ಜಿಯೋಗೆ ಕಠಿಣ ಸ್ಪರ್ಧೆ: ಏರ್‌ಟೆಲ್, ಬಿಎಸ್‌ಎನ್‌ಎಲ್, ವೊಡಾಫೋನ್
ಟೆಲಿಕಾಮ್ ಆಪರೇಟರ್‌ಗಳಾದ ಏರ್‌ಟೆಲ್, ವೊಡಾಫೋನ್ ಮತ್ತು ಐಡಿಯಾ ಟಾರಿಫ್‌ಗಳನ್ನು ಕಡಿತಗೊಳಿಸಿ ಡೇಟಾದೊಂದಿಗೆ ಉಚಿತ ಕರೆಗಳನ್ನು ಈಗ ಬಳಕೆದಾರರಿಗೆ ಒದಗಿಸುತ್ತಿದೆ. ಜಿಯೋದ ಸ್ಪರ್ಧೆಗೆ ಕಠಿಣವಾಗಿ ಪ್ರತ್ಯುತ್ತರಿಸಲು ಟೆಲಿಕಾಮ್ ಕಂಪೆನಿಗಳು ತೆಗೆದುಕೊಂಡಿರುವ ಈ ಕ್ರಮ ನಿಜಕ್ಕೂ ಶ್ಲಾಘನೀಯವಾದುದು.
ಓದಿರಿ: ಐಡಿಯಾದಿಂದ ರೂ 1 ಕ್ಕೆ ಅನಿಯಮಿತ 4ಜಿ ಡೇಟಾ ಆಫರ್ ಪಡೆದುಕೊಳ್ಳುವುದು ಹೇಗೆ?
ಅಂತೂ ಇಂತು ರಿಲಾಯನ್ಸ್ ಜಿಯೋದ ಅತ್ಯುನ್ನತ ಆಫರ್‌ಗಳನ್ನು ಸರಿದೂಗಿಸಲು ಈ ಟೆಲಿಕಾಮ್ ಆಫರ್‌ಗಳು ಕೂಡ ಆಕರ್ಷಕ ಆಫರ್‌ಗಳೊಂದಿಗೆ ಬಳಕೆದಾರರನ್ನು ಸಮೀಪಿಸುತ್ತಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಈ ಆಫರ್‌ಗಳೇನು ಎಂಬುದನ್ನು ವಿಷದವಾಗಿ ಅರಿತುಕೊಳ್ಳೋಣ.
ಓದಿರಿ: ರೂ 25 ಕ್ಕೆ 3/4ಜಿ ಡೇಟಾ, ವೊಡಾಫೋನ್ ಆಫರ್ಸ್: ನಿಮ್ಮನ್ನು ದಂಗುಬಡಿಸುವುದು ಖಂಡಿತ

ಏರ್‌ಟೆಲ್ ಅನಿಯಮಿತ ಡೇಟಾ
ಒಂದೇ ಬಾರಿಗೆ ರೂ 1,495 ಅನ್ನು ರಿಚಾರ್ಜ್ ಮಾಡಿಕೊಂಡು ತನ್ನ 4ಜಿ ಬಳಕೆದಾರರಿಗೆ ಏರ್‌ಟೆಲ್ 90 ದಿನಗಳ ಅನಿಯಮಿತ ಡೇಟಾ ಯೋಜನೆಯನ್ನು ನೀಡುತ್ತಿದೆ.

ರೂ 1,495
ಪ್ರಸ್ತುತ ಬಳಕೆದಾರರಿಗೆ ಈ ಪ್ಯಾಕ್ ರೂ 1,495 ಕ್ಕೆ ದೊರೆಯುತ್ತಿದ್ದು ಹೊಸ ಬಳಕೆದಾರರು ತಮ್ಮ ಪ್ರಥಮ ರಿಚಾರ್ಜ್ ರೂ 1,494 ಕ್ಕೆ ಈ ಆಫರ್ ಅನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಬಿಎಸ್‌ಎನ್‌ಎಲ್ ಅನಿಯಮಿತ ಬ್ರಾಡ್‌ಬ್ಯಾಂಡ್ ಪ್ಲಾನ್
ಬಿಎಸ್‌ಎನ್‌ಎಲ್ ಅನಿಯಮಿತ ವೈರ್‌ಲೈನ್ ಬ್ರಾಡ್‌ಬ್ಯಾಂಡ್ ಪ್ಲಾನ್ ಅನ್ನು ಘೋಷಿಸಿದ್ದು ಪ್ರತಿ ಜಿಬಿಗೆ ರೂ 1 ರಂತೆ ಪಾವತಿ ಮಾಡಿ ಬಳಕೆದಾರರು ಈ ಯೋಜನೆಯನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಉಚಿತ ಅನಿಯಮಿತ ಕರೆ
ಇದಕ್ಕಾಗಿ ತಿಂಗಳಿಗೆ 300 ಜಿಬಿ ಡೇಟಾವನ್ನು ಬಳಕೆದಾರರು ಬಳಸಿಕೊಳ್ಳಬೇಕಾಗಿದೆ. ಭಾರತದಲ್ಲಿ ಯಾವುದೇ ಮೊಬೈಲ್ ಅಥವಾ ಲ್ಯಾಂಡ್ ಲೈನ್‌ಗೆ ಉಚಿತ ಅನಿಯಮಿತ ಕರೆಗಳನ್ನು ಕೂಡ ಬಿಎಸ್ಎನ್‌ಎಲ್ ಒದಗಿಸುತ್ತಿದೆ.

