Subscribe to Gizbot

ಈ ವಾಚ್‌ಗಳು ಬರಿಯ ಸಮಯ ನೋಡಲು ಮಾತ್ರವಲ್ಲ!!!

Written By:

2015 ಕ್ಕಾಗಿ ಉತ್ತಮ ವಾಚ್‌ಗಳನ್ನು ಆಯ್ಕೆಮಾಡುವುದು ಎಂದರೆ ಕಷ್ಟಕರ ಕೆಲಸವಾಗಿದೆ. ಅಷ್ಟೊಂದು ಸಮಗ್ರ ವಾಚ್ ಸಂಗ್ರಹಣೆಗಳು ಅಂಗಡಿಗಳಿಗೆ ಅಡಿ ಇಡುತ್ತಿದ್ದು ಇವುಗಳಲ್ಲಿ ಉತ್ತಮವಾದುದನ್ನು ಆಯ್ಕೆಮಾಡುವುದೇ ತಲೆನೋವಿನ ಕೆಲಸವಾಗಿದೆ. ಅಸೂಸ್, ಎಲ್‌ಜಿ, ಮೋಟೋರೋಲಾ, ಸ್ಯಾಮ್‌ಸಂಗ್ ಮತ್ತು ಸೋನಿ ಅತ್ಯುತ್ತಮ ವಾಚ್ ಕಲೆಕ್ಷನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

ಓದಿರಿ: ವಜ್ರಕ್ಕಿಂತಲೂ ಕಠಿಣವಾದುದು ಆಪಲ್ ವಾಚ್‌ನಲ್ಲಿ ಏನಿದೆ?

ಹೆಚ್ಚು ಸ್ಟೈಲಿಶ್ ಅಂತೆಯೇ ನಿಮ್ಮ ಮನಸ್ಸಿಗೆ ಆಕರ್ಷಕ ಎಂದೆನಿಸುವ ಅದ್ಭುತ ಫೀಚರ್‌ಗಳನ್ನು ಹೊಂದಿರುವ ಸ್ಮಾರ್ಟ್‌ವಾಚ್‌ಗಳತ್ತ ನೀವು ನೋಟ ಹರಿಸುತ್ತಿದ್ದೀರಿ ಎಂದಾದಲ್ಲಿ ಇಲ್ಲದೆ ಸೂಪರ್ ವಾಚ್ ಸಂಗ್ರಹ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅತ್ಯುತ್ತಮ ವಾಚ್

ಸೋನಿ ಸ್ಮಾರ್ಟ್‌ವಾಚ್ 3

ಬಿಲ್ಟ್ ಇನ್ ಜಿಪಿಎಸ್ ಅನ್ನು ಒಳಗೊಂಡಿರುವ ಈ ವಾಚ್ ನಿಮ್ಮ ವಾರದ ಜಾಗ್ ಅನ್ನು ಪರಿಪೂರ್ಣಗೊಳಿಸುತ್ತದೆ. ಇತ್ತೀಚಿನ ಆಂಡ್ರಾಯ್ಡ್ ನವೀಕರಣವನ್ನು ಈ ವಾಚ್ ಹೊಂದಿದ್ದು ವೈರ್‌ಲೆಸ್ ಹೆಡ್‌ಫೋನ್‌ಗಳಿಗೆ ಇದನ್ನು ಪೇರ್ ಮಾಡಬಹುದಾಗಿದೆ.

ಐಓಎಸ್‌ಗೆ ಹೇಳಿಮಾಡಿಸಿದ್ದು

ಆಪಲ್ ವಾಚ್

ತಂತ್ರಜ್ಞಾನದೊಂದಿಗೆ ಆಧುನೀಕತೆ ಮೇಳೈಸಿದರೆ ಹೇಗಿರುತ್ತದೆ ಎಂಬುದಕ್ಕೆ ತಕ್ಕ ಉದಾಹರಣೆ ಆಪಲ್ ವಾಚ್ ಆಗಿದೆ. ಇದರ ರಚನಾ ಗುಣಮಟ್ಟ ಅದ್ಭುತವಾಗಿದೆ.

