ಹಣ ನೀಡಿ ಯೂ ಟ್ಯೂಬ್‌ನಲ್ಲಿ ಎಕ್ಸ್‌ಕ್ಲೂಸಿವ್ ವೀಡಿಯೋ ನೋಡಿ
ಇನ್ನು ಮುಂದೆ ಯೂ ಟ್ಯೂಬ್‌ನಲ್ಲಿ ಎಕ್ಸ್‌ಕ್ಲೂಸಿವ್ ವೀಡಿಯೋಗಳನ್ನು ನೋಡಬೇಕಾದರೆ ನೀವು ಶುಲ್ಕ ನೀಡಬೇಕು. ಹೌದು ಯೂ ಟ್ಯೂಬ್ ಈಗ ಹೊಸ ಮತ್ತೊಂದು ಹಣ ಸಂಪಾದನೆಯ ಮಾರ್ಗ ಹುಡುಕಿದೆ. ನಿರ್ದಿಷ್ಟ ಚಾನೆಲ್ ವೀಕ್ಷಿಸಬೇಕಾದರೆ ಪ್ರತಿ ತಿಂಗಳು 106 ರೂಪಾಯಿ ಶುಲ್ಕ ಪಾವತಿಸುವುದು ಕಡ್ಡಾಯ. ಶುಲ್ಕ ಪಾವತಿಸಿ ಚಂದಾದಾರರಾಗುವವರು ಎಕ್ಸ್‌ಕ್ಲೂಸಿವ್ ವೀಡಿಯೋ, ಚಾನೆಲ್‌ಗಳು, ವೀಡಿಯೋ ಕ್ಲಿಪ್‌ಗಳನ್ನು ನೋಡಬಹುದು.
ಈ ಸೇವೆಯನ್ನು ಮುಂದಿನವಾರದಿಂದಲೇ ಯೂ ಟ್ಯೂಬ್ ಪರಿಚಯಿಸುವ ಸಾಧ್ಯತೆ ಇದೆ. ಒಂದು ವೇಳೆ ನೀವು ನಿರ್ದಿಷ್ಟ ಶುಲ್ಕ ಕಟ್ಟಿ ಚಂದಾದಾರರಾದರೆ ಮುಕ್ತ ವೀಡಿಯೋಗಳನ್ನು ಜಾಹೀರಾತು ಇಲ್ಲದೆಯೂ ನೋಡಬಹುದು ಎಂದು ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ.

ಯೂ ಟ್ಯೂಬ್ ಮಾರ್ಚ್ ತಿಂಗಳಿನಲ್ಲಿ ಬಾಡಿಗೆ ದರದಲ್ಲಿ ಸಿನೆಮಾ ವೀಕ್ಷಣೆಯ ಸೇವೆಯನ್ನು ಭಾರತದಲ್ಲಿ ಆರಂಭಿಸಿತ್ತು. ವೀಕ್ಷಕರು ಲಾಗಿನ್ ಆಗಿ ವೀಡಿಯೋವನ್ನು ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ಮಲೆಯಾಳಂ, ತಮಿಳು,ತೆಲುಗು,ಗುಜರಾತಿ,ಬೆಂಗಾಳಿ ಸಿನೆಮಾಗಳನ್ನು ವೀಕ್ಷಕರು ವೀಕ್ಷಿಸಬಹುದಾಗಿದೆ.
ಸೆಕೋಯಾ ಕ್ಯಾಪಿಟಲ್ ಎಂಬ ಸಂಸ್ಥೆಯು 11.5 ಮಿಲಿಯನ್ ಡಾಲರ್ ಬಂಡವಾಳದೊಂದಿಗೆ ಯೂ ಟ್ಯೂಬ್ ಕಂಪೆನಿ ಆರಂಭಿಸಿತು. ಮೇ 2005ರಲ್ಲಿ ಪ್ರಯೋಗಿಕ ಸೇವೆ ನೀಡಿದ ಆರು ತಿಂಗಳ ಬಳಿಕ ನವೆಂಬರ್‌ನಲ್ಲಿ ಇದು ಅಧಿಕೃತವಾಗಿ ಆರಂಭವಾಯಿತು. ಪ್ರಾರಂಭವಾಗಿ ಒಂದು ವರ್ಷದ ಬಳಿಕ ನವೆಂಬರ್ 2006ರಲ್ಲಿ ಗೂಗಲ್ 1.65 ಬಿಲಿಯನ್ ಡಾಲರ್ ನೀಡಿ ಯೂಟ್ಯೂಬ್‌ನ್ನು ಸೆಕೋಯಾ ಕ್ಯಾಪಿಟಲ್‌ನಿಂದ ಖರೀದಿಸಿತು. ಅಲ್ಲದೆ ಸದ್ಯ ಇದು ಗೂಗಲ್‌ನ ಉಪಸಂಸ್ಥೆಯಾಗಿ ಕಾರ್ಯಾಚರಣೆ ನಡೆಸುತ್ತಿದೆ.
ಇದನ್ನೂ ಓದಿ : ಯೂಟ್ಯೂಬ್ ಬಗ್ಗೆ ಮತ್ತಷ್ಟು ತಿಳಿಯಿರಿ


Click it and Unblock the Notifications