ವೊಡಾಫೋನ್ ಆಫರ್
ಕಂಪೆನಿಯು ಇದೀಗ ತಾನೇ ಹೊಸ ಆಫರ್ ಒಂದನ್ನು ಲಾಂಚ್ ಮಾಡಿದ್ದು 4ಜಿ ಸಂಪರ್ಕವನ್ನು ಪಡೆದುಕೊಳ್ಳುವ ಯಾವುದೇ ಬಳಕೆದಾರರು, ಕಳೆದ ಆರು ತಿಂಗಳಿಂದ ವೊಡಾಫೋನ್ ಕನೆಕ್ಶನ್ ಅನ್ನು ವಿನಿಯೋಗಿಸದೇ ಇದ್ದವರು ರೂ 1ಜಿಬಿ ದರದಲ್ಲಿ 10 ಜಿಬಿ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ.

ಮೂರು ತಿಂಗಳುಗಳ ಕಾಲ
ಅದೂ ಮೂರು ತಿಂಗಳುಗಳ ಕಾಲ. ವೊಡಾಫೋನ್ 3ಜಿ ಮತ್ತು 4ಜಿ ಹೊಂದಿರುವ ವಲಯಗಳಲ್ಲಿ ಈ ಆಫರ್ ಲಭ್ಯವಿದೆ. ಡಿಸೆಂಬರ್ 31, 2016 ರವರೆಗೆ ತನ್ನ ಪ್ರಿಪೈಡ್ ಮತ್ತು ಪೋಸ್ಟ್‌ಪೇಡ್ ಗ್ರಾಹಕರಿಗೆ ಈ ಆಫರ್ ಲಭಿಸಲಿದೆ.

ಐಡಿಯಾ ಡೇಟಾ ಪ್ಯಾಕ್
ಜಿಯೋ ಇಫೆಕ್ಟ್ ಪರಿಣಾಮವಾಗಿ ಏರ್‌ಟೆಲ್ ತನ್ನ ದರವನ್ನು 80 ಶೇಕಡಾದವರೆಗೆ ಕಡಿತಗೊಳಿಸಿದೆ. ಏರ್‌ಟೆಲ್‌ನ ಹಾದಿಯಲ್ಲೇ ಐಡಿಯಾ ಕೂಡ ತನ್ನ 3ಜಿ/4ಜಿ ಇಂಟರ್ನೆಟ್ ಆಫರ್‌ಗಳಲ್ಲಿ 67 ಶೇಕಡಾ ಪ್ರೈಸ್ ಕಟ್ ಮಾಡಿದೆ. ಈ ಹೊಸ ಯೋಜನೆಯ ಅಡಿಯಲ್ಲಿ, ಚಂದಾದಾರರು 10 ಜಿಬಿ 3/4ಜಿ ಡೇಟಾವನ್ನು ರೂ 990 ಕ್ಕೆ, 2ಜಿಬಿಯನ್ನು ರೂ 349 ಹಾಗೂ 3ಜಿಬಿಯನ್ನು ರೂ 649 ಕ್ಕೆ ಪಡೆದುಕೊಳ್ಳಬಹುದಾಗಿದೆ.

ಫ್ರೀಡಮ್ ಪ್ಯಾಕ್
ಕಂಪೆನಿಯು ಫ್ರೀಡಮ್ ಪ್ಯಾಕ್ ಅನ್ನು ತನ್ನ ಪ್ರಿಪೈಡ್ ಬಳಕೆದಾರರಿಗೆ ನೀಡುತ್ತಿದೆ. ಇದೊಂದು ಮಾಸಿಕ ಡೇಟಾ ಪ್ಯಾಕ್ ಎಂದೆನಿಸಿದ್ದು ಇದು ರೂ 100 ಕ್ಕೆ ಆರಂಭವಾಗುತ್ತಿದೆ. ಇದರ ವ್ಯಾಲಿಡಿಟಿ 28 ದಿನಗಳು ಎಂದೆನಿಸಿದೆ. ಬಳಕೆದಾರರು ರೂ 100 ಕ್ಕೆ 300 ಎಮ್‌ಬಿ ಡೇಟಾವನ್ನು ಪಡೆದುಕೊಳ್ಳಬಹುದಾಗಿದ್ದು 500 ಎಮ್‌ಬಿಯನ್ನು ರೂ 175 ಕ್ಕೆ ತಮ್ಮದಾಗಿಸಿಕೊಳ್ಳಬಹುದಾಗಿದೆ. ಎಲ್ಲಾ ವಲಯಗಳಲ್ಲಿ ಕೂಡ ಈ ಪ್ಯಾಕ್ ಲಭ್ಯವಿದೆ.


Click it and Unblock the Notifications