ಬಜೆಟ್‌ಗೆ ಸೂಕ್ತ

ಮೋಟೋ 360

ಕಳೆದ ವರ್ಷ ಲಾಂಚ್ ಆಗಿರುವ ಈ ವಾಚ್ ಬಜೆಟ್‌ಗೆ ಸೂಕ್ತ ಆಯ್ಕೆ ಎಂದೆನಿಸಿದೆ. ಬ್ಯಾಟರಿ ಲೈಫ್ ಅಷ್ಟೊಂದು ಪರಿಣಾಮಕಾರಿ ಅಲ್ಲದೇ ಇದ್ದರೂ ಪ್ರಮಾಣಿತ ಸ್ಕ್ರೀನ್ ಕೂಲಿಂಗ್ ವೈಶಿಷ್ಟ್ಯ ಇದರಲ್ಲಿದೆ. ಅದ್ಭುತ ಅಧಿಸೂಚನೆಗಳು ಮತ್ತು ಗುಣಮಟ್ಟದ ಅಪ್ಲಿಕೇಶನ್ ಇದರ ಧನಾತ್ಮಕ ಅಂಶವಾಗಿದೆ.

ಟೆಕ್ಕಿಗಳಿಗೆ ಹೇಳಿ ಮಾಡಿಸಿದ್ದು

ಪೆಬ್ಬಲ್ ವಾಚ್

ಆಧುನಿಕ ಸ್ಮಾರ್ಟ್‌ವಾಚ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಪೆಬ್ಬಲ್ ವಾಚ್, ತನ್ನ ಲಾಂಚ್‌ನ ನಂತರವೂ ಎರಡೂ ವರ್ಷಗಳವರೆಗೂ ದಾಖಲೆಯನ್ನು ಬರೆಯುತ್ತಿದೆ.

ಬ್ಯಾಟರಿ ದೀರ್ಘತೆಗೆ

ಪೆಬ್ಬಲ್ ಟೈಮ್ ಸ್ಟೀಲ್

ಪೆಬ್ಬಲ್ ವಾಚ್ ಸ್ಟೀಲ್ ಆವೃತ್ತಿಯಲ್ಲಿ ಬಂದಿದ್ದು ಪ್ಲಾಸ್ಟಿಕ್‌ಗಿಂತಲೂ ಇದು ದಪ್ಪನಾಗಿದೆ. ಇದು ದೊಡ್ಡ ಬ್ಯಾಟರಿಯನ್ನು ಒಳಗೊಂಡಿದೆ.

ಕ್ರೀಡೆಗಳಿಗಾಗಿ ಸೂಪರ್ ವಾಚ್

ಗಾರ್ಮಿನ್

ಫಿಟ್‌ನೆಸ್ ಬಯಸುವ ವ್ಯಕ್ತಿಗಳಿಗಾಗಿ ಈ ವಾಚ್ ಹೇಳಿಮಾಡಿಸಿದ್ದಾಗಿದ್ದು ಜರ್ಮನ್‌ನ ಪ್ರಥಮ ಸ್ಮಾರ್ಟ್‌ವಾಚ್ ಇದಾಗಿದೆ. ಪೂರ್ಣ ಅಧಿಸೂಚನೆಗಳನ್ನು ನಿಮ್ಮ ಮಣಿಗಂಟಿನಲ್ಲೇ ಪಡೆದುಕೊಳ್ಳಬಹುದಾಗಿದ್ದು ಕಡಿಮೆ ಬೆಲೆಯಲ್ಲಿ ಈ ಫಿಟ್‌ನೆಸ್ ಡಿವೈಸ್ ನಿಮ್ಮ ಬಳಿಗೆ ಬರುತ್ತಿದೆ.

