ಜಪಾನ್ ಹೈಟೆಕ್ ಹೊಟೇಲ್ ಹೇಗಿದೆ ನೋಡಿದ್ದೀರಾ?
ಸಪ್ಲೈಯರ್ ಇಲ್ಲದೇ ಹಾರಿಕೊಂಡು ಊಟ ತಿಂಡಿಗಳು ಬರುವ ಹೊಟೇಲ್ ಹಿಂದೆ ಸುದ್ದಿಯಾಗಿತ್ತು.ನಂತರ ಟ್ವೀಟರ್ ಮೂಲಕ ಆರ್ಡರ್ ಮಾಡುವ ವಿಶ್ವದ ಪ್ರಥಮ ಟ್ವೀಟರ್ ಹೊಟೇಲ್ ಸುದ್ದಿಯಾಗಿತ್ತು.ಈಗ ಜಪಾನಿನ ಒಂದು ಹೊಟೇಲ್ ವಿಶ್ವದ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ.
ಈ ಹೊಟೇಲ್‌ನಲ್ಲಿ ತಿಂಡಿಗೆ ಆರ್ಡರ್ ಮಾಡಲು ಮತ್ತು ತಿಂಡಿ ವಿತರಿಸಲು ಸಪ್ಲೈಯರ್ ಇಲ್ಲ. ಬದಲಾಗಿ ಗಿರಾಕಿಗಳು ಕುಳಿತ ಸ್ಥಳದಲ್ಲೇ ಕಂಪ್ಯೂಟರ್ ಸ್ಕ್ರೀನ್ ಮೇಲೆ ಆರ್ಡರ್ ಮಾಡಿದರೆ ಆಯಿತು.ಕುಳಿತ ಸ್ಥಳಕ್ಕೆ ಆರ್ಡರ್ ಮಾಡಿದ ತಿಂಡಿ ಅಡುಗೆ ರೂಮಿನಿಂದ ನೇರವಾಗಿ ಬರುತ್ತದೆ.
ಜಪಾನಿನ ಟೋಕಿಯೋದಲ್ಲಿ ಸಂಪೂರ್ಣ ಕಂಪ್ಯೂಟರ್ ಮೂಲಕ ನಿಯಂತ್ರಣ ಮಾಡಬಹುದಾದ ಸುಶಿ ಹೊಟೇಲ್ ಈ ವ್ಯವಸ್ಥೆ ಹೊಂದಿದ್ದು, ಗ್ರಾಹಕರು ಆರ್ಡರ್ ಮಾಡಿದ ತಕ್ಷಣ ಅಡುಗೆ ಕೋಣೆಯಲ್ಲಿರುವ ಸಿಬ್ಬಂದಿಗಳು ಚೆಕ್ ಮಾಡಿ ತಿಂಡಿಯನ್ನು ಕೂಡಲೇ ತಯಾರಿಸಿ ಚಲಿಸುವ ಬೆಲ್ಟ್‌ನಲ್ಲಿ ಸಿಬ್ಬಂದಿ ಇಡುತ್ತಾರೆ. ಆ ಬೆಲ್ಟ್‌ನಲ್ಲಿರುವ ತಿಂಡಿ ಆರ್ಡರ್ ಮಾಡಿದ ವ್ಯಕ್ತಿ ಕುಳಿತ ಸ್ಥಳದಲ್ಲಿ ಬಂದು ನಿಲ್ಲುತ್ತದೆ.
ಇನ್ನೂ ಆಹಾರ ಸೇವಿಸಿದ ಬಳಿಕ ಪ್ಲೇಟ್‌ಗಳನ್ನು ತೆಗೆಯಲು ಈ ಹೊಟೇಲ್‌ನಲ್ಲಿ ಕೆಲಸಗಾರರಿಲ್ಲ. ಅಲ್ಲೇ ಕೆಳಗಡೆ ಮತ್ತೊಂದು ಬೆಲ್ಟ್ ಚಲಿಸುತ್ತಿರುತ್ತದೆ. ಆ ಬೆಲ್ಟ್ ಹೋಗುವ ಜಾಗದಲ್ಲಿ ಇರಿಸಿದರೆ ಆಯಿತು. ಪ್ಲೇಟ್‌ಗಳು ನೇರವಾಗಿ ಕ್ಲೀನಿಂಗ್ ರೂಮಿಗ್ ಹೋಗಿ ಆಟೋಮ್ಯಾಟಿಕ್ ಆಗಿ ಕ್ಲೀನ್ ಆಗಿ ಮತ್ತೆ ಅಡುಗೆ ಮನೆಗೆ ಬರುವಂತೆ ವ್ಯವಸ್ಥೆ ಈ ಹೊಟೇಲ್‌ನಲ್ಲಿದೆ.
ಈಗ ಈ ಹೊಟೇಲಿನ ಸುದ್ದಿಯನ್ನು ಬಿಬಿಸಿ ಸುದ್ದಿ ಮಾಡಿದ್ದು ಬಿಬಿಸಿ ಮಾಡಿರುವ ವಿಡಿಯೋ ಇಲ್ಲಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಜಪಾನ್ ಹೈಟೆಕ್ ಹೊಟೇಲ್
ಸುಶಿ ಹೊಟೇಲ್ ಜಪಾನ್

ಜಪಾನ್ ಹೈಟೆಕ್ ಹೊಟೇಲ್
ಸುಶಿ ಹೊಟೇಲ್ ಜಪಾನ್

ಜಪಾನ್ ಹೈಟೆಕ್ ಹೊಟೇಲ್
ಸುಶಿ ಹೊಟೇಲ್

ಜಪಾನ್ ಹೈಟೆಕ್ ಹೊಟೇಲ್
ಸುಶಿ ಹೊಟೇಲ್ ಜಪಾನ್

ಜಪಾನ್ ಹೈಟೆಕ್ ಹೊಟೇಲ್
ಸುಶಿ ಹೊಟೇಲ್
ಜಪಾನ್ ಹೈಟೆಕ್ ಹೊಟೇಲ್
ಸುಶಿ ಹೊಟೇಲ್ ಜಪಾನ್


Click it and Unblock the Notifications





