Home
ಸುದ್ದಿಜಾಲ

ಇನ್ನು ನಿಮ್ಮ ಜನ್ಮದಿನಕ್ಕೆ ಟ್ವಿಟ್ಟರ್‌ನಿಂದ ಹಾರೈಕೆ

By Shwetha

ಫೇಸ್‌ಬುಕ್‌ನಂತೆಯೇ ಟ್ವಿಟ್ಟರ್ ಕೂಡ ನಿಮ್ಮ ಹುಟ್ಟುಹಬ್ಬದ ಆಚರಣೆಯನ್ನು ಮಾಡಲಿದೆ. ನಿಮ್ಮ ಪ್ರೊಫೈಲ್‌ಗೆ ನಿಮ್ಮ ಜನ್ಮದಿನಾಂಕವನ್ನು ನೀವು ಸೇರಿಸಿದಲ್ಲಿ, ನೀವು ಟ್ವಿಟ್ಟರ್‌ಗೆ ಲಾಗಿನ್ ಆದಾಗ ತಾಣವು ಇ - ಬಲೂನ್‌ಗಳೊಂದಿಗೆ ನಿಮ್ಮ ವಿಶೇಷ ದಿನದಂದು ನಿಮಗೆ ಶುಭಾಷಯವನ್ನು ಕೋರಲಿದೆ.

ಇನ್ನು ನಿಮ್ಮ ಜನ್ಮದಿನಕ್ಕೆ ಟ್ವಿಟ್ಟರ್‌ನಿಂದ ಹಾರೈಕೆ

ನಿಮ್ಮ ಫಾಲೋವರ್ಸ್‌ಗೆ ನಿಮ್ಮ ಜನ್ಮದಿನದ ಕುರಿತ ಅಧಿಸೂಚನೆಗಳನ್ನು ಈ ವೈಶಿಷ್ಟ್ಯವು ಸೂಚಿಸಲಿದ್ದು ಟ್ವಿಟ್ಟರ್‌ನ ಈ ಫೀಚರ್ ಬಳಕೆದಾರರಿಗೆ ಸಂಬಂಧಿತ ಟಾರ್ಗೆಟ್ ಜಾಹೀರಾತುಗಳನ್ನು ಕಳುಹಿಸುವಲ್ಲಿ ಸಹಾಯ ಮಾಡುತ್ತದೆ.

ಓದಿರಿ: ಪ್ರತಿಯೊಬ್ಬ ಟ್ವಿಟ್ಟರ್ ಪ್ರೇಮಿ ಅರಿತುಕೊಳ್ಳಬೇಕಾದ ಅಂಶಗಳಿವು

ನಿಮ್ಮ ಪರಿಚಿತರ ಹುಟ್ಟುಹಬ್ಬ ಸಂದರ್ಭದಲ್ಲಿ ಅವರ ಪ್ರೊಫೈಲ್‌ಗೆ ಹೋದಾಗ ಬಣ್ಣ ಬಣ್ಣದ ಬಲೂನ್‌ಗಳು ಪರದೆಯಲ್ಲಿ ಹಾರುತ್ತಿರುವುದನ್ನು ನಿಮಗೆ ಕಾಣಬಹುದು. ಎಡಭಾಗದಲ್ಲಿ ಪ್ರೊಫೈಲ್ ಮಾಹಿತಿ ಮತ್ತು ಟ್ವಿಟ್ಟರ್ ಹ್ಯಾಂಡಲ್ ನಮೂದಾಗಿರುತ್ತದೆ. ಇದರಿಂದ ಇಂಥವರ ಹುಟ್ಟುಹಬ್ಬ ಎಂಬುದು ನಿಮಗೆ ಗೊತ್ತಾಗುತ್ತದೆ.

ಓದಿರಿ: ನಿಮ್ಮ ನೆಚ್ಚಿನ ಐಪಿಎಲ್ ಆಟಗಾರರ ಟ್ವಿಟ್ಟರ್ ಖಾತೆ ಜಾಲಾಡಿರುವಿರಾ?

ಈ ಹುಟ್ಟುಹಬ್ಬ ಫೀಚರ್ ಅಲ್ಲದೆ ಟ್ವಿಟ್ಟರ್ ಇತ್ತೀಚೆಗೆ ತಾನೇ ಹೊಸ ಆಟೊಪ್ಲೇ ಫೀಚರ್ ಅನ್ನು ಬಿಡುಗಡೆ ಮಾಡಿದ್ದು ಇದು ಸ್ವಯಂಚಾಲಿತವಾಗಿ ಜಾಹೀರಾತು, ವೈನ್ಸ್ ಮತ್ತು ಜಿಫ್‌ಗಳನ್ನು ಟ್ವಿಟ್ಟರ್ ಒಳಗೆಯೇ ಪ್ಲೇ ಮಾಡಲು ಅನುಮತಿಸುತ್ತದೆ. ಮೆಸೇಜಿಂಗ್ ಅಪ್ಲಿಕೇಶನ್‌ಗಳಾದ ವಾಟ್ಸಾಪ್ ಮತ್ತು ಫೇಸ್‌ಬುಕ್ ಮೆಸೆಂಜರ್‌ನಂತೆಯೇ ಟ್ವಿಟ್ಟರ್ ಕೂಡ ಮೆಸೇಜಿಂಗ್ ಅಪ್ಲಿಕೇಶನ್‌ನಂತೆ ಮಾರ್ಪಾಡು ಹೊಂದುವ ಅಭಿಲಾಷೆಯನ್ನಿಟ್ಟುಕೊಂಡಿದೆ. ಇನ್ನು ನೇರ ಸಂದೇಶಗಳಲ್ಲಿ ಅಕ್ಷರ ಮಿತಿಯನ್ನು 140 ರಿಂದ 10,000 ಕ್ಕೆ ಟ್ವಿಟ್ಟರ್ ಏರಿಸಿದೆ.

Best Mobiles in India

English summary
Just like Facebook, Twitter now wants to celebrate your birthday as well. If you’ve added your birth date to your profile, the platform will now greet you with e-balloons when you login to Twitter on the big day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+