ಸಂವಹನ ಸುರಕ್ಷತೆಗೆ "ಎಂಡ್‌-ಟು-ಎಂಡ್‌ ಗೂಢಲಿಪೀಕರಣ" ಜಾರಿ ಮಾಡಿದ ವಾಟ್ಸಾಪ್‌

By Suneel
|

ತಂತ್ರಜ್ಞಾನ ಮತ್ತು ಸಾಫ್ಟ್‌ವೇರ್‌ ಕ್ಷೇತ್ರ ಬೆಳೆದಂತೆಲ್ಲಾ ಇಂದು ಸ್ಮಾರ್ಟ್‌ಫೋನ್‌, ಐಫೋನ್‌, ಕಂಪ್ಯೂಟರ್‌ ಬಳಸುವವರು ಇಂದು ಪ್ರತಿಯೊಂದು ಆನ್‌ಲೈನ್‌ ಚಟುವಟಿಕೆಯಲ್ಲೂ ಸಹ ಎಚ್ಚರ ವಹಿಸಬೇಕಾಗಿದೆ. ಕಾರಣ ಸೈಬರ್‌ ಅಪರಾಧಿಗಳು ಮಾತ್ರವಲ್ಲದೇ, ಹ್ಯಾಕರ್‌ಗಳು, ಸರ್ಕಾರಿ ಹ್ಯಾಕರ್‌ಗಳು ಸಹ ಸಂವಹನ ಅಪ್ಲಿಕೇಶನ್‌ಗಳ ಮೇಲೆ ಡೇಟಾ ಕದ್ದಾಲಿಸುವ ಪ್ರಕ್ರಿಯೆ ನೆಡೆಯುತ್ತಿತ್ತು. ಆದರೆ ಈಗ ವಾಟ್ಸಾಪ್ ಇದಕ್ಕೆಲ್ಲಾ ನಾಂದಿಹಾಡಿದೆ. ಹೌದು. ವಾಟ್ಸಾಪ್‌ "ಎಂಡ್‌-ಟು-ಎಂಡ್‌ ಗೂಢಲಿಪೀಕರಣ" ವ್ಯವಸ್ಥೆ ಜಾರಿಗೆ ತಂದಿದೆ. ಅಂದಹಾಗೆ ನೀವು ವಾಟ್ಸಾಪ್‌ ಬಳಸುತ್ತಿದ್ದರೆ ನಿಮ್ಮ ಸಂವಹನ ಡೇಟಾವನ್ನು ಸರ್ಕಾರಿ ಹ್ಯಾಕರ್‌ಗಳಿಂದಲೂ ಸುರಕ್ಷೆಗೊಳಿಸುವ "ಎಂಡ್‌-ಟು-ಎಂಡ್‌ ಗೂಢಲಿಪೀಕರಣ"ದ ಬಗ್ಗೆ ತಿಳಿದುಕೊಳ್ಳಿ.

1

1

ಪ್ರಪಂಚದ ವಿಶಾಲ ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್ ಅಪ್ಲಿಕೇಶನ್‌ ವಾಟ್ಸಾಪ್‌ ಈಗ ಎಂಡ್‌-ಟು-ಎಂಡ್‌ ಗೂಢಲಿಪೀಕರಣವನ್ನು ಜಾರಿ ಮಾಡಿದೆ.

2

2

ಪ್ರಪಂಚದಾದ್ಯಂತ 1 ಬಿಲಿಯನ್‌ಗಿಂತ ಅಧಿಕ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್‌ ತನ್ನ ಆಪ್‌ ಸೇವೆ ನೀಡಿರುವ ಐಫೋನ್‌, ಆಂಡ್ರಾಯ್ಡ್‌, ವಿಂಡೋಸ್‌, ಬ್ಲಾಕ್‌ಬೆರ್ರಿ ಮತ್ತು ನೋಕಿಯಾ ವೇದಿಕೆಗಳಲ್ಲಿ ಎಂಡ್‌-ಟು-ಎಂಡ್ ಗೂಢಲಿಫೀಕರಣ ಜಾರಿಗೊಳಿಸಿದೆ.