ಸ್ಟೈಲ್‌ಗಾಗಿ

ಎಲ್‌ಜಿ ವಾಚ್

ಸಿಲ್ವರ್ ಅಥವಾ ಗೋಲ್ಡ್ ಮಾಡೆಲ್ ಅನ್ನೇ ನೀವು ಆರಿಸಿ ಎಲ್‌ಜಿ ವಾಚ್ ನಿಮ್ಮ ಸ್ಟೈಲ್‌ಗೆ ಉತ್ತಮ ಗುರುತಾಗಿದೆ. ಹೆಚ್ಚುವರಿ ಬಟನ್‌ಗಳು ಮತ್ತು ತನ್ನ ನೋಟದಿಂದಾಗಿ ಫ್ಯಾಷನ್ ಪ್ರಿಯರ ಮನಗೆಲ್ಲುವುದು ಖಂಡಿತ.

ಡಿಸ್‌ಪ್ಲೇಗಾಗಿ

ಸ್ಯಾಮ್‌ಸಂಗ್ ಗೇರ್ ಎಸ್

2 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿರುವ ಗೇರ್ ಎಸ್ ಅತ್ಯುತ್ತಮ ವಾಚ್ ಆಗಿದೆ ಎಂಬುದರಲ್ಲಿ ಯಾವುದೇ ಸಂದೇಹವೇ ಇಲ್ಲ. ಸ್ಯಾಮ್‌ಸಂಗ್‌ನದ್ದೇ ಓಎಸ್ ಆದ ಟೈಜನ್ ಅನ್ನು ಇದು ಚಾಲನೆ ಮಾಡುತ್ತಿದ್ದು, 1,000 ದಷ್ಟು ಅಪ್ಲಿಕೇಶನ್‌ಗಳು ಇದರಲ್ಲಿ ಲಭ್ಯವಿದೆ.

ಸೌಂದರ್ಯತೆಗಾಗಿ

ಗೆಸ್

ಫ್ಯಾಷನ್ ಪ್ರಿಯರ ಮನಗೆಲ್ಲುವ ಗೆಸ್ ವಾಚ್ ಬ್ರ್ಯಾಂಡ್ ವಾಚ್ ಎಂಬ ಹಣೆಪಟ್ಟಿಯನ್ನಿಟ್ಟಕೊಂಡೇ ಗ್ರಾಹಕರನ್ನು ಸಮೀಪಿಸುತ್ತಿದೆ. ಓಲೆಡ್ ಸ್ಕ್ರೀನ್ ಅನ್ನು ಇದು ಒಳಗೊಂಡಿದ್ದು, ಐಓಎಸ್ ಮತ್ತು ಆಂಡ್ರಾಯ್ಡ್ ಡಿವೈಸ್‌ಗಳಿಗೆ ಬ್ಲ್ಯೂಟೂತ್ ಮೂಲಕ ಸಂಪರ್ಕಪಡಿಸುತ್ತದೆ.

ಸಂಪ್ರದಾಯವಾದಿಗಳಿಗಾಗಿ

ಮೋಂಟ್‌ಬ್ಲಾಂಕ್

ಈ ವಾಚ್ ಬ್ಲ್ಯೂಟೂತ್ ಮೂಲಕ ಸಂಪರ್ಕವನ್ನು ಪಡೆದುಕೊಳ್ಳುತ್ತಿದ್ದು ಕರೆ, ಪಠ್ಯ ಮತ್ತು ಸಂದೇಶಗಳನ್ನು ಡಿಸ್‌ಪ್ಲೇನಲ್ಲೇ ನಿಮಗೆ ಪಡೆದುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Choosing the best smartwatch in 2015 is a tough task given the plethora of new smartwatches hitting the shops; not to mention the top smartwatches that landed last year from the likes of Asus, LG, Motorola, Samsung and Sony.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot