ಗೂಗಲ್‌ನ ಟಾಪ್‌ 10 ವಿಶೇಷ ಉತ್ಪನ್ನಗಳು

By Ashwath
|

ದೊಡ್ಡ ದೊಡ್ ಟೆಕ್‌ ಕಂಪೆನಿಗಳು ತಮ್ಮ ಉತ್ಪನ್ನವನ್ನು ಮತ್ತಷ್ಟು ಜನಪ್ರಿಯಗೊಳಿಸಲು, ಆ ಉತ್ಪನ್ನಕ್ಕೆ ಸಹಕಾರ ನೀಡುವ ಉತ್ಪನ್ನಗಳ ತಯಾರಿಸಿದ ಕಂಪೆನಿಗಳನ್ನು ಖರೀದಿಸುವುದು ಸಾಮಾನ್ಯ. ಆದರಲ್ಲೂ ಆಪಲ್‌ ಗೂಗಲ್‌ ಪ್ರತಿವರ್ಷ‌ವೂ ಕಂಪೆನಿಗಳನ್ನು ಖರೀದಿಸುತ್ತಿದ್ದು ಇದುವರೆಗೆ ಗೂಗಲ್‌ 140 ಕಂಪೆನಿಗಳನ್ನು ಖರೀದಿಸಿದ್ದರೆ, ಆಪಲ್‌ 54 ಕಂಪೆನಿಗಳನ್ನು ಖರೀದಿಸಿದೆ.

ಗೂಗಲ್‌ 141 ಕಂಪೆನಿಯಾಗಿ ಇದೀಗ ನೆಸ್ಟ್‌ ಲ್ಯಾಬ್ಸ್‌ನ್ನು ಖರೀದಿಸುತ್ತಿರುವುದಾಗಿ ಪ್ರಕಟಿಸಿದೆ. ಹೀಗಾಗಿ ಮುಂದಿನ ಪುಟದಲ್ಲಿ ಗೂಗಲ್‌ ಈ ಹಿಂದೆ ಖರೀದಿಸಿದ ಕೆಲವು ಕಂಪೆನಿಗಳು, ಜೊತೆಗೆ ಗೂಗಲ್‌ನ ಕೆಲ ವಿಶೇಷ ಉತ್ಪನ್ನಗಳ ಬಗ್ಗೆ ಮಾಹಿತಿಯಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ಗೂಗಲ್‌ ನ್ಯೂಸ್‌ನಲ್ಲಿ ಕನ್ನಡ ಬೇಕು ಎಂದು ಗೂಗಲ್‌ನ್ನು ಕೇಳಿ

 ಗೂಗಲ್‌ ರೊಬೊಟ್‌‌‌

ಗೂಗಲ್‌ ರೊಬೊಟ್‌‌‌

ಗೂಗಲ್‌ ಮುಂದಿನ ದಿನಗಳಲ್ಲಿ ತನ್ನ ಆನ್‌‌ಲೈನ್‌ ಶಾಪಿಂಗ್‌ ವ್ಯವಹಾರ ಆರಂಭಿಸಲು ಮುಂದಾಗುತ್ತಿದೆ.ಈ ಸಂಬಂಧ ಕೆಲವು ರೊಬೊಟ್‌‌ ಕಂಪೆನಿಗಳು ಖರೀದಿಸಿದ್ದು, ಈ ರೊಬೊಟ್‌ಗಳನ್ನು ಪ್ಯಾಕೇಜಿಂಗ್‌ ವಿಭಾಗದಲ್ಲಿ ಬಳಸಲು ಗೂಗಲ್‌ ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಗೂಗಲ್‌ ರೊಬೊಟ್‌ ಕಂಪೆನಿಯನ್ನು ಖರೀದಿಸುತ್ತಿರುವುದು ಯಾಕೆ?ಗೂಗಲ್‌ ರೊಬೊಟ್‌ ಕಂಪೆನಿಯನ್ನು ಖರೀದಿಸುತ್ತಿರುವುದು ಯಾಕೆ?

