ಆಂಡ್ರಾಯ್ಡ್ ಬಳಕೆದಾರರ ತಲೆಯ ಮೇಲೆ ಅಪಾಯದ ತೂಗುಕತ್ತಿ!!!

By Shwetha
|

ಫೋನ್‌ಗೆ ನೀವು ಎಷ್ಟು ಭದ್ರತೆಯನ್ನು ಒದಗಿಸಿದರೂ ಹ್ಯಾಕರ್‌ಗಳ ಕೈಯಿಂದ ತಪ್ಪಿಸಿಕೊಳ್ಳುವುದು ಅಸಾಧ್ಯದ ಮಾತಾಗಿದೆ. ಈಗಂತೂ ನಿಮ್ಮ ಫೋನ್‌ನ ಪುಟ್ಟ ಮಾಹಿತಿ ಸಾಕು ಅಗತ್ಯದ ಮಾಹಿತಿಯನ್ನು ನಿಮ್ಮ ಫೋನ್‌ನಿಂದ ಪಡೆದುಕೊಂಡು ಹ್ಯಾಕರ್‌ಗಳು ನಿಮ್ಮನ್ನು ಫಜೀತಿಗೆ ಸಿಲುಕಿಸುತ್ತಾರೆ. ಆದರೆ ಇದರಿಂದ ನೀವು ಸರ್ವ ಪ್ರಯತ್ನವನ್ನು ಮಾಡಿದರೂ ಹ್ಯಾಕರ್‌ಗಳ ಪರಾಕ್ರಮಕ್ಕೆ ನಿಮ್ಮ ಫೋನ್ ಬಲಿಯಾಗುವುದು ಖಂಡಿತ.

ಓದಿರಿ: ನಿಮ್ಮ ಆಂಡ್ರಾಯ್ಡ್ ಫೋನ್‌ನ ಬಲಾಢ್ಯ ಅಂಗರಕ್ಷಕರು

ಆದರೆ ಈ ಬಾರಿ ಬಲಿಯಾಗುತ್ತಿರುವುದು ನಿಮ್ಮ ಆಂಡ್ರಾಯ್ಡ್ ಫೋನ್ ಆಗಿದೆ! ಹೌದು ಫೋನ್ ಪ್ರಿಯರೇ ನೀವು ಇದಕ್ಕೆ ಬೇಕಾದ ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ ಎಂದಾದಲ್ಲಿ ನಿಮ್ಮ ಕೈಯಲ್ಲಿರುವ ಸಣ್ಣ ಡಿವೈಸ್ ಹ್ಯಾಕರ್‌ಗಳಿಗೆ ಬಲಿಯಾಗುತ್ತದೆ. ಸೈಬರ್ ಭದ್ರತಾ ಸಂಸ್ಥೆ ಜಿಂಪೇರಿಯಮ್ ಈ ಕುರಿತು ಆಂಡ್ರಾಯ್ಡ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಮಾಹಿತಿ ನೋಡಿ

ಆಂಡ್ರಾಯ್ಡ್ ಬಳಕೆದಾರರು ಅಪಾಯದಲ್ಲಿ

ಆಂಡ್ರಾಯ್ಡ್ ಬಳಕೆದಾರರು ಅಪಾಯದಲ್ಲಿ

ಹ್ಯಾಕರ್‌ಗಳಿಗೆ ನಿಮ್ಮ ಮೊಬೈಲ್ ಇದ್ದರೆ ಸಾಕು. ನಿಮ್ಮ ಎಮ್‌ಎಮ್‌ಎಸ್ ಮುಖಾಂತರ ವಿತರಣೆಯಾಗುವ ಮೀಡಿಯಾ ಫೈಲ್ ಬಳಸಿ ವಿಶೇಷ ಕೋಡ್‌ನಿಂದ ಹ್ಯಾಕರ್‌ಗಳು ತಮ್ಮ ಕಾರ್ಯನಿರ್ವಹಿಸುತ್ತಾರೆ.

ಆಂಡ್ರಾಯ್ಡ್ ಬಳಕೆದಾರರು ಅಪಾಯದಲ್ಲಿ

ಆಂಡ್ರಾಯ್ಡ್ ಬಳಕೆದಾರರು ಅಪಾಯದಲ್ಲಿ

ನೀವು ನೋಡುವ ಮೊದಲೇ ಹ್ಯಾಕರ್‌ಗಳು ಸಂದೇಶವನ್ನು ಅಳಿಸುತ್ತಾರೆ. ನಿಮಗೆ ಅಧಿಸೂಚನೆ ಮಾತ್ರ ಕಾಣಿಸುತ್ತದೆ.

ಆಂಡ್ರಾಯ್ಡ್ ಬಳಕೆದಾರರು ಅಪಾಯದಲ್ಲಿ

ಆಂಡ್ರಾಯ್ಡ್ ಬಳಕೆದಾರರು ಅಪಾಯದಲ್ಲಿ

ವೀಡಿಯೊ ಫೈಲ್‌ಗಳಲ್ಲಿರುವ ದುರುದ್ದೇಶಿತ ಕೋಡ್ ಅನ್ನು ಹ್ಯಾಕರ್‌ಗಳು ಮರೆಮಾಡುತ್ತಾರೆ. ಇದರಿಂದಾಗಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸಂದೇಶವನ್ನು ತೆರೆಯಲು ಸಾಧ್ಯವಾಗುವುದೇ ಇಲ್ಲ.

