ಕೆಲಸ ಹಗುರಗೊಳಿಸುವ ಸೂಪರ್ ಗ್ಯಾಜೆಟ್‌ಗಳು
ಜಗತ್ತಿನಲ್ಲಿರುವ ಪ್ರತಿಯೊಂದೂ ಕೂಡ ಸ್ಮಾರ್ಟ್ ಆಗುತ್ತಿದೆ. ಇದು ಕೇವಲ ಡಿವೈಸ್‌ಗೆ ಮಾತ್ರ ಅನ್ವಯಿಸದೇ ಕೆಲವೊಂದು ಸಣ್ಣ ವಸ್ತುಗಳೂ ಕೂಡ ಪರಿಣಾಮಕಾರಿಯಾಗಿ ಬದಲಾವಣೆಗಳನ್ನು ಹೊಂದುತ್ತಿವೆ. [ಹಳತರಿಂದ ಹೊಸತನಕ್ಕೆ ತಂತ್ರಜ್ಞಾನದ ಪ್ರಗತಿ ಹೇಗೆ?]
ಇಂತಹ ಬದಲಾವಣೆಗಳಿಗೆ ಮುಖ್ಯ ಕಾರಣ ತಂತ್ರಜ್ಞಾನ ಕಂಡುಕೊಂಡಿರುವ ಅದ್ಭುತ ಪ್ರಗತಿಯಾಗಿದೆ. ಹೌದು ದಿನಗಳೆದಂತೆ ಟೆಕ್ ಯುಗದಲ್ಲಿ ನೀವು ಕಾಣುತ್ತಿರುವ ಅವಿಸ್ಮರಣೀಯ ಬದಲಾವಣೆಗಳು ಸಣ್ಣ ಸಣ್ಣ ವಸ್ತುಗಳಲ್ಲೂ ಜೀವ ತುಂಬಿ ಅದನ್ನು ಮಾರ್ಪಡಿಸುತ್ತಿವೆ. ಇಂದಿನ ಲೇಖನದಲ್ಲಿ ಇಂತಹುದೇ ಟೆಕ್ ಜಗತ್ತಿನ ಅದ್ಭುತಗಳೊಂದಿಗೆ ನಾವು ಬಂದಿದ್ದು ಇದು ನಿಮ್ಮನ್ನು ಬೆರಗುಗೊಳಿಸುವುದು ಸುಳ್ಳಲ್ಲ. [ನೀವು ಆಡಲೇಬೇಕಾದ ಟಾಪ್ ಆಂಡ್ರಾಯ್ಡ್ ಗೇಮ್ಸ್‌ಗಳು]

ಸೂಪರ್ ಗ್ಯಾಜೆಟ್‌ಗಳು
ಇದು ಸಣ್ಣ ಗ್ಯಾಜೆಟ್ ಆಗಿದ್ದು ಇದನ್ನು ನಿಮ್ಮ ಮಗುವಿನ ದೇಹದ ಭಾಗಕ್ಕೆ ಅಳವಡಿಸಿದರೆ ಸಾಕು ಮಗುವಿನ ಬಗ್ಗೆ ಮಾಹಿತಿಯನ್ನು ಪಾಲಕರಿಗೆ ನೀಡುತ್ತಿರುತ್ತದೆ. ಮಗುವಿನ ಉಸಿರಾಟ, ದೇಹ ಉಷ್ಣಾಂಶ ಅದರ ನಿದ್ರೆಯ ಸಮಯವನ್ನು ಇದು ಟ್ರ್ಯಾಕ್ ಮಾಡುತ್ತದೆ.

ಸೂಪರ್ ಗ್ಯಾಜೆಟ್‌ಗಳು
ಇದು ಮಗ್ ಆಗಿದ್ದರೂ ಅದಕ್ಕಿಂತ ಹೆಚ್ಚಿನ ಕೆಲಸಗಳನ್ನು ಮಾಡುತ್ತದೆ. ನೀವು ಇದರಲ್ಲಿ ಏನು ಕುಡಿಯುತ್ತೀರೋ ಅದರ ಅಂಶಗಳನ್ನು ಇದು ಪರಿಶೋಧಿಸುತ್ತದೆ. ಇದರಲ್ಲಿರುವ ಅಪ್ಲಿಕೇಶನ್ ಇದಕ್ಕೆ ಸಹಾಯ ಮಾಡುತ್ತದೆ. ನೀವು ನೀರು, ಕಾಫಿ, ಟೀ ಪೇಯಗಳ ಸೇವನೆಯನ್ನು ಮಾಡಬಹುದು.

ಸೂಪರ್ ಗ್ಯಾಜೆಟ್‌ಗಳು
ನಿಮ್ಮ ಆಹಾರ ಅಭ್ಯಾಸವನ್ನು ಅರಿತುಕೊಂಡು ನೀವು ಎಷ್ಟು ಸೇವಿಸಿದ್ದೀರಿ ಎಂಬುದನ್ನು ನಿಮಗೆ ತಿಳಿಸುತ್ತದೆ. ಪ್ಯಾರೀಸ್ ಆಧಾರಿತ ಕಂಪೆನಿ ಇದನ್ನು ತಯಾರಿಸಿದೆ.

ಸೂಪರ್ ಗ್ಯಾಜೆಟ್‌ಗಳು
ಚೀನಾ ಕಂಪೆನಿ ಬೈಡು ಸ್ಮಾರ್ಟ್ ಚಾಪ್‌ಸ್ಟಿಕ್ ಅನ್ನು ತಯಾರಿಸಿದ್ದು, ಇದು ಕಲಬೆರಕೆ ಎಣ್ಣೆಯನ್ನು ಪರಿಶೀಲಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಎಣ್ಣೆಯ ಗುಣಮಟ್ಟ, ತಾಪಮಾನ, ಪಿಎಚ್ ಮಟ್ಟಗಳನ್ನು ಇದು ಪರಿಶೋಧಿಸುತ್ತದೆ.

ಸೂಪರ್ ಗ್ಯಾಜೆಟ್‌ಗಳು
ಈ ದಿನಗಳಲ್ಲಿ ರೊಬೋಟ್‌ಗಳು ಚಮತ್ಕಾರೀ ಕೆಲಸಗಳನ್ನು ಮಾಡುತ್ತಿರುತ್ತದೆ. ನಿಮ್ಮ ಗ್ರಿಲ್ ಅನ್ನು ಸ್ವಚ್ಛಗೊಳಿಸುವ ಕೆಲಸವನ್ನು ಈ ಗ್ರಿಲ್‌ಗಳು ಮಾಡಲಿದ್ದು ನಿಮ್ಮ ಕೆಲಸವನ್ನು ಹಗುರಗೊಳಿಸುತ್ತದೆ.


Click it and Unblock the Notifications