 ಗೂಗಲ್‌ನಿಂದ ಕಡಿಮೆ ಬೆಲೆಯ ಫೋನ್‌!

ಗೂಗಲ್‌ನಿಂದ ಕಡಿಮೆ ಬೆಲೆಯ ಫೋನ್‌!

ಸ್ಮಾರ್ಟ್‌ಫೋನ್‌‌ ಮಾರುಕಟ್ಟೆಯ ನಡುವೆ ಬೇಡಿಕೆ ಕುಸಿದು ನಷ್ಟ ಅನುಭವಿಸುತ್ತಿರುವ ಮೋಟರೋಲಾ ಕಂಪೆನಿಯನ್ನು ಎರಡು ವರ್ಷಗಳ ಹಿಂದೆ ಗೂಗಲ್‌ 12.5 ಶತಕೋಟಿ ಡಾಲರ್‌ ನೀಡಿ ಖರೀದಿಸಿದೆ.

ಸದ್ಯ ಮೋಟರೋಲಾ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಅಭಿವೃದ್ಧಿ ಪಡಿಸುವ ಜೊತೆಗೆ ಹೊಸ ರೀತಿಯ ಟ್ಯಾಟೋ ಪಾಸ್‌ವರ್ಡ್ ಸಂಶೋಧಿಸುತ್ತಿದೆ.

ಗೂಗಲ್‌ನಿಂದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆಗೂಗಲ್‌ನಿಂದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ

 ಮುಪ್ಪು ತಡೆಯಲು ಗೂಗಲ್‌ನಿಂದ ಕಂಪೆನಿ!

ಮುಪ್ಪು ತಡೆಯಲು ಗೂಗಲ್‌ನಿಂದ ಕಂಪೆನಿ!

ಮಾರುಕಟ್ಟೆಯಲ್ಲಿ ಪ್ರಬಲ ಸ್ಪರ್ಧಿ‌ಗಳಾದ ಗೂಗಲ್‌ ಮತ್ತು ಆಪಲ್‌‌ ಜೊತೆಗೂಡಿ ಮುಪ್ಪು ತಡೆಯಲು ಹೊಸ ಕಂಪೆನಿಯನ್ನು ಆರಂಭಿಸಿದ್ದಾರೆ. ಕ್ಯಾಲಿಕೋ ಹೆಸರಿನ ಕಂಪೆನಿಯನ್ನು ಆರಂಭಿಸಿದ್ದು ಇಳಿ ವಯಸ್ಸಿನಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳನ್ನು ತಡೆಯಲು ಈ ಕಂಪೆನಿ ಸಂಶೋಧನೆ ನಡೆಸುತ್ತಿದೆ.

ಮುಪ್ಪು ತಡೆಯಲು ಗೂಗಲ್‌ ಆಪಲ್‌ನಿಂದ ಹೊಸ ಕಂಪೆನಿ!ಮುಪ್ಪು ತಡೆಯಲು ಗೂಗಲ್‌ ಆಪಲ್‌ನಿಂದ ಹೊಸ ಕಂಪೆನಿ!