ಆಂಡ್ರಾಯ್ಡ್ ಬಳಕೆದಾರರು ಅಪಾಯದಲ್ಲಿ

ಆಂಡ್ರಾಯ್ಡ್ ಬಳಕೆದಾರರು ಅಪಾಯದಲ್ಲಿ

ಹ್ಯಾಕರ್‌ಗಳು ಯಾರನ್ನು ಬೇಕಾದರೂ ಟಾರ್ಗೆಟ್ ಮಾಡಬಹುದು

ಆಂಡ್ರಾಯ್ಡ್ ಬಳಕೆದಾರರು ಅಪಾಯದಲ್ಲಿ

ಆಂಡ್ರಾಯ್ಡ್ ಬಳಕೆದಾರರು ಅಪಾಯದಲ್ಲಿ

ಹ್ಯಾಕರ್‌ಗಳು ಯಾವುದೇ ರೀತಿಯ ಕ್ರಮಗಳನ್ನು ಬೇಕಾದರೂ ತೆಗೆದುಕೊಂಡು ಮೊಬೈಲ್ ಮಾಹಿತಿಯನ್ನು ಅಳಿಸುತ್ತಾರೆ

ಆಂಡ್ರಾಯ್ಡ್ ಬಳಕೆದಾರರು ಅಪಾಯದಲ್ಲಿ

ಆಂಡ್ರಾಯ್ಡ್ ಬಳಕೆದಾರರು ಅಪಾಯದಲ್ಲಿ

ಹ್ಯಾಕರ್‌ಗಳು ಬಳಸುವ ದುರುದ್ದೇಶಿತ ಕೋಡ್‌ನಿಂದ ಸ್ಮಾರ್ಟ್‌ಫೋನ್ ಮೇಲೆ ನಿಯಂತ್ರಣವನ್ನು ಪಡೆದುಕೊಂಡು ಮಾಲೀಕರ ತಿಳಿಯದೆಯೇ ಮಾಹಿತಿಯನ್ನು ಕದಿಯುತ್ತಾರೆ.

ಆಂಡ್ರಾಯ್ಡ್ ಬಳಕೆದಾರರು ಅಪಾಯದಲ್ಲಿ

ಆಂಡ್ರಾಯ್ಡ್ ಬಳಕೆದಾರರು ಅಪಾಯದಲ್ಲಿ

ಜಿಂಪೇರಿಯಮ್ ಗೂಗಲ್‌ಗೆ ಸಮಸ್ಯೆಯನ್ನು ತಿಳಿಸಿದ್ದು ಉಲ್ಲಂಘನೆಯನ್ನು ತಡೆಯಲು ಕ್ಯಾಲಿಫೋರ್ನಿಯಾ ಇಂಟರ್ನೆಟ್‌ಗೆ ಸಂಸ್ಥೆಗೆ ಮಾಹಿತಿ ಒದಗಿಸಿದೆ.

ಆಂಡ್ರಾಯ್ಡ್ ಬಳಕೆದಾರರು ಅಪಾಯದಲ್ಲಿ

ಆಂಡ್ರಾಯ್ಡ್ ಬಳಕೆದಾರರು ಅಪಾಯದಲ್ಲಿ

ಇನ್ನು ಹ್ಯಾಕರ್‌ಗಳು ಬೇರೆ ಬೇರೆ ವಿಧಾನಗಳ ಮೂಲಕ ಮೊಬೈಲ್‌ನಲ್ಲಿರುವ ಮಾಹಿತಿಯನ್ನು ದೋಚಲಿದ್ದಾರೆ.

ಆಂಡ್ರಾಯ್ಡ್ ಬಳಕೆದಾರರು ಅಪಾಯದಲ್ಲಿ

ಆಂಡ್ರಾಯ್ಡ್ ಬಳಕೆದಾರರು ಅಪಾಯದಲ್ಲಿ

ಮೊಬೈಲ್ ಡಿವೈಸ್‌ಗಳಲ್ಲಿ ಆಂಡ್ರಾಯ್ಡ್ ಸಾಫ್ಟ್‌ವೇರ್ ನವೀಕರಣ ಮಾಡುವುದನ್ನು ಹಾರ್ಡ್‌ವೇರ್ ತಯಾರಕರು ನಿಯಂತ್ರಿಸುತ್ತಾರೆ ಈ ಕೆಲಸ ಗೂಗಲ್‌ನದ್ದಲ್ಲ.

ಆಂಡ್ರಾಯ್ಡ್ ಬಳಕೆದಾರರು ಅಪಾಯದಲ್ಲಿ

ಆಂಡ್ರಾಯ್ಡ್ ಬಳಕೆದಾರರು ಅಪಾಯದಲ್ಲಿ

ಆಪಲ್ ತನ್ನ ಐಫೋನ್, ಐಪ್ಯಾಡ್‌ಗಳು ಮತ್ತು ಐಪೋಡ್‌ಗಳಲ್ಲಿ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ ಅನ್ನು ನಿಯಂತ್ರಿಸುತ್ತದೆ. ಆದರೆ ಗೂಗಲ್ ಡಿವೈಸ್ ತಯಾರಕರಿಗೆ ಆಂಡ್ರಾಯ್ಡ್ ಅನ್ನು ಉಚಿತವಾಗಿ ಲಭಿಸುವಂತೆ ಮಾಡುತ್ತದೆ ಇದರಿಂದಾಗಿ ಯಾರು ಬೇಕಾದರೂ ಸರಿ ಹೊಂದುವಂತೆ ಕೋಡ್ ಅನ್ನು ನವೀಕರಿಸಿ ಕಸ್ಟಮೈಸ್ ಮಾಡಬಹುದಾಗಿದೆ.

Best Mobiles in India

English summary
Cyber security firm Zimperium has warned of a flaw in the world's most popular smartphone operating system that lets hackers take control with a text message.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X