Home
ಸುದ್ದಿಜಾಲ

ಪದವೀಧರನಿಂದ ಆಕ್ಸಿಜನ್‌ ಉತ್ಪಾದಿಸುವ ಕೃತಕ ಸಿಲ್ಕ್‌ ಎಲೆ ಆವಿಷ್ಕಾರ

By Suneel

ಒಮ್ಮೆ ಯೋಚಿಸಿ ಆಕ್ಸಿಜನ್‌ ಮರಗಿಡಗಳಿರುವ ಭೂಮಿಯಲ್ಲಿಯೇ ಸರಿಯಾಗಿ ದೊರೆಯುವುದು ಕಷ್ಟಕರವಾಗುತ್ತಿದೆ. ಇದಕ್ಕೆ ಕಾರಣ ವಾಯುಮಾಲಿನ್ಯವಿರಬಹುದು. ಇಲ್ಲಿಯೇ ಹೀಗಾದರೆ ಇನ್ನು ಬಾಹ್ಯಾಕಾಶದಲ್ಲಿ ಹೇಗೆ ತಾನೆ ಉಸಿರಾಡಲು ಆಕ್ಸಿಜನ್‌ ದೊರೆಯುತ್ತದೆ ಹೇಳಿ ? ಈ ಸಮಸ್ಯೆಯನ್ನೇ ಮುಂದಿಟ್ಟುಕೊಂಡು ಪದವಿಧರನೊಬ್ಬ ಆಕ್ಸಿಜನ್ ಉತ್ಪಾದಿಸುವ ಕೃತಕ ಸಿಲ್ಕ್‌ ಎಲೆಯನ್ನು ಆವಿಷ್ಕರಿಸಿದ್ದಾನೆ. ಈ ಎಲೆಯೂ ಸ್ಪೇಸ್‌ ಮಿಷನ್‌ನಲ್ಲಿ ಬೇಕಾಗುವ ಆಕ್ಸಿಜನ್‌ ನೀಡುತ್ತದೆ. ಭೂಮಿಯಲ್ಲೂ ಉಪಯೋಗಕ್ಕೆ ಬರಲಿರುವ ಈ ಕೃತಕ ಸಿಲ್ಕ್‌ ಎಲೆಯೂ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ವಿಶೇಷ ಮಾಹಿತಿಯನ್ನು ಗಿಜ್‌ಬಾಟ್‌ನ ಇಂದಿನ ಲೇಖನದಿಂದ ತಿಳಿಯಿರಿ.

ಓದಿರಿ: ಸ್ಪೇಸ್‌ನಲ್ಲಿ ನಾಸಾದ ಹೂವಿನ ಕೃಷಿ

 ಆಕ್ಸಿಜನ್‌ ಉತ್ಪತ್ತಿ ಮಾಡುವ ಸಿಲ್ಕ್‌ ಕೃತಕ ಎಲೆ

ಆಕ್ಸಿಜನ್‌ ಉತ್ಪತ್ತಿ ಮಾಡುವ ಸಿಲ್ಕ್‌ ಕೃತಕ ಎಲೆ

ಸ್ಪೇಸ್‌ ಮಿಷನ್‌ ಸಂಪೂರ್ಣವಾಗಿ ಆಕ್ಸಿಜನ್‌ ಟ್ಯಾಂಕ್‌ ಆಧಾರವನ್ನು ಪಡೆದಿದೆ. ಅಲ್ಲದೇ ಸ್ಪೇಸ್‌ನಲ್ಲಿ ಕಾರ್ಯನಿರ್ವಹಿಸುವ ಮಾನವ ಸಂಪನ್ಮೂಲಕ್ಕೂ ಸಹ ಆಕ್ಸಿಜನ್ ಅಗತ್ಯ. ಆದರೆ ಬಾಹ್ಯಾಕಾಶಕ್ಕೆ ಹೋಗುತ್ತಿದ್ದಂತೆ ಕಾರ್ಬನ್‌ ಡೈ ಆಕ್ಸೈಡ್‌ ಅನ್ನು ಆಕ್ಸಿಜನ್‌ ಆಗಿ ಪರಿವರ್ತಿಸುವ ಒಂದು ಉತ್ತಮ ಕೆಲಸವು ಅಲ್ಲಿ ಉಸಿರಾಟಕ್ಕಾಗಿ ನೆಡೆಯ ಬೇಕು. ಈ ಹಿನ್ನೆಲೆಯಲ್ಲಿ ಕೃತಕ ಸಿಲ್ಕ್‌ ಎಲೆ ಆಕ್ಸಿಜನ್‌ ಉತ್ಪಾದಿಸುವ ರೀತಿಯಲ್ಲಿ ಟೆಕ್ನಾಲಜಿ ಒಂದು ಅಭಿವೃದ್ದಿಗೊಂಡಿದೆ.