  ಗೂಗಲ್‌ ಸ್ಟ್ರೀಟ್‌ ವ್ಯೂ

ಗೂಗಲ್‌ ಸ್ಟ್ರೀಟ್‌ ವ್ಯೂ


ಇಂಟರ್‌ನೆಟ್‌ ಮೂಲಕ ಮಹಾನಗರಗಳು ಹೇಗೆ ಇದೆಯೋ ಅದೇ ಚಿತ್ರಣವನ್ನು ಸಂಪೂರ್ಣವಾಗಿ ನೋಡುವ ಹೊಸ ಬಗೆಯ ನಕ್ಷೆಯೇ ಸ್ಟ್ರೀಟ್‌ ವ್ಯೂ.ಸಾರ್ವಜನಿಕರು ಇಂಟರ್ ನೆಟ್‌ ಸೌಲಭ್ಯವಿರುವ ಕಂಪ್ಯೂಟರ್/ಮೊಬೈಲ್‌ ಮೂಲಕವೇ ಇಡೀ ಬೀದಿ ಹೇಗಿದೆ ಎಂದು ನೋಡಬಹುದು.ಗೂಗಲ್‌ ಸ್ಟ್ರೀಟ್‌ ವ್ಯೂ ಕಾರು,ಹಿಮ ಮೋಟಾರು ಗಾಡಿ ಮೂಲಕ ಕಂಪ್ಯೂಟರ್‌ಗಳು, ಕ್ಯಾಮೆರಾಗಳು, ಲೇಸರ್‌ಗಳನ್ನು ಜೋಡಿಸಿ ಜಿಪಿಎಸ್‌ ಸಾಧನ ಮೂಲಕ ಕ್ಯಾಮೆರಾವನ್ನು 360 ಡಿಗ್ರಿ ತಿರುಗಿವಂತೆ ಮಾಡಿ ಈ ಸ್ಟ್ರೀಟ್‌ ವ್ಯೂ ಸಂಪೂರ್ಣ ಚಿತ್ರವನ್ನು ಸೆರೆಹಿಡಿಯಲಾಗಿದೆ.

ಗೂಗಲ್‌ ಈ ಸ್ಟ್ರೀಟ್‌ ವ್ಯೂನಲ್ಲಿ ಚಿತ್ರಗಳನ್ನು ಸೆರೆ ಹಿಡಿಯುವುದು ಹೇಗೆ?ಗೂಗಲ್‌ ಈ ಸ್ಟ್ರೀಟ್‌ ವ್ಯೂನಲ್ಲಿ ಚಿತ್ರಗಳನ್ನು ಸೆರೆ ಹಿಡಿಯುವುದು ಹೇಗೆ?

 ಆಂಡ್ರಾಯ್ಡ್‌ ಓಎಸ್‌

ಆಂಡ್ರಾಯ್ಡ್‌ ಓಎಸ್‌


ಆಂಡ್ರಾಯ್ಡ್ ಓಎಸ್‌ನ್ನು ಮೊದಲು ಅಭಿವೃದ್ಧಿ ಪಡಿಸಿದ್ದು ಆಂಡ್ರಾಯ್ಡ್ ಇನ್ಕ್ ಎನ್ನುವ ಕಂಪೆನಿ. ಗೂಗಲ್‌ 2005 ರಲ್ಲಿ ಈ ಕಂಪೆನಿಯನ್ನು ಖರೀದಿಸಿತು. ಸದ್ಯ ವಿಶ್ವದ ಶೇ.90 ಸ್ಮಾರ್ಟ್‌‌ಫೋನ್‌ಗಳು ಆಂಡ್ರಾಯ್ಡ್‌ ಓಎಸ್‌‌ನಲ್ಲಿ ಕಾರ್ಯ‌ನಿರ್ವ‌ಹಿಸುತ್ತಿವೆ. ಸದ್ಯ ಸ್ಮಾರ್ಟ್‌ಫೋನ್‌ ಅಲ್ಲದೇ,ಗೇಮ್‌ ಕನ್ಸೋಲ್‌, ರೆಫ್ರಿಜರೇಟರ್‌,ಲ್ಯಾಪ್‌ಟ್ಯಾಪ್‌ಗಳು,ವಾಶಿಂಗ್‌ ಮೇಶಿನ್‌,ಸ್ಮಾರ್ಟ್‌ವಾಚ್‌‌ಗಳು ಆಂಡ್ರಾಯ್ಡ್‌ ಓಎಸ್‌ನಲ್ಲಿ ಕಾರ್ಯ‌ನಿರ್ವ‌ಹಿಸುತ್ತಿವೆ.

