ಇಂಟರ್ನೆಟ್ ಬಳಸದೆಯೇ ಆಡಬಹುದಾದ ಡೈನೋಸರ್ ಆಟ ಏನಿದು?

By Shwetha
|

ಇಂಟರ್ನೆಟ್‌ಗೆ ಸಂಪರ್ಕಗೊಳ್ಳುವ ನಿಮ್ಮ ಪ್ರಯತ್ನ ವಿಫಲವಾದಾಗ ಗೂಗಲ್ ಕ್ರೋಮ್‌ನಲ್ಲಿ ಉದ್ಭಗೊಳ್ಳುವ 8 ಬಿಟ್ ಉಳ್ಳ ಡೈನೋಸಾರ್ ಚಿತ್ರವನ್ನು ನೀವೆಲ್ಲಾ ನೋಡಿರಬಹುದು. ಆದರೆ ಇದರಳಗೊಂದು ಆನ್‌ಲೈನ್ ಆಟವಿದೆ ಎಂಬುದನ್ನು ನೀವು ಬಲ್ಲಿರಾ? ಈ ಆಟವನ್ನು ಆಫ್‌ಲೈನ್‌ನಲ್ಲಿ ಕೂಡ ನಿಮಗೆ ಆಡಬಹುದು.

ಓದಿರಿ: ಈ ವಾಚ್‌ಗಳು ಬರಿಯ ಸಮಯ ನೋಡಲು ಮಾತ್ರವಲ್ಲ!!!

ಇಂಟರ್ನೆಟ್ ಬಳಸದೆಯೇ ಆಡಬಹುದಾದ ಡೈನೋಸರ್ ಆಟ ಏನಿದು?

ವೈಫೈಯನ್ನು ಆಫ್ ಮಾಡಿ ಕ್ರೋಮ್ ಬಳಸಿ ವೆಬ್‌ಸೈಟ್ ಪ್ರವೇಶಿಸಿದಲ್ಲಿ, ಇಂಟರ್ನೆಟ್‌ಗೆ ಸಂಪರ್ಕವನ್ನು ಹೊಂದುವುದು ಸಾಧ್ಯವಿಲ್ಲ ಎಂಬುದನ್ನು ಸಾರುವ ಸಣ್ಣ ಡೈನೋಸರ್ ಅನ್ನು ನೀವು ಕಾಣುತ್ತೀರಿ. ಸ್ಪೇಸ್‌ಬಾರ್ ಅನ್ನು ನೀವು ಒತ್ತಿದಾಗ ಸಣ್ಣ ಡೈನೋಸಾರ್ ತನ್ನ ಜೀವ ಉಳಿಸಿಕೊಳ್ಳಲು ಪರದೆಯಾದ್ಯಂತ ಓಡುವುದನ್ನು ಕಾಣಬಹುದು. ಇದನ್ನು ಹಾರಿಸಲು ಸ್ಪೇಸ್‌ಬಾರ್ ಅನ್ನು ಬಳಸಿ ಹೆಚ್ಚುವರಿ ಸ್ಕೋರ್ ಮಾಡಬಹುದು. ಈ ಸರಳ ಗೇಮ್ ನಿಮಗೆ ಅತ್ಯುತ್ತಮ ಮನರಂಜನೆ ನೀಡುವುದಂತೂ ಖಂಡಿತ.

ಓದಿರಿ: ನಮ್ಮ ಊರು ಬೆಂಗಳೂರಿಗೆ ವಿಶ್ವದಲ್ಲೇ ಮಾನ್ಯತೆ

ಇಂಟರ್ನೆಟ್ ಬಳಸದೆಯೇ ಆಡಬಹುದಾದ ಡೈನೋಸರ್ ಆಟ ಏನಿದು?

ಇನ್ನು ಈ ಆಟ ಮೊಬೈಲ್‌ನಲ್ಲೂ ಕಾರ್ಯನಿರ್ವಹಿಸುತ್ತದೆ ನೀವು ಅದಕ್ಕಾಗಿ ಫೋನ್ ಅನ್ನು ಏರ್‌ಪ್ಲೇನ್ ಮೋಡ್‌ನಲ್ಲಿ ಇರಿಸಬೇಕಾಗುತ್ತದೆ, ನಂತರ ಕ್ರೋಮ್ ಅಪ್ಲಿಕೇಶನ್ ಅನ್ನು ತೆರೆಯಿರಿ ಇಲ್ಲಿ ಡೈನೋಸಾರ್ ಅನ್ನು ನಿಮಗೆ ಕಾಣಬಹುದು ಮತ್ತು ಸ್ಪೇಸ್‌ಬಾರ್‌ಗಾಗಿ ನಿಮ್ಮ ಮೊಬೈಲ್ ಪರದೆಯನ್ನು ಸ್ಪರ್ಶಿಸಿ ಆಟವಾಡಿದರೆ ಆಯಿತು.

Best Mobiles in India

English summary
You might be familiar with the 8-bit dinosaur that pops up in Google Chrome when you try and access a website while not connected to the internet - but that little dinosaur hides an amazing secret game which you can play offline.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X