ಕೈಗೊಳ್ಳಬಹುದು ಇಂತಹ ಮಾಹಿತಿಗಳನ್ನು ಕಲೆಹಾಕಲು ಸಹ ಅವಕಾಶ ವಾಟ್ಸಾಪ್‌ನಲ್ಲಿ ಸಾಧ್ಯವಿಲ್ಲ" ಎಂದು ಯಾಧವ್‌'ರವರು ಹೇಳಿದ್ದಾರೆ.

ಡಿಕೋಡ್‌ ಮಾಡಲು ಸೂಪರ್‌ ಕಂಪ್ಯೂಟರ್‌ಗು ಸಾಧ್ಯವಿಲ್ಲ

ವಾಟ್ಸಾಪ್‌ ಬ್ಯಾನ್‌ಗಾಗಿ ಅರ್ಜಿ ಸಲ್ಲಿಕೆ

ಅರ್ಜಿಯಲ್ಲಿ, ' ವಾಟ್ಸಾಪ್‌ನಲ್ಲಿನ ಮೆಸೇಜ್ ಡಿಕೋಡ್‌ ಮಾಡಲು ಭಾರಿ ದೊಡ್ಡ ಪ್ರಮಾಣದ 115, 792, 089, 237, 316, 195, 423, 570, 985, 008, 687, 907, 853, 269, 984, 665, 640, 564, 039, 457, 584, 007, 913, 129, 639, 935 ಕೀ ಸಂಯೋಜನೆಗಳನ್ನು ಡಿಕೋಡ್‌ ಮಾಡಬೇಕಾಗುತ್ತದೆ. ಆದರೆ ಈ ಕೆಲಸ ಸೂಪರ್‌ ಕಂಪ್ಯೂಟರ್‌ನಿಂದಲೂ ಸಹ ಸಾಧ್ಯವಿಲ್ಲ' ಎನ್ನಲಾಗಿದೆ. ಅಲ್ಲದೇ 256 ಬಿಟ್‌ನ ಸಿಂಗಲ್‌ ಗೂಢಲಿಪೀಕರಣ ಮೆಸೇಜ್‌ ಅನ್ನು ಡಿಕೋಡ್‌ ಮಾಡಲು ನೂರಾರು ವರ್ಷಗಳು ಬೇಕು ಎಂದು ವಿವರಿಸಿದ್ದಾರೆ.

ಇತರೆ ಆಪ್‌ಗಳು

ವಾಟ್ಸಾಪ್‌ ಬ್ಯಾನ್‌ಗಾಗಿ ಅರ್ಜಿ ಸಲ್ಲಿಕೆ

ಹೈಕ್‌, ಸೆಕ್ಯೂರ್‌ ಚಾಟ್‌, ವೈಬರ್‌ ಸೇರಿದಂತೆ ಇತರೆ ಹಲವು ಆಪ್‌ಗಳು ಸಹ ಉನ್ನತ ಮಟ್ಟದ ಗೂಢಲಿಪೀಕರಣ ಫೀಚರ್ ಬಳಸುತ್ತಿವೆ. ಇದರಿಂದ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಉಂಟಾಗುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಸುಪ್ರೀಂಕೋರ್ಟ್‌

ವಾಟ್ಸಾಪ್‌ ಬ್ಯಾನ್‌ಗಾಗಿ ಅರ್ಜಿ ಸಲ್ಲಿಕೆ

ಸುಪ್ರೀಂಕೋರ್ಟ್ ಯಾಧವ್'ರವರ ಅರ್ಜಿ ಹಿನ್ನೆಲೆಯಲ್ಲಿ ಜೂನ್‌ 29 ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆಗೆ ಬರಲಿದೆ.

ಸುಧೀರ್ ಯಾಧವ್

ವಾಟ್ಸಾಪ್‌ ಬ್ಯಾನ್‌ಗಾಗಿ ಅರ್ಜಿ ಸಲ್ಲಿಕೆ

ಸುಧೀರ್‌ ಯಾಧವ್‌'ರವರು "ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೂ ಅರ್ಜಿಸಲ್ಲಿಸುವ ಮುನ್ನ ಪತ್ರ ಬರೆದಿದ್ದೆ, ಆದರೆ ಯಾವುದೇ ಪ್ರತಿಕ್ರಿಯೆ ಸ್ವೀಕರಿಸಿಲ್ಲ ಎಂದು ಹೇಳಿದ್ದಾರೆ.

ವಾಟ್ಸಾಪ್‌

ವಾಟ್ಸಾಪ್‌ ಬ್ಯಾನ್‌ಗಾಗಿ ಅರ್ಜಿ ಸಲ್ಲಿಕೆ

ಕ್ಯಾಲಿಪೋರ್ನಿಯಾ ಮೂಲದ ವಾಟ್ಸಾಪ್‌ ಅನ್ನು ಸಾಮಾಜಿಕ ತಾಣ ಫೇಸ್‌ಬುಕ್‌ 2014 ರ ಫ್ರೆಬ್ರವರಿಯಲ್ಲಿ ಖರೀದಿಸಿತ್ತು. 2016 ರ ಏಪ್ರಿಲ್‌ 5 ರಿಂದ ವಾಟ್ಸಾಪ್‌ ಎಂಡ್‌ ಟು ಎಂಡ್‌ ಗೂಢಲಿಪೀಕರಣ ಫೀಚರ್‌ ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
'Terrorists can misuse WhatsApp': SC to hear petition seeking ban. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot