ಮಗುವಿನ ಕಣ್ಣುಬಲಿ ತೆಗೆದುಕೊಂಡ ಮೊಬೈಲ್ ಫ್ಲ್ಯಾಶ್‌ಲೈಟ್

By Shwetha
|

ಸ್ಮಾರ್ಟ್‌ಫೋನ್ ಬಳಕೆ ಇಂದಿನ ಆಧುನಿಕ ಯುಗದಲ್ಲಿ ಎಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂದರೆ ಯಾವುದೇ ಕೆಲಸ ಇರಲಿ ಎಲ್ಲಿಗೆ ಹೋಗಲೀ ಫೋನ್ ಕೈಯಲ್ಲಿ ಹಿಡಿದುಕೊಂಡು ಓಡಾಡುವುದೇ ಈಗ ಫ್ಯಾಶನ್ ಆಗಿಬಿಟ್ಟಿದೆ. ಇನ್ನು ಮಾರುಕಟ್ಟೆಗೆ ಆಗಮಿಸುತ್ತಿರುವ ಹೆಚ್ಚಿನ ಡಿವೈಸ್‌ಗಳು ಗ್ರಾಹಕರ ಬೇಡಿಕೆಯನ್ನು ಈಡೇರಿಸುವಂತಿದ್ದು ಬಜೆಟ್ ಬೆಲೆಯಲ್ಲೇ ಡಿವೈಸ್‌ಗಳು ಇದೀಗ ಲಭ್ಯವಾಗುತ್ತಿದೆ.

ಓದಿರಿ: ದರಕಡಿತ ಹಬ್ಬ: ಭರ್ಜರಿ ಮೊಬೈಲ್ ಬೇಟೆ

ಮಗುವಿನ ಕಣ್ಣುಬಲಿ ತೆಗೆದುಕೊಂಡ ಮೊಬೈಲ್ ಫ್ಲ್ಯಾಶ್‌ಲೈಟ್

ಫೋನ್‌ಗಳ ಅಧಿಕ ಬಳಕೆಯಿಂದ ಆರೋಗ್ಯ ಏರುಪೇರಾಗುತ್ತದೆ ಎಂಬ ಮಾಹಿತಿ ನಮಗೆ ತಿಳಿದಿದ್ದರೂ ಫೋನ್ ಕೈಯಲ್ಲಿ ಹಿಡಿಯುವುದನ್ನು ಮಾತ್ರ ನಾವು ಬಿಡುವುದಿಲ್ಲ. ಆದರೆ ಫೋನ್‌ನ ಫ್ಲ್ಯಾಶ್ ಲೈಟ್ ಉಂಟುಮಾಡಿರುವ ಪರಿಣಾಮದಿಂದ ಮಗು ತನ್ನ ಕಣ್ಣುಗಳನ್ನೇ ಕಳೆದುಕೊಂಡಿರುವ ಘಟನೆ ನಡೆದಿದೆ.

ಓದಿರಿ: ಆಂಡ್ರಾಯ್ಡ್ ಬಳಕೆದಾರರ ತಲೆಯ ಮೇಲೆ ಅಪಾಯದ ತೂಗುಕತ್ತಿ!!!

ಮೂರು ತಿಂಗಳ ಮಗು ತನ್ನ ಕಣ್ಣುಗಳನ್ನು ಕಳೆದುಕೊಂಡಿರುವ ನತದೃಷ್ಟನಾಗಿದೆ. ಕುಟುಂಬ ಸದಸ್ಯರು ಮಗುವಿನ ಫೋಟೋ ತೆಗೆಯುವಾಗ ಮೊಬೈಲ್‌ನ ಫ್ಲ್ಯಾಶ್ ಲೈಟ್ ಆರಿಸುವುದನ್ನು ಮರೆತಿದ್ದಾರೆ ಇದರಿಂದ ಮಗುವಿನ ಕಣ್ಣಿಗೆ ಹಾನಿಯುಂಟಾಗಿ ಎಡ ಕಣ್ಣಿನ ದೃಷ್ಟಿಯ ಮಂದತೆ ಮತ್ತು ಬಲ ಕಣ್ಣಿನ ಸಂಪೂರ್ಣ ದೃಷ್ಟಿಯನ್ನು ಕಳೆದುಕೊಂಡಿದೆ. ಫೋಟೋ ತೆಗೆಯುವಾಗ ಫ್ಲ್ಯಾಶ್ ಮಗುವಿನ ಮುಖದಿಂದ 10 ಇಂಚುಗಳ ದೂರದಲ್ಲಿತ್ತು. ದೃಷ್ಟಿಗೆ ಅತಿಮುಖ್ಯ ಎಂದೆನಿಸಿರುವ ಕಣ್ಣಿನ ಭಾಗವಾಗಿರುವ ಮಕುಲಾಗೆ ಫ್ಲ್ಯಾಶ್ ಲೈಟ್‌ನಿಂದ ಹಾನಿಯುಂಟಾಗಿದೆ.

Best Mobiles in India

English summary
A three-month-old baby in China has been left with permanent eye damage after a relative took a close-up photo but forgot to turn off the camera’s flash.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X