ಪದವೀಧರನಿಂದ ಸಿಲ್ಕ್‌ ಎಲೆ ಆವಿಷ್ಕಾರ

ಪದವೀಧರನಿಂದ ಸಿಲ್ಕ್‌ ಎಲೆ ಆವಿಷ್ಕಾರ

ರಾಯಲ್‌ ಕಾಲೇಜ್‌ ಆಫ್‌ ಆರ್ಟ್‌ ಎಂಬ ಕಾಲೇಜಿನ ಪದವಿಧರ Julian Melchiorri ಎಂಬಾತ ಸಿಲ್ಕ್‌ ನಿಂದ ಒಂದು ಕೃತಕ ಎಲೆ ತಯಾರಿಸಿದ್ದಾನೆ. ಇದು ಸ್ಪೇಸ್‌ನಲ್ಲಿ ಅಗತ್ಯವಿರುವ ಆಕ್ಸಿಜನ್‌ ಅನ್ನು ಉತ್ಪಾದಿಸುತ್ತದೆ. ಸಿಲ್ಕ್‌ ಎಲೆಯನ್ನು ಟಫ್‌ ವಿಶ್ವವಿದ್ಯಾನಿಲಯದ ಲ್ಯಾಬೋರೇಟರಿ ಸಹಾಯ ಪಡೆಯಲಾಗಿದೆ.

ಆಕ್ಸಿಜನ್‌ಗೆ ಫೋಟೋಸಿಂಥೆಸಿಸ್‌ ಪ್ರಕ್ರಿಯೆ

ಆಕ್ಸಿಜನ್‌ಗೆ ಫೋಟೋಸಿಂಥೆಸಿಸ್‌ ಪ್ರಕ್ರಿಯೆ

ಫೋಟೋಸಿಂಥೆಸಿಸ್‌ ಪ್ರಕ್ರಿಯೆಯಿಂದ ಉಚಿತ ಆಕ್ಸಿಜೆನ್‌ ಪಡೆಯಬಹುದಾಗಿದ್ದು, ಸ್ಪೇಸ್‌ನಲ್ಲಿ ಸಸ್ಯಗಳನ್ನು ಬೆಳೆಯಲು ಹೆಚ್ಚು ಅವಕಾಶವಿಲ್ಲದಿರುವುದರಿಂದ ಸಿಲ್ಕ್‌ ಎಲೆ ಉಪಯೋಗವಾಗಲಿದೆ.

ಕೃತಕ ಸಿಲ್ಕ್‌ ಎಲೆ

ಕೃತಕ ಸಿಲ್ಕ್‌ ಎಲೆ

ಕೃತಕ ಸಿಲ್ಕ್‌ ಎಲೆಯಲ್ಲಿ ಮುಖ್ಯವಾದ ಪ್ರೋಟೀನ್‌ ಅಂಶಗಳು "ಸಿಲ್ಕ್‌ ಮತ್ತು ಕ್ಲೋರೋಪ್ಲಾಸ್ಟ್‌" ಇದ್ದು ಆಕ್ಸಿಜನ್‌ ಉತ್ಪಾದನೆಗೆ ಸಹಾಯವಾಗಿದೆ.

ಕೃತಕ ಸಿಲ್ಕ್‌ ಎಲೆ ಕಾರ್ಯ ಹೇಗೆ?

ಕೃತಕ ಸಿಲ್ಕ್‌ ಎಲೆ ಕಾರ್ಯ ಹೇಗೆ?

ಕೃತಕ ಸಿಲ್ಕ್ ಎಲೆ ಆಕ್ಸಿಜನ್‌ ಉತ್ಪಾದಿಸಲು ಅದಕ್ಕೆ ಸೂರ್ಯನ ಬೆಳಕಿನಲ್ಲಿ ಸ್ವಲ್ಪ ಮಟ್ಟಿಗೆ ನೀರು ನೀಡಬೇಕಾಗಿದೆ.