  ಗೂಗಲ್‌ ಫೈಬರ್‌

ಗೂಗಲ್‌ ಫೈಬರ್‌


ಆಪ್ಟಿಕಲ್ ಫೈಬರ್ ಕೇಬಲ್ ಮೂಲಕ 1Gbps ವೇಗದಲ್ಲಿ ಡೌನ್‌ಲೋಡ್‌ ಮತ್ತು ಅಪ್‌ಲೋಡ್‌ ಮಾಡಬಹುದಾದ ಬ್ರಾಡ್‌ಬ್ಯಾಂಡ್‌ ಇಂಟರ್‌ನೆಟ್‌ ನೀಡುವ ಫೈಬರ್‌ ಇಂಟರ್‌ನೆಟ್‌ ಸೇವೆಯನ್ನು ಗೂಗಲ್‌ 2011ರಲ್ಲಿ ಅಮರಿಕದಲ್ಲಿ ಆರಂಭಿಸಿತು. ಈ ಸೇವೆಯನ್ನು ಬಳಸುತ್ತಿರುವ ಗ್ರಾಹಕರು ಸಾಧಾರಣ ಅಮೆರಿಕದ ಜನತೆ ಬಳಸುತ್ತಿರುವ ಇಂಟರ್‌ನೆಟ್‌ ಸ್ಪೀಡ್‌ಗಿಂತಲೂ ನೂರು ಪಟ್ಟು ವೇಗದಲ್ಲಿ ಇಂಟರ್‌ನೆಟ್‌ನ್ನು ಬಳಸುತ್ತಿದ್ದಾರೆ.

  ಇಂಟರ್‌ನೆಟ್‌ ಬಲೂನ್‌

ಇಂಟರ್‌ನೆಟ್‌ ಬಲೂನ್‌


20 ಕಿ.ಮೀ ಎತ್ತರದ ಆಗಸದಲ್ಲಿ ಪಾರದರ್ಶಕ ಬಲೂನ್‌ಗಳನ್ನು ಹಾರಿಸಿ, ಅದರದಿಂದ 3ಜಿ ವೇಗದ ಇಂಟರ್‌ನೆಟ್‌ ಸಂಕೇತಗಳನ್ನು ಪಡೆಯುವ ಪ್ರೊಜೆಕ್ಟ್‌ ಲೂನ್‌ ಹೆಸರಿನ ಯೋಜನೆಯನ್ನು ಗೂಗಲ್‌ಕಳೆದ ವರ್ಷದಿಂದ ಆರಂಭಿಸಿದೆ.ಇದೇ ಜೂನ್‌ 16 ರಂದು ಗೂಗಲ್‌ ನ್ಯೂಜಿಲೆಂಡ್‌ನ ಟೆಕಾಪೋ(Tekapo) ಪ್ರದೇಶದಲ್ಲಿ ಪ್ರಯೋಗಕ್ಕಾಗಿ 30 ಬಲೂನ್‌ಗಳನ್ನು ಹಾರಿಸಿದ್ದು,ಈ ಪ್ರದೇಶದಲ್ಲಿರುವ ಜನರು ಈಗ ಈ ಹೊಸ ಪ್ರಯೋಗದ ಸೇವೆಯನ್ನು ಪಡೆಯುತ್ತಿದ್ದಾರೆ.

ಬಲೂನಿಂದ ಇಂಟರ್‌ನೆಟ್‌: ಅಂತಿಮ ಹಂತದಲ್ಲಿ ಗೂಗಲ್‌ ಸಂಶೋಧನೆಬಲೂನಿಂದ ಇಂಟರ್‌ನೆಟ್‌: ಅಂತಿಮ ಹಂತದಲ್ಲಿ ಗೂಗಲ್‌ ಸಂಶೋಧನೆ

 ಕ್ರೋಮ್‌ಕ್ಯಾಸ್ಟ್‌‌:

ಕ್ರೋಮ್‌ಕ್ಯಾಸ್ಟ್‌‌:


ಗೂಗಲ್‌ ಇಂಟರ್‌‌ನೆಟ್‌ ಮೂಲಕ ಆಡಿಯೋ ವೀಡಿಯೋವನ್ನು ವೀಕ್ಷಿಸಲು 2013 ಜುಲೈನಲ್ಲಿ ಕ್ರೋಮ್‌‌ಕ್ಯಾಸ್ಟ್‌ ಹೆಸರಿನ ಡೋಂಗಲ್‌ನ್ನು ಪರಿಚಯಿಸಿದೆ.ಆಂಡ್ರಾಯ್ಡ್‌ ಮತ್ತು ಐಓಎಸ್‌ ಸಾಧನಗಳಿಗೆ ಸಪೋರ್ಟ್‌‌ ಮಾಡುವ ಈ ಸಾಧನ ಅಮೆರಿಕದಲ್ಲಿ 35 ಡಾಲರ್‌ ಬೆಲೆಯಲ್ಲಿ ಲಭ್ಯವಿದೆ.

 ಗೂಗಲ್‌ ಗ್ಲಾಸ್‌:

ಗೂಗಲ್‌ ಗ್ಲಾಸ್‌:

ಗೂಗಲ್‌ನ ಭಾರೀ ವಿವಾದ ಸೃಷ್ಟಿಸಿದ ಉತ್ಪನ್ನ.ಚಲಿಸುತ್ತಿರುವಾಗಲೇ ಕನ್ನಡಕದಲ್ಲೇ ವೀಡಿಯೋ ರೆಕಾರ್ಡ್ ಮಾಡಬಹುದಾದ, ವಾಯ್ಸ್‌ ಕಮಾಂಡ್‌ ಆಯ್ಕೆಯ ಮೂಲಕ ಸುಲಭವಾಗಿ ಇಂಟರ್‌ನೆಟ್‌ ಸರ್ಚ್ ಮಾಡಬಹುದಾದ ಕನ್ನಡಕ. ಆಂಡ್ರಾಯ್ಡ್‌ ಓಎಸ್‌,5 ಎಂಪಿ ಕ್ಯಾಮೆರಾ,ವೈಫೈ ಬ್ಲೂಟೂತ್‌ 16ಜಿಬಿ ಮೆಮರಿ ಸಾಮರ್ಥ್ಯ ವಿಶೇಷತೆಯನ್ನು ಈ ಗೂಗಲ್‌ ಗ್ಲಾಸ್‌ ಒಳಗೊಂಡಿದೆ.ಈ ವರ್ಷ‌ ಗೂಗಲ್‌ ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆ ಇದೆ.

  ಗೂಗಲ್‌ ಕಾರ್‌

ಗೂಗಲ್‌ ಕಾರ್‌


ಚಾಲಕ ರಹಿತ ಕಾರ್‌ನ್ನು ಟಯೊಟಾ ಸಹಯೋಗದೊಂದಿಗೆ ಗೂಗಲ್‌ ಅಭಿವೃದ್ಧಿಪಡಿಸಿದೆ. ಅಮೆರಿಕದಲ್ಲಿ ಗೂಗಲ್‌ ಕಾರನ್ನು ರಸ್ತೆಯಲ್ಲಿ ಚಲಾಯಿಸಲು ಪರವಾನಿಗೆ ದೊರಕಿದೆ. ಇಬ್ಬರು ಕಡ್ಡಾಯವಾಗಿ ಪ್ರಯಾಣಿಸಬೇಕು ಎಂದು ಪರವಾನಿಗೆ ನೀಡುವಾಗ ಸ್ಪಷ್ಟವಾಗಿ ತಿಳಿಸಲಾಗಿದೆ. ಯಾಕೆಂದರೆ ಎಲ್ಲಾದರೂ ಚಾಲಕ ರಹಿತವಾಹನದಲ್ಲಿ ಏನಾದರೂ ತೊಂದರೆ ಉಂಟಾದರೆ ಹಿಡಿತಕ್ಕೆ ತೆಗೆದುಕೊಳ್ಳಲು ಕಾರಿನೊಳಗೆ ಜನರಿರುವುದು ಕಡ್ಡಾಯ ಸರಕಾರ ಹೇಳಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X