3

3

ವಾಟ್ಸಾಪ್‌ನ ಇತ್ತೀಚಿನ ವರ್ಸನ್ ಬಳಸುವ ಬಳಕೆದಾರರ ಪ್ರತಿಯೊಂದು ಮೆಸೇಜ್, ಫೋಟೋ, ವೀಡಿಯೋ, ಫೈಲ್‌, ವಾಟ್ಸಾಪ್‌ ಕರೆ ಎಲ್ಲವೂ ಸಹ ಸುರಕ್ಷಿತವಾಗಿರುತ್ತವೆ. ಅಂದರೆ ಸೆಂಡರ್ ಮತ್ತು ಸ್ವೀಕೃತದಾರರು ಬಿಟ್ಟರೆ ವಾಟ್ಸಾಪ್‌ ಅಪ್ಲಿಕೇಶನ್‌ನಲ್ಲಿ ನಡೆಯುವ ಯಾವುದೇ ಸಂವಹನ ಪ್ರಕ್ರಿಯೆ ಯಾರಿಗೂ ಸಹ ತಿಳಿಯುವುದಿಲ್ಲಾ. ವಾಟ್ಸಾಪ್‌ ಉದ್ಯೋಗಿಗಳಿಗೂ ಸಹ ತಿಳಿಯುವುದಿಲ್ಲ.

4

4

ಅಂದಹಾಗೆ 'ಎಂಡ್‌-ಟು-ಎಂಡ್‌ ಗೂಢಲಿಪೀಕರಣ' ಎಂಬುದು ವಾಟ್ಸಾಪ್‌ ಸಂವಹನದ ಸುರಕ್ಷತಾ ಫೀಚರ್. ಈ ಮೊದಲು ವಾಟ್ಸಾಪ್‌ ಸಂವಹನ ಕದ್ದು ಆಲಿಸುವವರಾದ, ಸೈಬರ್‌ ಅಪರಾಧಿಗಳು, ಹ್ಯಾಕರ್‌ಗಳು, ಟೆಲಿಕಾಂಗಳು, ಇಂಟರ್ನೆಟ್‌ ಸೇವೆ ನೀಡುವವರು ಮತ್ತು ಸರ್ಕಾರಿ ಒಡೆತನದ ಹ್ಯಾಕರ್‌ಗಳು ವಾಟ್ಸಾಪ್‌ನಲ್ಲಿನ ಸಂವಹನವನ್ನು ಕದ್ದು ಆಲಿಸುವ ಸಂಭವ ಹೆಚ್ಚಿತ್ತು. ಆದ್ದರಿಂದ ವಾಟ್ಸಾಪ್‌ ಬಳಕೆದಾರರ ಸಂವಹನಕ್ಕೆ ಸುರಕ್ಷೆ ನೀಡುವ ದೃಷ್ಟಿಯಿಂದ, ವಾಟ್ಸಾಪ್‌ ಉದ್ಯೋಗಿಗಳು ಸಹ ಅಪ್ಲಿಕೇಶನ್‌ ಬಳಸುವವರ ಸಂವಹನವನ್ನು ಆಕ್ಸೆಸ್‌ ಮಾಡಲಾಗದಂತೆ ವಾಟ್ಸಾಪ್‌ ಆಪ್‌ನಲ್ಲಿ ಎಂಡ್‌-ಟು-ಎಂಡ್‌ ಗೂಢಲಿಪೀಕರಣ ಫೀಚರ್‌ ಜಾರಿಗೆ ತರಲಾಗಿದೆ.

5

5

ವಾಟ್ಸಾಪ್‌ ಅಪ್ಲಿಕೇಶನ್‌ನಲ್ಲಿ 'ಎಂಡ್‌-ಟು-ಎಂಡ್‌ ಗೂಢಲಿಪೀಕರಣ' ವ್ಯವಸ್ಥೆ ಜಾರಿಗಾಗಿ ಎಲ್ಲಾ ಮೊಬೈಲ್‌ ಡಿವೈಸ್‌ ವೇದಿಕೆಗಳಲ್ಲೂ ಈ ವ್ಯವಸ್ಥೆ ಜಾರಿಗಾಗಿ 2 ವರ್ಷಗಳ ಕಾಲ ಕೆಲಸ ನಿರ್ವಹಿಸಿದೆ. ಪ್ರಸ್ತುತದಲ್ಲಿ ಹೊಸ ವರ್ಸನ್‌ ಆಪ್‌ ಬಳಸುವವರು ಚಿತ್ರದಲ್ಲಿರುವಂತೆ ನೋಟಿಫಿಕೇಶನ್‌ ಪಡೆಯುತ್ತೀರಿ.

Best Mobiles in India

English summary
WhatsApp adds end-to-end encryption: What is it and what does it mean for you? Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X