ಅಂತರಿಕ್ಷದಲ್ಲಿ ನೀರಿನ ಮರುಬಳಕೆ

ಅಂತರಿಕ್ಷದಲ್ಲಿ ನೀರಿನ ಮರುಬಳಕೆ

ಅಂತರಿಕ್ಷದಲ್ಲಿ ನೀರು ಸಹ ವಿರಳ ಸರಕಾಗಿದ್ದು, ಅದನ್ನು ಮರುಬಳಕೆ ಮಾಡುವ ಮುಖಾಂತರ ಬಳಸಬೇಕಾಗಿದೆ.

 ಸರಳವಾದ ಮಾರ್ಗ

ಸರಳವಾದ ಮಾರ್ಗ

ತೂಕವಿಲ್ಲದ ಈ ಕೃತಕ ಸಿಲ್ಕ್‌ ಎಲೆಯು ಮೊದಲ ಜೈವಿಕ ಪ್ರಕ್ರಿಯೆಯಾಗಿದ್ದು, ಆಕ್ಸಿಜನ್‌ ಉಪಯೋಗಕ್ಕಾಗಿ ಮಾನವ ನಿರ್ಮಿತ ಪರಿಸರ ಇದಾಗಿದೆ.

 ಇಲೆಕ್ಟ್ರಿಕ್‌ ಬೆಳಕನ್ನು ಒದಗಿಸುವ ಸಿಲ್ಕ್‌ ಎಲೆ

ಇಲೆಕ್ಟ್ರಿಕ್‌ ಬೆಳಕನ್ನು ಒದಗಿಸುವ ಸಿಲ್ಕ್‌ ಎಲೆ

ಇತರೆ ಹಲವು ವಸ್ತುಗಳನ್ನು ಅಳವಡಿಸಿ ಸಿಲ್ಕ್‌ ಎಲೆಯಿಂದ ಇಲೆಕ್ಟ್ರಿಕ್‌ ಬೆಳಕನ್ನು (ಲೈಟ್) ಪಡೆಯಬಹುದಾಗಿದೆ ಎನ್ನಲಾಗಿದೆ.

ಬಿಲ್ಟಿಂಗ್‌ಗಳಿಗೂ ಆಕ್ಸಿಜನ್‌ ವ್ಯವಸ್ಥೆ

ಬಿಲ್ಟಿಂಗ್‌ಗಳಿಗೂ ಆಕ್ಸಿಜನ್‌ ವ್ಯವಸ್ಥೆ

ಈ ಕೃತಕ ಸಿಲ್ಕ್‌ ಎಲೆಯನ್ನು ಹಲವು ಬಿಲ್ಡಿಂಗ್‌ಗಳ ಸುತ್ತಮುತ್ತಲಲ್ಲಿ ಬೇಕಾದ ಉತ್ತಮ ಆಕ್ಸಿಜನ್ ವ್ಯವಸ್ಥೆಗೆ‌ ಬಳಸಿಕೊಳ್ಳಬಹುದಾಗಿದೆ.

ಬಹುಶಃ ಮುಂದೊಂದು ದಿನ ಭೂಮಿಯಲ್ಲೂ ಇದರ ಬಳಕೆ

ಬಹುಶಃ ಮುಂದೊಂದು ದಿನ ಭೂಮಿಯಲ್ಲೂ ಇದರ ಬಳಕೆ

ಪ್ರಸ್ತುತದಲ್ಲಿ ಜನರು ಹೀಗೆಯೇ ಮರಗಳನ್ನು ಕಡಿಯುವುದನ್ನು ಮುಂದುವರೆಸಿದರೆ ಈ ಕೃತಕ ಸಿಲ್ಕ್ ಎಲೆಯನ್ನು ಭೂಮಿಯ ಮೇಲು ಬಳಸಬೇಕಾಗುತ್ತದೆ. ಆದರೆ ಭೂಮಿಯಲ್ಲಿನ ಜನರು ಇದನ್ನು ಬಳಕೆ ಮಾಡುವ ಪರಿಸ್ಥಿತಿ ಬರದಹಾಗೆ ಪರಿಸರ ವ್ಯವಸ್ಥೆ ಕಾಪಾಡಿಕೊಳ್ಳಬೇಕಿದೆ.ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Best Mobiles in India

English summary
This Artificial Silk Leaf Can Produce Oxygen For Space Missions. Read more for new technology news about space in Kannada Gizbot.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+